ಡ್ಯಾನ್ಸ್.. ರಾಕಿಂಗ್ ಸ್ಟಾರ್ ಯಶ್ USPಗಳಲ್ಲಿ ಒಂದು. ಆದ್ರೆ ಸಂತು ಸ್ಟ್ರೈಟ್ ಫಾರ್ವಡ್ ಚಿತ್ರದ ಬಳಿಕ ಯಶ್ ಆ ರೀತಿ ಡ್ಯಾನ್ಸ್ ಮಾಡಿದ್ದನ್ನ ನಾವುಗಳಂತೂ ನೋಡೇ ಇಲ್ಲ. ಯಾರೆಲ್ಲಾ ಯಶ್ ಡ್ಯಾನ್ಸ್ನ ಮಿಸ್ ಮಾಡ್ಕೊಳ್ತಿದ್ರೋ.. ಅಂಥವ್ರಿಗೆ ರಾವಣ ತಾಂಡವಂ ಮೂಲಕ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ರಾಮಾಯಣದ ಆ ರುದ್ರ ನರ್ತನದ ಮೈಂಡ್ ಬ್ಲೋಯಿಂಗ್ ಸಾಂಗ್ ಝಲಕ್ ಇಲ್ಲಿದೆ.
- ಯಶ್ ಡ್ಯಾನ್ಸ್ ಮಿಸ್ ಮಾಡ್ಕೊಳ್ತಿದ್ರಾ? ರಾವಣ ತಾಂಡವಂ ಔಟ್
- ರಾವಣನ ಪರಾಕ್ರಮ ಹಾಗೂ ದೈವಭಕ್ತಿಯ ಅನಾವರಣದ ಗೀತೆ..!
- ಪರಮೇಶ್ವರ ಶಿವನ ಮುಂದೆ ಲಂಕೇಶ್ವರನ ಹೈ ವೋಲ್ಟೇಜ್ ಕುಣಿತ
- ರಾಮಾಯಣದ ತೂಕ ಹೆಚ್ಚಿಸಿದ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್
ನಮ್ಮ ಹೆಮ್ಮೆಯ ಕನ್ನಡಿಗ, ರಾಕಿಂಗ್ ಸ್ಟಾರ್ ಯಶ್ ಅದ್ಭುತ ಡ್ಯಾನ್ಸರ್. ಅದರಲ್ಲಿ ಎರಡು ಮಾತಿಲ್ಲ. ಮೊಗ್ಗಿನ ಮನಸು, ರಾಕಿ ಸಿನಿಮಾಗಳಿಂದಲೂ ಯಶ್ ಯುಎಸ್ಪಿಗಳಲ್ಲಿ ಡ್ಯಾನ್ಸ್ ಕೂಡ ಒಂದು. ಸಾಕಷ್ಟು ಡ್ಯಾನ್ಸಿಂಗ್ ನಂಬರ್ಗಳಿಗೆ ಯಶ್ ಫ್ಯಾನ್ಸ್ ಜೊತೆ ಇತರೇ ಸ್ಟಾರ್ ಫ್ಯಾನ್ಸ್ ಕೂಡ ಹುಚ್ಚೆದ್ದು ಕುಣಿದಿದ್ದಾರೆ. ಆದ್ರೆ ಅದ್ಯಾಕೋ ಸಂತು ಸ್ಟ್ರೈಟ್ ಫಾರ್ವಡ್ ಚಿತ್ರದ ಬಳಿಕ ಯಶ್ ಅವ್ರ ಆ ಇಂಟೆನ್ಸ್ ಡ್ಯಾನ್ಸಿಂಗ್ ನಂಬರ್ಸ್ ಮಿಸ್ ಆಗ್ತಿವೆ.
ಕೆಜಿಎಫ್ನಲ್ಲಿ ಮಾಸ್ ಎಲಿಮೆಂಟ್ಸ್ ಇದ್ದ ಕಾರಣ ಬಿಲ್ಡಪ್ ಮೇಲೆಯೇ ಸಾಕಷ್ಟು ಸಾಂಗ್ ದೃಶ್ಯಗಳು ಚಿತ್ರಿತವಾಗಿದ್ದವು. ಆದ್ರೀಗ ರಾಮಾಯಣ ಸಿನಿಮಾದ ಮೂಲಕ ಯಶ್ ಡ್ಯಾನ್ಸ್ ಮರಳಿ ಬಿಗ್ಸ್ಕ್ರೀನ್ಗೆ ವಾಪಸ್ ಆಗ್ತಿದೆ. ಹೌದು.. ರಾವಣ ತಾಂಡವಂ ಸಾಂಗ್ ದಸರಾ ಹಬ್ಬದ ವಿಶೇಷ ಬಿಡುಗಡೆ ಆಗಿದ್ದು, ಎಲ್ಲರ ಹುಬ್ಬೆರಿಸುವಂತೆ ಕುಣಿದು, ಕುಪ್ಪಳಿಸಿದ್ದಾರೆ ರಾಕಿಂಗ್ ಸ್ಟಾರ್.
ರಾವಣ ತಾಂಡವಂ.. ಲಂಕಾಧಿಪತಿಯ ಪರಾಕ್ರಮ ಹಾಗೂ ದೈವಭಕ್ತಿ ಎರಡನ್ನೂ ಸಾರುವ ಸಾಂಗ್ ಆಗಿದೆ. ಆ ಪರಮೇಶ್ವರನ ಮುಂದೆ ಲಂಕೇಶ್ವರನ ಹೈ-ವೋಲ್ಟೇಜ್ ಗೀತೆ ಇದಾಗಿದ್ದು, ಓ ಮೈ ಗಾಡ್.. ಯಶ್ ಬೇರ್ ಬಾಡಿಯಲ್ಲಿ ತ್ರಿಶೂಲ ಹಾಗೂ ಢಮರುಗ ಹಿಡಿದು ಕುಣಿಯುವ ಪರಿ ರೋಮಾಂಚಕವಾಗಿದೆ. ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಸಂಗೀತ ಸಂಯೋಜನೆಯ ಈ ಗೀತೆಗೆ ಕಾರ್ತಿಕ್ ಸರಗೂರ್ ಸಾಹಿತ್ಯ ರಚಿಸಿದ್ದು, ರಾಮಾಯಣ ಸಿನಿಮಾದ ತೂಕ ಹೆಚ್ಚಿಸಿದೆ ಯಶ್ ರಾವಣನ ರೋಲ್.
ನಿತೇಶ್ ತಿವಾರಿ ನಿರ್ದೇಶನದ ಹಾಗೂ ನಮಿತ್ ಮಲ್ಹೋತ್ರಾ ನಿರ್ಮಾಣದ ರಾಮಾಯಣದಲ್ಲಿ ಶ್ರೀರಾಮ-ಸೀತೆಯಾಗಿ ರಣ್ಬೀರ್ ಕಪೂರ್ ಹಾಗೂ ಸಾಯಿಪಲ್ಲವಿ ನಟಿಸಿದ್ದು, ಯಶ್ ಖಳನಾಯಕ ರಾವಣನಾಗಿ ಅಬ್ಬರಿಸಿ, ಆರ್ಭಟಿಸಲಿದ್ದಾರೆ. ಎರಡು ಭಾಗಗಳಲ್ಲಿ ತಯಾರಾಗ್ತಿರೋ ಈ ಸಿನಿಮಾದ ಮೊದಲ ಭಾಗ ಇದೇ ನವೆಂಬರ್ 5ಕ್ಕೆ ದೀಪಾವಳಿ ವಿಶೇಷ ಮೊದಲ ಭಾಗ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





