ಭಾರತೀಯ ಚಿತ್ರರಂಗದ ಸೆನ್ಸೇಷನಲ್ ಮ್ಯೂಸಿಕ್ ಕಂಪೋಸರ್ ಕಮ್ ಸಿಂಗರ್ ಅನಿರುದ್ದ್ ರವಿಚಂದರ್ ಸನ್ ರೈಸರ್ಸ್ ಹೈದ್ರಾಬಾದ್ ಟೀಂನ ಒಡತಿ ಕಾವ್ಯಾ ಮಾರನ್ ಕೈ ಹಿಡಿಯುತ್ತಿದ್ದಾರೆ. ಇವರ ಕಲ್ಯಾಣಕ್ಕೆ ಡೇಟ್ ಕೂಡ ಫಿಕ್ಸ್ ಆಗಿದ್ದು.. ಮದುವೆ ಎಲ್ಲಿ..? ರಿಸೆಪ್ಷನ್ ಎಲ್ಲಿ..? ಯಾರೆಲ್ಲಾ ಈ ಶುಭಕಾರ್ಯಕ್ಕೆ ಸಾಕ್ಷಿ ಆಗಲಿದ್ದಾರೆ ಅನ್ನೋದ್ರ ಜೊತೆಗೆ ಇವರುಗಳ ಪ್ರೇಮ್ ಕಹಾನಿ ಇಲ್ಲಿದೆ.
- ಜೈಲರ್ಗೆ ಕಾರ್ ಗಿಫ್ಟ್.. ಜೈಲರ್-2 ಸಕ್ಸಸ್ಗೆ ಮಗಳೇ ಗಿಫ್ಟ್..!
- ಮದ್ವೆಗೆ ರೆಡಿ ಸಿನಿಮಾ-ಕ್ರಿಕೆಟ್ ಲೋಕದ ಸೆನ್ಸೇಷನಲ್ ಸ್ಟಾರ್ಸ್
- ‘ಸನ್ ಗ್ರೂಪ್’ಗೆ ಅನಿರುದ್ದ್ ರವಿಚಂದರ್ ‘ಸನ್ ಇನ್ ಲಾ’
- IPL ಹೈದ್ರಾಬಾದ್ ಟೀಂ ಒಡತಿ ಕಾವ್ಯಾ ಮಾರನ್ಗೆ ಕಲ್ಯಾಣ
ನೋಡೋಕೆ ಇನ್ನೂ ಪಿಯುಸಿ ಹುಡುಗನಂತೆ ಕಾಣುವ.. ಯಾವ ಹೀರೋ ವರ್ಚಸ್ಸಿಗೂ ಕಮ್ಮಿ ಇಲ್ಲದ.. ಸ್ಫುರದ್ರೂಪಿ, ಲವ್ಲಿ, ಲೈವ್ಲಿ ಮ್ಯೂಸಿಕ್ ಕಂಪೋಸರ್ ಅನಿರುದ್ದ್ ರವಿಚಂದರ್ ಹಸೆಮಣೆ ಏರಲು ಕಲ್ಯಾಣ ಮಂಟಪಕ್ಕೆ ತೆರಳೋಕೆ ಸಜ್ಜಾಗಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟೀಸ್ ಲೈಫ್ನಲ್ಲಿ ನಡೆಯೋ ವೈಯಕ್ತಿಕ ವಿಚಾರಗಳು ಅಂದ್ರೆ ಅವರ ಅಭಿಮಾನಿಹಳ ಜೊತೆ ಶ್ರೀಸಾಮಾನ್ಯರಿಗೂ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ. ಅದ್ರಂತೆ ಹ್ಯಾಂಡ್ಸಮ್ ಅನಿ ಯಾರ ಕೈ ಹಿಡಿಯುತ್ತಾರೆ ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಾಗಿದೆ.
