• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಾಜಮೌಳಿ, ಬನ್ಸಾಲಿಗಿಂತ ಕಮ್ಮಿ ಇಲ್ಲ ರಿಷಬ್ ಶೆಟ್ಟಿ..ಒಮ್ಮೆ ನೋಡ ಕಾಂತಾರ-1

ಕಾಂತಾರ ಬರೀ ಸಿನಿಮಾ ಅಲ್ಲ..ಕರಾವಳಿ ಸಂಸ್ಕೃತಿಯ ತೇರು..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 2, 2025 - 3:00 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 10 02t143750.952

ರಾಜಮೌಳಿ, ಬನ್ಸಾಲಿಗಿಂತ ಕಮ್ಮಿ ಇಲ್ಲ ನಮ್ ರಿಷಬ್ ಶೆಟ್ಟಿ. ನಿಜ ನಿಜ.. NTR ಮಾತು ನಿಜ.. ರಿಷಬ್ ಗ್ರೇಟೆಸ್ಟ್ ಡೈರೆಕ್ಟರ್. ಈಶ್ವರನ ಹೂದೋಟ.. ನವರಾತ್ರಿ ಗುಳಿಗಾವತಾರ ದರ್ಶನ..! ಇದು ಬರೀ ಸಿನಿಮಾ ಅಲ್ಲ.. ಕರಾವಳಿಯ ಸಾಂಸ್ಕೃತಿಕ ತೇರು. ಶಿವಗಣ ಬೆರ್ಮೆ.. ನಟರಾಕ್ಷಸನಾದ ಹೆಮ್ಮೆಯ ಕನ್ನಡಿಗ ಶೆಟ್ರು.

ಅಬ್ಬಬ್ಬಾ.. ಇದು ಕಾಂತಾರದ ಮತ್ತೊಂದು ಅಧ್ಯಾಯವಷ್ಟೇ ಅಲ್ಲ. ಭಾರತೀಯ ಚಿತ್ರರಂಗದ ಹೊಸ ಅಧ್ಯಾಯವೂ ಹೌದು. ದೈವಗಳ ಆಗರ ನಮ್ಮ ಭಾರತ ಅನ್ನೋದು ಇಡೀ ವಿಶ್ವಕ್ಕೆ ಗೊತ್ತು. ಅದನ್ನ ಈ ಚಿತ್ರದ ಮೂಲಕ ಮತ್ತೊಮ್ಮೆ ಸಿನಿದುನಿಯಾಗೆ ಸಾರುವ ಕಾರ್ಯದಲ್ಲಿ ಯಶಸ್ವಿ ಆಗಿದ್ದಾರೆ ರಿಷಬ್ ಶೆಟ್ಟಿ & ಹೊಂಬಾಳೆ. ರಾಜಮೌಳಿ, ಬನ್ಸಾಲಿಯಷ್ಟೇ ಎಫರ್ಟ್‌ ಹಾಕಿ ನೋಡುಗರನ್ನ ನಿಬ್ಬೆರಗಾಗಿಸಿರೋ ಶೆಟ್ರ, ಕಾಂತಾರ ಕದನದ ಕಂಪ್ಲೀಟ್ ಕಹಾನಿ ಇಲ್ಲಿದೆ. ಸಿನಿಮಾದ ಕಥೆ, ಕಲಾವಿದರ ಪರ್ಫಾಮೆನ್ಸ್, ತಂತ್ರಜ್ಞರ ನೈಪುಣ್ಯತೆ, ಕರಾವಳಿ ಮೂಲ ದೈವಗಳ ದೃಶ್ಯಚಿತ್ತಾರದ ಹಾನೆಸ್ಟ್ ರಿವ್ಯೂ ರಿಪೋರ್ಟ್‌ ನಿಮ್ಮ ಮುಂದೆ.

RelatedPosts

ಮದುವೆ ಸಮಾರಂಭದಲ್ಲಿ ಡಿ-ಬಾಸ್ ಘೋಷಣೆ; ವಿಜಯಲಕ್ಷ್ಮಿ ಪ್ರತಿಕ್ರಿಯೆ ವೈರಲ್

ಪವಿತ್ರಾಗೌಡಗೆ ಶಾಕ್: 16 ಕೈದಿಗಳಿರುವ ಬ್ಯಾರಕ್‌ಗೆ ಶಿಫ್ಟ್, ಜೈಲಿನಲ್ಲಿ ಬಿಗಿ ಭದ್ರತೆ

ನಿಷೇಧಿತ ಪಾನ್ ಮಸಾಲಾ ಜಾಹೀರಾತು ಪ್ರಚಾರ: ಶಾರುಖ್, ದೇವಗನ್,ಟೈಗರ್ ಶ್ರಾಫ್‌ಗೆ ನೋಟಿಸ್

ಕಿರಿಯ ನಟಿ ಜೊತೆ ಓಡಾಟ: ‘ಶುಗರ್ ಡ್ಯಾಡಿ’ ಎಂದ ಪತ್ನಿಗೆ ತಿರುಗೇಟು ನೀಡಿದ ನಟ ಗೋವಿಂದ

ADVERTISEMENT
ADVERTISEMENT

 

