• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, August 12, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

“ಕಾಲೇಜ್ ಕಲಾವಿದ” ಟ್ರೈಲರ್ ಬಿಡುಗಡೆ ಮಾಡಿದ ಖಳನಟ ಕೋಟೆ ಪ್ರಭಾಕರ್

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
May 29, 2025 - 1:36 pm
in ಸಿನಿಮಾ
0 0
0
Untitled design 2025 05 29t133231.348

ಬೆಳ್ಳಿ ಪರದೆ ಮೇಲೆ ಮತ್ತೊಂದು ಮ್ಯೂಸಿಕಲ್ ಲವ್ ಸ್ಟೋರಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಯುವ ಪಡೆಗಳ ತಂಡ ಸೇರಿಕೊಂಡು ಸಿದ್ದಪಡೆಸಿರುವಂತಹ ಚಿತ್ರ “ಕಾಲೇಜ್ ಕಲಾವಿದ”. ನಗರದ ಎಸ್. ಆರ್. ವಿ . ಪ್ರಿವ್ಯೂ ಥಿಯೇಟರ್ನಲ್ಲಿ ನಾಲ್ಕು ಹಾಡುಗಳನ್ನ ತೋರಿಸುವ ಮೂಲಕ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಚಿತ್ರತಂಡ ಆಯೋಜನೆ ಮಾಡಿತ್ತು. ಈ ಒಂದು ಕಾರ್ಯಕ್ರಮಕ್ಕೆ ಖಳನಟ ಕೋಟೆ ಪ್ರಭಾಕರ್ , ನಟ ನಿರ್ದೇಶಕ ನಾಗೇಂದ್ರ ಅರಸ್, ನಟರಾದ ಪ್ರಥಮ್ , ದಿನೇಶ್
ಜಯ ಕರ್ನಾಟಕ ಮುಖ್ಯಸ್ಥರಾದ ಜಗದೀಶ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು.

RelatedPosts

ರಜನಿ ‘ಬಾಷಾ’ಗಿಂತ ಹತ್ತು ಪಟ್ಟು ದೊಡ್ಡದಂತೆ ಉಪ್ಪಿ ‘ಓಂ’

ಕ್ಯೂಟ್ ಕ್ವೀನ್ ಶ್ರೀಲೀಲಾ ಜೊತೆ ರವಿತೇಜಾ ಮಾಸ್ ಜಾತ್ರೆ

ಅಬ್ಬಬ್ಬಾ.. ಬಾಘಿ-4 ನೋಡೋಕೆ 2 ಗುಂಡಿಗೆ ಬೇಕು ಗುರು..!

ಲುಕ್ ಬದಲಿಸಿದ ರಾಕಿಭಾಯ್.. ಹಬ್ಬದಲ್ಲೂ ಫೇಸ್ ಕವರ್

ADVERTISEMENT
ADVERTISEMENT

ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದಂತ ಖಳನಟ ಕೋಟೆ ಪ್ರಭಾಕರ್ ಮಾತನಾಡುತ್ತಾ ನನ್ನ ಚಿತ್ರ ಜೀವನದಲ್ಲಿ ಇದೇ ಮೊದಲ ಬಾರಿಗೆ ಚಿತ್ರ ಒಂದರ ಟ್ರೈಲರ್ ಬಿಡುಗಡೆ ಮಾಡಿದ್ದು , ಇದು ನನಗೆ ಮರೆಯಲಾಗದ ಸಂದರ್ಭ, ನಾನು ಈ ಚಿತ್ರದಲ್ಲಿ ಆಕ್ಟ್ ಮಾಡಿಲ್ಲ , ಆದರೂ ಈ ತಂಡ ಪ್ರೀತಿಯಿಂದ ನನ್ನನ್ನ ಕರೆದರು ಹಾಗಾಗಿ ಬಂದೆ , ಈ ಕಾಲೇಜ್ ಕಲಾವಿದ ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಮತ್ತೊಬ್ಬ ಅತಿಥಿ ನಾಗೇಂದ್ರ ಅರಸ್ ಮಾತನಾಡುತ್ತಾ ಈ ಚಿತ್ರದ ಸಂಕಲನಾದ ಕೆಲಸವನ್ನ ನನ್ನ ಶಿಷ್ಯ ಮಹೇಶ್ ಮಾಡುತ್ತಿದ್ದಾನೆ. ಹಾಗೆಯೇ ಈ ಚಿತ್ರವನ್ನ ನೋಡಿದ ಮೇಲೆ ನಾನೇ ಈ ಚಿತ್ರದ ಟ್ರೈಲರ್ ಅನ್ನ ಎಡಿಟ್ ಮಾಡಿದೆ. ಖಂಡಿತ ಈ ಮ್ಯೂಸಿಕಲ್ ಲವ್ ಚಿತ್ರದಲ್ಲಿ ಬಹಳಷ್ಟು ತಿರುವುಗಳಿದೆ , ಚಿತ್ರ ಸಕ್ಸಸ್ ಕಾಣಲಿ ಎಂದು ಶುಭ ಹಾರೈಸಿದರು.

