ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರೋ ಡಿಬಾಸ್ ದರ್ಶನ್ ಸದ್ಯ ಬ್ಯಾಕ್ಬೇನ್ಗೆ ಸಿಕ್ಕಾಪಟ್ಟೆ ಸುಸ್ತಾಗಿಬಿಟ್ಟಿದ್ದಾರೆ. ಅಗತ್ಯವಿದ್ದರೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಅಂತ ಕೋರ್ಟ್ ಆದೇಶ ನೀಡಿದೆ. ಇದಕ್ಕೆ ಎಸ್ಪಿಪಿ ಆಕ್ಷೇಪಣೆ ಸಲ್ಲಿಸಲಿದ್ದು.. ಸದ್ಯ ವಿಕ್ಟೋರಿಯಾ ಆಸ್ಪತ್ರೆಗೆ ಬರೋ ಅಂಥದ್ದು ಏನಾಗಿದೆ ದರ್ಶನ್ಗೆ..? ಜೈಲಾಧಿಕಾರಿಗಳು ಸಲ್ಲಿಸಿರೋ ವರದಿಯ ಪ್ರಕಾರ ದಚ್ಚು ಸಮಸ್ಯೆ ಏನು..? ಅವ್ರ ವಕೀಲರು ಏನಂದ್ರು..? ಇಲ್ಲಿದೆ ಡಿಟೈಲ್ಡ್ ರಿಪೋರ್ಟ್.
- ಬ್ಯಾಕ್ಪೇನ್ಗೆ ದಚ್ಚು ಸುಸ್ತು.. ವಿಕ್ಟೋರಿಯಾದಲ್ಲಿ ಚಿಕಿತ್ಸೆಗೆ ಅಸ್ತು
- 12 ವರ್ಷದ ಬೆನ್ನು ನೋವು.. 2 ಬಾರಿ ಫಿಸಿಯೋಥೆರಪಿ ಸಿಕ್ಕಿದೆ..!
- ಎಪಿಡ್ಯೂರಲ್ ಇಂಜೆಕ್ಷನ್.. ಲೇಜರ್ & ಆಲ್ಟ್ರಾ ಸೌಂಡ್ ಥೆರಪಿ
- SPPಯಿಂದ ಮಂಡೇ ಆಕ್ಷೇಪಣೆ.. ಸದ್ಯಕ್ಕಿಲ್ಲ ವಿಕ್ಟೋರಿಯಾ ವಿಸಿಟ್
ದಾಸ ದರ್ಶನ್ಗೆ ಈಗೀಗ ಎಲ್ಲವೂ ಪ್ಲಸ್ ಆಗ್ತಾ ಹೋಗ್ತಿದೆ. ಸಾಕ್ಷಿಗಳಿಂದ ಹಿಡಿದು ಎಲ್ಲರೂ ಉಲ್ಟಾ ಹೊಡೆಯುತ್ತಿರೋದು ನೋಡಿದ್ರೆ ಆದಷ್ಟು ಬೇಗ ದರ್ಶನ್ ಹೊರಬರೋದು ನಿಚ್ಚಿತ ಅನಿಸ್ತಿದೆ. ಇದರ ನಡುವೆ ಬೆನ್ನು ನೋವಿನಿಂದ ಬಳಲುತ್ತಿರೋ ನಟ ದರ್ಶನ್ಗೆ ಅಗತ್ಯ ಬಿದ್ದರೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಅಂತ ಕೋರ್ಟ್ ಆದೇಶಿಸಿದೆ.
ಅಂದಹಾಗೆ ದರ್ಶನ್ ಬೆನ್ನುನೋವಿನ ವರದಿಯನ್ನ ಜೈಲಾಧಿಕಾರಿಗಳು ಕೋರ್ಟ್ಗೆ ಸಲ್ಲಿಕೆ ಮಾಡಿದ್ದು.. ಅದಕ್ಕೆ ಪೂರಕವಾಗಿ ದಚ್ಚು ಪರ ವಕೀಲ ಹಷ್ಮತ್ ಪಾಷ ವಾದಿಸಿದ್ದಾರೆ. ದರ್ಶನ್ಗೆ ಜೈಲಿನಲ್ಲಿ ಆಧುನಿಕ ಪಿಸಿಯೋಥೆರಪಿ ಚಿಕಿತ್ಸೆ ಸಿಗ್ತಾ ಇಲ್ಲ. ನೋವು ನಿವಾರಣೆಗೆ ಆಧುನಿಕ ಚಿಕಿತ್ಸೆ ನೀಡಬೇಕಿದೆ. ಲೇಜರ್ ಥೆರಪಿ, ಆಲ್ಟ್ರಾ ಸೌಂಡ್ ಥೆರಪಿ ಚಿಕಿತ್ಸೆಯಿಂದ ನೋವು ಕಮ್ಮಿ ಆಗುತ್ತೆ. ವರದಿಯಲ್ಲಿ ಬೆನ್ನುಮೂಳೆಯ ನಡುವಿನ ಡಿಸ್ಕ್ ಜಾರುವಿಕೆ ಸಮಸ್ಯೆ ಉಲ್ಲೇಖವಾಗಿದೆ. ಅವ್ರಿಗೆ ಕಳೆದ 12 ವರ್ಷಗಳಿಂದ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಎಂದಿದ್ದಾರೆ.