ರಾಜಮೌಳಿ, ಬನ್ಸಾಲಿಗಿಂತ ಕಮ್ಮಿ ಇಲ್ಲ ನಮ್ ರಿಷಬ್ ಶೆಟ್ಟಿ

ನಿಜ ನಿಜ.. NTR ಮಾತು ನಿಜ.. ರಿಷಬ್ ಗ್ರೇಟೆಸ್ಟ್ ಡೈರೆಕ್ಟರ್

 

ದಾದಾ ಸಾಹೇಬ್ ಫಾಲ್ಕೆ ಅವರ ರಾಜಾ ಹರಿಶ್ಚಂದ್ರ ಸಿನಿಮಾದಿಂದ ಹಿಡಿದು ಇಲ್ಲಿಯವರೆಗೆ ನಮ್ಮ ಭಾರತೀಯ ಚಿತ್ರರಂಗಕ್ಕೆ 112 ವರ್ಷಗಳ ಇತಿಹಾಸವಿದೆ. ಆ ಪೈಕಿ ನಮ್ಮ ಕನ್ನಡ ಚಿತ್ರರಂಗಕ್ಕೂ 90 ವರ್ಷ. ಇಲ್ಲಿಯವರೆಗೆ ವಿಶ್ವಸಿನಿದುನಿಯಾದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸಾಕಷ್ಟು ನಿರ್ದೇಶಕರುಗಳಿದ್ದಾರೆ. ಅಂತವರ ಸಾಲಿಗೆ ಇದೀಗ ನಮ್ಮ ಹೆಮ್ಮೆಯ ಕನ್ನಡಿಗ ರಿಷಬ್ ಶೆಟ್ಟಿ ಹೆಸರು ಹೊಸದಾಗಿ ಸೇರ್ಪಡೆ ಆಗಿದೆ. ಯೆಸ್.. ರಾಜಮೌಳಿ, ಸಂಜಯ್ ಲೀಲಾ ಬನ್ಸಾಲಿಗಿಂತ ಕಮ್ಮಿ ಏನೂ ಇಲ್ಲ ನಮ್ಮ ಸ್ಯಾಂಡಲ್‌ವುಡ್ ಶೆಟ್ರು.

ಸಿನಿಮಾಗಳಿಗಾಗಿ ಹೊಸ ಪ್ರಪಂಚವನ್ನೇ ಕಟ್ಟುವ ರಾಜಮೌಳಿ ಹಾಗೂ ಸಂಜಯ್ ಲೀಲಾ ಬನ್ಸಾಲಿ, ಆ ಪಾತ್ರಗಳು, ಕಾಲಘಟ್ಟ ಹಾಗೂ ಮೇಕಿಂಗ್‌ಗಾಗಿ ಸಿಕ್ಕಾಪಟ್ಟೆ ಸಂಶೋಧನೆ ಮಾಡ್ತಾರೆ. ಇವರಿಬ್ಬರೂ ಸಹ ನೋಡುಗರಿಗೆ ತೆರೆಮೇಲೆ ವ್ಹಾವ್ ಫೀಲ್ ತರಿಸುವ ದೃಶ್ಯಚಿತ್ತಾರ ಕಟ್ಟಿಕೊಡ್ತಾರೆ. ಇದೀಗ ಅವರಿಬ್ಬರ ಸಾಲಿನಲ್ಲಿ ನಿಲ್ಲುವ ಅಥ್ವಾ ಅವರುಗಳನ್ನೇ ಮೀರಿಸುವ ರೇಂಜ್‌ಗೆ ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್-1 ಕಟ್ಟಿ ತೋರಿಸಿದ್ದಾರೆ. ಅದಕ್ಕೆ ಜನರಿಂದ ಸಿಗ್ತಿರೋ ಅತ್ಯದ್ಭುತ ಪ್ರಶಂಸೆ, ಪ್ರತಿಕ್ರಿಯೆಗಳೇ ಸಾಕ್ಷಿ.

