ಸ್ಯಾಂಡಲ್‌ವುಡ್‌ನ ನಟ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ “ಡೆವಿಲ್” ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಚಿತ್ರತಂಡದ ಜೊತೆ ಥಾಯ್ಲೆಂಡ್‌ಗೆ ತೆರಳಿದ್ದಾರೆ. ಈ ಚಿತ್ರೀಕರಣವು 11 ದಿನಗಳ ಕಾಲ ನಡೆಯಲಿದ್ದು, ಚಿತ್ರದ ಕೆಲವು ಪ್ರಮುಖ ದೃಶ್ಯಗಳು ಮತ್ತು ಹಾಡುಗಳ ಚಿತ್ರೀಕರಣ ಥಾಯ್ಲೆಂಡ್‌ನ ರಮಣೀಯ ತಾಣಗಳಲ್ಲಿ ನಡೆಯಲಿದೆ. ಈ ಪ್ರಯಾಣದಲ್ಲಿ ದರ್ಶನ್‌ಗೆ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಕೂಡ ಸಾಥ್ ನೀಡಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದರ್ಶನ್ ತಮ್ಮ ಕುಟುಂಬದೊಂದಿಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆದಿದೆ. ಇದು ಕೊಲೆ ಆರೋಪದ ನಂತರ ದರ್ಶನ್ ಮೊದಲ ಬಾರಿಗೆ ವಿದೇಶ ಪ್ರವಾಸ ಮಾಡಿದ್ದು. ಈಗಾಗಲೇ “ಡೆವಿಲ್” ಚಿತ್ರದ ಬಹುತೇಕ ಚಿತ್ರೀಕರಣವು ಪೂರ್ಣಗೊಂಡಿದೆ. ಥಾಯ್ಲೆಂಡ್‌ನಲ್ಲಿ ನಡೆಯಲಿರುವ ಈ ಕೊನೆಯ ಹಂತದ ಶೂಟಿಂಗ್‌ನಲ್ಲಿ ಒಂದು ಸಾಹಸಮಯ ದೃಶ್ಯ ಮತ್ತು ಕೆಲವು ಹಾಡುಗಳನ್ನು ಚಿತ್ರೀಕರಿಸಲಾಗುವುದು. ಈ ಶೂಟಿಂಗ್ ಮುಗಿದ ನಂತರ, ಚಿತ್ರದ ಪೋಸ್ಟ್-ಪ್ರೊಡಕ್ಷನ್ ಕೆಲಸ ಶೀಘ್ರವಾಗಿ ಆರಂಭವಾಗಲಿದೆ.
ಥಾಯ್ಲೆಂಡ್‌ನಲ್ಲಿ ಚಿತ್ರೀಕರಣ ಮುಗಿದ ನಂತರ, “ಡೆವಿಲ್” ಚಿತ್ರದ ಕುಂಬಳಕಾಯಿ ಫಿಕ್ಸ್ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಈ ವರ್ಷದ ಕೊನೆಯಲ್ಲಿ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ದರ್ಶನ್ ಅಭಿಮಾನಿಗಳು ಈ ಚಿತ್ರಕ್ಕಾಗಿ ಭಾರೀ ನಿರೀಕ್ಷೆಯಲ್ಲಿದ್ದಾರೆ.





