ಧ್ರುವ ಸರ್ಜಾ ಫ್ಯಾನ್ಸ್‌ಗೆ ಭಾರೀ ನಿರಾಸೆ. ಕೆಡಿ ಸಿನಿಮಾದಲ್ಲಿ ಇರಲ್ವಂತೆ ಕಿಚ್ಚ ಸುದೀಪ್. ಸದ್ಯ ಇದು ಸ್ಯಾಂಡಲ್‌ವುಡ್‌ನ ಹಾಟ್ ಟಾಪಿಕ್. ಪ್ರೇಮ್-ಸುದೀಪ್ ತುಂಬಾ ಚೆನ್ನಾಗಿದ್ದಾರೆ ಅಲ್ವಾ..? ಸಡನ್ ಆಗಿ ಈ ತರಹದ ಸುದ್ದಿ ಹಬ್ಬುತ್ತಿರೋದ್ಯಾಕೆ..? ಹಾಗಾದ್ರೆ ಕೆಡಿ ಸಿನಿಮಾಗೆ ಯಾರಾಗ್ತಾರೆ ಆ ಸ್ಪೆಷಲ್ ಗೆಸ್ಟ್ ಅಂತೀರಾ..?
ಕೆಡಿ ಧ್ರುವ ಸರ್ಜಾ ಲೀಡ್‌ನಲ್ಲಿ ನಟಿಸ್ತಿರೋ ಬಹುತಾರಾಗಣದ ಬಹುನಿರೀಕ್ಷಿತ ಸಿನಿಮಾ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡ್ತಿರೋ ಬಹುಕೋಟಿ ರೆಟ್ರೋ ಚಿತ್ರ. ಸಂಜಯ್ ದತ್, ರಮೇಶ್ ಅರವಿಂದ್, ರವಿಚಂದ್ರನ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್‌ಗಳ ದಂಡು ಇಲ್ಲಿದೆ. ಟೀಸರ್ ಎಲ್ಲರ ಹುಬ್ಬೇರಿಸಿದ್ದು, ಸಾಂಗ್ಸ್ ಒಂದಕ್ಕಿಂತ ಒಂದು ವೀವ್ಸ್‌ನಲ್ಲಿ ದಾಖಲೆ ಬರೆದಿವೆ.
ಆಲ್ಮೋಸ್ಟ್ ಶೂಟಿಂಗ್ ಎಲ್ಲಾ ಮುಗಿಸಿರೋ ಟೀಂ ಕೆಡಿ, ಕಿಚ್ಚ ಸುದೀಪ್ ಸ್ಪೆಷಲ್ ಅಪಿಯರೆನ್ಸ್ ಮಾತ್ರ ಬಾಕಿ ಉಳಿಸಿದೆ. ಮೊದಲಿಗೆ ಶಿವಣ್ಣ ಅಥ್ವಾ ಸುದೀಪ್ ಆ ಪಾತ್ರ ಮಾಡ್ತಾರೆ ಎನ್ನಲಾಗಿತ್ತು. ಆದ್ರೆ ಕಮಲ್ ಹಾಸನ್ ವಿಕ್ರಮ್ ಚಿತ್ರದಲ್ಲಿ ರೋಲೆಕ್ಸ್ ರೋಲ್‌ನಲ್ಲಿ ಬರೋ ಸೂರ್ಯ ರೀತಿ ಇಲ್ಲಿ ಮ್ಯಾಕ್ಸ್ ಕಿಚ್ಚನ ಎಂಟ್ರಿ ಕನ್ಫರ್ಮ್ ಎನ್ನಲಾಗಿತ್ತು. ಆದ್ರೀಗ ಬಾದ್‌ಷಾ ಕೆಡಿ ಚಿತ್ರದಲ್ಲಿ ನಟಿಸುತ್ತಿಲ್ಲ ಅನ್ನೋದು ಅಧಿಕೃತವಾಗಿದೆ. ಇದು ಧ್ರುವ ಫ್ಯಾನ್ಸ್‌ಗೆ ಭಾರೀ ನಿರಾಸೆ ಮೂಡಿಸಿದೆ.