ಇತ್ತೀಚೆಗೆ ಹೈದ್ರಾಬಾದ್‌‌ನಲ್ಲಿ ನಡೆದ ಪ್ರೀ ರಿಲೀಸ್ ಇವೆಂಟ್‌‌ನಲ್ಲಿ ಇಂಡಿಯಾಗೆ ಆಸ್ಕರ್ ತಂದಂತಹ ಜುಣಿಯರ್ ಎನ್‌ಟಿಆರ್ ನಮ್ಮ ರಿಷಬ್ ಶೆಟ್ಟಿಯನ್ನ ಹೊಗಳಿದ್ರು. ಇವರಿಗೇಕೆ ಈ ಪಾಟಿ ಹೊಗಳ್ತಿದ್ದಾರೆ ಅಂತ ತೆಲುಗು ಮಂದಿಯೇ ಅಂದುಕೊಂಡಿದ್ರು. ಅದಕ್ಕೀಗ ತಕ್ಕ ಉತ್ತರ ಸಿಕ್ಕಿದೆ. ನಿಜ ನಿಜ.. ತಾರಕ್ ಬಹುಪರಾಕ್ ಅಂದಿದ್ದು ನಿಜ. ರಿಷನ್ ಇಂಡಿಯಾದ ಆಲ್‌ಟೈಂ ಗ್ರೇಟೆಸ್ಟ್ ಡೈರೆಕ್ಟರ್‌‌ಗಳಲ್ಲಿ ಒಬ್ಬರು.

 

ಈಶ್ವರನ ಹೂದೋಟ.. ನವರಾತ್ರಿ ಗುಳಿಗಾವತಾರ ದರ್ಶನ..!

ಇದು ಬರೀ ಸಿನಿಮಾ ಅಲ್ಲ.. ಕರಾವಳಿಯ ಸಾಂಸ್ಕೃತಿಕ ತೇರು

ಪರಶುರಾಮನ ಸೃಷ್ಠಿ ತುಳುನಾಡು ಅನ್ನೋ ಉಲ್ಲೇಖಗಳಿವೆ. ಆದ್ರೆ ತುಳುನಾಡಿನ ಮೂಲ ಪುರುಷ ಬೆರ್ಮೆರ್ ಅಂತಲೂ ಹೇಳ್ತಾರೆ. ಕರಾವಳಿಯ ಆದಿ ದೈವ, ತುಳುನಾಡ ದೈವ ಶಕ್ತಿಗಳಲ್ಲಿ ಅತಿ ಪ್ರಮುಖ ಶಕ್ತಿ ಬೆರ್ಮೆರ್ ಅನ್ನೋ ನಂಬಿಕೆಯಿದೆ. ರಿಷಬ್ ಶೆಟ್ಟಿ ಸದ್ಯ ಮಾಡಿರೋದು ಅದನ್ನೇ.. ಅಲ್ಲಿನ ದೈವ ಮೂಲದ ಬಗ್ಗೆ ಇಲ್ಲಿ ಹೇಳಿದ್ದಾರೆ. ಅಧರ್ಮವನ್ನು ಹತ್ತಿಕ್ಕಲು ಶಿವಗಣ ಭೂಮಿಯಲ್ಲಿ ಅವತರಿಸುತ್ತೆ. ಆ ಶಿವಗಣನೇ ಕಾಂತಾರ ಚಾಪ್ಟರ್-1 ಚಿತ್ರದ ನಾಯಕನಟ ಬೆರ್ಮೆ.

ಕಾಂತಾರ ಚಾಪ್ಟರ್-1.. ಕದಂಬರ ಕಾಲಘಟ್ಟದ ಕಥೆ. ಕದಂಬರ ಸಾಮಂತ ರಾಜಮನೆತನ ಬಾಂಗ್ರಾ ಸಂಸ್ಥಾನ ಹಾಗೂ ಅಲ್ಲಿನ ಅರಸ ರಾಜಶೇಖರ, ಯುವರಾಜ ಕುಲಶೇಖರ ಹಾಗೂ ಯುವರಾಣಿ ಕನಕವತಿಯ ಕಥೆ. ಕಾಂತಾರದಲ್ಲಿರೋ ಈಶ್ವರನ ಹೂದೋಟ.. ಅಲ್ಲಿರೋ ಕಾರ್ಣಿಕ, ಗುಳಿಗ ದೈವಗಳನ್ನ ಆರಾಧಿಸೋ ಕಾಂತಾರದ ಜನ, ಮಸಾಲೆ ಪದಾರ್ಥಗಳ ಬೆಲೆ ಅರಿಯಲು ಬಾಂಗ್ರಾಗೆ ಬರುವ ಕಾಂತಾರ ಮಂದಿ, ಅಲ್ಲಿನ ಸಂಘರ್ಷಗಳ ಮೇಲೆ ಸಿನಿಮಾ ತಯಾರಾಗಿದೆ.

