ಕಲಘಟಗಿ: ಸಾಧನೆಗೆ ಯಾವುದೇ ಭಾಷೆ, ಪ್ರದೇಶ, ಸ್ಥಾನ ಮುಖ್ಯವಲ್ಲ ಗುರಿ ಸಾಧಿಸುವ ಛಲ ನಿರಂತರ ಪರಿಶ್ರಮ ಅತ್ಯಗತ್ಯವಾಗಿದೆ ಎಂದು ಹುಬ್ಬಳ್ಳಿಯ ಪ್ರತಿಷ್ಠಿತ ಸ್ವರ್ಣ ಸಮೂಹ ಸಂಸ್ಥೆಯ ಮಾಲೀಕರಾದ ಡಾ. ವಿಎಸ್‍ವಿ. ಪ್ರಸಾದ ಹೇಳಿದರು.
ಪ್ರೊಗ್ರೇಸ್ಸಿವ್ ಎಜ್ಯುಕೇಶನ್ ಸೊಸಾಯಿಟಿಯ ಗಲ್ರ್ಸ್ ಇಂಗ್ಲೀಷ್ ಸ್ಕೂಲ್‍ನಲ್ಲಿ ಆಯೋಜಿಸಲಾಗಿದ್ದ ಎಸ್‍ಎಸ್‍ಎಲ್‍ಸಿ ಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿನಿಯರ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಕಡು ಬಡತನದ ಕುಟುಂಬದಲ್ಲಿ ಹುಟ್ಟಿದ್ದು ಆಗ ಶಾಲೆಯ ಶಿಕ್ಷಣ ಪಡೆಯುವ ವ್ಯವಸ್ಥೆ ಬಹಳ ಕಠಿಣವಾಗಿತ್ತು. ಮಾತೃ ಭಾಷೆ ತೆಲುಗಿನಲ್ಲಿ ಶಿಕ್ಷಣವನ್ನು ಪಡೆದೆ.
ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿದೆ. ಏನಾದರೂ ಸಾಧಿಸಬೇಕು ಎಂಬ ಹಠ ನನ್ನದಾಗಿತ್ತು, ಆ ಛಲ ನನ್ನಲ್ಲಿ ಗಾಢವಾಗಿಯಿತು. ಅದರ ಪರಿಣಾಮವಾಗಿ ಅಂದಿನಿಂದ ಇಲ್ಲಿಯವರೆಗೂ ಯಾವ ಪರಿಸ್ಥಿತಿಗೂ ಜಗ್ಗದೆ -ಕುಗ್ಗದೇ ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ಸಾಧನೆಯ ಬೆನ್ನು ಹತ್ತಿದೆ. ಕೃಷಿ ಕುಟುಂಬದಿಂದ ಬಂದರೂ ನನ್ನ ಸಾಧನೆಯ ಬಯಕೆ ನಿಲ್ಲಲಿಲ್ಲ. ನಾನು ಅಂದು ಕೊಂಡಿರುವುದನ್ನು ಸಾಧಿಸಿಯೇ ತೀರಬೇಕೆಂಬ ಛಲ ನಾನು ಈ ಮಟ್ಟದಲ್ಲಿ ಬೆಳೆಯಲು ಸಹಕಾರಿಯಾಯಿತು.
ನಿಮ್ಮಂತ ಹಲವಾರು ವಿದ್ಯಾರ್ಥಿನಿಯರ ಜೊತೆ ಮಾತನಾಡಿದಾಗ ಎಷ್ಟೋ ಮನಸ್ಸು ಹಗುರವಾಗುತ್ತದೆ. ನಿಮ್ಮಲ್ಲಿ ಸಾಧಿಸುವ ಛಲ ಬೆಳೆದರೆ ನನ್ನ ಮಾತಿಗೆ ನನ್ನ ಬದುಕಿಗೆ ಒಂದು ಅರ್ಥ ಸಿಗುತ್ತದೆ ಎಂದರು.
ಭಗವಂತ ಒಳ್ಳೆಯ ಕಾರ್ಯವನ್ನು ಮಾಡಲು ಅವಕಾಶ ನೀಡಿದ ಹಾಗಾಗಿ ಶಾಲೆಗಳಲ್ಲಿ ಮಕ್ಕಳಿಗೆ, ಸಮಾಜದಲ್ಲಿ ದೀನ ದಲಿತ ದುರ್ಬಲರಿಗೆ ಸಹಾಯ ಮಾಡುತ್ತಾ ಇವತ್ತು ಅದೆಷ್ಟು ಕೆಲಸದ ಒತ್ತಡಗಳಿದ್ದರೂ ನಿಮ್ಮೊಂದಿಗೆ ಬಂದು ನಿಮ್ಮ ಜೊತೆಗೆ ಕಾಲ ಕಳೆದೆ. ನನಗೆ ಸಿಕ್ಕ ಅವಕಾಶವನ್ನು ಪುಣ್ಯ ಎಂದು ತಿಳಿಯುತ್ತೇನೆ. ಅದೆಷ್ಟೋ ಶಾಲಾ ಕಾಲೇಜುಗಳಿಗೆ, ದೇವಾಲಯಗಳಿಗೆ, ಸಮಾಜಕ್ಕೆ ಆಶ್ರಯದಾತನಾಗಿದ್ದೇನೆ.
