ಅಪ್ಪು ನಮ್ಮನ್ನ ಅಗಲಿ ಐದು ವರ್ಷಗಳಾಗ್ತಿದೆ. ಆದ್ರೆ ಅವರನ್ನ ನೆನೆಯದ ದಿನವಿಲ್ಲ ಕ್ಷಣವಿಲ್ಲ. ರಾಜರತ್ನನ ಪುಣ್ಯಸ್ಮರಣೆ ವಿಶೇಷ ಹೊಂಬಾಳೆ ಫಿಲಂಸ್ ಒಂದು ಗುಡ್ ನ್ಯೂಸ್ ನೀಡಿದೆ. ಪುನೀತ್ ರಾಜ್ಕುಮಾರ್ ನಟನೆಯ ಹೈ ವೋಲ್ಟೇಜ್ ಮಾಸ್ ಎಂಟರ್ಟೈನರ್ ಯುವರತ್ನ ಯೂಟ್ಯೂಬ್ಗೆ ಎಂಟ್ರಿ ಕೊಟ್ಟಿದೆ. ಬರೀ ಕನ್ನಡ ಅಷ್ಟೇ ಅಲ್ಲ.. ತೆಲುಗು, ತಮಿಳು, ಹಿಂದಿ ವರ್ಷನ್ಸ್ ಕೂಡ ರಿವೀಲ್ ಆಗಿವೆ.
ಹೊಂಬಾಳೆ ಗುಡ್ನ್ಯೂಸ್.. ಯೂಟ್ಯೂಬ್ಗೆ ಅಪ್ಪು ‘ಯುವರತ್ನ’
ಪುನೀತ್ ಫುಲ್ಪ್ಲೆಡ್ಜ್ ನಟಿಸಿದ ಕೊನೆಯ ಕಮರ್ಷಿಯಲ್ ಚಿತ್ರ
ಪುಣ್ಯ ಸ್ಮರಣೆ ವಿಶೇಷ ಯೂಟ್ಯೂಬ್ನಲ್ಲಿ ಯುವರತ್ನ ರಿಲೀಸ್..!
ಕನ್ನಡದ ಜೊತೆ ಹಿಂದಿ, ತೆಲುಗು, ತಮಿಳು ವರ್ಷನ್ಸ್ ಕೂಡ ಲಭ್ಯ
ಅಪ್ಪು ಬರೀ ವ್ಯಕ್ತಿ ಅಲ್ಲ.. ಕನ್ನಡಿಗರ ಪಾಲಿಗೆ ಒಂಥರಾ ಎಮೋಷನ್. ಯಾಕಂದ್ರೆ ದೇವತಾ ಮನುಷ್ಯ ಡಾ ರಾಜ್ಕುಮಾರ್ ಕುಟುಂಬದಲ್ಲಿ ಹುಟ್ಟಿದ ಮತ್ತೊಬ್ಬ ದೈವಾಂಶ ಸಂಭೂತ. ಅವರ ನಡೆ, ನುಡಿ, ಆಚಾರ, ವಿಚಾರ, ಸಮಾಜಮುಖಿ ಕೆಲಸಗಳು ಎಲ್ಲವೂ ಅವ್ರನ್ನ ದೇವರನ್ನಾಗಿಸಿಬಿಡ್ತು. ಹಾಗಾಗಿಯೇ ನಮ್ಮನ್ನ ಅಗಲಿ ಐದು ವರ್ಷಗಳಾದ್ರೂ ಇಂದಿಗೂ ಅಪ್ಪು ಅಂದ್ರೆ ಅದೇ ಅಭಿಮಾನ, ಗೌರವ, ಪ್ರೀತಿ. ಆ ನಗುಮುಖದ ಒಡೆಯನನ್ನ ನೆನೆಯದ ದಿನವಿಲ್ಲ.. ಕ್ಷಣವಿಲ್ಲ.