ನಟ ಪ್ರಥಮ್ ಕೂಡ ಎಂದಿನಂತೆ ತನ್ನ ಅಬ್ಬರದ ಮಾತಿನಲ್ಲೇ ಎಲ್ಲರ ಗಮನವನ್ನು ಸೆಳೆಯುತ್ತಾ ಚಿತ್ರದ ಕಲಾವಿದರು , ತಂತ್ರಜ್ಞಾನರ ಶ್ರಮದ ಬಗ್ಗೆ ಮಾತನಾಡುತ್ತಾ ಚಿತ್ರ ಯಶಸ್ವಿ ಕಾಣಲಿ ಎಂದು ಶುಭ ಹಾರೈಸಿದರು. ಹಾಗೆಯೇ ಜಯ ಕರ್ನಾಟಕದ ಮುಖ್ಯಸ್ಥರಾದ ಜಗದೀಶ್ ಮಾತನಾಡುತ್ತಾ ನಿರ್ಮಾಪಕ ತರುಣ್ ಶರ್ಮ 30ವರ್ಷದ ಸ್ನೇಹಿತ. ಈ ಚಿತ್ರದ ಟ್ರೈಲರ್ ಬಹಳ ಸೊಗಸಾಗಿ ಬಂದಿದೆ. ಹಾಗೆಯೇ ಡ್ರಗ್ ವಿಚಾರದ ಕುರಿತು ಈ ಚಿತ್ರದಲ್ಲಿ ಹೇಳಿದ್ದು , ಇವತ್ತಿನ ಕಾಲೇಜು ವಿದ್ಯಾರ್ಥಿಗಳ ಕಥೆಯು ಇದೆ. ಈ ಚಿತ್ರಕ್ಕೆ ರಾಜ್ಯದ ನಮ್ಮ ಜಯ ಕರ್ನಾಟಕ ಸಂಘಟನೆ ಸಂಪೂರ್ಣ ಬೆಂಬಲ ನೀಡಲಿದೆ. ಚಿತ್ರಕ್ಕೆ ಶುಭವಾಗಲಿ ಎಂದರು. ಇನ್ನುಳಿದಂತೆ ಚಾಮರಾಜ್ ಫೈಟ್ ಮಾಸ್ಟರ್, ನಟ ದಿನೇಶ್ ಸೇರಿದಂತೆ ಹಲವಾರು ಚಿತ್ರತಂಡದ ಶ್ರಮವನ್ನ ಮೆಚ್ಚಿಕೊಳ್ಳುತ್ತಾ ಚಿತ್ರ ಯಶಸ್ವಿ ಆಗಲಿ ಎಂದು ಶುಭ ಹಾರೈಸಿದರು.

