• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, August 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಟೋಮೊಬೈಲ್

ಭಾರತದ ಮೊದಲ ‘2026 ಯೆಜ್ಡಿ ರೋಡ್‌ಸ್ಟರ್’ ಬೈಕ್ ಒಡೆಯನಾದ ಒಲಿಂಪಿಕ್ ಹೀರೋ ಪಿ.ಆರ್. ಶ್ರೀಜೇಶ್!

ಕವಿತಾ by ಕವಿತಾ
August 12, 2026 - 3:59 pm
in ಆಟೋಮೊಬೈಲ್
0 0
0
ಅದ್ವೈತ್ (1)

ಬೆಂಗಳೂರು (ಆ. 12): ಒಲಿಂಪಿಕ್ ಪದಕ ವಿಜೇತ ಹಾಗೂ ಭಾರತೀಯ ಹಾಕಿ ತಂಡದ ಮಾಜಿ ನಾಯಕ ಪಿ.ಆರ್. ಶ್ರೀಜೇಶ್ ಅವರು ಹೊಸದೊಂದು ಮೈಲಿಗಲ್ಲಿಗೆ ಸಾಕ್ಷಿಯಾಗಿದ್ದಾರೆ. ಜಾವಾ – ಯೆಜ್ಡಿ ಮೋಟಾರ್‌ಸೈಕಲ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ್ದ ‘2026 ಯೆಜ್ಡಿ ರೋಡ್‌ಸ್ಟರ್ʼ ಬೈಕ್ ಅನ್ನು ಖರೀದಿಸಿದ ಭಾರತದ ಮೊಟ್ಟಮೊದಲ ಗ್ರಾಹಕ ಎಂಬ ಹೆಗ್ಗಳಿಕೆಗೆ ಶ್ರೀಜೇಶ್ ಪಾತ್ರರಾಗಿದ್ದಾರೆ. ಅವರು ವಿಶಿಷ್ಟವಾದ ‘ಯೆಜ್ಡಿ ಗ್ರೀನ್ ಮಾಂಬಾ ರೋಡ್‌ಸ್ಟರ್’ ಬೈಕ್‌ನ ಡೆಲಿವರಿ ಪಡೆದುಕೊಂಡಿದ್ದಾರೆ.

ಇತ್ತೀಚೆಗೆ ಕೇರಳದಲ್ಲಿ ನಡೆದ ರಾಷ್ಟ್ರೀಯ ಬಿಡುಗಡೆ ಸಮಾರಂಭದಲ್ಲಿ ಈ ಬೈಕ್ ಅನ್ನು ನೋಡಿದ್ದ ಶ್ರೀಜೇಶ್, ಅದರ ವಿಶಿಷ್ಟ ಸ್ಟೈಲ್ ಮತ್ತು ರಾಯಲ್ ಲುಕ್‌ಗೆ ಮಾರುಹೋಗಿದ್ದರು. ಇದೀಗ ಅದೇ ಬೈಕ್‌ ಅನ್ನು ಖರೀದಿಸಿ, ಡೆಲಿವರಿ ಪಡೆದುಕೊಂಡಿದ್ದಾರೆ. ಆಟದ ಮೈದಾನದಲ್ಲಿ ಅಪಾರ ಆತ್ಮವಿಶ್ವಾಸ ಮತ್ತು ಛಲದಿಂದ ಎದುರಾಳಿಗಳನ್ನು ಎದುರಿಸುವ ʼಗೋಡೆʼ ಖ್ಯಾತಿಯ ಶ್ರೀಜೇಶ್ ಅವರ ವ್ಯಕ್ತಿತ್ವಕ್ಕೆ ಈ ಯೆಜ್ಡಿ ರೋಡ್‌ಸ್ಟರ್ ಬೈಕ್ ಹೇಳಿಮಾಡಿಸಿದಂತಿದೆ.

RelatedPosts

6 ನಗರ 10,000 ಟೆಕ್ಕಿಗಳು: ಭಾರತದಲ್ಲಿ ಕಾಗ್ನಿಜೆಂಟ್‌ನಿಂದ ಬೃಹತ್ ‘ಓಪನ್‌ಎಐ ಕೋಡೆಕ್ಸ್‌ ಹ್ಯಾಕಥಾನ್’! ಏನಿದರ ಉದ್ದೇಶ?