ಶಿವಗಣ ಬೆರ್ಮೆ.. ನಟರಾಕ್ಷಸನಾದ ಹೆಮ್ಮೆಯ ಕನ್ನಡಿಗ ಶೆಟ್ರು

ದೈವತ್ವ- ರಾಜಪ್ರಭುತ್ವದ ಕದನ.. ಆಚರಣೆ- ಆಳ್ವಿಕೆಯ ಸಂಘರ್ಷ

ಇಲ್ಲಿ ಕಾಂತಾರದ ಕಾವಲುಗಾರನಾಗಿ ರಿಷಬ್ ಶೆಟ್ಟಿ ಬೆರ್ಮೆ ಪಾತ್ರಕ್ಕೆ ಅದ್ಭುತವಾಗಿ ಜೀವ ತುಂಬಿದ್ದಾರೆ. ಅಧರ್ಮ ತಾಂಡವವಾಡ್ತಿರೋ ಬಾಂಗ್ರಾದಲ್ಲಿ ಕಾಂತಾರ ಮಂದಿಯ ರಕ್ಷಾ ಕವಚವಾಗಿ ಬರುವ ಶಿವಗಣ ಆಗಿ ಶೆಟ್ರು ನಟರಾಕ್ಷಸನಾಗಿ ಅಬ್ಬರಿಸಿ, ಆರ್ಭಟಿಸಿದ್ದಾರೆ. ಸದ್ಯ ಎಲ್ಲೆಡೆ ದಸರಾ ನವರಾತ್ರಿ ಉತ್ಸವ ನಡೆಯುತ್ತಿದೆ. ಕಾಂತಾರ ಚಿತ್ರದ ಮೂಲಕ ಗುಳಿಗ ದೈವದ ಅಷ್ಟೂ ಅವತಾರಗಳು ಇಲ್ಲಿ ಬಿತ್ತರಗೊಂಡಿವೆ. ಹಿಂದೆಂದೂ ನೋಡಿರದ, ಮುಂದೆ ನೋಡದಂತಹ ರುದ್ರ ನರ್ತನದ, ಶಿವ ತಾಂಡವದ ದೃಶ್ಯ ವೈಭವ ಇಲ್ಲಿದೆ.

ಕಡಬ ದಿಕ್ಕಿನವರು ಈಶ್ವರನ ಹೂದೋಟಕ್ಕಾಗಿ ಹಾಗೂ ಕಾಂತಾರದ ಶಕ್ತಿಗಳನ್ನ ಕೈವಶ ಮಾಡಿಕೊಳ್ಳಲು ನಡೆಸುವ ವಾಮಾಚಾರಗಳು ಒಂದ್ಕಡೆ. ಬಾಂಗ್ರಾ ಸಂಸ್ಥಾನ ಬಂದರಿನಲ್ಲಿ ನಡೆಸೋ ಮಸಾಲೆ ಪದಾರ್ಥಗಳ ವ್ಯಾಪಾರ ವಹಿವಾಟು, ಕಾಂತಾರದ ಅಸಹಾಯಕ ಜೀತದಾಳುಗಳ ಮೇಲಿನ ದರ್ಪ, ದೌರ್ಜನ್ಯಗಳು ಮತ್ತೊಂದ್ಕಡೆ. ಇವೆರಡರ ವಿರುದ್ಧ ಕಾಂತಾರದ ಕಾವಲುಗಾರ ಬೆರ್ಮೆ ಹೇಗೆ ಹೋರಾಡ್ತಾನೆ ಅನ್ನೋದೇ ಸಿನಿಮಾದ ಎಳೆ. ನಿಜ ಹೇಳಬೇಕಂದ್ರೆ ಇದು ದೈವತ್ವ ಹಾಗೂ ರಾಜಪ್ರಭುತ್ವದ ಕದನ. ಆಚರಣೆ ಹಾಗೂ ಆಳ್ವಿಕೆ ನಡುವಿನ ಸಂಘರ್ಷ.

ಇವೆಲ್ಲವನ್ನ ನೋಡ್ತಿದ್ರೆ ರಿಷಬ್ ಶೆಟ್ಟಿ ಇದಕ್ಕಾಗಿ ಸಿಕ್ಕಾಪಟ್ಟೆ ರಿಸರ್ಚ್‌ ಮಾಡಿದಂತೆ ಕಾಣುತ್ತೆ. ದಟ್ಟವಾದ ಕಾಡುಗಳಲ್ಲಿ ಬೃಹತ್ ಸೆಟ್‌ಗಳನ್ನ ಹಾಕಿ, ಕರಾವಳಿಯ ಸಂಸ್ಕೃತಿಯನ್ನ, ಅಲ್ಲಿನ ಮಣ್ಣಿನ ಸೊಗಡು, ಸೊಬಗನ್ನು ವಿಶ್ವಕ್ಕೆ ಸಾರುವ ನಿಟ್ಟಿನಲ್ಲಿ ಬ್ರ್ಯಾಂಡ್ ಅಂಬಾಸಿಡರ್ ರೀತಿ ಕೆಲಸ ಮಾಡಿದ್ದಾರೆ. ಹಾಗಾಗಿ ಕಾಂತಾರ ಬರೀ ಸಿನಿಮಾ ಅಲ್ಲ. ಕರಾವಳಿಯ ಸಾಂಸ್ಕೃತಿಕ ಪರಂಪರೆಯ ತೇರು ಅಂದ್ರೆ ತಪ್ಪಾಗಲ್ಲ.