ಸನ್ ಗ್ರೂಪ್ ಆಫ್ ಕಂಪನೀಸ್ನ ಮಾಲೀಕ ಕಲಾನಿಧಿ ಮಾರನ್ ಮುದ್ದಿನ ಮಗಳು ಕಾವ್ಯಾ ಮಾರನ್ ಕೈ ಹಿಡಿಯುವ ಮುಖೇನ ಸನ್ ಗ್ರೂಪ್ಗೆ ಸನ್ ಇನ್ ಲಾ ಆಗ್ತಿದ್ದಾರೆ ಅನಿರುದ್ದ್ ರವಿಚಂದರ್. ಅಂದಹಾಗೆ ಕಾವ್ಯಾ ಮಾರನ್ ಕೂಡ ನೋಡೋಕೆ ಯಾವ ಹೀರೋಯಿನ್ಗೂ ಕಮ್ಮಿ ಇಲ್ಲ. ಅಂಥದ್ದೊಂದು ಚೆಲುವು ಹೊಂದಿರೋ ಅಂದಗಾತಿ. ಮಿಗಿಲಾಗಿ ಈಕೆ ಸನ್ ರೈಸರ್ಸ್ ಹೈದ್ರಾಬಾದ್ ಐಪಿಎಲ್ ತಂಡದ ಮಾಲೀಕಳೂ ಹೌದು. ಐಪಿಎಲ್ ವೇಳೆ ಅದೆಷ್ಟೋ ಮಂದಿ ಜನ ಈ ಕಾವ್ಯಾನ ಕಣ್ತುಂಬಿಕೊಳ್ಳೋಕೇ ಅಂತಲೇ ಸ್ಟೇಡಿಯಂಗೆ ಬರ್ತಾರೆ ಅನ್ನೋದು ವಿಶೇಷ.
ಸುಮಾರು ಒಂದೂವರೆ ದಶಕದಿಂದ ತಮಿಳು ಚಿತ್ರರಂಗದ ಸೆನ್ಸೇಷನಲ್ ಮ್ಯೂಸಿಕ್ ಕಂಪೋಸರ್ ಕಮ್ ಗಾಯಕರಾಗಿ ಸಂಚಲನ ಮೂಡಿಸಿರೋ ಅನಿರುದ್ದ್, ಆಲ್ಮೋಸ್ಟ್ ಆಲ್ ಎಲ್ಲಾ ಸೂಪರ್ ಸ್ಟಾರ್ಗಳ ಫೇವರಿಟ್ ಸಂಗೀತ ಸಂಯೀಜಕ. ಯಾಕಂದ್ರೆ ಈತ ಜೆಂಝಿ ಜನರೇಷನ್ ನಾಡಿಮಿಡಿತ ಅರಿತಿರೋ ಕಂಪೋಸರ್. ಅವರಿಗೆ ಎಂತಹ ಟ್ಯೂನ್ಸ್, ಬೀಟ್ಸ್ ಕೊಟ್ರೆ ಹುಚ್ಚೆದ್ದು ಕುಣಿಯುತ್ತಾರೆ ಅನ್ನೋದು ಗೊತ್ತಿರೋ ಸಂಗೀತ ಮಾಂತ್ರಿಕ. ಅದೇ ಕಾರಣದಿಂದ ಅನಿರುದ್ದ್ ಬಹುತೇಕ ಸಾಂಗ್ಸ್ ಬ್ಲಾಕ್ ಬಸ್ಟರ್ ಹಿಟ್ಸ್. ಅದ್ರಲ್ಲೂ ಡ್ಯಾನ್ಸ್ಗೆ ಹೇಳಿ ಮಾಡಿಸಿದ ನಂಬರ್ಸ್ ಆಗಿವೆ.