ಈ ಚಿತ್ರದ ನಿರ್ದೇಶಕ ಸಂಜಯ್ ಮಳವಳ್ಳಿ ಮಾತನಾಡುತ್ತಾ ನಾನು ಚಿತ್ರೋದ್ಯಮದಲ್ಲಿ 15 ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹಾಯಕ , ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ನಾನು ಬರಹಗಾರ ಹಾಗೂ ಚಿತ್ರ ಸಾಹಿತಿಯು ಕೂಡ, ನನ್ನ ಗುರುಗಳಾದ ಮಂಡ್ಯ ರಮೇಶ್ ಮಾರ್ಗದರ್ಶನದಲ್ಲಿ ಸಾಗಿ ಬಂದು , ಈಗ ನನ್ನ ಮೊದಲ ನಿರ್ದೇಶನದ ಪ್ರಯತ್ನವಾಗಿ ಕಾಲೇಜ್ ಕಲಾವಿದ ಚಿತ್ರವನ್ನು ಸಿದ್ಧಪಡಿಸಿದ್ದೇನೆ. ಇದೊಂದು ಪ್ರೇಮಮಯ ಚಿತ್ರ. ಮ್ಯೂಸಿಕಲ್ ಜರ್ನಿರುವ ಈ ಚಿತ್ರದಲ್ಲಿ ಡ್ರಗ್ಸ್ ವಿಚಾರವೂ ಒಳಪಟ್ಟಿದೆ. ಕಾಲೇಜು ವಿದ್ಯಾರ್ಥಿಗಳ ಸ್ನೇಹ , ಪ್ರೀತಿ , ಸಂಬಂಧ , ಹಾಸ್ಯ , ಫೈಟ್ ಸೇರಿದಂತೆ ಮನೋರಂಜನೆಯ ಎಲ್ಲಾ ಅಂಶವನ್ನು ಒಳಗೊಂಡಿರುವಂತಹ ಚಿತ್ರ ಇದಾಗಿದೆ.

ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ಚಿತ್ರಿಕರಿಸಲಾಗಿದೆ. ಇಂದು ಚಿತ್ರದ ಟ್ರೈಲರ್ ಅನ್ನ ಬಿಡುಗಡೆ ಮಾಡಿದ್ದೇವೆ. ಮುಂದಿನ ತಿಂಗಳು ಜೂನ್ 6 ರಂದು ರಾಜ್ಯಾದ್ಯಂತ ನಮ್ಮ ಚಿತ್ರ ಬಿಡುಗಡೆ ಆಗಲಿದೆ ಎಲ್ಲರೂ ನೋಡಿ ಸಹಕರಿಸಿ ಎಂದು ಕೇಳಿಕೊಂಡರು. ಈ ಚಿತ್ರದ ನಿರ್ಮಾಪಕರಾದ ತರುಣ್ ಶರ್ಮ ಮಾತನಾಡುತ್ತಾ ನಾನು ಐರನ್ ಅಂಡ್ ಸ್ಟೀಲ್ ಬಿಸಿನೆಸ್ ಮಾಡುತ್ತಿದ್ದೇನೆ. ನನಗೆ ಚಿತ್ರ ನಿರ್ಮಾಣ ಮಾಡುವ ಆಸೆ, ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಈಗ ಸಿನಿಮಾ ಚೆನ್ನಾಗಿ ಬಂದಿದೆ.

ಜೂನ್ 6 ರಂದು ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶಾಲಿನಿ ಆರ್ಟ್ಸ್ ಡಿಸ್ಟ್ರಿಬುಷನ್ ಮೂಲಕ ನಮ್ಮ ಚಿತ್ರವನ್ನ ಬಿಡುಗಡೆ ಮಾಡುತ್ತಿದ್ದೇವೆ. ಹಾಗೆಯೇ ನಿರ್ದೇಶಕರು ಈ ಚಿತ್ರದಲ್ಲಿ ಒಂದು ವಿಲ್ಲನ್ ಪಾತ್ರ ಇದೆ ಅದನ್ನ ನೀವೇ ಮಾಡಿ ಎಂದರು , ಹಾಗಾಗಿ ನಾನು ಒಪ್ಪಿಕೊಂಡು ಮಾಡಿದ್ದೇನೆ. ನನ್ನ ಪಾತ್ರ ಹೇಗಿದೆ ಎಂಬುದನ್ನು ನೀವೆಲ್ಲರೂ ನೋಡಿ ಹೇಳಬೇಕು , ಮುಂದೆಯೂ ಚಿತ್ರ ನಿರ್ಮಾಣ ಮಾಡುತ್ತೇನೆ. ಅವಕಾಶ ಸಿಕ್ಕರೆ ಬೇರೆ ಚಿತ್ರಗಳಲ್ಲೂ ಕೂಡ ನಟಿಸುತ್ತೇನೆ ಎನ್ನುತ್ತಾ , ನಮ್ಮ ಚಿತ್ರವನ್ನ ನೋಡಿ ಹರಿಸಿ ಎಂದರು.

