ರಾಕಿಂಗ್ ಸ್ಟಾರ್ ಯಶ್.. ಕನ್ನಡಿಗರು ಹೆಮ್ಮೆ ಪಡುವಂತೆ ಬೆಳೆದು ನಿಂತ ಟ್ಯಾಲೆಂಟೆಡ್ ಆ್ಯಕ್ಟರ್. ಹಾರ್ಡ್ ವರ್ಕ್, ಡೆಡಿಕೇಷನ್ ವಿಚಾರದಲ್ಲಿ ರಾಕಿ ಎಷ್ಟು ಕಟ್ಟುನಿಟ್ಟೋ, ಲುಕ್ & ಫೀಲ್‌ನಲ್ಲಿ ಅದಕ್ಕಿಂತ ಒಂದು ಕೈ ಹೆಚ್ಚು. ಯೆಸ್.. ಸದಾ ಸ್ಟೈಲಿಶ್ ಲುಕ್ಸ್‌ನಿಂದ ಕಿಕ್ ಕೊಡೋ ರಾಕಿಭಾಯ್, ಇದೀಗ ಟಾಕ್ಸಿಕ್ ಹಾಗೂ ರಾಮಾಯಣಕ್ಕಾಗಿ ಲುಕ್ ಬದಲಿಸಿದ್ದಾರೆ.
- ಲುಕ್ ಬದಲಿಸಿದ ರಾಕಿಭಾಯ್.. ಹಬ್ಬದಲ್ಲೂ ಫೇಸ್ ಕವರ್
- ಫಸ್ಟ್ ಟೈಮ್ ಪತ್ನಿ, ಮಕ್ಕಳ ಜೊತೆ ಮುಖ ತೋರಿಸದ ಯಶ್
- ಟಾಕ್ಸಿಕ್ & ರಾಮಾಯಣಕ್ಕಾಗಿ ಮತ್ತಷ್ಟು ಸ್ಟೈಲಿಶ್ ಆದ ರಾಕಿ
- ತಂಗಿ ರಾಖಿ ಕಟ್ಟಿದಾಗಲೂ ರಟ್ಟಾಗಲಿಲ್ಲ ಹೇರ್ ಸ್ಟೈಲ್ ಗುಟ್ಟು
ನಮ್ಮ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ಕೊಟ್ಟ ಈ ಜನರೇಷನ್‌ನ ಸೂಪರ್ ಸ್ಟಾರ್ ಅಂದ್ರೆ ರಾಕಿಂಗ್ ಸ್ಟಾರ್ ಯಶ್. ಕೆಜಿಎಫ್ ಸಿನಿಮಾಗಳಿಂದ ಇವರು ಮಾಡಿದ ಮೋಡಿ ಎಂಥದ್ದು ಅಂತ ಇಡೀ ವರ್ಲ್ಡ್ ಸಿನಿದುನಿಯಾಗೇ ಗೊತ್ತಿದೆ. ಕನ್ನಡ ಚಿತ್ರಗಳು ಕೂಡ ಸಾವಿರಾರು ಕೋಟಿ ಬ್ಯುಸಿನೆಸ್ ಮಾಡಬಲ್ಲವು ಅನ್ನೋದಕ್ಕೆ ಯಶ್ ಹಾಗೂ ಅವರ ಚಿತ್ರ ಜ್ವಲಂತ ಸಾಕ್ಷಿಯಾದವು.
ಕನಸು ಕಾಣೋದು ಸರಿ. ಆದ್ರೆ ಆ ಕನಸು ದೊಡ್ಡದಾಗೇ ಕಾಣ್ಬೇಕು ಅಂತ ಹೇಳ್ತಿದ್ದ ಯಶ್, ಕೆಲಸದಲ್ಲೂ ಮಾಡಿ ತೋರಿಸಿದ್ರು. ಅದೆಷ್ಟೋ ಮಂದಿಗೆ ರೋಲ್ ಮಾಡೆಲ್ ಆದ್ರು. ಹಂತ ಹಂತವಾಗಿ ಗಾಡ್ ಫಾದರ್ ಇಲ್ಲದೆ ಬೆಳೆದ ಇವರು, ಮಾಸ್ಟರ್‌ಪೀಸ್ ಐಡಿಯಾ, ಸಿನಿಮಾ ಹಾಗೂ ಪರ್ಫಾಮೆನ್ಸ್‌ನಿಂದ ಟ್ರೆಂಡ್ ಸೆಟ್ಟರ್ ಆದ್ರು. ಸದ್ಯ ಕನ್ನಡ ಚಿತ್ರರಂಗವನ್ನು ಈಗ ಹಾಲಿವುಡ್ ರೇಂಜ್‌ಗೆ ಕರೆದೊಯ್ಯಲು ಮುಂದಾಗ್ತಿದ್ದಾರೆ.
