ಮಲಯಾಳಂನ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಫಹದ್ ಫಾಸಿಲ್ ಒಂದು ದೊಡ್ಡ ಟ್ರಬಲ್ನಲ್ಲಿ ಸಿಲುಕಿ ಕೊಂಡಿದ್ದಾರೆ. ಅದಕ್ಕೆ ಡೋಂಟ್ ಟ್ರಬಲ್ ದಿ ಟ್ರಬಲ್ ಅಂತ ಒಂದು ಮಗು ಕೂಡ ಎಂಟ್ರಿ ಕೊಟ್ಟಿದೆ. ಇಷ್ಟಕ್ಕೂ ಯಾರು ಆ ಮಗು..? ಯಾರಿಂದ ಯಾರಿಗೆ ಟ್ರಬಲ್ ಏತಕ್ಕಾಗಿ ಅನ್ನೋದ್ರ ಕನ್ಫ್ಯೂಷನ್ಗೆ ಉತ್ತರ ನಿಮ್ಮ ಮುಂದೆ.
- ಟ್ರಬಲ್ನಲ್ಲಿ ಫಹದ್ ಫಾಸಿಲ್.. ಕಾಟ ಕೊಟ್ಟ ಮಗು ಯಾರು?
- ತೆಲುಗು-ಮಲಯಾಳಂ ಚಿತ್ರ ‘ಡೋಂಟ್ ಟ್ರಬಲ್ ದಿ ಟ್ರಬಲ್’
- ಫಹದ್ ಹಾಗೂ ಸಾರಾ ಪಾಲೇಕರ್ ನಡುವೆ ಫ್ಯಾಂಟಸಿ ಡ್ರಾಮಾ
- ಬಾಲಯ್ಯ ಕಂಠದಲ್ಲಿ ಟ್ರಬಲ್ ವಾಯ್ಸ್.. ಮಸ್ತ್ ಮಜಾ ಗುರು..!
ಆಕ್ಟಿಂಗ್ನಲ್ಲಿ ಕ್ರೇಜಿ ಎಕ್ಸ್ಪರಿಮೆಂಟ್ ಮಾಡೋ ಫಹದ್ ಫಾಸಿಲ್, ಈ ಬಾರಿ ಪಕ್ಕಾ ಫನ್ ಅಂಡ್ ಫ್ಯಾಂಟಸಿ ರೈಡ್ಗೆ ರೆಡಿಯಾಗಿದ್ದಾರೆ. ಸೋಲೋ ಹೀರೋ ಆಗಿ ನಟಿಸಿರೋ ಡೋಂಟ್ ಟ್ರಬಲ್ ದಿ ಟ್ರಬಲ್ ಸಿನಿಮಾದ ಟ್ರೇಲರ್ ಈಗ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸ್ತಿದೆ. ಸಿನಿಮಾದಲ್ಲಿ ಫಹದ್ ಸೂರಿ ಅನ್ನೋ ಕಣ್ಣು ಮುಚ್ಚಿ ಕಣ್ಣು ತೆಗೆಯೋದ್ರಲ್ಲಿ ಟೋಪಿ ಹಾಕೋ ರೋಡ್ ಸೈಡ್ ಮ್ಯಾಜಿಷಿಯನ್ ಆಗಿ ಕಾಣಿಸಿಕೊಂಡಿದದ್ದಾರೆ. ಕಾಸು ಕಂಡ್ರೆ ಸಾಕು ಕಣ್ಣು ಕತ್ತಲೆ ಬರೋ ಈ ಸೂರಿಗೆ, ತಂಟೆ-ತಕರಾರು ಅಂದ್ರೆ ಸಾಕು ಎಸ್ಕೇಪ್ ಆಗೋದೆ ಕೆಲಸ. ಆದ್ರೆ, ಈ ನಕಲಿ ಮ್ಯಾಜಿಷಿಯನ್ ಖೆಡ್ಡಾಗೆ ರಿಯಲ್ ಮ್ಯಾಜಿಕ್ ಶಕ್ತಿ ಇರೋ ಒಬ್ರು ರೌಡಿ ಬೇಬಿ ಎಂಟ್ರಿ ಕೊಟ್ಟಾಗ ಸೂರಿ ಲೈಫೇ ಕಂಪ್ಲೀಟ್ ಉಲ್ಟಾ-ಪಲ್ಟಾ ಆಗಿಬಿಡುತ್ತೆ.