ಹೊಸ ವಾಹನ ಖರೀದಿಸುವವರಿಗೆ ಬಿಗ್ ಶಾಕ್‌: ಆಗಸ್ಟ್ 1 ರಿಂದ ಕಾರು-ಬೈಕ್ ಬೆಲೆ ಏರಿಕೆ

ಬಜೆಟ್ ಬೆಲೆಯಲ್ಲಿ ಬೊಂಬಾಟ್ ಫೀಚರ್ಸ್: ಲಾವಾದಿಂದ ಹೊಸ ‘ವಿರಾಟ್’ ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆ

ಸಿಟ್ರನ್‌ನಿಂದ ‘ಬಸಾಲ್ಟ್ ಎಕ್ಸ್ ಕಂಫರ್ಟ್ ಎಡಿಷನ್’ ಕಾರು ಬಿಡುಗಡೆ: ಕೇವಲ ₹8.75 ಲಕ್ಷಕ್ಕೆ ಪ್ರೀಮಿಯಂ ಫೀಚರ್ಸ್!

ADVERTISEMENT
ADVERTISEMENT

ಏನು ಈ ಗ್ರೀನ್ ಮಾಂಬಾ ರೋಡ್‌ಸ್ಟರ್‌ನ ವಿಶೇಷತೆ?

ರಸ್ತೆಯಲ್ಲಿ ಸಾಗುವಾಗ ಎಲ್ಲರೂ ಒಮ್ಮೆ ತಿರುಗಿ ನೋಡುವಂತಹ ಆಕರ್ಷಕ ವಿನ್ಯಾಸವನ್ನು ಇದು ಹೊಂದಿದೆ.
ಮ್ಯಾಟ್-ಗ್ರೀನ್ ಬಣ್ಣದ ಈ ಬೈಕ್‌ಗೆ, ಅರೇಬಿಕಾ-ಬ್ರೌನ್‌ ಬಣ್ಣದ ಕುಶನ್ ಸೀಟ್ ಹಾಗೂ ತಾಮ್ರದ ಬಣ್ಣದ ಡೀಕ್ಯಾಲ್‌ಗಳನ್ನು ನೀಡಲಾಗಿದ್ದು, ಇದು ಬೈಕ್‌ನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

ಇದು 334ಸಿಸಿ ಸಾಮರ್ಥ್ಯದ ಲಿಕ್ವಿಡ್-ಕೂಲ್ಡ್ ಆಲ್ಫಾ2 ಇಂಜಿನ್ ಹೊಂದಿದ್ದು, 6 ಸ್ಪೀಡ್ ಗೇರ್‌ಬಾಕ್ಸ್, ಅಸಿಸ್ಟ್ ಅಂಡ್ ಸ್ಲಿಪ್ಪರ್ ಕ್ಲಚ್, ಎಬಿಎಸ್ ಮತ್ತು ಮಾಡ್ಯುಲರ್ ಸೀಟಿಂಗ್‌ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಬೈಕ್‌ ಖರೀದಿಯ ಸಂತಸ ಹಂಚಿಕೊಂಡ ಶ್ರೀಜೇಶ್‌, “ಆಟದ ಮೈದಾನದಷ್ಟೇ, ಮೈದಾನದ ಹೊರಗಿನ ಜೀವನವೂ ಬಹಳ ಮುಖ್ಯ ಎಂದು ನಾನು ನಂಬಿದ್ದೇನೆ. ಕೊಚ್ಚಿಯಲ್ಲಿ ನಡೆದ ಸಮಾರಂಭದಲ್ಲಿ ಈ ಬೈಕ್‌ನ ಡಿಸೈನ್ ಹಾಗೂ ಲುಕ್ ನನ್ನನ್ನು ಮೊದಲ ನೋಟದಲ್ಲೇ ಸೆಳೆದಿತ್ತು. ಯೆಜ್ಡಿ ಬೈಕ್‌ಗಳಿಗೆ ತಲೆಮಾರುಗಳು ಮೆಚ್ಚುವಂತಹ ದೊಡ್ಡ ಇತಿಹಾಸವಿದೆ. ಆ ಇತಿಹಾಸದ ಒಂದು ಭಾಗವಾಗಲು ನಾನು ಇಷ್ಟಪಟ್ಟೆ. ಆಟದ ಮೈದಾನವಿರಲಿ, ರಸ್ತೆಯಿರಲಿ ಅಥವಾ ಜೀವನವಿರಲಿ… ನಮಗೆ ಇಷ್ಟವಾದದ್ದನ್ನು ನಾವು ಬೆನ್ನಟ್ಟಬೇಕು ಎಂಬುದನ್ನೇ ಈ ಬೈಕ್ ನನಗೆ ನೆನಪಿಸುತ್ತದೆ” ಎಂದರು.