ಯೆಸ್.. ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳಿಂದ ಅಂಥದ್ದೊಂದು ಮಹತ್ವದ ಕಾರ್ಯಕ್ಕೆ ಕೈ ಹಾಕಿರೋ ಯಶ್, ಅವುಗಳಲ್ಲಿ ನಟಿಸೋದ್ರ ಜೊತೆಗೆ ನಿರ್ಮಾಣದಲ್ಲೂ ಭಾಗಿಯಾಗಿದ್ದಾರೆ. ಈ ಚಿತ್ರಗಳೆರಡೂ ಕೂಡ ಮೇಕಿಂಗ್ ಹಂತದಲ್ಲೇ ಸಖತ್ ಸದ್ದು ಮಾಡ್ತಿದ್ದು, ಪ್ರಾಮಿಸಿಂಗ್ ಹಾಗೂ ಇಂಟರೆಸ್ಟಿಂಗ್ ಸಿನಿಮಾಗಳಾಗಿ ಬಹುನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ಕಮಾಲ್ ಮಾಡ್ತಿವೆ.
ಸಿನಿಮಾಗಳಿಗಾಗಿ ಯಶ್ ಎಷ್ಟು ಎಫರ್ಟ್ ಹಾಕ್ತಾರೋ, ಅವ್ರ ಲುಕ್ಸ್‌ಗೆ ಅದಕ್ಕಿಂತ ಜಾಸ್ತಿ ತಲೆ ಕೆಡಿಸಿಕೊಳ್ತಾರೆ. ಸದ್ಯ ಟಾಕ್ಸಿಕ್‌ಗಾಗಿ ನ್ಯೂ ಲುಕ್ ಮಾಡಿಸಿದ್ರು. ಇತ್ತೀಚೆಗೆ ಅದ್ರ ಫೋಟೋಶೂಟ್ ದೊಡ್ಡ ಮಟ್ಟಕ್ಕೆ ವೈರಲ್ ಆಗಿತ್ತು. ಇದೀಗ ರಾಮಾಯಣ ಚಿತ್ರಕ್ಕಾಗಿ ಮತ್ತೊಮ್ಮೆ ಗೆಟಪ್ ಬದಲಿಸಿದ್ದಾರೆ. ಇತ್ತೀಚೆಗೆ ವರಮಹಾಲಕ್ಷ್ಮೀ ಹಬ್ಬದ ದಿನ ಕೂಡ ಮಡದಿ ರಾಧಿಕಾ ಪಂಡಿತ್ ಹಾಗೂ ಮಕ್ಕಳಾದ ಐರಾ, ಯಥರ್ವ್ ಜೊತೆ ತಮ್ಮ ಫೇಸ್‌ನ ತೋರಿಸದೆ ಕವರ್ ಮಾಡಿಕೊಂಡಿದ್ದಾರೆ ಯಶ್.
ಸಾಮಾನ್ಯವಾಗಿ ಯಾವುದೇ ಹಬ್ಬ ಹರಿದಿನಗಳಾದ್ರೆ ಸ್ಯಾಂಡಲ್‌ವುಡ್ ಸಿಂಡ್ರೆಲಾ ಹಾಗೂ ಮುದ್ದಿನ ಮಕ್ಕಳ ಜೊತೆ ಟ್ರೆಡಿಷನಲ್ ಡ್ರೆಸ್‌ನಲ್ಲಿ ರಾಕಿ ಮಿಂಚುತ್ತಿದ್ದರು. ಆದ್ರೆ ಈ ಬಾರಿ ತಮ್ಮ ಲುಕ್ ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ರಾಖಿ ಹಬ್ಬದ ಹಿನ್ನೆಲೆ ತಂಗಿ ರಾಖಿ ಕಟ್ಟುವಾಗ ಕೂಡ ಹೇರ್ ಸ್ಟೈಲ್ ಕವರ್ ಮಾಡಿಕೊಂಡು ಅಲ್ಲಿಯೂ ಸೀಕ್ರೆಸಿ ಮೈಂಟೇನ್ ಮಾಡಿದ್ದಾರೆ ರಾಕಿಂಗ್ ಸ್ಟಾರ್.
ಅಟೆನ್ಷನ್ ಪ್ಲೀಸ್.. ಬಂದ ಮಾಸ್ಟರ್‌ಪೀಸ್ ಅಂತ ಯಶ್ ಒಂದೊಂದು ಸಿನಿಮಾಗೂ ಫ್ರೆಶ್ ಅಂಡ್ ನ್ಯೂ ಲುಕ್‌ನಿಂದ ಕಿಕ್ ಕೊಡ್ತಾರೆ. ಸೋ ಫಾರ್ ಎಲ್ಲಾ ಮಾಸ್ ಸಿನಿಮಾಗಳ ಸ್ಟೈಲಿಶ್ ಮಹಾರಾಜ ಯಶ್ ಅಂದ್ರೆ ತಪ್ಪಾಗಲ್ಲ. ಸದ್ಯ ಗುಟ್ಟಾಗಿ ಇಟ್ಟಿರೋ ಹೊಸ ಅವತಾರ ಯಾವಾಗ ರಿವೀಲ್ ಆಗೊತ್ತೋ ಅಂತ ಫ್ಯಾನ್ಸ್ ಕಾತರರಾಗಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್