ರಾಕಿ ರಾಮಾಯಣ.. ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ಭಾರತೀಯ ಚಿತ್ರರಂಗದ ಮಹೋನ್ನತ ಸಿನಿಮಾ. ರಾಕಿಭಾಯ್ ಯಶ್ ಈ ಚಿತ್ರದಲ್ಲಿ ರಾವಣನಾಗಿ ಬಣ್ಣ ಹಚ್ಚೋದ್ರ ಜೊತೆಗೆ ಬಂಡವಾಳ ಕೂಡ ಹೂಡಿದ್ದಾರೆ. ಶೂಟಿಂಗ್ ಭರದಿಂದ ಸಾಗ್ತಿದ್ದು, ಈ ಎಪಿಕ್ ಮಹಾ ದೃಶ್ಯಕಾವ್ಯದಲ್ಲಿನ 20ಕ್ಕೂ ಅಧಿಕ ಮಂದಿ ಸ್ಟಾರ್‌ಗಳ ಕ್ಯಾರೆಕ್ಟರ್ಸ್ ರಿವೀಲ್ ಮಾಡಲಾಗಿದೆ. ಅದ್ರ ಎಕ್ಸ್‌ಕ್ಲೂಸಿವ್ ಖಬರ್ ಇಲ್ಲಿದೆ. ಜಸ್ಟ್ ಹ್ಯಾವ್ ಎ ಲುಕ್.
- ಗ್ಯಾರಂಟಿಯಲ್ಲಿ ರಾಕಿ ‘ರಾಮಾಯಣ’ದ ಪಾತ್ರಧಾರಿಗಳು..!
- ರಾಕಿ, ರಣ್‌ಬೀರ್, ಸಾಯಿ ಪಲ್ಲವಿ ಜೊತೆ 20 ಪಾತ್ರ ರಿವೀಲ್
- ಬಿಗ್‌ಬಿ, ರಕುಲ್, ಕಾಜಲ್, ಅನಿಲ್ ಕಪೂರ್ ಪಾತ್ರಗಳೇನು ?
- ಲಕ್ಷ್ಮಣ ಯಾರು..? ವಿವೇಕ್ ಒಬೇರಾಯ್ ರೋಲ್ ಏನು..?
ರಾಮಾಯಣ.. ಬಾಲಿವುಡ್ ಅಂಗಳದಲ್ಲಿ ತಯಾರಾಗ್ತಿರೋ ಈ ಮಹಾದೃಶ್ಯಕಾವ್ಯದ ಮೇಲೆ ಸದ್ಯ ಎಲ್ಲರ ಕಣ್ಣು ಬಿದ್ದಿದೆ. ಅದಕ್ಕೆ ಕಾರಣ ಆ ಎಪಿಕ್ ಸಾಗಾ ಮೇಲೆ ಇರೋ ಭರವಸೆ, ಭಕ್ತಿ ಹಾಗೂ ನಂಬಿಕೆ. ಎಲ್ಲಕ್ಕಿಂತ ಮಿಗಿಲಾಗಿ ಸ್ಟಾರ್‌ಕಾಸ್ಟ್. ಹೌದು.. ರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿಪಲ್ಲವಿ ಮೊದಲಿಗೆ ಫೈನಲ್ ಆಗಿದ್ರು. ನಂತ್ರ ರಾವಣನಾಗಿ ರಾಕಿಭಾಯ್ ಯಶ್ ಎಂಟ್ರಿ ಕೊಟ್ಟರು. ಅಷ್ಟೇ ಅಲ್ಲ ಅವರೇ ಈ ಚಿತ್ರದ ನಿರ್ಮಾಪಕರು ಕೂಡ ಅನ್ನೋದು ಮತ್ತೊಂದು ಹೈಲೈಟ್.
ಆಮೀರ್ ಖಾನ್ ಜೊತೆ ದಂಗಲ್ ಸಿನಿಮಾ ಮಾಡಿದ್ದ ನಿತೀಶ್ ತಿವಾರಿ ಆ್ಯಕ್ಷನ್ ಕಟ್ ಹೇಳ್ತಿರೋ ರಾಮಾಯಣ, ರಾಜಮೌಳಿ ಚಿತ್ರಗಳಂತೆ ಮಾಸ್ಟರ್‌ಪೀಸ್ ಹಾಗೂ ರೆಫರೆನ್ಸ್ ರೆಕಾರ್ಡ್ ಆಗಿ ಇತಿಹಾಸದ ಪುಟಗಳು ಸೇರಲಿದೆ. ಯಾಕಂದ್ರೆ ಅಷ್ಟೊಂದು ಬಿಗ್ ಸ್ಕೇಲ್‌ನಲ್ಲಿ ಈ ಸಿನಿಮಾ ಕಟ್ಟಿಕೊಡಲಾಗ್ತಿದೆ. ಈಗಾಗ್ಲೇ ಚಿತ್ರತಂಡ ಒಂದಲ್ಲ ಎರಡೆರಡು ಭಾಗಗಳಲ್ಲಿ ರಾಮಾಯಣ ಸಿದ್ಧವಾಗ್ತಿರೋದ್ರ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿದೆ. ಅದ್ರಂತೆ 2026ರ ದೀಪಾವಳಿಗೆ ಮೊದಲ ಭಾಗ, 2027ರ ದೀಪಾವಳಿಗೆ ಎರಡನೇ ಭಾಗ ತೆರೆಗಪ್ಪಳಿಸಲಿದೆ.