ಇವರಿಬ್ಬರ ಜೋಡಿ ಮೇಡ್ ಫಾರ್ ಈಚ್ ಅದರ್ನಂತೆ ಇದ್ದು.. ಕ್ರಿಕೆಟ್ ಹಾಗೂ ಸಿನಿಮಾ ತಾರೆಯರು ನಿಜ ಜೀವನದಲ್ಲಿ ಸತಿ-ಪತಿ ಆಗ್ತಿರೋದಕ್ಕೆ ಅವ್ರ ಫ್ಯಾನ್ಸ್ ಜೊತೆ ಇಡೀ ಇಂಡಿಯಾ ಖುಷಿ ಪಡ್ತಿದೆ. ಸದ್ಯ ಕಾವ್ಯಾ ಮಾರನ್ ವೆಡ್ಸ್ ಅನಿರುದ್ದ್ ರವಿಚಂದರ್ ಸುದ್ದಿ ನ್ಯಾಷನಲ್, ಇಂಟರ್ನ್ಯಾಷನಲ್ ಲೆವೆಲ್ನಲ್ಲಿ ಸದ್ದು ಮಾಡ್ತಿದೆ. ಅದ್ರಲ್ಲೂ ಎರಡು ಕ್ರೇಜಿಯೆಸ್ಟ್ ಫೀಲ್ಡ್ಗಳಾದ ಸಿನಿಮಾ ಹಾಗೂ ಕ್ರಿಕೆಟ್ ರಂಗಗಳಲ್ಲಿ ಈ ಹಾಟ್ ಜೋಡಿಯ ಮದ್ವೆಯದ್ದೇ ಟಾಕ್.
ಇಂಟರೆಸ್ಟಿಂಗ್ ಅಂದ್ರೆ ಜೈಲರ್ ಸಿನಿಮಾದ ರಿಲೀಸ್ ಬಳಿಕ ಅದ್ರ ಸಕ್ಸಸ್ ಖುಷಿಗೆ ಸನ್ ಪಿಕ್ಚರ್ಸ್ ನಿರ್ಮಾಪಕ ಕಲಾನಿಧಿ ಮಾರನ್.. ಅದ್ರ ಸಂಗೀತ ಸಂಯೋಜಕ ಅನಿರುದ್ದ್ ರವಿಚಂದರ್ಗೆ ದುಬಾರಿ ಕಾರ್ವೊಂದನ್ನ ಗಿಫ್ಟ್ ನೀಡಿದ್ರು. ಆದ್ರೆ ಜೈಲರ್-2 ಸಕ್ಸಸ್ ವೇಳೆಗೆ ಮುದ್ದಿನ ಮಗಳು ಕಾವ್ಯಾ ಮಾರನ್ನೇ ಅನಿರುದ್ದ್ಗೆ ಗಿಫ್ಟ್ ಆಗಿ ಕೊಡ್ತಿರೋದು ಇತಿಹಾಸದ ಪುಟಗಳು ಸೇರುವಂತಹ ಸುದ್ದಿ ಅಂದ್ರೆ ತಪ್ಪಾಗಲ್ಲ.