ನಟ ಆರಾವ್ ಸೂರ್ಯ ಮಾತನಾಡುತ್ತಾ ನಾನು 2016ರಲ್ಲಿ ಸಿನಿಮಾಗಳಲ್ಲಿ ನಟಿಸುತ್ತಾ ಬಂದೆ , ತದನಂತರ ಸೀರಿಯಲ್ ಗಳಲ್ಲಿ ಅಭಿನಯಿಸಿದೆ. ಈಗ ಮತ್ತೆ ಸಿನಿಮಾಗೆ ಎಂಟ್ರಿ ಮಾಡಿದ್ದೇನೆ. ಇದೊಂದು ಸುಂದರ ಲವ್ ಸಬ್ಜೆಕ್ಟ್ , ಈ ಚಿತ್ರದಲ್ಲಿ ನಾನೊಬ್ಬ ಸ್ಕೆಚ್ ಆರ್ಟಿಸ್ಟ್ , ಕಾಲೇಜು ವಿದ್ಯಾರ್ಥಿಯಾಗಿ ನನ್ನದೊಂದು ಗೆಳೆಯರ ಗುಂಪು , ಅಮ್ಮನ ಪ್ರೀತಿ , ಸ್ನೇಹಿತರ ಸಹಕಾರದ ನಡುವೆ ಮುದ್ದಾದ ಹುಡುಗಿ ನನ್ನ ಮನಸ್ಸಿಗೆ ಪ್ರವೇಶ ಆದಾಗ ಆಗುವ ಏರಿಳಿತ ಕಥೆಯೇ ಜೊತೆಗೆ ಡ್ರಗ್ಸ್ ವಿಚಾರ ಸೇರಿದಂತೆ ಹಲವು ಘಟನೆಗಳು ಚಿತ್ರದ ಹೈಲೈಟ್ ಆಗಲಿದೆ. ಸಾಂಗ್ , ಫೈಟ್ , ಕಾಮಿಡಿ ಎಲ್ಲವೂ ಸೊಗಸಾಗಿ ಮೂಡಿಬಂದಿದೆ.

ಹಾಡುಗಳು ನಮ್ಮ ಚಿತ್ರದ ಹೈಲೈಟ್ , ನಟನೆಗೆ ಒಳ್ಳೆ ಅವಕಾಶ ಸಿಕ್ಕಿದೆ ನೀವೆಲ್ಲರೂ ನಮ್ಮ ಚಿತ್ರವನ್ನ ನೋಡಿ ಹರಿಸಿ ಎಂದರು. ಈ ಚಿತ್ರದಲ್ಲಿ ನಾಯಕಿಯಾಗಿ ಚೈತ್ರ ಅಭಿನಯಿಸಿದ್ದು , ಬೇರೆ ಚಿತ್ರದ ಚಿತ್ರೀಕರಣದ ಕಾರಣ ಪತ್ರಿಕಾಗೋಷ್ಠಿಗೆ ಬರಲಿಲ್ಲ , ಬಿಡುಗಡೆಯ ಪ್ರಚಾರ ಸಮಯಕ್ಕೆ ಬರುತ್ತಾರೆ ಎಂದಿದೆ ಚಿತ್ರತಂಡ. ಇನ್ನು ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಮಿಡಿ ನಟ ಹುಲ್ಲಿ ಕಾರ್ತಿಕ್ ಅಭಿನಯಿಸಿದ್ದು , ಹಿರಿಯ ನಟ ರಮೇಶ್ ಭಟ್ , ನಟಿ ಹರಿಣಿ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.