ಇತ್ತೀಚೆಗೆ ಯಶ್ ಕೂಡ ರಾಮಾಯಣ ಸೆಟ್‌ನಲ್ಲಿ ಹಾಲಿವುಡ್ ಸ್ಟಂಟ್ ಮಾಸ್ಟರ್ ಗಾಯ್ ನೋರಿಸ್ ಜೊತೆ ಕಾಣಿಸಿಕೊಂಡಿದ್ದ ಸ್ಟಿಲ್ ಫೋಟೋಸ್ ಸಖತ್ ಸದ್ದು ಮಾಡಿದ್ದವು. ಆದ್ರೀಗ ರಾಕಿಭಾಯ್ ರಾಮಾಯಣದ ಮತ್ತಷ್ಟು ಇಂಟರೆಸ್ಟಿಂಗ್ ವಿಷಯಗಳು ಹೊರಬಿದ್ದಿವೆ. ಸುಮಾರು 20ಕ್ಕೂ ಅಧಿಕ ಪಾತ್ರಧಾರಿಗಳ ಹೆಸರುಗಳು ರಿವೀಲ್ ಆಗಿವೆ. ಭಾರತೀಯ ಚಿತ್ರರಂಗದ ಘಟಾನುಘಟಿ ಸ್ಟಾರ್ಸ್ ಅಂತ ಅನಿಸಿಕೊಂಡ ಸಾಕಷ್ಟು ಮಂದಿ ಈ ಚಿತ್ರದ ತಾರಾಗಣದಲ್ಲಿರೋದು ಇಂಟರೆಸ್ಟಿಂಗ್. ಹಾಗಾದ್ರೆ ಯಾರ್ಯಾರು ಯಾವ್ಯಾವ ರೋಲ್ ಮಾಡ್ತಾರೆ ಅಂತೀರಾ..? ಈ ಗ್ರಾಫಿಕಲ್ ಪ್ರೆಸೆಂಟೇಷನ್‌ನ ಒಮ್ಮೆ ನೋಡ್ಕೊಂಡ್ ಬನ್ನಿ.
ಕ್ರ.ಸಂ. |
ಕಲಾವಿದರ ಹೆಸರು |
ಪಾತ್ರ |
---|---|---|
1 |
ರಣ್‌ಬೀರ್ ಕಪೂರ್ |
ಶ್ರೀರಾಮ |
2 |
ಯಶ್ |
ರಾವಣ |
3 |
ಸಾಯಿ ಪಲ್ಲವಿ |
ಸೀತೆ |
4 |
ಲಾರಾ ದತ್ತಾ |
ಕೈಕೇಯಿ |
5 |
ರಕುಲ್ ಪ್ರೀತ್ ಸಿಂಗ್ |
ಶೂರ್ಪನಖಿ |
6 |
ಕಾಜಲ್ ಅಗರ್ವಾಲ್ |
ಮಂಡೋದರಿ |
7 |
ಅನಿಲ್ ಕಪೂರ್ |
ಜನಕ ಮಹಾರಾಜ |
8 |
ಅಮಿತಾಬ್ ಬಚ್ಚನ್ |
ಜಟಾಯು |
9 |
ಸನ್ನಿ ಡಿಯೋಲ್ |
ಹನುಮಂತ |
10 |
ರವಿ ದೂಬೆ |
ಲಕ್ಷ್ಮಣ |
11 |
ವಿಕ್ರಾಂತ್ ಮೆಸ್ಸಿ |
ಮೇಘನಾಥ |
12 |
ಮೋಹಿತ್ ರೈನಾ |
ಶಿವ |
13 |
ಕುನಾಲ್ ಕಪೂರ್ |
ಇಂದ್ರ |
14 |
ವಿವೇಕ್ ಒಬೇರಾಯ್ |
ವಿದ್ಯುತ್‌ಜೀವ |
15 |
ಅರುಣ್ ಗೋವಿಲ್ |
ದಶರಥ |
16 |
ಅದಿನಾಥ್ ಕೊಠಾರೆ |
ಭರತ |
17 |
ಶೀಬಾ ಛಡ್ಡಾ |
ಮಂಥರೆ |
18 |
ಬಾಬಿ ಡಿಯೋಲ್ |
ಕುಂಭಕರ್ಣ |
19 |
ವಿಜಯ್ ಸೇತುಪತಿ |
ವಿಭೀಷಣ |
20 |
ಇಂದಿರಾ ಕೃಷ್ಣನ್ |
ಕೌಸಲ್ಯಾ |
ಸೋ ನೋಡಿದ್ರಲ್ಲಾ.. ನಮ್ಮ ಸೌತ್ ಸಿನಿದುನಿಯಾದಿಂದ ಹಿಡಿದು ಬಾಲಿವುಡ್‌ವರೆಗೆ ಸಾಲು ಸಾಲು ಕಲಾವಿದರು ರಾಮಾಯಣದ ಸೆಟ್ ಸೇರಿಕೊಂಡಿದ್ದಾರೆ. ಅದ್ರಲ್ಲೂ ವಿಜಯ್ ಸೇತುಪತಿ ಅಂತಹ ವರ್ಸಟೈಲ್ ಆ್ಯಕ್ಟರ್ ಕೂಡ ವಿಭೀಷಣನಾಗಿ ಮಿಂಚು ಹರಿಸಲಿದ್ದಾರೆ. ಆದ್ರೆ ಬಿಗ್ ಬಿ ಅಮಿತಾಬ್ ಬಚ್ಚನ್‌ಗೆ ಯಾಕೆ ಜಟಾಯು ಪಾತ್ರ ನೀಡಿದ್ರೋ ಗೊತ್ತಿಲ್ಲ. ಅವ್ರನ್ನ ಯಾವುದಾದ್ರೂ ಬೇರೆ ಒಳ್ಳೆಯ ಪಾತ್ರಕ್ಕೆ ಬಳಸಿಕೊಳ್ಳಬಹುದಿತ್ತು ಅನಿಸ್ತಿದೆ.
