ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ರಾರಾಜಿಸ್ತಿರೋ ಕಾಂತಾರ ಫೇಮ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಸದ್ಯ ಬೆಲ್ಬಾಟಂ ಪ್ರೊಡ್ಯೂಸರ್ ಕಮ್ ಆಪ್ತಮಿತ್ರ ಸಂತೋಷ್ಗಾಗಿ ಹೊಸ ಅಧ್ಯಾಯ ಶುರು ಮಾಡಿದ್ದಾರೆ. ಮ್ಯೂಸಿಕ್ ಕಂಪನಿ ಕೂಡ ಆರಂಭಿಸಿರೋ ಶೆಟ್ರು, ಗೆಳೆಯನ ಹುಬ್ಬಳ್ಳಿ ಹಂಟರ್ಸ್ ಸಿನಿಮಾದ ಮೂಲಕ ಅಕೌಂಟ್ ಓಪನ್ ಮಾಡಿದ್ದಾರೆ. ಈ ಕುರಿತ ಒಂದು ಡಿಟೈಲ್ಡ್ ರಿಪೋರ್ಟ್ ನಿಮಗಾಗಿ ಕಾಯ್ತಿದೆ.
- ಮಿತ್ರ, ಬೆಲ್ಬಾಟಂ ಪ್ರೊಡ್ಯೂಸರ್ಗಾಗಿ ರಿಷಬ್ ಆಡಿಯೋ ಕಂಪನಿ
- ನಟ, ನಿರ್ದೇಶಕ, ನಿರ್ಮಾಪಕ ಈಗ ಮ್ಯೂಸಿಕ್ ಕಂಪನಿ ಮಾಲೀಕ..!
- ಸಂತೋಷ್ ನಿರ್ಮಾಣದ ಹುಬ್ಬಳ್ಳಿ ಹಂಟರ್ಸ್ಗೆ ಸಿಕ್ತು ಆನೆಬಲ..!
- ಡಿಸೆಂಬರ್ 11ಕ್ಕೆ ಥಿಯೇಟರ್ನಲ್ಲಿ ಹುಬ್ಬಳ್ಳಿ ಹಂಟರ್ಸ್ ಹಂಗಾಮ
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಬಹಳ ಗ್ರೌಂಡ್ ಲೆವೆಲ್ನಿಂದ ಬಂದು ಇಂದು ತನ್ನದೇ ಆದ ಸಾಮ್ರಾಜ್ಯ ಕಟ್ಟಿ, ಅದನ್ನ ವಿಶ್ವ ಸಿನಿದುನಿಯಾಗೆ ವಿಸ್ತರಿಸುತ್ತಿರೋ ಅಪ್ಪಟ ಕನ್ನಡ ಟ್ಯಾಲೆಂಟ್. ಬಹುಮುಖ ಪ್ರತಿಭೆಯಾದ ಶೆಟ್ರು ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಅದ್ಭುತ ಬರಹಗಾರರೂ ಹೌದು. ಆದ್ರೆ ಇದೀಗ ಅವರ ಸಿನಿಜರ್ನಿಯಲ್ಲಿ ಮತ್ತೊಂದು ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದಾರೆ. ಅವರು ಈ ಹಿಂದೆ ಹೇಳಿದಂತಹ ಹೊಸ ಅಧ್ಯಾಯ ಬೇರಾವುದೂ ಅಲ್ಲ.. ಮ್ಯೂಸಿಕ್ ಕಂಪನಿ ಆರಂಭಿಸುವುದು. ಅದ್ರಂತೆ ರಿಷಬ್ ಶೆಟ್ಟಿ ಮ್ಯೂಸಿಕ್ ಕಂಪನಿ ಸ್ಯಾಂಡಲ್ವುಡ್ನಲ್ಲಿ ಹೊಸದಾಗಿ ತಲೆ ಎತ್ತಿದೆ.
