ರಾಕಿಭಾಯ್ ಯಶ್ ಈಗ ಮ್ಯಾನ್ ಆಫ್ ಬಿಲಿಯನ್ ಹಾರ್ಟ್ಸ್. ಅದಕ್ಕೆ ಕಾರಣ ಅವ್ರ ಟಾಕ್ಸಿಕ್ ಹಾಗೂ ಅದಕ್ಕಾಗಿ ಅವ್ರು ಹಾಕಿರೋ ಎಫರ್ಟ್. ಒಬ್ಬ ಕಲಾವಿದನಾಗಿ ಅಷ್ಟೇ ಸಿನಿಮಾಗೆ ಜೀವ ತುಂಬಿಲ್ಲ. 24 ಕ್ರಾಫ್ಟ್ಸ್‌ನಲ್ಲಿ ಕೆಲಸ ಮಾಡೋ ಮೂಲಕ ಸಿನಿಮಾಗೆ ಮೂಲ ಕರ್ತೃ ಕೂಡ ಅವ್ರೇ ಆಗಿದ್ದಾರೆ. ಅಂದಹಾಗೆ ರಾಯನ ಪಾತ್ರಕ್ಕಾಗಿ ಯಶ್ ಬಾಡಿ ಟ್ರಾನ್ಸ್‌ಫಾರ್ಮೇಷನ್ ನೋಡಿದ್ರೆ ಹುಬ್ಬೇರಿಸ್ತೀರಿ.
ಅಬ್ಬಬ್ಬಾ.. ಹುಬ್ಬೇರಿಸುತ್ತೆ ಯಶ್ ಬಾಡಿ ಟ್ರಾನ್ಸ್‌ಫಾರ್ಮೇಷನ್
ಸೆಟ್, ರೂಮ್, ಜಿಮ್ ಎಲ್ಲೆಲ್ಲೂ ರಾಯ ಟಫ್ ವರ್ಕೌಟ್..!
ರಾಕಿಭಾಯ್ ಬೇರ್ ಮಾಡಿ ಹಿಂದಿನ ಮಾಸ್ಟರ್ ಪಾನಿಪುರಿ ಕಿಟ್ಟಿ
ಕಸ್ಟಮೈಸ್ಡ್ ವರ್ಕೌಟ್ ಪ್ಲಾನ್ & ಡಯೆಟ್.. ಅದ್ಭುತ ಔಟ್‌ಪುಟ್
ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಸಖತ್ ಫಿಟ್ & ಫೈನ್. ಅದು ಫಿಸಿಕಲಿಯೂ ಹೌದು.. ಮೆಂಟಲಿ ಕೂಡ ಹೌದು. ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಬೇರ್ ಬಾಡಿಯಲ್ಲಿ ಸಾಕಷ್ಟು ದೃಶ್ಯಗಳಲ್ಲಿ ಮಿಂಚಿದ್ದಾರೆ. ಥಿಯೇಟರ್‌ನಲ್ಲಿ ಯಶ್‌ರನ್ನ ಹಾಗೆ ನೋಡಿದಾಗ ಶಿಳ್ಳೆ, ಚಪ್ಪಾಳೆಗಳ ಸುರಿಮಳೆ ಆಗುತ್ತೆ. ಆದ್ರೆ ಅದು ರಾತ್ರೋರಾತ್ರಿ ಬಂದದ್ದೇನೂ ಅಲ್ಲ. ಅದಕ್ಕಾಗಿ ಪ್ರತಿ ದಿನ ಸಿಕ್ಕಾಫಟ್ಟೆ ಟಫ್ ವರ್ಕೌಟ್ ಮಾಡಿದ್ದಾರೆ ಯಶ್.
ರಾಕಿಂಗ್ ರಾಯನ ಆ ಫಿಟ್ನೆಸ್ ಹಿಂದಿನ ಅಸಲಿ ಮಾಸ್ಟರ್‌ಮೈಂಡ್ ಅವ್ರ ಪರ್ಸನಲ್ ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ. ಸುಮಾರು ವರ್ಷಗಳಿಂದ ನಟ ಯಶ್ ಅವ್ರ ಫಿಟ್ನೆಸ್‌ನ ಕಾಪಾಡ್ತಾ ಬಂದಿರೋ ಫಿಟ್ನೆಸ್ ಗುರು ಕಿಟ್ಟಿ, ಟಾಕ್ಸಿಕ್ ಸಿನಿಮಾದ ಯಶ್ ಲುಕ್ಸ್ ಹಿಂದಿನ ಅಸಲಿ ಸೀಕ್ರೆಟ್ ಅಂದ್ರೆ ತಪ್ಪಾಗಲ್ಲ. ಶೂಟಿಂಗ್ ಸೆಟ್, ಉಳಿದುಕೊಳ್ಳುವ ಹೋಟೆಲ್, ಜಿಮ್.. ಹೀಗೆ ಎಲ್ಲೆಂದರಲ್ಲಿ ನಟ ಯಶ್‌ಗೆ ಸಾಕಷ್ಟು ಬೆವರಿಳಿಸುವಂತಹ ಟಫ್ ವರ್ಕೌಟ್ ಮಾಡಿಸ್ತಿದ್ರು ಕಿಟ್ಟಿ.