ಕಾಂತಾರದ್ದು ಜಸ್ಟ್ ಟ್ರೈಲರ್.. ಇಲ್ಲಿ ರಿಷಬ್ ಶಿವ ತಾಂಡವ

ಈ ಕಾಂತಾರ ಕ್ರಿಯೇಟರ್ ಎನರ್ಜಿ ಲೆವೆಲ್‌ ಅವರ್ಣನೀಯ

ರಿಷಬ್ ಶೆಟ್ಟಿ ಇಲ್ಲಿ ಸಿನಿಮಾದ ಎಲ್ಲಾ ಡಿಪಾರ್ಟ್‌‌ಮೆಂಟ್‌‌ಗಳ ಹೊಣೆ ಹೊತ್ತಿದ್ದಾರೆ. ನಿರ್ದೇಶಕನಾಗಿ ಇಡೀ ಕಾಂತಾರ ಅನ್ನೋ ಮಹಾದೋಣಿಯ ನಾವಿಕನಾಗಷ್ಟೇ ಅಲ್ಲ, ಅದರ ಕೇಂದ್ರಬಿಂದು ಪಾತ್ರಧಾರಿಯಾಗಿಯೂ ಮೈನವಿರೇಳಿಸೋ ನಟನೆ ತೋರಿದ್ದಾರೆ. ನಾಲ್ಕೈದು ಬಾರಿ ಸಾವಿನಂಚಿಗೆ ಹೋಗಿ ಬಂದೆ ಅಂದಂಯಹ ರಿಷಬ್ ಮಾತು ಸತ್ಯ. ಈ ಸಿನಿಮಾದಲ್ಲಿ ನಿಜಕ್ಕೂ ಆ ದೈವ ಬಲವೇ ಇವರನ್ನ ಕಾಪಾಡಿದೆ. ಅಷ್ಟು ಎಫರ್ಟ್ ಈಚ್ ಅಂಡ್ ಎವೆರಿ ಫ್ರೇಮ್‌‌ನಲ್ಲಿ ಕಾಣಸಿಗಲಿದೆ. ಇಲ್ಲಿ ರಿಷಬ್ ಗುಳಿಗನೂ ಹೌದು, ಚಾವುಂಡಿಯೂ ಹೌದು.

ಸಿನಿಮಾಗಾಗಿಯೇ ಜಿಮ್‌‌ನಲ್ಲಿ ದೇಹವನ್ನು ಹುರಿಗಟ್ಟಿಸಿ, ಕತ್ತಿ ವರಸೆ, ಕಳರಿಪಯಟ್ಟು ಕಲಿತು, ಗುಳಿಗ ಅವಗಾಹನೆ ಮಾಡಿಕೊಂಡು ಅಕ್ಷರಶಃ ಮ್ಯಾಜಿಕ್ ಮಾಡಿದ್ದಾರೆ. ಕಾಂತಾರ ಸಿನಿಮಾ ನೋಡಿ ಓ ಮೈ ಗಾಡ್ ಅಂದುಕೊಂಡಿದ್ದವರಿಗೆ ಈ ಬಾರಿ ಅದರ ಹತ್ತು ಪಟ್ಟು ಹೆಚ್ಚು ರೋಮಾಂಚನ ನೀಡಿದ್ದಾರೆ. ಅಷ್ಟರ ಮಟ್ಟಿಗೆ ಕಾಂತಾರ-1ನಲ್ಲಿ ಶಿವ ತಾಂಡವದ ದೃಶ್ಯಗಳಿವೆ. ರಿಷಬ್ ಎನರ್ಜಿ ಲೆವೆಲ್‌ಗೆ ನಿಜಕ್ಕೂ ಹ್ಯಾಟ್ಸಾಪ್ ಹೇಳಲೇಬೇಕು. ದೈಹಿಕ ಹಾಗೂ ಮಾನಸಿಕವಾಗಿ ಸಿಕ್ಕಾಪಟ್ಟೆ ಸದೃಢರಾಗಿರೋ ವ್ಯಕ್ತಿಯಾಗಿ ರಿಷಬ್‌ಗೆ ಇದನ್ನ ಸಾಕಾರಗೊಳಿಸಲು ಸಾಧ್ಯವಾಗಿದೆ. ಅದಕ್ಕೆ ದೈವ ಸಂಕಲ್ಪವೂ ಇದೆ, ಇವ್ರ ಶ್ರಮ ಬೆವರು ನೆತ್ತರು ಇದೆ. ಮಿಗಿಲಾಗಿ ದೈವ ಬಲವಿದೆ.

ಭಾರತೀಯ ಚಿತ್ರರಂಗದ ಸೆನ್ಸೇಷನ್ ರುಕ್ಮಿಣಿ ವಸಂತ್..!

