ಇಂಡಿಪೆಂಡೆನ್ಸ್ ಡೇ ವಿಶೇಷ ಚಿತ್ರಪ್ರೇಮಿಗಳಿಗೆ 45 ಸಿನಿಮಾನ ಗಿಫ್ಟ್ ಕೊಡೋಕೆ ಸಜ್ಜಾಗಿದ್ದಾರೆಡ ಶಿವಣ್ಣ, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ. ಈ ಟ್ರಯೋ ಕಾಂಬೋದಿಂದ ಮತ್ತೊಂದು ಸಾಂಗ್ ಹೊರಬಿದ್ದಿದ್ದು, ಇಡೀ ಚಿತ್ರತಂಡ ಶಿವ ಜಪ ಮಾಡ್ತಿದೆ. ಮಧುಮಗನಂತೆ ಕಂಗೊಳಿಸುತ್ತಿದ್ದ ಚಿರಯುವಕ ಶಿವಣ್ಣನ ಖದರ್ ಜೊತೆ ಸಾಂಗ್ ಝಲಕ್ ಇಲ್ಲಿದೆ. ಜಸ್ಟ್ ವಾಚ್.
- ಟೀಂ 45 ಶಿವ ಜಪ.. ಮಧುಮಗನಂತೆ ಕಂಗೊಳಿಸಿದ ಶಿವಣ್ಣ
- ಸ್ಯಾಂಡಲ್‌ವುಡ್‌ನ ಬಿಗ್ಗೆಸ್ಟ್ ಮಲ್ಟಿಸ್ಟಾರರ್ ಎಂಟರ್‌ಟೈನರ್..!
- ಇದು ಸಿನಿಮಾ ಹಾಡಲ್ಲ.. ಆತ್ಮದ ಹಾಡು, ಜೀವನದ ಹಾಡು
- ಕವಿರತ್ನನ ಸಾಲು, ವಿಪಿ ಗಾಯನ.. ಅರ್ಜುನ್ ಜನ್ಯಗೆ ಜೈಕಾರ
ಇದು ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮಲ್ಟಿಸ್ಟಾರ್ ಮೂವಿ 45 ಚಿತ್ರದ ಲೇಟೆಸ್ಟ್ ಲಿರಿಕಲ್ ಸಾಂಗ್. ಅರ್ಜುನ್ ಜನ್ಯ ಸಂಗೀತ, ಡಾ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗೂ ವಿಜಯ್ ಪ್ರಕಾಶ್ ಗಾಯನವಿರೋ ಈ ಶಿವ ಸಾಂಗ್ ನಿಜಕ್ಕೂ ಸಖತ್ ವೈಬ್ರೆಂಟ್ ಆಗಿದೆ. ಇದು ಮನರಂಜನೆಯ ಸಾಂಗ್ ಅಲ್ಲ, ಆತ್ಮರಂಜನೆಯ ಸಾಂಗ್. ಸಿಕ್ಕಾಪಟ್ಟೆ ಪಾಸಿಟಿವ್ ಆಗಿದ್ದು, 45 ಸಿನಿಮಾದ ಸ್ಟ್ರೆಂಥ್ ಹೆಚ್ಚಿಸಿದೆ.ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ಈ ಸಿನಿಮಾ ಮೂವರು ದಿಗ್ಗಜ ಕಲಾವಿದರ ಮಹಾಸಂಗಮಕ್ಕೆ ಸಾಕ್ಷಿ ಆಗ್ತಿದೆ. ಇದು ಶಿವಣ್ಣನ ಶಿವ ಸಾಂಗ್ ಆಗಿದ್ದು, ಇದರ ಲಾಂಚ್ ಇವೆಂಟ್‌ಗೆ ಖುದ್ದು ಮಧುಮಗನಂತೆ ಸಿಲ್ಕ್ ಅಂಗಿ, ಪಂಚೆಯಲ್ಲಿ ಬಂದು ಮಿಂಚಿದ್ರು ಕರುನಾಡ ಚಕ್ರವರ್ತಿ, ಲಿವಿಂಗ್ ಲೆಜೆಂಡ್ ಶಿವಣ್ಣ. ಅದರಲ್ಲೂ ಚಪ್ಪಲಿ ಧರಿಸದೆ ವೇದಿಕೆ ಹಂಚಿಕೊಂಡಿದ್ದು ಮತ್ತೊಂದು ವಿಶೇಷ. ಇನ್ನು ಹಾಡಿನ ವಿಶೇಷತೆಗಳ ಜೊತೆಗೆ ಅರ್ಜುನ್ ಜನ್ಯ ಭಾರತದ ಬೆಸ್ಟ್ ಡೈರೆಕ್ಟರ್ ಆಗ್ತಾರೆ ಅನ್ನೋ ಕಾಂಪ್ಲಿಮೆಂಟ್ ಕೊಟ್ರು ಶಿವಣ್ಣ.