ಅಂದಹಾಗೆ ಪ್ರೊಟೀನ್ ಪೌಡರ್ ಅಥ್ವಾ ಸ್ಟೆರಾಯ್ಡ್‌ನಿಂದ ಬಂದ ಬಾಡಿ ಇದಲ್ಲ. ಯಾಕಂದ್ರೆ ಪಾನಿಪುರಿ ಕಿಟ್ಟಿ ನ್ಯಾಚ್ಚುರಲ್ ಬಾಡಿಬಿಲ್ಡರ್ ಆಗಿ ಹೆಸರು ಮಾಡಿದವ್ರು. ಹಾಗಾಗಿಯೇ ಕಸ್ಟಮೈಸ್ಡ್ ವರ್ಕೌಟ್ ಪ್ಲಾನ್ಸ್ ಜೊತೆ ಸ್ಟ್ರಿಕ್ಟ್ ಡಯೆಟ್‌ನೊಂದಿಗೆ ಯಶ್ ಬಾಡಿಯನ್ನ ಟ್ರಾನ್ಸ್‌ಫಾರ್ಮ್ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಸಖತ್ ಫಿಟ್ & ಫೈನ್ ಆಗಿ ಕಾಣೋದ್ರ ಜೊತೆಗೆ ಕಟ್ಟುಮಸ್ತಾದ ಸಿಕ್ಸ್ ಪ್ಯಾಕ್ ದೇಹದಾಕೃತಿ ಹೊರಹೊಮ್ಮಲು ಸಿಕ್ಕಾಪಟ್ಟೆ ಎಫರ್ಟ್ ಹಾಕಿದ್ದಾರೆ.
ಪಾನಿಪುರಿ ಕಿಟ್ಟಿ ನಟ ಯಶ್ ಅವ್ರಿಗೆ ಬರೀ ಫಿಟ್ನೆಸ್ ಟ್ರೈನರ್ ಅಷ್ಟೇ ಅಲ್ಲ.. ಆತ್ಮೀಯ ಗೆಳೆಯರೂ ಹೌದು. ಹಾಗಾಗಿಯೇ ಎಲ್ಲೇ ಶೂಟಿಂಗ್ ನಡೆದ್ರೂ ಸಹ ಅವ್ರ ಜೊತೆಗೇ ನೆರಳಂತೆ ಇದ್ದು, ಅವರ ಆನ್‌ಸ್ಕ್ರೀನ್ಸ್ ಅಪಿಯರೆನ್ಸ್‌ಗೆ ಸಾಕಷ್ಟು ಶ್ರಮಿಸಿದ್ದಾರೆ. ಯೋಗರಾಜ್ ಭಟ್ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಹೇಳಿದಂತೆ ಟಿಕೆಟ್ ರೋಲ್‌ಗಾಗಿ ಗಡ್ಡ, ಮೀಸೆ ತೆಗೆಯೋದ್ರ ಜೊತೆ ಯಶ್ ಹತ್ತಾರು ಕೆಜಿ ತೂಕ ಕೂಡ ಇಳಿಸಿಕೊಂಡಿದ್ರು. ಅಂಥದ್ದೊಂದು ಹಾರ್ಡ್‌ವರ್ಕ್ & ಡೆಡಿಕೇಷನ್ ಅವ್ರಲ್ಲಿ ಇದ್ದ ಕಾರಣಕ್ಕೆ ತೆರೆ ಮೇಲೆ ಹಾಟ್ ಕೇಕ್‌ನಂತೆ ಕಾಣ್ತಿದ್ದಾರೆ ಯಶ್.
ಬರೀ ನಟನಾಗಿ ಕ್ಯಾಮೆರಾ ಮುಂದೆ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳಿದ್ದಕ್ಕೆ ಅಭಿನಯಿಸಿ ಬಂದಿಲ್ಲ ಯಶ್. ಈ ಸಿನಿಮಾದ 24 ಕ್ರಾಫ್ಟ್ಸ್‌ನಲ್ಲೂ ಹಗಲಿರುಳು ಕೆಲಸ ಮಾಡಿದ್ದಾರೆ. ಅವ್ರ ಕಾರ್ಯ ಪ್ರವೃತ್ತತೆ ಹಾಗೂ ಸ್ಮಾರ್ಟ್ ವರ್ಕ್‌ನ ಬೇರಾರೂ ಮಾಡೋಕೆ ಸಾಧ್ಯವವಿಲ್ಲ. ಒಂದ್ಕಡೆ ನಟನೆ, ಮತ್ತೊಂದ್ಕಡೆ ಪ್ರೊಡಕ್ಷನ್, ಫ್ಯಾಮಿಲಿ, ಪೋಸ್ಟ್ ಪ್ರೊಡಕ್ಷನ್, ಪ್ರಮೋಷನ್ಸ್, ರಿಲೀಸ್ ಗಡಿಬಿಡಿ ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಿದ್ದಾರೆ ಯಶ್. ಅದೇ ಕಾರಣದಿಂದ ಅವ್ರ ಲುಕ್ಸ್, ನಟನೆ, ಸ್ವ್ಯಾಗ್ ಬಗ್ಗೆ ಯಾರೂ ಕೆಮ್ಮುತ್ತಿಲ್ಲ.