ರಿಷಬ್ ಶೆಟ್ಟಿ ಮ್ಯೂಸಿಕ್ ಕಂಪನಿ ಇತ್ತೀಚೆಗೆ ಹುಬ್ಬಳ್ಳಿ ಹಂಟರ್ಸ್ ಅನ್ನೋ ಸಿನಿಮಾದ ಆಡಿಯೋ ಹಕ್ಕುಗಳನ್ನ ಖರೀದಿಸಿದ್ದು, ಆ ಮೂಲಕ ಖಾತೆ ಆರಂಭಿಸಿದೆ. ಯೆಸ್.. ದೊಡ್ಡ ಸ್ಟಾರ್ ಸಿನಿಮಾದ ಮೂಲಕ ಅಕೌಂಟ್ ತೆರೆಯುವುದು ಸರ್ವೇ ಸಾಮಾನ್ಯ. ಆದ್ರೆ ಶೆಟ್ರು ಕೊಂಚ ಉಲ್ಟಾ. ತಮ್ಮ ಆಪ್ತಮಿತ್ರ ಸಂತೋಷ್ ಕುಮಾರ್ಗಾಗಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಅಂದಹಾಗೆ ಹುಬ್ಬಳ್ಳಿ ಹಂಟರ್ಸ್ ಚಿತ್ರದ ನಿರ್ಮಾಪಕ ಸಂತೋಷ್.. ಈ ಹಿಂದೆ ರಿಷಬ್ ಅದ್ಭುತ ಹೀರೋ ಆಗಿ ಗುರ್ತಿಸಿಕೊಳ್ಳಲು ವೇದಿಕೆ ಆಗಿದ್ದ ಬೆಲ್ಬಾಟಂ ಚಿತ್ರದ ನಿರ್ಮಾಪಕರೂ ಹೌದು.
ಅದೇ ಸ್ನೇಹಕ್ಕಾಗಿ ತಮ್ಮ ಆಡಿಯೋ ಕಂಪನಿಯನ್ನ ಶೆಟ್ರು.. ಗೆಳೆಯನ ಸಿನಿಮಾದ ಮೂಲಕ ಶುಭಾರಂಭ ಮಾಡಿರೋದು ಖುಷಿಯ ವಿಚಾರ. ಅಂದಹಾಗೆ ಇವರಿಬ್ಬರ ಕಾಂಬೋನಲ್ಲಿ ಬೆಲ್ಬಾಟಂ-2 ಬರೋದಿದೆ. ಈಗಾಗ್ಲೇ ಮುಹೂರ್ತ ಕೂಡ ಆಗಿ ನಿಂತಿದೆ. ಆದ್ರೆ ಯಾವಾಗ ಕಿಕ್ಸ್ಟಾರ್ಟ್ ಆಗುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.
ದಿಗಂತ್ ನಟನೆಯ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಸಮರ್ಥ್ ಬಿ. ಕಡಕೋಳ್ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾ ಹುಬ್ಬಳ್ಳಿ ಹಂಟರ್ಸ್. ಈ ಸಿನಿಮಾ ಇದೇ ವರ್ಷಾಂತ್ಯಕ್ಕೆ.. ಅಂದ್ರೆ ಡಿಸೆಂಬರ್ 11ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ಪ್ರಸನ್ನ ಕೇಶವ ಸಂಗೀತ ನಿರ್ದೇಶನದ, ಸುಜಿತ್ ನಾಯರ್ ಹಿನ್ನೆಲೆ ಸಂಗೀತ ಈ ಸಿನಿಮಾಗಿದೆ. ವಿಜಯಪ್ರಕಾಶ್, ವ್ಯಾಸರಾಜ್ ಸೋಸಲೆ ಅಂತಹ ಸ್ಟಾರ್ ಸಿಂಗರ್ಸ್ ಹಾಡುಗಳಿಗೆ ಧ್ವನಿಯಾಗಿದ್ದು, ವಿ. ನಾಗೇಂದ್ರ ಪ್ರಸಾದ್, ತ್ರಿಲೋಕ್ ತ್ರಿವಿಕ್ರಮ್ ಸಾಹಿತ್ಯ ರಚಿಸಿದ್ದಾರೆ. ಅಭಿಮನ್ಯು ಸದಾನಂದನ್ ಕ್ಯಾಮೆರಾ ಕೈಚಳಕ, ಧರಣಿ ಗಂಗೆಪುತ್ರ ಆರ್ಟ್ ವರ್ಕ್ ಹುಬ್ಬಳ್ಳಿ ಹಂಟರ್ಸ್ಗಿದ್ದು, ಟೈಟಲ್ನಂತೆ ಸಿನಿಮಾ ಕೂಡ ಸಂಥಿಂಗ್ ಸ್ಪೆಷಲ್ ಆಗಿರಲಿದೆ ಅನ್ನೋ ಹಿಂಟ್ ನೀಡಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