ಜಯರಾಂ, ಗುಲ್ಶನ್ ಮಿಂಚು.. ಭಾವುಕಗೊಳಿಸೋ ರಾಕೇಶ್

ಬಾಂಗ್ರಾ ಅರಸ ರಾಜಶೇಖರನಾಗಿ ಮಲಯಾಳಂನ ಜಯರಾಮ್ ಹಾಗೂ ಅವ್ರ ಮಗ ಯುವರಾಜ ಕುಲಶೇಖರನ ಪಾತ್ರದಲ್ಲಿ ನಮ್ಮ ಕನ್ನಡದ ಗುಲ್ಶನ್ ದೇವಯ್ಯ ಮಿಂಚು ಹರಿಸಿದ್ದಾರೆ. ಇವರ ಮನೋಜ್ಞ ಅಭಿನಯ ಚಿತ್ರಕ್ಕೆ ಪ್ಲಸ್ ಆಗಿದೆ. ಅಲ್ಲದೆ, ನಾಯಕನಟಿ ಪಾತ್ರದಲ್ಲಿ ಯುವರಾಣಿಯಾಗಿ ರುಕ್ಮಿಣಿ ವಸಂತ್ ಚಿತ್ರಕ್ಕೆ ಬಿಗ್ ಅಸೆಟ್. ಹೌದು.. ಇದೇ ಮೊದಲ ಬಾರಿ ಇಂತಹದ್ದೊಂದು ಚಾಲೆಂಜಿಂಗ್ ರೋಲ್ ಮಾಡಿರೋ ಸಪ್ತಸಾಗರದ ರುಕ್ಕಮ್ಮ ನೋಡುಗರ ಹೃದಯಕ್ಕೆ ಮತ್ತಷ್ಟು ಆಪ್ತರಾಗುತ್ತಾರೆ. ಆಕೆಯಲ್ಲಿರೋ ಅಸಲಿ ಕಲಾವಿದೆ ಈ ಚಿತ್ರದ ಮೂಲಕ ಹೊರಬಂದಿದ್ದಾಳೆ.

ಇನ್ನು ಹೃದಯಾಘಾತದಿಂದ ಜೀವ ಕಳೆದುಕೊಂಡ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಈ ಸಿನಿಮಾದುದ್ದಕ್ಕೂ ನೋಡುಗರನ್ನ ನಗಿಸುತ್ತಲೇ, ಭಾವುಕರನ್ನಾಗಿಸ್ತಾರೆ. ಪ್ರಕಾಶ್ ತುಮ್ಮಿನಾಡ್, ಪ್ರಮೋದ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಸುಹಾಸ್, ಸು ಫ್ರಮ್ ಸೋ ರವಿ ಅಣ್ಣ ಸೇರಿದಂತೆ ಬಹುತೇಕ ಮಂದಿ ರಿಷಬ್ ಆಸ್ಥಾನ ಕಲಾವಿದರು ಈ ಚಿತ್ರದಲ್ಲಿ ಅವರವರ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಕಾಂತಾರ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್‌ ಬಂದಿದೆ. ಆದ್ರೆ ಕಾಂತಾರ ಚಾಪ್ಟರ್‌-1ಗೂ ನ್ಯಾಷನಲ್ ಅವಾರ್ಡ್‌ ಬರೋದ್ರಲ್ಲಿ ಡೌಟೇ ಇಲ್ಲ. ಅದಕ್ಕೆ ಕಾರಣ ರಿಷಬ್ ಜೊತೆಗಿರೋ ತಾಂತ್ರಿಕ ವರ್ಗ. ಹೌದು.. ಸಿನಿಮಾಟೋಗ್ರಾಫರ್ ಅರವಿಂದ್ ಕಶ್ಯಪ್ ಕ್ಯಾಮೆರಾ ಕೈಚಳಕ ಚಿತ್ರದ ಹೈಲೈಟ್. ಈ ಸಿನಿಮಾಗಾಗಿ ಅವರು ಲೈಟಿಂಗ್ ಮಾಡ್ಕೊಂಡು ಪ್ರತೀ ದಿನ ಸಾವಿರಾರು ಸಹಕಲಾವಿದರು, ನೂರಾರು ಕಲಾವಿದರನ್ನ ಇಟ್ಕೊಂಡು ಚಿತ್ರಿಸಿರೋ ಪರಿ ಅದ್ಭುತ.

