ಅಬ್ಬಬ್ಬಾ.. ರಾಮಾಯಣ ಬಾಕ್ಸ್ ಆಫೀಸ್ ಕಲೆಕ್ಷನ್ ದಿನದಿಂದ ದಿನಕ್ಕೆ ಸುನಾಮಿ, ಸುಂಟರಗಾಳಿ ರೂಪದಲ್ಲಿ ಸದ್ದು ಮಾಡ್ತಿದೆ. ಧುರಂಧರ್ ಕಲೆಕ್ಷನ್ ದಾಖಲೆಯನ್ನ ಪೀಸ್ ಪೀಸ್ ಮಾಡಿ ಪುಷ್ಪ, ಬಾಹುಬಲಿ, ದಂಗಲ್ ರೆಕಾರ್ಡ್ ಬ್ರೇಕ್ ಮಾಡುವತ್ತ ಮುನ್ನುಗ್ಗುತ್ತಿದೆ. ಅಷ್ಟೇ ಅಲ್ಲ.. ಚೀನಾ, ರಷ್ಯಾ, ಜಪಾನ್ ಹಾಗೂ ಸೌತ್ ಕೊರಿಯಾಗೂ ಲಗ್ಗೆ ಇಡ್ತಿದೆ. ಇದರ ಜೊತೆಗೆ ರಾಮ್ ಗೋಪಾಲ್ ವರ್ಮಾ ಬಿಚ್ಚಿಟ್ಟ ಅಸಲಿ ಮ್ಯಾಟರ್ ಇಲ್ಲಿದೆ.
- ರಾಮಾಯಣ @ 1500Cr.. ಧುರಂಧರ್ ದಾಖಲೆ ಉಡೀಸ್
- ಚೀನಾ, ರಷ್ಯಾ, ಜಪಾನ್, ಕೊರಿಯಾಗೆ ಯಶ್-ರಣ್ಬೀರ್ ಲಗ್ಗೆ
- KGFಗೆ ಧುರಂಧರ್ ಟಕ್ಕರ್.. ಯಶ್ ಕೊಟ್ರು ಟಾಪ್ ಟಕ್ಕರ್
- RGV ಬಿಚ್ಚಿಟ್ರು ರಾಮಾಯಣ ಅಸಲಿ ಬಾಕ್ಸಾಫೀಸ್ ಲೆಕ್ಕಾಚಾರ
ರಾಮಾಯಣ.. ರಾಮಾಯಣ.. ರಾಮಾಯಣ.. ಸದ್ಯ ನಮ್ಮ ಸ್ಯಾಂಡಲ್ವುಡ್ನ ಗಲ್ಲಿಗಳಿಂದ ಹಿಡಿದು ಹಾಲಿವುಡ್ನ ಸೋನಿ ಪಿಕ್ಚರ್ಸ್ ಸ್ಟುಡಿಯೋ ತನಕ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿರೋ ಇಂಡಿಯನ್ ಮೂವಿ. ನಮ್ಮ ಭಾರತದ ಸಂಸ್ಕೃತಿಯನ್ನ ಜಗದಗಲಕ್ಕೆ ಪರಿಚಯಿಸೋ ಕಾರ್ಯ ಮಾಡಿರೋ ಈ ಸಿನಿಮಾ, ಮಹಾಕಾವ್ಯಕ್ಕೆ ದೃಶ್ಯರೂಪ ನೀಡಿ, ನೋಡುಗರಿಗೆ ಉಣಬಡಿಸ್ತಿದೆ. ಯಶ್-ರಣ್ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಅಂತಹ ಟಾಪ್ ಆರ್ಟಿಸ್ಟ್ಗಳಿಗೆ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳಿದ್ದು, 8 ಬಾರಿ ಆಸ್ಕರ್ ಮುಡಿಗೇರಿಸಿಕೊಂಡ ನಮಿತ್ ಮಲ್ಹೋತ್ರಾ ಪ್ಯಾಷನೇಟ್ ಆಗಿ ಈ ಸಿನಿಮಾನ ಕಟ್ಟಿದ್ದಾರೆ.