ಈ ಬಗ್ಗೆ ಮಾತನಾಡಿದ ಜಾವಾ – ಯೆಜ್ಡಿ ಬ್ರ್ಯಾಂಡ್‌ನ ಮಾತೃಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ಸ್‌ನ ಸಹ ಸಂಸ್ಥಾಪಕ ಅನುಪಮ್ ಥರೇಜಾ, “ರೋಡ್‌ಸ್ಟರ್ ಬೈಕ್ ಎಂದರೆ ಧೈರ್ಯ, ಆತ್ಮವಿಶ್ವಾಸ ಮತ್ತು ಚಾಲೆಂಜರ್ ಸ್ಪಿರಿಟ್. ಇಂತಹ ಬೈಕ್‌ನ ಮೊದಲ ಗ್ರಾಹಕನಾಗಿ ಶ್ರೀಜೇಶ್ ಅವರಂತಹ ಕ್ರೀಡಾ ದಿಗ್ಗಜರು ಸೇರ್ಪಡೆಯಾಗಿರುವುದು ನಮಗೆ ಅತೀವ ಸಂತಸ ತಂದಿದೆ. ಅವರ ಛಲ ಮತ್ತು ಸಾಧನೆ ನಮ್ಮ ಬ್ರ್ಯಾಂಡ್‌ಗೆ ಕನ್ನಡಿಯಂತಿದೆ. ಶ್ರೀಜೇಶ್ ಅವರೊಂದಿಗೆ ನಮ್ಮ 2026ರ ಹೊಸ ಸರಣಿಯ ಬೈಕ್‌ಗಳ ಜರ್ನಿ ಶುರುವಾಗಿರುವುದು ರೋಮಾಂಚನಕಾರಿಯಾಗಿದೆ,” ಎಂದರು.

ಶ್ರೀಜೇಶ್ ಅವರಿಗೆ ಗ್ರೀನ್ ಮಾಂಬಾ ರೋಡ್‌ಸ್ಟರ್ ಡೆಲಿವರಿ ಮಾಡುವುದರೊಂದಿಗೆ ಯೆಜ್ಡಿಯ 2026ರ ಹೊಸ ಸರಣಿಯ ಬೈಕ್‌ಗಳ ಡೆಲಿವರಿ ಭಾರತದಾದ್ಯಂತ ಅಧಿಕೃತವಾಗಿ ಶುರುವಾಗಿದೆ.

ಜಾವಾ, ಯೆಜ್ಡಿ ಹಾಗೂ ಬಿಎಸ್‌ಎನಂತಹ ಐಕಾನಿಕ್ ಮೋಟಾರ್‌ಸೈಕಲ್ ಬ್ರ್ಯಾಂಡ್‌ಗಳಿಗೆ ಭಾರತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಮರುಜೀವ ನೀಡುವ ದೃಷ್ಟಿಯಿಂದ ಕ್ಲಾಸಿಕ್ ಲೆಜೆಂಡ್ಸ್ ಸಂಸ್ಥೆ ಸ್ಥಾಪನೆಯಾಗಿದೆ. ಗ್ರಾಹಕರಿಗೆ ಅತ್ಯುತ್ತಮ ಮೋಟಾರ್‌ಸೈಕಲ್ ಅನುಭವವನ್ನು ನೀಡುವುದು ಈ ಕಂಪನಿಯ ಗುರಿಯಾಗಿದೆ.