ರಿಷಬ್ ಸ್ಟ್ರೆಂಥ್ DOP ಅರವಿಂದ್ ಮತ್ತು ಅಜನೀಶ್

ಧರಣಿ ಆರ್ಟ್ ವರ್ಕ್‌.. ಪ್ರಗತಿ ಕಾಸ್ಟ್ಯೂಮ್ಸ್ ಸೂಪರ್

ಅಜನೀಶ್ ಲೋಕನಾಥ್ ಮ್ಯೂಸಿಕ್ ಹಾಗೂ ಬ್ಯಾಗ್ರೌಂಡ್ ಮ್ಯೂಸಿಕ್ ಚಿತ್ರದ ಮತ್ತೊಂದು ಹೈಲೈಟ್. ಜಾನಪದ ಸೊಗಡಿರೋ ಈ ಸಿನಿಮಾಗಾಗಿ ಮೈ ರೋಮಾಂಚನಗೊಳಿಸೋ ಅಂತಹ ಆರ್ಕೆಸ್ಟ್ರಾ ಮಾಡಿದ್ದಾರೆ ಅಜನೀಶ್. ರೆಬೆಲ್ ಸಾಂಗ್‌‌ನಲ್ಲಿರೋ ಕಿಚ್ಚು, ಬ್ರಹ್ಮ ಕಳಶ ಗೀತೆಯಲ್ಲಿರೋ ಡಿವೈನ್ ವೈಬ್ರೇಷನ್ ಮಹಾ ಅದ್ಭುತಗಳಲ್ಲೊಂದು. ಇನ್ನು ಈ ಚಿತ್ರದ ಆರ್ಟ್‌ ಡೈರೆಕ್ಟರ್ ಧರಣಿ ಹೊಸ ಪ್ರಪಂಚವನ್ನೇ ಸೃಷ್ಠಿಸಿದ್ದಾರೆ. ಸಾವಿರಾರು ವರ್ಷಗಳ ಹಿಂದಿನ ಕಾಲಘಟ್ಟದ ಸೆಟ್‌‌ ತಯಾರಿಸಲು ಸಿಕ್ಕಾಪಟ್ಟೆ ಎಫರ್ಟ್‌ ಹಾಕಿದ್ದಾರೆ.

ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಸ್ತ್ರೀ ಇರ್ತಾರೆ. ಅದೇ ರೀತಿ ರಿಷಬ್ ಶೆಟ್ಟಿ ಈ ಅಭೂತಪೂರ್ವ ಸಕ್ಸಸ್ ಹಿಂದೆ ಪತ್ನಿ ಪ್ರಗತಿ ಶೆಟ್ಟಿ ಇದ್ದಾರೆ. ಬರೀ ಪತ್ನಿಯಾಗಷ್ಟೇ ಅಲ್ಲ. ಈ ಸಿನಿಮಾಗೆ ಕಾಸ್ಟ್ಯೂಮ್ ಡಿಸೈನರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅದಕ್ಕಾಗಿ ಪ್ರಗತಿ ಸಿಕ್ಕಾಪಟ್ಟೆ ಹಾರ್ಡ್‌ ವರ್ಕ್‌ ಮಾಡಿದ್ದಾರೆ. ಯಾರೂ ಹೆಸರಿಡದಂತಹ ವಸ್ತ್ರಗಳನ್ನ ಸಾವಿರಾರು ಮಂದಿಗೆ ಒದಗಿಸಿ ಭೇಷ್ ಅನಿಸಿಕೊಂಡಿದ್ದಾರೆ.

ರಿಷಬ್ ಕನಸುಗಳಿಗೆ ರೆಕ್ಕೆ ಕಟ್ಟಿದ್ದೇ ಹೊಂಬಾಳೆ ಫಿಲಂಸ್

KGF, ಕಾಂತಾರ ಬಳಿಕ ಮತ್ತೊಮ್ಮೆ ವಿಜಯದ ಇತಿಹಾಸ

ಸಾಮಾನ್ಯವಾಗಿ ನಿರ್ಮಾಪಕರುಗಳು ವ್ಯಾಪಾರದ ದೃಷ್ಠಿಯಿಂದ ಮಾತ್ರ ಸಿನಿಮಾಗಳನ್ನ ನಿರ್ಮಾಣ ಮಾಡ್ತಾರೆ. ಆದ್ರೆ ಇಲ್ಲಿ ಹೊಂಬಾಳೆ ಫಿಲಂಸ್ ಅದನ್ನ ಮೀರಿ, ನಮ್ಮ ಸಂಸ್ಕೃತಿಯ ಬೇರುಗಳ ಸಾರವನ್ನು ವಿಶ್ವಕ್ಕೆ ಪರಿಚಯಿಸೋ ನಿಟ್ಟಿನಲ್ಲಿ ರಿಷಬ್ ಕನಸುಗಳಿಗೆ ನೀರೆರೆದಿದ್ದಾರೆ. ನೂರಾರು ಕೋಟಿ ಸುರಿದು ಈ ದೃಶ್ಯಚಿತ್ತಾರವನ್ನು ತಯಾರಿಸುವಲ್ಲಿ ಯಶಸ್ವಿ ಆಗಿದ್ದಾರೆ. ಕೆಜಿಎಫ್, ಕಾಂತಾರ ಬಳಿಕ ಮತ್ತೊಮ್ಮೆ ವಿಜಯದ ಇತಿಹಾಸದ ಪುಟಗಳನ್ನ ಬರೆಯುತ್ತಿದ್ದಾರೆ ವಿಜಯ್ ಕಿರಗಂದೂರು. ಅವ್ರ ಸಿನಿಮಾ ಪ್ಯಾಷನ್, ವಿಷನ್ ನಿಜಕ್ಕೂ ಮೆಚ್ಚಲೇಬೇಕು.