ತನ್ನ ಪಬ್ಲಿಸಿಟಿ ಹಾಗೂ ಬ್ಯುಸಿನೆಸ್ ಗಿಮಿಕ್‌ಗಳಿಂದಲೇ ಫೇಮಸ್ ಆದವರು ನಿರ್ದೇಶಕ ಜೋಗಿ ಪ್ರೇಮ್. ಒಂದು ಸಿನಿಮಾನ ಹೇಗೆ ಮಾಡ್ತಾರೆ ಅನ್ನೋದಕ್ಕಿಂತ ಹೆಚ್ಚಾಗಿ, ಅದನ್ನ ಜನಕ್ಕೆ ಮುಟ್ಟಿಸೋಕೆ ಸಿನಿಮಾಗೆ ಹಾಕಿರೋ ಎರಡರಷ್ಟು ಎಫರ್ಟ್ಸ್ ಪ್ರೇಮ್ ಹಾಕ್ತಾರೆ. ಮಾಸ್ಟರ್ ಆಫ್ ಪಬ್ಲಿಟಿಸಿ ಅಂತಲೂ ಕರೀತಾರೆ. ಸುದೀಪ್ ಅವರು ಕೆಡಿ ಚಿತ್ರದ ತಾರಾಗಣದಲ್ಲಿದ್ರೆ ಸಿನಿಮಾದ ಬ್ಯುಸಿನೆಸ್ ನೆಕ್ಸ್ಟ್ ಲೆವೆಲ್‌ಗೆ ಆಗುತ್ತೆ ಅನ್ನೋ ಕಾರಣಕ್ಕೆ ಈ ತರಹ ಅನೌನ್ಸ್ ಮಾಡಿದ್ರಾ ಅನ್ನೋದು ಯಕ್ಷ ಪ್ರಶ್ನೆಯಾಗ್ತಿದೆ.
ಈ ಹಿಂದೆ ದಿ ವಿಲನ್ ಸಿನಿಮಾನ ಸುದೀಪ್ ಅವರಿಗೆ ಡೈರೆಕ್ಟ್ ಮಾಡಿದ್ದ ಪ್ರೇಮ್, ಅವರೊಟ್ಟಿಗೆ ಒಂದೊಳ್ಳೆ ಬಾಂಧವ್ಯ ಹೊಂದಿದ್ದಾರೆ. ಕಿಚ್ಚನನ್ನ ಸಖತ್ ಸ್ಟೈಲಿಶ್ ಆಗಿ ತೋರಿಸಿದ್ದ ಪ್ರೇಮ್ ಸಾಕಷ್ಟು ಸದ್ದು ಮಾಡಿದ್ರು. ಅದಕ್ಕೂ ಮುನ್ನ ಕಲ್ಕಿ ಸಿನಿಮಾ ಅನೌನ್ಸ್ ಮಾಡಿದ್ದ ಪ್ರೇಮ್ ಅದನ್ನ ಕೈ ಬಿಟ್ಟಿದ್ರು. ನಂತ್ರ ಆರು ಜನ ಸೂಪರ್ ಸ್ಟಾರ್‌ಗಳನ್ನ ಇಟ್ಕೊಂಡು ಸಿನಿಮಾ ಮಾಡ್ತೀನಿ ಅಂದಿದ್ದ ಸುದ್ದಿ ಇಂದಿಗೂ ಗಾಳಿಯಲ್ಲಿ ಹಾರಾಡ್ತಾನೇ ಇದೆ. ಇದೀಗ ಸುದೀಪ್ ಹೆಸರನ್ನ ಬಳಸಿಕೊಂಡು ಸಿನಿಮಾ ಹೈಪ್ ಮಾಡುವ ದರ್ದು ಏನಿತ್ತೋ ಏನೋ ಗೊತ್ತಿಲ್ಲ. ಬಟ್ ಸುದೀಪ್ ಕ್ಯಾಂಪ್‌ನಿಂದ ಬಂದ ಮಾಹಿತಿ ಪ್ರಕಾರ ಕೆಡಿಯಲ್ಲಿ ನಟಿಸ್ತಿಲ್ಲ ಕಿಚ್ಚ ಅನ್ನೋದು ಅಧಿಕೃತ.