- ನ-11ಕ್ಕೆ ಗ್ರೀಸ್ನಲ್ಲಿ ಕಾವ್ಯಾ-ಅನಿರುದ್ದ್ ಡೆಸ್ಟಿನೇಷನ್ ವೆಡ್ಡಿಂಗ್
- ನವೆಂಬರ್ 21ಕ್ಕೆ ಚೆನ್ನೈನಲ್ಲಿ ರಾಯಲ್ ರಿಸೆಪ್ಷನ್ಗೆ ಆಮಂತ್ರಣ
ಯೆಸ್.. ಕಾವ್ಯಾ ಮಾರನ್-ಅನಿರುದ್ದ್ ಕಲ್ಯಾಣಕ್ಕೆ ಶುಭ ಮುಹೂರ್ತ ಫಿಕ್ಸ್ ಆಗಿದೆ. ಸಾಮಾನ್ಯವಾಗಿ ದುಡ್ಡಿರೋ ಶ್ರೀಮಂತರೆಲ್ಲಾ ತಮ್ಮ ಮದ್ವೆಗಳನ್ನ ಬಹಳ ಇಷ್ಟವಾದ ದೇಶಗಳಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮೂಲಕ ಆಗ್ತಾರೆ. ಈ ಜೋಡಿ ಕೂಡ ತಮ್ಮ ಮದುವೆಯನ್ನ ಬಹಳ ಪ್ರೈವೇಟ್ ಆಗಿ, ಕುಟುಂಬಸ್ಥರು ಹಾಗೂ ಅತ್ಯಾಪ್ತರ ಸಮ್ಮುಖದಲ್ಲಿ ಬ್ಯೂಟಿಫುಲ್ ಗ್ರೀಸ್ ದೇಶದಲ್ಲಿ ಆಗ್ತಿರೋದು ವಿಶೇಷ. ಹೌದು.. ನಾವು ಸಿನಿಮಾಗಳಲ್ಲಿ ಹಾಗೂ ಸಾಂಗ್ಸ್ನಲ್ಲಿ ಗ್ರೀಸ್ನ ಕಣ್ಣು ಕೋರೈಸುವ ರಮಣೀಯ ತಾಣಗಳನ್ನ ನೋಡಿರ್ತೀವಿ. ಆದ್ರೆ ಕಾವ್ಯಾ-ಅನಿರುದ್ದ್ ಅಲ್ಲಿಗೇ ತೆರಳಿ ತಮ್ಮಿಷ್ಟದಂತೆ ಹಸೆಮಣೆ ಏರುತ್ತಿರೋದು ಎಲ್ಲರ ಹುಬ್ಬೇರಿಸಿದೆ.
ಇಷ್ಟಕ್ಕೂ ಇವರುಗಳ ಮದುವೆ ಗ್ರೀಸ್ನಲ್ಲಿ ಇದೇ ನವೆಂಬರ್ 11ಕ್ಕೆ ನಡೆಯಲಿದೆ. ಆ ಶುಭ ಮುಹೂರ್ತವನ್ನು ಎರಡೂ ಕುಟುಂಬಗಳ ಗುರು ಹಿರಿಯರು ನಿಶ್ಚಯಿಸಿದ್ದಾರೆ. ಅರೇ.. ಮದ್ವೆ ಅಲ್ಲಿ ನಡೆದ್ರೆ.. ಆಮಂತ್ರಣ ನೀಡಿರೋ ಗೆಸ್ಟ್ಗಳೆಲ್ಲಾ ಗ್ರೀಸ್ಗೆ ಬರೋಕೆ ಸಾಧ್ಯನಾ ಅನ್ನೋ ಪ್ರಶ್ನೆ ನಿಮಗೆ ಮೂಡಬಹುದು. ನಿಮ್ಮ ಮಾತು ನಿಜ. ಸದ್ಯ ಕಲಾನಿಧಿ ಮಾರನ್ ದಂಪತಿ ಎಲ್ಲೆಡೆ ಹಂಚುತ್ತಿರೋ ಮಗಳ ಮದ್ವೆಯ ಇನ್ವಿಟೇಷನ್ ಕಾರ್ಡ್ ಗ್ರೀಸ್ಗೆ ಇನ್ವೈಟ್ ಮಾಡಿ ಅಲ್ಲ. ಬದಲಿಗೆ ಚೆನ್ನೈನಲ್ಲಿ ನಡೆಯೋ ರಾಯಲ್ ರಿಸೆಪ್ಷನ್ಗೆ ಅನ್ನೋದು ಇಂಟರೆಸ್ಟಿಂಗ್.