ಆ ಕ್ಯೂಟ್ ಮಗು ಸಾರಾ ಪಾಲೇಕರ್. ಮ್ಯಾಜಿಕ್ ಪವರ್ ಇರೋ ಈ ಮಗು, ತನ್ನ ಆಟದಲ್ಲೇ ಸ್ವಂತ ಅಪ್ಪ-ಅಮ್ಮನನ್ನ ಮಾಯ ಮಾಡಿಬಿಡುತ್ತೆ. ಕೊನೆಗೆ ತನ್ನ ಪೇರೆಂಟ್ಸ್ನ ಹುಡುಕಿ ಕೊಡು ಅಂತ ಈ ನಕಲಿ ಮ್ಯಾಜಿಷಿಯನ್ ಸೂರಿ ಬೆನ್ನೇರಿ ಕೂರುತ್ತೆ. ಅಲ್ಲಿಂದ ಶುರುವಾಗೋ ಕಾಮಿಡಿ ಗೊಂದಲ, ಕಾಸಿಗಾಗಿ ಸೂರಿ ಮಾಡೋ ಕಸರತ್ತು, ಮತ್ತೆ ಇಬ್ಬರ ಮಧ್ಯೆ ನಡೆಯೋ ಜುಗಲ್ಬಂದಿ ಪ್ರೇಕ್ಷಕರನ್ನ ಹೊಟ್ಟೆ ಹುಣ್ಣಾಗುವಂತೆ ನಗಿಸೋದು ಗ್ಯಾರಂಟಿ. ಅದ್ರಲ್ಲೂ ಟ್ರೇಲರ್ ಆರಂಭದಲ್ಲೇ ಬರೋ ನಮ್ಮ ಗಾಡ್ ಆಫ್ ಮಾಸಸ್ ನಂದಮೂರಿ ಬಾಲಕೃಷ್ಣ ಅವರ ಕಡಕ್ ವಾಯ್ಸ್ ಅಂತೂ ನೆಕ್ಸ್ಟ್ ಲೆವೆಲ್. ಬಾಲಯ್ಯ ಅವರ ಐಕಾನಿಕ್ ಡೈಲಾಗ್ ಶೈಲಿಯೇ ಟ್ರೇಲರ್ಗೆ ಅಸಲಿ ಕಿಕ್ ಕೊಟ್ಟಿದೆ.
ಈ ಬಿಗ್ ಫ್ಯಾಂಟಸಿ ಎಂಟರ್ಟೈನರ್ಗೆ ಶಶಾಂಕ್ ಯೇಲೇಟಿ ನಿರ್ದೇಶನ ಮಾಡಿದ್ದು, ಫಹದ್ ಫಾಸಿಲ್ ಹಾಗೂ ಸಾರಾ ಪಾಲೇಕರ್ ಜೊತೆಗೆ ಮಹೇಶ್ ಮಾಂಜ್ರೇಕರ್ ಮತ್ತು ಸೌರಭ್ ಸಚ್ದೇವ್ ಪ್ರಮುಖ ತಾರಾಗಣದಲ್ಲಿದ್ದಾರೆ. ದಿಗ್ಗಜ ನಿರ್ದೇಶಕ ಎಸ್.ಎಸ್. ರಾಜಮೌಳಿ ಅರ್ಪಿಸುತ್ತಿರೋ ಈ ಚಿತ್ರವನ್ನು ಬಾಹುಬಲಿ ನಿರ್ಮಾಪಕರಾದ ಶೋಭು ಯಾರ್ಲಗಡ್ಡ, ಪ್ರಸಾದ್ ಡೆವಿನೇನಿ ಹಾಗೂ ಎಸ್.ಎಸ್. ಕಾರ್ತಿಕೇಯ ಅವರು ಆರ್ಕಾ ಮೀಡಿಯಾ ಮತ್ತು ಶೋಯಿಂಗ್ ಬ್ಯುಸಿನೆಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಇನ್ನು ಕಾಲ ಭೈರವ ಅವರ ಧಮಾಕಾ ಬಿಜಿಎಂ ಹಾಗೂ ಮೈತ್ರಿ ಮೂವಿ ಡಿಸ್ಟ್ರಿಬ್ಯೂಟರ್ಸ್ ಮೂಲಕ ಬಿಡುಗಡೆಯಾಗುತ್ತಿರೋ ಈ ಸಿನಿಮಾ, ಅಕ್ಟೋಬರ್ 2ರ ಗಾಂಧಿ ಜಯಂತಿಗೆ ಬೆಳ್ಳಿಪರದೆ ಮೇಲೆ ಯಾವ ಮಟ್ಟದ ಮ್ಯಾಜಿಕ್ ಮಾಡಲಿದೆ ಅನ್ನೋದನ್ನ ಕಾದು ನೋಡಬೇಕಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂಯೋ, ಗ್ಯಾರಂಟಿ ನ್ಯೂಸ್