ShareSendShareTweetShare
ಕವಿತಾ

ಕವಿತಾ

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕವಿತಾ, ಡಿಜಿಟಲ್ ಮೀಡಿಯಾದಲ್ಲಿ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ 2026ರಿಂದ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಯಾಲಿಟಿ ಶೋ, ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.. ಹಾಡು ಕೇಳುವುದು, ಪ್ರವಾಸ ಹೋಗುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಅದ್ವೈತ್ (6)

ಬೆಂಗಳೂರಿನಲ್ಲಿ ನೆಲೆಯೂರಲು ಲೂಫ್ತಾನ್ಸಾ ಟೆಕ್ನಿಕ್ ಆಸಕ್ತಿ: ಎಂ ಬಿ ಪಾಟೀಲ

by ಕವಿತಾ
August 12, 2026 - 5:21 pm
0

ಅದ್ವೈತ್ (4)

ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ: CCTV ದೃಶ್ಯ ನೀಡಲು ಹೈಕೋರ್ಟ್ ಸೂಚನೆ

by ಕವಿತಾ
August 12, 2026 - 5:05 pm
0

ಅದ್ವೈತ್ (3)

ಚಂದ್ರನ ಮೇಲೆ ‘ಮೂನ್ ಬೇಸ್’ ನಿರ್ಮಿಸಲು ಇಸ್ರೋಗೆ ನಾಸಾ ಆಹ್ವಾನ

by ಕವಿತಾ
August 12, 2026 - 4:45 pm
0

ಅದ್ವೈತ್ (2)

ಮಳೆ ನೀರಿನಲ್ಲಿ ಹುಲಿ ಮರಿಗಳ ಆಟ: ನಾಗರಹೊಳೆ ಸಫಾರಿಯಲ್ಲಿ ಅಪರೂಪದ ಕ್ಷಣ!

by ಕವಿತಾ
August 12, 2026 - 4:14 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಕೈಗೊಳ್ಳಲಿರುವ (29)
    6 ನಗರ 10,000 ಟೆಕ್ಕಿಗಳು: ಭಾರತದಲ್ಲಿ ಕಾಗ್ನಿಜೆಂಟ್‌ನಿಂದ ಬೃಹತ್ ‘ಓಪನ್‌ಎಐ ಕೋಡೆಕ್ಸ್‌ ಹ್ಯಾಕಥಾನ್’! ಏನಿದರ ಉದ್ದೇಶ?
    July 31, 2026 | 0
  • ಖ
    ಹೊಸ ವಾಹನ ಖರೀದಿಸುವವರಿಗೆ ಬಿಗ್ ಶಾಕ್‌: ಆಗಸ್ಟ್ 1 ರಿಂದ ಕಾರು-ಬೈಕ್ ಬೆಲೆ ಏರಿಕೆ
    July 28, 2026 | 0
  • Image 24c5663e
    ಬಜೆಟ್ ಬೆಲೆಯಲ್ಲಿ ಬೊಂಬಾಟ್ ಫೀಚರ್ಸ್: ಲಾವಾದಿಂದ ಹೊಸ ‘ವಿರಾಟ್’ ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆ
    July 24, 2026 | 0
  • Untitled design 2026 07 21T180844.972
    ಸಿಟ್ರನ್‌ನಿಂದ ‘ಬಸಾಲ್ಟ್ ಎಕ್ಸ್ ಕಂಫರ್ಟ್ ಎಡಿಷನ್’ ಕಾರು ಬಿಡುಗಡೆ: ಕೇವಲ ₹8.75 ಲಕ್ಷಕ್ಕೆ ಪ್ರೀಮಿಯಂ ಫೀಚರ್ಸ್!
    July 21, 2026 | 0
  • ಮುನ್ಸೂಚನೆ (7)
    ಬೆಂಗಳೂರಿನಲ್ಲಿ ಮೇಳೈಸಿದ ‘ವಿಂಟೇಜ್’ ಗತ್ತು: ಹಳೆಯ ನೆನಪುಗಳನ್ನು ಮರುಕಳಿಸಿದ ಜಾವಾ-ಯೆಜ್ಡಿ ದಿನಾಚರಣೆ
    July 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version