ಇದೊಂದು ಮ್ಯೂಸಿಕಲ್ ಲವ್ ಜರ್ನಿ ಚಿತ್ರವಾಗಿದ್ದು , ಸಂಗೀತ ನಿರ್ದೇಶಕ ಸೂರಜ್ ಜೋಯಿಸ್ ಮಾತನಾಡುತ್ತಾ ಇದು ನನ್ನ 13ನೇ ಫಿಲಂ. ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು , ಎರಡು ಹಾಡನ್ನು ನಾನೇ ಹಾಡಿದ್ದೇನೆ. ನಿರ್ದೇಶಕರು ಹೇಳಿದಂತೆ ನಾನು ಕೆಲಸ ಮಾಡಿದ್ದೇನೆ. ಎಲ್ಲಾ ಕ್ರೆಡಿಟ್ ಅವರಿಗೆ ಸಲ್ಲಬೇಕು , ಹಾಡುಗಳು , ಹಿನ್ನೆಲೆ ಸಂಗೀತವು ಉತ್ತಮವಾಗಿ ಮೂಡಿ ಬಂದಿದೆ. ವಿಶೇಷವಾಗಿ ಈ ಚಿತ್ರಕ್ಕಾಗಿ ಥೀಮ್ ಮ್ಯೂಸಿಕ್ ಮಾಡಿದ್ದೇವೆ. ನನ್ನ ಹಿಂದಿನ ಎಲ್ಲಾ ಚಿತ್ರಕ್ಕಿಂತ ಈ ಚಿತ್ರ ಬಹಳ ವಿಶೇಷವಾದದ್ದು, ಸಂಭಾಷಣೆ , ಹಾಸ್ಯ , ಆಕ್ಷನ್ ಎಲ್ಲವೂ ಉತ್ತಮವಾಗಿ ಬಂದಿದೆ ಎಂದರು. ಆನಂದ್ ಸುಂದರೇಶ್ ಛಾಯಾಗ್ರಾಹಣ , ಬಾಲ ನೃತ್ಯ ನಿರ್ದೇಶನವಿರುವ ಈ ಚಿತ್ರವು ಜೂನ್ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರ ತಂಡ ಕಾಲೇಜು ಸೇರಿದಂತೆ ಹಲವುಡೆ ಪ್ರಚಾರದ ಕಾರ್ಯವನ್ನು ಆರಂಭಿಸಿದ್ದು, ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ವನವಬನಬನ

ರಜನಿ ‘ಬಾಷಾ’ಗಿಂತ ಹತ್ತು ಪಟ್ಟು ದೊಡ್ಡದಂತೆ ಉಪ್ಪಿ ‘ಓಂ’

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 12, 2025 - 5:38 pm
0

Dvcbcvbv

ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಮನೆ ಗೇಟ್ ಹಾರಿದ ಟೆಕ್ಕಿಗೆ ಕಳ್ಳನ ಪಟ್ಟ!

by ಶಾಲಿನಿ ಕೆ. ಡಿ
August 12, 2025 - 5:18 pm
0

Untitled design 2025 08 12t163926.450

ಕ್ಯೂಟ್ ಕ್ವೀನ್ ಶ್ರೀಲೀಲಾ ಜೊತೆ ರವಿತೇಜಾ ಮಾಸ್ ಜಾತ್ರೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 12, 2025 - 4:40 pm
0

Untitled design 2025 08 12t161912.225

ಎಂ.ಎಸ್‌ ಧೋನಿ 100 ಕೋಟಿ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

by ಶಾಲಿನಿ ಕೆ. ಡಿ
August 12, 2025 - 4:19 pm
0

ಸಂಬಂಧಿಸಿದ ಪೋಸ್ಟ್‌ಗಳು

  • ವನವಬನಬನ
    ರಜನಿ ‘ಬಾಷಾ’ಗಿಂತ ಹತ್ತು ಪಟ್ಟು ದೊಡ್ಡದಂತೆ ಉಪ್ಪಿ ‘ಓಂ’
    August 12, 2025 | 0
  • Untitled design 2025 08 12t163926.450
    ಕ್ಯೂಟ್ ಕ್ವೀನ್ ಶ್ರೀಲೀಲಾ ಜೊತೆ ರವಿತೇಜಾ ಮಾಸ್ ಜಾತ್ರೆ
    August 12, 2025 | 0
  • Untitled design 2025 08 12t154143.775
    ಅಬ್ಬಬ್ಬಾ.. ಬಾಘಿ-4 ನೋಡೋಕೆ 2 ಗುಂಡಿಗೆ ಬೇಕು ಗುರು..!
    August 12, 2025 | 0
  • Untitled design 2025 08 11t184926.574
    ಲುಕ್ ಬದಲಿಸಿದ ರಾಕಿಭಾಯ್.. ಹಬ್ಬದಲ್ಲೂ ಫೇಸ್ ಕವರ್
    August 11, 2025 | 0
  • Untitled design 2025 08 11t182231.655
    ದೀಪಾವಳಿಗೆ ಲ್ಯಾಂಡ್‌‌ಲಾರ್ಡ್‌.. ಆ-15ಕ್ಕೆ ಡಬ್ಬಿಂಗ್ ಟೀಸರ್
    August 11, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version