ನೋವು ಕಡಿಮೆ ಮಾಡಿಕೊಳ್ಳಲು ದಾಸ ದರ್ಶನ್ ಕಾಲಕಾಲಕ್ಕೆ ಎಪಿಡ್ಯೂರಲ್ ಇಂಜೆಕ್ಷನ್ ಪಡೆಯುತ್ತಿದ್ದರು ಎಂದಿದ್ದಾರೆ. ಜೈಲಿಗೆ ದಾಖಲಿಸಿದ ನಂತರ ಎಪಿಡ್ಯೂರಲ್ ಇಂಜೆಕ್ಷನ್ ಚಿಕಿತ್ಸೆ ನೀಡಲಾಗಿಲ್ಲ. ಅಲ್ಲದೆ ಅಗತ್ಯ ಫಿಸಿಯೋಥೆರಪಿ ಕೂಡ ನೀಡಲಾಗಿಲ್ಲ. ಇಲ್ಲಿಯ ತನಕ ಎರಡು ಬಾರಿ ಅಷ್ಟೇ ಫಿಸಿಯೋ ಥೆರಪಿ ನೀಡಲಾಗಿದೆ. ನವೆಂಬರ್ 7ರಿಂದ ನವೆಂಬರ್ 28ರವರೆಗೆ ಫಿಸಿಯೋ ನಿಡಿಲ್ಲ. ನೋವು ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ ಅಂತ ಕೋರ್ಟ್ನಲ್ಲಿ ವಾದಿಸಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬಹುದು. ಅಲ್ಲಿ ಅಗತ್ಯವಿರುವ ಯಂತ್ರೋಪಕರಣಗಳು ಲಭ್ಯವಿವೆ.ಬೇರೆಡೆಗೆ ತಂದು ಬಳಸಲು ಅಥವಾ ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದು ವಾದಿಸಿದ ಹಿನ್ನೆಲೆ ಮುಖ್ಯ ವೈದ್ಯಾಧಿಕಾರಿಗೆ 59ನೇ ಸಿಸಿಹೆಚ್ ಕೋರ್ಟ್ ಹೀಗಂತ ಆದೇಶ ನೀಡಿದೆ. ಅಗತ್ಯವಿದ್ದರೆ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿ.. ಚಿಕಿತ್ಸೆ ನೀಡಿ. ಆದೇಶ ತಕ್ಷಣ ಇ-ಮೇಲ್ ಮೂಲಕ ಜೈಲು ಅಧಿಕಾರಿಗಳಿಗೆ ತಲುಪಿಸಲು ಸೂಚನೆ. ಇನ್ನೂ ಇದಕ್ಕೆ ಅಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್ ಮನವಿ ಹಿನ್ನೆಲೆ ಸೋಮವಾರಕ್ಕೆ ಕಲಾಪ ಮುಂದೂಡಿಕೆ ಆಗಿದ್ದು.. ಎಸ್ಪಿಪಿಯಿಂದ ಇದಕ್ಕೆ ಆಕ್ಷೇಪ ಕೂಡ ವ್ಯಕ್ತವಾಗಲಿದೆ.
ಸದ್ಯ ದರ್ಶನ್ಗೆ ಜೈಲಿನಲ್ಲೇ ಚಿಕಿತ್ಸೆ ನೀಡಲಾಗ್ತಿದ್ದು.. ವಿಕ್ಟೋರಿಯಾಗೆ ಕರೆತಂದು ಚಿಕಿತ್ಸೆ ನೀಡುವುದಕ್ಕೆ ಸದ್ಯಕ್ಕಂತೂ ಬ್ರೇಕ್ ಬಿದ್ದಿದೆ. ಒಟ್ಟಾರೆ ದರ್ಶನ್ಗೆ ಅವಕಾಶ ಸಿಕ್ರೆ.. ಉಳಿದ ಕೈದಿಗಳು ಅಥ್ವಾ ವಿಚಾರಣಾಧೀನ ಕೈದಿಗಳು ಕೂಡ ಇದನ್ನೇ ಮಾಡೆಲ್ ಆಗಿ ಇಟ್ಕೊಂಡು ಚಿಕಿತ್ಸೆಗೆ ಅವಕಾಶ ಕೇಳುವ ಸಾಧ್ಯತೆಯೂ ಇದೆ. ಆದ್ರೆ ಕೈದಿಗೆ ಸಿಗಬೇಕಿರೋ ಕನಿಷ್ಟ ಚಿಕಿತ್ಸೆ ಸಿಗಲೇಬೇಕಿದೆ. ಹಾಗಾಗಿ ಕಾನೂನಿನಡಿ ಇದು ಇನ್ನೂ ಏನೆಲ್ಲಾ ಮಹತ್ವದ ತಿರುವುಗಳನ್ನ ಪಡೆಯಲಿದೆ ಅಂತ ಕಾದು ನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