ಅದೇ ಕಾರಣಕ್ಕೆ 11 ದಿನದಲ್ಲಿ ರಾಮಾಯಣ ವರ್ಲ್ಡ್ವೈಡ್ ಕಲೆಕ್ಷನ್ ಬರೋಬ್ಬರಿ 1400 ಕೋಟಿ. ಇಂದಿಗೆ 1500 ಕೋಟಿ ಕ್ಲಬ್ ಸೇರಲಿದ್ದು.. ಇದು ಫಾಸ್ಟೆಸ್ಟ್ 1500 ಕ್ರೋರ್ ಗಳಿಸಿದ ಮೊದಲ ಇಂಡಿಯನ್ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗ್ತಿದೆ. ಅಂದಹಾಗೆ ಇನನೂ ಚೀನಾ, ರಷ್ಯಾ, ಜಪಾನ್ ಹಾಗೂ ಸೌತ್ ಕೊರಿಯಾದಲ್ಲಿ ರಾಮಾಯಣ ಸಿನಿಮಾ ರಿಲೀಸ್ ಆಗಿಲ್ಲ. ಚೀನಾದಲ್ಲಿ ಈಗಾಗ್ಲೇ ಸೆನ್ಸಾರ್ಗೆ ಹೋಗಿದ್ದು, 2027ರ ಆರಂಭದಲ್ಲಿ ಇಷ್ಟೂ ರಾಷ್ಟ್ರಗಳಲ್ಲಿ ನಮ್ಮ ಇಂಡಿಯನ್ ಮಾಸ್ಟರ್ಪೀಸ್ ರಾಮಾಯಣ ದರ್ಶನ ನೀಡಲಿದೆ.
ಅಂದಹಾಗೆ ಅಂದು ನಮ್ಮ ಯಶ್ ನಟನೆಯ ಕೆಜಿಎಫ್-2 ಕಲೆಕ್ಷನ್ಗೆ ಧುರಂಧರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಟಕ್ಕರ್ ನೀಡಿತ್ತು. ಆದ್ರೀಗ 1300 ಕೋಟಿ ಗಳಿಸಿದ್ದ ಧುರಂಧರ್ ಪಾರ್ಟ್-1ಗೆ ಟಾಪ್ ಟಕ್ಕರ್ ನೀಡಿದೆ ಯಶ್ ರಾಮಾಯಣ. ಅಲ್ಲದೆ.. ಪುಷ್ಪ-2, ಬಾಹುಬಲಿ-2, ಧುರಂಧರ್-2 ಹಾಗೂ ದಂಗಲ್ ಕಲೆಕ್ಷನ್ ರೆಕಾರ್ಡ್ಗಳನ್ನ ಸರಿಗಟ್ಟುವ ನಿಟ್ಟಿನಲ್ಲಿ ನಾಗಾಲೋಟ ಮುಂದುವರೆಸಿದೆ ಯಶ್-ರಣ್ಬೀರ್ ರಾಮಾಯಣ.
ಇಂಟರೆಸ್ಟಿಂಗ್ ವಿಷಯ ಅಂದ್ರೆ.. ಟಾಲಿವುಡ್ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ರಾಮಾಯಣ ಸಿನಿಮಾದ ಬಜೆಟ್ ಹಾಗೂ ಬಾಕ್ಸ್ ಆಫೀಸ್ ಲೆಕ್ಕಾಚಾರಗಳನ್ನ ತಮ್ಮದೇ ಆ್ಯಂಗಲ್ನಲ್ಲಿ ಬಹಿರಂಗಪಡಿಸಿದ್ದಾರೆ. ನನ್ನ ಪ್ರಕಾರ ರಾಮಾಯಣ ಪಾರ್ಟ್-1 ಬಜೆಟ್ 800 ಕೋಟಿ ಅಷ್ಟೇ. ಅದರ ಮೇಲೆ ಖರ್ಚಾಗಿರೋದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ ಆರ್ಜಿವಿ. ಅಷ್ಟೇ ಅಲ್ಲ.. ರಾಮಾಯಣ ಪಾರ್ಟ್-2 ಸದ್ಯ ರಾಮಾಯಣ ಏಬು ಗಳಿಸ್ತಿದೆಯೋ ಅದರ ಹತ್ತು ಪಟ್ಟು ಹೆಚ್ಚುವರಿ ಬಾಕ್ಸ್ ಆಫೀಸ್ ಗಳಿಸಲಿದೆ ಅಂತ ಭವಿಷ್ಯ ನುಡಿದಿದ್ದಾರೆ. ವರ್ಮಾ ಬಿಚ್ಚಿಟ್ಟ ಆ ಬಾಕ್ಸ್ ಆಫೀಸ್ ಮರ್ಮ ಅದೀಗ ಎಲ್ಲೆಡೆ ಸಂಚಲನ ಮೂಡಿಸ್ತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