ಹೌದು.. ಇದೇ ನವೆಂಬರ್ 21ರಂದು.. ಅಂದ್ರೆ ತಾಳಿ ಕಟ್ಟಿದ ಹತ್ತು ದಿನಕ್ಕೆ ಚೆನ್ನೈನಲ್ಲಿ ಅದ್ದೂರಿ ಆರತಕ್ಷತಾ ಮಹೋತ್ಸವವನ್ನ ಇಟ್ಟುಕೊಂಡಿದೆ ಈ ತಾರಾ ಜೋಡಿ. ಅಲ್ಲಿಗೆ ಸೌತ್ ಸಿನಿದುನಿಯಾದ ಸೂಪರ್ ಸ್ಟಾರ್ಗಳು, ರಾಜಕಾರಣಿಗಳು, ದೊಡ್ಡ ದೊಡ್ಡ ಬ್ಯುಸಿನೆಸ್ಮ್ಯಾನ್ಗಳೆಲ್ಲಾ ಆಗಮಿಸಿ, ವಧು-ವರರಿಗೆ ಶುಭ ಕೋರಿ, ಹರಸಿ, ಹಾರೈಸಲಿದ್ದಾರೆ.
- ಮೋದಿ ಸೇರಿದಂತೆ ಸೌತ್ ಸಿಎಂಗಳಿಗೆಲ್ಲಾ ಪ್ರೀತಿಯ ಆಹ್ವಾನ
- CM ಡಿಕೆಶಿ, ದಳಪತಿ, ರೇವಂತ್ ರೆಡ್ಡಿ, ನಾಯ್ಡುಗೆ ಇನ್ವಿಟೇಷನ್
ಕಾವ್ಯಾ-ಅನಿ ಕಲ್ಯಾಣಕ್ಕೆ ಇನ್ನೂ 20 ದಿನಗಳಷ್ಟೇ ಬಾಕಿ ಉಳಿದಿದೆ. ಹಾಗಾಗಿ ಸನ್ ಗ್ರೂಪ್ ಚೇರ್ಮನ್ ಕಲಾನಿಧಿ ಮಾರನ್ ಹಾಗೂ ಅವರ ಪತ್ನಿ ಇಬ್ಬರೂ ಗಣ್ಯರಿಗೆ ಮಗಳ ಕಲ್ಯಾಣಕ್ಕೆ ಆಮಂತ್ರಣ ಪತ್ರಿಕೆ ನೀಡುತ್ತಿದ್ದಾರೆ. ಪಿಎಂ ಮೋದಿ ಸೇರಿದಂತೆ ಸೌತ್ ಇಂಡಿಯಾದ ಬಹುತೇಕ ಎಲ್ಲಾ ರಾಜ್ಯಗಳ ಸಿಎಂಗಳಿಗೆ ವೈಯಕ್ತಿಕವಾಗಿ ಇನ್ವಿಟೇಷನ್ ನೀಡಿ, ಆಹ್ವಾನಿಸಿದ್ದಾರೆ. ಮೊದಲಿಗೆ ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಜೊತೆಗಿನ ಫೋಟೋಸ್ ಹೊರಬಂದವು. ಅವರೇ ಈ ಮದ್ವೆ ವಿಷಯವನ್ನ ಅಫಿಶಿಯಲಿ ಬಹಿರಂಗಪಡಿಸಿದ್ರು.
ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ತಮಿಳುನಾಡು ಸಿಎಂ ದಳಪತಿ ವಿಜಯ್ ಹಾಗೂ ಕರ್ನಾಟಕದ ಸಿಎಂ ಡಿಕೆ ಶಿವಕುಮಾರ್ ಅವರಿಗೂ ಈ ತಾರಾ ಜೋಡಿಯ ಕಲ್ಯಾಣಕ್ಕೆ ಇನ್ವಿಟೇಷನ್ ನೀಡಲಾಗಿದೆ. ಇಂಟರೆಸ್ಟಿಂಗ್ ಅಂದ್ರೆ ಎಲ್ಲಿಗೂ ಹೋಗದ ಅನಿರುದ್ದ್ ರವಿಚಂದರ್.. ದಳಪತಿ ವಿಜಯ್ಗೆ ಆಹ್ವಾನ ಪತ್ರಿಕೆ ನೀಡಲು ಹೋಗಿರೋದು ವಿಶೇಷ. ಅದಕ್ಕೆ ಅವರಿಬ್ಬರ ನಡುವಿನ ಸ್ನೇಹ ಸಂಬಂಧವೂ ಸಾಕ್ಷಿಯಾಗಿದೆ ಅಂತ ದಳಪತಿ ಫ್ಯಾನ್ಸ್ ಮಾತಾಡ್ತಿದ್ದಾರೆ.