ಅದೆಷ್ಟು ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ ಅವರಿಗೆ ಶೈಕ್ಷಣಿಕವಾಗಿಯೂ ವಿದ್ಯಾರ್ಥಿಗಳಿಗೆ ಸೇವೆ ಮಾಡುವ ಮನೋಭಾವನೆಯನ್ನು ಹೊಂದಿದ್ದು, ಹಲವಾರು ವಿದ್ಯಾದೇಗುಲಗಳಿಗೆ ಭೇಟಿ ಮಾಡಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಅವರ ಸಾಧನೆಗಾಗಿ ಹಗಲಿರುಳು ದುಡಿಯುವ ಇಚ್ಛೆಯನ್ನು ಹೊಂದಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ದೇವಿ ಸಜ್ಜನ್ ಮಾತನಾಡಿ, ನನ್ನ ತಾಲೂಕಿನ ಶೈಕ್ಷಣಿಕ ಫಲಿತಾಂಶ ಗಲ್ರ್ಸ್ ಇಂಗ್ಲಿಷ್ ಸ್ಕೂಲಿಂದ ಇನ್ನಷ್ಟು ಇಮ್ಮಡಿಯಾಗಿದೆ ಶಾಲೆಯ ಫಲಿತಾಂಶ ತಾಲೂಕಿನ ಶೈಕ್ಷಣಿಕ ಶ್ರೇಯಸ್ಸಿಗೆ ಬೆಂಗಾವಲಾಗಿದೆ ನಾಲ್ಕನೇ ಸ್ಥಾನವನ್ನು ಪಡೆದ ವಿದ್ಯಾರ್ಥಿನಿ ಕೂಡ ಇದೆ ಶಾಲೆಯಲ್ಲಿ ಓದಿದವಳು. ಶಾಲೆಯಲ್ಲಿ ಸಂಸ್ಕಾರ, ಮೌಲ್ಯಯುತ ಶಿಕ್ಷಣ ಇಲ್ಲಿ ದೊರೆಯುತ್ತಿರುವುದು ನನಗೆ ತುಂಬಾ ಖುಷಿ ವಿಚಾರವಾಗಿದೆ ಎಂದು ಹರ್ಷವ್ಯಕ್ತಪಡಿಸಿದರು.
ಶಾಲೆಯಲ್ಲಿ ಅತ್ಯಂತ ಹೆಚ್ಚು ಅಂಕಗಳಿಸಿ ಪ್ರಥಮ ಸ್ಥಾನ ಪಡೆದ ಶಾಂತವ್ವ ರೆಡ್ಡೇರ, ದ್ವಿತೀಯ ಸ್ಥಾನಗಳಿಸಿದ ಶ್ರೇಯಾ ಟೊಂಗಳೆ, ವೀಣಾ ಮರರ್ದನಗೌಡ್ರು. ತೃತೀಯ ಸ್ಥಾನವನ್ನು ಗಳಿಸಿದ ಕಾವ್ಯ ಹುಲಿಹೊಂಡ, ಚತುರ್ಥ ಸ್ಥಾನ ಗಳಿಸಿದ ಸೃಷ್ಟಿ ಗುಡಿಗೇರಿ, ಐದನೇ ಸ್ಥಾನ ಗಳಿಸಿದ ಮಾಲಾ ಮಾಚಾಪುರ್ ಇವರನ್ನು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ತಾಲೂಕಿನ ವಿವಿಧ ಶಾಲೆಗಳಿಂದ ಆಹ್ವಾನಿಸಿದ ಮಹಮ್ಮದ್ ರಫೀಕ್ ನಲವಡಿ, ಬಸವರಾಜ್ ಬುಳ್ಳಾಪುರ, ರೇಣುಕಾ ಹರ್ನಾಳ್, ಕಮಲಾ ಹುಡೇದಕರ, ನವೀನಾ ಸುಂಕದ ಅವರನ್ನು ಹಾಗೂ ಶಾಲೆಯ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿದ ಹಿತಚಿಂತಕರನ್ನು ಗೌರವಿಸಲಾಯಿತು.
ಜೆ ಬಿ ಎಂ ಪುಸ್ತಕ ಪ್ರೊಡಕ್ಷನ್ ಮ್ಯಾನೇಜರ್ ಸತೀಶ್ ಅವರು ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‍ಬುಕ್‍ಗಳನ್ನು ವಿತರಿಸಿದರು.
ಸ್ಥಳೀಯ ಸಾಯಿ ಸ್ಪೋಟ್ರ್ಸ್ ಕ್ಲಬ್ ಮಾಲೀಕರಾದ ಜ್ಯೋತಿಬಾ ಕದಂ ಮಕ್ಕಳಿಗೆ ಉಚಿತವಾಗ ಸಮವಸ್ತ್ರ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹದೇವಪ್ಪ ವರದಾನಿ ವಹಿಸಿದ್ದರು. ನಿವೃತ್ತ ಶಿಕ್ಷಕರಾದ ಕೇಶವ ಕೊಂಗಿ, ಶ್ರೀಮತಿ ನೀಲಾಂಬಿಕಾ ಪಾಟೀಲ್ ಶ್ರೀಮತಿ ವಿಜಯ ಬಾಯಿ ಲೋಕರೆ, ಮಹೇಂದರ, ಬಸವನಗೌಡ ಪಾಟೀಲ್, ಪಾಲಕರಾದ ದೊಡ್ಡ ಗೌಡರ್, ಜೆ.ಈ.ಕಾಲೇಜಿನ ಪ್ರಾಂಶುಪಾಲರಾದ ಶಾರದಾ ಹಾದಿಮನಿ , ಆರ್. ಡಿ. ನೀಲಣ್ಣವರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.