ಇನ್ನು ರಾವಣನ ಪತ್ನಿ ಮಂಡೋದರಿ ಪಾತ್ರದಲ್ಲಿ ಮಗಧೀರ ಖ್ಯಾತಿಯ ಕಾಜಲ್ ಬಣ್ಣ ಹಚ್ಚುತ್ತಿದ್ದು, ಲಂಕೇಶ್ವರನ ರಾಣಿಯಾಗಿ ಕಮಾಲ್ ಮಾಡಲಿದ್ದಾರೆ. ರಕುಲ್ ಪ್ರೀತ್ ಸಿಂಗ್ ರಾವಣನ ಸಹೋದರಿ ಪಾತ್ರ ಮಾಡ್ತಿರೋದು ಇಂಟರೆಸ್ಟಿಂಗ್. ಇನ್ನು ವಿವೇಕ್ ಒಬೇರಾಯ್, ಬಾಬಿ ಡಿಯೋಲ್, ಸನ್ನಿ ಡಿಯೋಲ್ ಕೂಡ ಗಮನ ಸೆಳೆಯುವ ಪಾತ್ರಗಳಿಗೆ ಬಣ್ಣ ಹಚ್ಚಿದ್ದು, ಲಕ್ಷ್ಮಣನಾಗಿ ರವಿ ದೂಬೆ ಪ್ರೇಕ್ಷಕರನ್ನ ರಂಜಿಸಲಿದ್ದಾರೆ.
ಇದೆಲ್ಲವೂ ಓಕೆ.. ಆದ್ರೆ ಇಷ್ಟು ಮಂದಿ ಕಲಾವಿದರಿಗೆ ಅದೆಷ್ಟು ಕೋಟಿ ರೆಮ್ಯುನರೇಷನ್ ನೀಡ್ತಿದ್ದಾರೆ ನಿರ್ಮಾಪಕರು ಅನ್ನೋ ಪ್ರಶ್ನೆ ಕೂಡ ಎದ್ದಿದೆ. ಅಲ್ಲದೆ, ಅಷ್ಟೂ ಮಂದಿಗೆ ಕ್ಯಾರವ್ಯಾನ್‌ಗಳು, ಅವರ ಜೊತೆಗಿರೋ ಸ್ಟ್ಯಾಫ್‌ಗೂ ಅಕಾಮಡೇಷನ್ ನೀಡುವುದು ನಿಜಕ್ಕೂ ಚಾಲೆಂಜಿಂಗ್. ಅದೇನೇ ಇರಲಿ, ನಮ್ಮ ರಾಕಿಭಾಯ್ ಯಶ್ ಇಂಥದ್ದೊಂದು ಮಹೋನ್ನತ ಪ್ರಾಜೆಕ್ಟ್‌ನ ಭಾಗ ಆಗಿರೋದಲ್ಲದೆ, ಅದ್ರ ನಿರ್ಮಾಣ ಜವಾಬ್ದಾರಿ ಕೂಡ ಹೊರುತ್ತಿರುವುದು ಗ್ರೇಟ್. ಟಾಕ್ಸಿಕ್ ಸಿನಿಮಾದ ಜೊತೆ ಜೊತೆಗೆ ರಾಮಾಯಣದಲ್ಲೂ ಬ್ಯುಸಿ ಆಗಿರೋ ಯಶ್, ಕನ್ನಡಿಗರು ಮಗದೊಮ್ಮೆ ಹೆಮ್ಮೆ ಪಡುವಂತೆ ಮಾಡೋದ್ರಲ್ಲಿ ಯಾವುದೇ ಡೌಟ್ ಇಲ್ಲ.