- 33 ಸಾವಿರ ಕೋಟಿ ಆಸ್ತಿಗೆ ವಾರಸ್ದಾರ ಆಗ್ತಿರೋ ಅನಿರುದ್ದ್
- ಕಲಾನಿಧಿ ಮಾರನ್ ದಂಪತಿ ಏಕೈಕ ಪುತ್ರಿ ಕಾವ್ಯಾ ಮಾರನ್
50 ರಿಂದ 60 ಕೋಟಿ ನೆಟ್ ವರ್ತ್ ಇರೋ ಗಾಯಕ ಕಮ್ ಕಂಪೋಸರ್ ಅನಿರುದ್ದ್ ರವಿಚಂದರ್.. ಈ ಕಲ್ಯಾಣದ ಮೂಲಕ ಸನ್ ಗ್ರೂಪ್ಗೆ ವಾರಸ್ದಾರ ಆಗಲಿದ್ದಾರೆ. ಹೌದು.. ಕಲಾನಿಧಿ ಮಾರನ್ ದಂಪತಿಗೆ ಕಾವ್ಯಾ ಮಾರನ್ ಏಕೈಕ ಮಗಳು. ಹಾಗಾಗಿ ಅವರ 33 ಸಾವಿರದ 400 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತದ ಆಸ್ತಿಗೆ ಅನಿರುದ್ದ್ ಬಾಸ್ ಆಗಲಿದ್ದಾರೆ. ಮಕ್ಕಳು, ಮೊಮ್ಮಕ್ಕಳೆಲ್ಲಾ ಕೂತು ತಿಂದರೂ ಸವೆಯದಷ್ಟು ಆಸ್ತಿ ಸಂಪಾದಿಸಿದ್ದಾರೆ ಸನ್ ಗ್ರೂಪ್ ಚೇರ್ಮನ್.
ಸನ್ ಟಿವಿ ನೆಟ್ವರ್ಕ್, ಸನ್ ಡೈರೆಕ್ಟ್, ರೇಡಿಯೋ ನೆಟ್ವರ್ಕ್ಸ್, ಪ್ರಿಂಟ್ ಪಬ್ಲಿಕೇಷನ್ಸ್, ಸನ್ ಪಿಕ್ಚರ್ಸ್, ಐಪಿಎಲ್ ಫ್ರಾಂಚೈಸ್, ಫರ್ಟಿಲೈಸರ್ ಟ್ರೇಡಿಂಗ್, ಲಾಜಿಸ್ಟಿಕ್ಸ್.. ಹೀಗೆ ನಾನಾ ರಂಗಗಳಲ್ಲಿ ಸನ್ ಗ್ರೂಪ್ ದೊಡ್ಡ ಬ್ರ್ಯಾಂಡ್ ಆಗಿ ರಾರಾಜಿಸ್ತಿದೆ. ವಿಶ್ವದ ಮೂಲೆ ಮೂಲೆಗಳಿಗೆ ತಮ್ಮ ಬ್ಯುಸಿನೆಸ್ ವಿಸ್ತರಿಸಿರೋ ಸನ್ ಗ್ರೂಪ್. ಏಕೈಕ ಮುದ್ದಿನ ಮಗಳ ಮದ್ವೆಯನ್ನ ಇತಿಹಾಸದ ಪುಟಗಳು ಸೇರುವ ರೇಂಜ್ಗೆ ಬಹಳ ಅದ್ಧೂರಿ ಹಾಗೂ ಅವಿಸ್ಮರಣೀಯವಾಗಿ ನೆರವೇರಿಸಲು ಮುಂದಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