ಇಲ್ಲಿಯವರೆಗೂ ಬರೀ ಸಂಗೀತ ಸಂಯೋಜಕರಾಗಿದ್ದ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ, ಇದೀಗ ಡೈರೆಕ್ಟರ್ ಆಗಿ ಬಡ್ತಿ ಪಡೆದಿದ್ದು, ಎರಡೂ ಕಾರ್ಯಗಳನ್ನ ಸಮರ್ಪಕವಾಗಿ ನಿಭಾಯಿಸಿದ್ದಾರೆ. ಅದೇ ಕಾರಣದಿಂದ ನಿರ್ಮಾಪಕರು ಸೇರಿದಂತೆ ಇಡೀ ಚಿತ್ರತಂಡದಿಂದ ಭೇಷ್ ಅನಿಸಿಕೊಳ್ತಿದ್ದಾರೆ. ನಿರ್ಮಾಪಕ ರಮೇಶ್ ರೆಡ್ಡಿ ಅವರ ಸಿನಿಮೋತ್ಸಾಹ ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದು, ಇದನ್ನ ಪ್ಯಾನ್ ಇಂಡಿಯಾಗೆ ತಲುಪಿಸೋ ಪಣ ತೊಟ್ಟಿದ್ದಾರೆ.
ಟೀಸರ್ ಸಖತ್ ಕಿಕ್ ಕೊಡ್ತಿದ್ದು, ಉಪ್ಪಿ ಹಾಗೂ ಶಿವಣ್ಣ ನಡುವಿನ ವಾಕ್ಸಮರ ಮಸ್ತ್ ಮಜಾ ಕೊಡ್ತಿದೆ. ಇನ್ನು ಚಿತ್ರದಲ್ಲಿ ಇವರ ಟಗ್ ಆಫ್ ವಾರ್ ಹೇಗಿರಲಿದೆ ಅನ್ನೋದು ಕೂಡ ಕುತೂಹಲ ಮೂಡಿಸಿದೆ. ಮೇಕಿಂಗ್‌ನಲ್ಲಿ ಸಾಕಷ್ಟು ಪ್ರಯೋಗಗಳನ್ನ ಮಾಡಿದ್ದು, ಚಿತ್ರದಲ್ಲಿ ಸ್ಪೆಷಲ್ ಎಫೆಕ್ಟ್ಸ್ ಹಾಗೂ ಗ್ರಾಫಿಕ್ಸ್ ಪ್ರಧಾನವಾಗಿರಲಿವೆಯಂತೆ.
45 ಸಿನಿಮಾ ಈಗಾಗ್ಲೇ ಮುಂಬೈ, ಹೈದ್ರಾಬಾದ್, ಚೆನ್ನೈ ಹಾಗೂ ಕೊಚ್ಚಿಯಲ್ಲಿ ಭರ್ಜರಿ ಪ್ರಮೋಷನ್ಸ್ ನಡೆಸಿ, ಪ್ಯಾನ್ ಇಂಡಿಯಾ ಹೊಸ ಅಲೆ ಎಬ್ಬಿಸಿದೆ. ಆಡಿಯೋ ರೈಟ್ಸ್ ಕೂಡ ದಾಖಲೆ ಮೊತ್ತಕ್ಕೆ ಆನಂದ್ ಆಡಿಯೋಗೆ ಮಾರಾಟವಾಗಿದ್ದು, ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಮಾತುಕತೆ ಹಂತದಲ್ಲಿದೆ. ಅಂದುಕೊಂಡ ಡೇಟ್‌ಗೆ ಇದೇ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಸ್ಪೆಷಲ್ ವಿಶ್ವದಾದ್ಯಂತ 45 ಬಿಗ್‌ಸ್ಕ್ರೀನ್‌ಗೆ ಎಂಟ್ರಿ ಕೊಡಲಿದೆ.