ಅಂದಹಾಗೆ ಹೊಂಬಾಳೆ ಫಿಲಂಸ್ಗೂ ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ಗೂ ಅವಿನಾಭಾವ ಸಂಬಂಧ. ಅದು ಸಂಬಂಧಗಳನ್ನ ಮೀರಿದಂತಹ ಬಾಂಧವ್ಯ. ಅದೇ ಕಾರಣದಿಂದ 2021ರಲ್ಲಿ ತೆರೆಕಂಡ ಅಪ್ಪು ಫುಲ್ ಪ್ಲೆಡ್ಜ್ ನಟನೆಯ ಕೊನೆಯ ಕಮರ್ಷಿಯಲ್ ಮೂವಿ ಯುವರತ್ನ ಸಿನಿಮಾ ಇದೀಗ ಎಲ್ಲರೂ ನೋಡುವಂತಾಗಿದೆ. ಹೌದು.. ಹೊಂಬಾಳೆ ಫಿಲಂಸ್ ಯುವರತ್ನ ಚಿತ್ರವನ್ನ ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದೆ.
ಅಪ್ಪು ಪುಣ್ಯ ಸ್ಮರಣೆ ವಿಶೇಷ ಹೊಂಬಾಳೆ ಫಿಲಂಸ್ ಯೂಟ್ಯೂಬ್ ಪೇಜ್ನಲ್ಲಿ ಕನ್ನಡದ ಜೊತೆ ಹಿಂದಿ, ತೆಲುಗು ಹಾಗೂ ತಮಿಳು ವರ್ಷನ್ ಸಿನಿಮಾ ಕೂಡ ರಿಲೀಸ್ ಆಗಿದೆ. ಸಂತೋಷ್ ಆನಂದ್ರಾಮ್ ನಿರ್ದೇಶನದ ಈ ಸಿನಿಮಾ, ಆರ್ಕೆ ಯೂನಿವರ್ಸಿಟಿಯಲ್ಲಿನ ಅಕ್ರಮ ಡ್ರಗ್ಸ್ಗೆ ಕಡಿವಾಣ ಹಾಕುವ ಕಥಾಹಂದರ ಹೊಂದಿತ್ತು. ಪ್ರಕಾಶ್ ರೈ, ದಿಗಂತ್, ಸೋನು ಗೌಡ, ಸಾಯಿಕುಮಾರ್, ಸಯ್ಯೇಷಾ.. ಹೀಗೆ ದೊಡ್ಡ ತಾರಾಗಣವಿತ್ತು. ವಿಶೇಷ ಅಂದ್ರೆ ಡಾಲಿ ಧನಂಜಯ ಖಳನಾಯಕನಾಗಿ ಅಬ್ಬರಿಸಿದ್ರು.
ಅಪ್ಪು ಅವರ ಡ್ಯಾನ್ಸ್ ಹಾಗೂ ಫೈಟ್ಸ್ ಈ ಚಿತ್ರದ ಹೈಲೈಟ್. ಎಸ್ ಥಮನ್ ಸಂಗೀತ ಸಂಯೋಜನೆಯ ಬಹುತೇಕ ಎಲ್ಲಾ ಸಾಂಗ್ಸ್ ಸೂಪರ್ ಹಿಟ್ ಆದವು. ವೆಂಕಟೇಶ್ ಅಂಗುರಾಜ್ ಸಿನಿಮಾಟೋಗ್ರಫಿ ಸಿನಿಮಾಗೆ ಪ್ಲಸ್ ಆಗಿದ್ದಲ್ಲದೆ, ಬಾಕ್ಸ್ ಆಫೀಸ್ನಲ್ಲಿ 32 ಕೋಟಿ 41 ಲಕ್ಷ ರೂಪಾಯಿಯಷ್ಟು ಹಣ ಕಲೆಕ್ಷನ್ ಆಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಈ ಸಿನಿಮಾದ ಪ್ರಚಾರಕ್ಕಾಗಿ ಡೈರೆಕ್ಟರ್ ಸಂತೋಷ್ ಆನಂದ್ರಾಮ್, ಡಾಲಿ ಹಾಗೂ ಅಪ್ಪು ಅವರು ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ವಿಸಿಟ್ ಮಾಡಿ, ಅಭಿಮಾನಿ ದೇವರುಗಳ ಆ ನಿಷ್ಕಲ್ಮಶ ಪ್ರೀತಿ, ಪ್ರೇಮಕ್ಕೆ ಪಾತ್ರರಾಗಿದ್ದರು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