ಕಾಂತಾರ ಚಾಪ್ಟರ್-1 ನಿಮ್ಮ ಜೀವಮಾನದಲ್ಲಿ ನೋಡಲೇಬೇಕಾದ ಸಿನಿಮಾ. ಜೋಗದ ಗುಂಡಿ, ನಂದಿ ಬೆಟ್ಟ ನೋಡಲೇಬೇಕು ಲೈಫ್‌‌ನಲ್ಲಿ ಒಮ್ಮೆ ಅಂತಾರೆ. ಅದೇ ಸಾಲಿಗೆ ಕಾಂತಾರ-1 ಸೇರಿಕೊಂಡಿದೆ. ಮಿಸ್ ಮಾಸ್ಕೋಬೇಡಿ ಈ ದೃಶ್ಯವೈಭವ ಹಾಗೂ ವೈಭೋಗ.

 

 

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Create social media poster by using above mentioned text in 18001800 Pixels (1)

ಕ್ರೀಡಾಪಟುಗಳಿಗೆ 3% ಉದ್ಯೋಗ ಮೀಸಲಾತಿ: ಡಿಸಿಎಂ ಪರಮೇಶ್ವರ್

by ಕವಿತಾ
August 16, 2026 - 11:20 pm
0

Create social media poster by using above mentioned text in 18001800 Pixels (2)

ಮದುವೆ ಸಮಾರಂಭದಲ್ಲಿ ಡಿ-ಬಾಸ್ ಘೋಷಣೆ; ವಿಜಯಲಕ್ಷ್ಮಿ ಪ್ರತಿಕ್ರಿಯೆ ವೈರಲ್

by ಕವಿತಾ
August 16, 2026 - 10:40 pm
0

Create social media poster by using above mentioned text in 18001800 Pixels

ನಾಗರ ಪಂಚಮಿ ಹಿನ್ನೆಲೆ ದ.ಕ ಜಿಲ್ಲೆ ಶಾಲೆ-ಕಾಲೇಜುಗಳಿಗೆ ರಜೆ

by ಕವಿತಾ
August 16, 2026 - 10:15 pm
0

Untitled design (79)

ಅಮೃತಸರದಲ್ಲಿ ಭಾರೀ ಭಯೋತ್ಪಾದಕ ಸಂಚು ವಿಫಲ: 690 ಗ್ರಾಂ IED ಪೊಲೀಸ್ ವಶ

by ಕವಿತಾ
August 16, 2026 - 9:45 pm
0

ಸಂಬಂಧಿಸಿದ ಪೋಸ್ಟ್‌ಗಳು

  • Create social media poster by using above mentioned text in 18001800 Pixels (2)
    ಮದುವೆ ಸಮಾರಂಭದಲ್ಲಿ ಡಿ-ಬಾಸ್ ಘೋಷಣೆ; ವಿಜಯಲಕ್ಷ್ಮಿ ಪ್ರತಿಕ್ರಿಯೆ ವೈರಲ್
    August 16, 2026 | 0
  • ಶಿಫ್ಟ್,
    ಪವಿತ್ರಾಗೌಡಗೆ ಶಾಕ್: 16 ಕೈದಿಗಳಿರುವ ಬ್ಯಾರಕ್‌ಗೆ ಶಿಫ್ಟ್, ಜೈಲಿನಲ್ಲಿ ಬಿಗಿ ಭದ್ರತೆ
    August 16, 2026 | 0
  • ಅರ್ಷದ್ (6)
    ನಿಷೇಧಿತ ಪಾನ್ ಮಸಾಲಾ ಜಾಹೀರಾತು ಪ್ರಚಾರ: ಶಾರುಖ್, ದೇವಗನ್,ಟೈಗರ್ ಶ್ರಾಫ್‌ಗೆ ನೋಟಿಸ್
    August 16, 2026 | 0
  • ಅರ್ಷದ್ (1)
    ಕಿರಿಯ ನಟಿ ಜೊತೆ ಓಡಾಟ: ‘ಶುಗರ್ ಡ್ಯಾಡಿ’ ಎಂದ ಪತ್ನಿಗೆ ತಿರುಗೇಟು ನೀಡಿದ ನಟ ಗೋವಿಂದ
    August 16, 2026 | 0
  • ಖರ್ಗೆ (8)
    ಯೂಟರ್ನ್ ಶ್ರದ್ಧಾ ಶ್ರೀನಾಥ್‌‌ಗೆ ಬೇಕಿದೆ ಟರ್ನಿಂಗ್ ಪಾಯಿಂಟ್
    August 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version