• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಯಶ್ ಟ್ರಾನ್ಸ್‌‌ಫಾರ್ಮೇಷನ್‌..ಟಾಕ್ಸಿಕ್‌‌ಗಾಗಿ 12KG ಇಳಿಕೆ

ಗ್ಯಾರಂಟಿ ನ್ಯೂಸ್‌‌ನಲ್ಲಿ ಯೋಗರಾಜ ಕಂಡಂತೆ ರಾಕಿಂಗ್ ರಾಯ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 15, 2026 - 3:09 pm
in ಸಿನಿಮಾ
0 0
0
ಷ್ಯ (21)

ಕರ್ನಾಟಕದಲ್ಲಿ ಟಾಕ್ಸಿಕ್ ಪ್ರಮೋಷನ್ಸ್‌ಗೆ ವಿಕಟಕವಿ ಯೋಗರಾಜ್ ಭಟ್ ಭರ್ಜರಿಯಾಗಿ ಚಾಲನೆ ನೀಡಿದ್ದಾರೆ. ಯೆಸ್.. ತಬಾಹಿ ಸೆನ್ಸೇಷನಲ್ ಸಾಂಗ್ ಹಿಂದಿನ ಚಿತ್ರಸಾಹಿತಿ ಆಗಿರೋ ಭಟ್ರು, ಮತ್ತೆರಡು ಗೀತೆಗಳಿಗೆ ಪದ ಪೋಣಿಸಿದ್ದಾರಂತೆ. ಅಷ್ಟೇ ಅಲ್ಲ.. ಯಶ್ ತನ್ನ ಪಾತ್ರಕ್ಕಾಗಿ 12 ಕೆಜಿ ತೂಕ ಇಳಿಸಿಕೊಂಡು ಬಾಡಿ ಟ್ರಾನ್ಸ್‌ಫಾರ್ಮೇಷನ್ ಆಗಿದ್ದು, ಕಿಯಾರಾ ಎಕ್ಸ್‌ಪ್ರೆಷನ್ಸ್, ಮುಂಬೈನಲ್ಲಿ ರಾಕಿಂಗ್ ಸ್ಟಾರ್ ಕಟ್ಟಿರೋ ಕನ್ನಡ ಸಾಮ್ರಾಜ್ಯದ ಬಗ್ಗೆ ಎಕ್ಸ್‌‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಭಟ್ರು ಕಂಡಂತೆ ರಾಕಿಂಗ್ ರಾಯನ ಪ್ರಪಂಚ ಹೇಗಿದೆ ಅನ್ನೋದನ್ನ ನೀವೊಮ್ಮೆ ನೋಡ್ಕೊಂಡ್ ಬನ್ನಿ.

  • ಯಶ್ ಟ್ರಾನ್ಸ್‌‌ಫಾರ್ಮೇಷನ್‌.. ಟಾಕ್ಸಿಕ್‌‌ಗಾಗಿ 12KG ಇಳಿಕೆ
  • ಕಿಯಾರಾ ನೋ ಎಕ್ಸ್‌‌ಪ್ರೆಷನ್ಸ್.. ಭಟ್ರಿಗೂ ಅದೇ ಕುತೂಹಲ..!
  • ಗ್ಯಾರಂಟಿ ನ್ಯೂಸ್‌‌ನಲ್ಲಿ ಯೋಗರಾಜ ಕಂಡಂತೆ ರಾಕಿಂಗ್ ರಾಯ
  • ಮುಂಬೈನಲ್ಲಿ ಕನ್ನಡ ಸಾಮ್ರಾಜ್ಯ ಕಟ್ಟಿರೋ ಹೆಮ್ಮೆಯ ಕನ್ನಡಿಗ..!

ಟಾಕ್ಸಿಕ್.. ಟಾಕ್ಸಿಕ್.. ಟಾಕ್ಸಿಕ್.. ಸದ್ಯ ವಿಶ್ವ ಸಿನಿದುನಿಯಾದ ಮೋಸ್ಟ್ ಟ್ರೆಂಡಿಂಗ್ ಮೂವಿ. ನಮ್ಮ ಹೆಮ್ಮೆಯ ಕನ್ನಡಿಗ ಯಶ್ ನಟಿಸಿ, ಕೆವಿಎನ್ ಜೊತೆ ಸಹ ನಿರ್ಮಾಣ ಮಾಡಿರೋ ಕನ್ನಡದ ಹಾಲಿವುಡ್ ಎಂಟರ್‌ಟೈನರ್. ಗೀತು ಮೋಹನ್‌ದಾಸ್ ನಿರ್ದೇಶನದ ರೆಟ್ರೋ ಗೋವಾ-ಪೋರ್ಚುಗಲ್‌‌ ಬ್ಯಾಕ್‌ಡ್ರಾಮ್ ಮೂವಿಯ ಒಂದೊಂದು ಟೀಸರ್ ಕೂಡ ಸಖತ್ ಹೈಪ್ ಕ್ರಿಯೇಟ್ ಮಾಡಿವೆ. ಅದ್ರಲ್ಲೂ ತಬಾಹಿ ಸಾಂಗ್ ಚಿತ್ರಕ್ಕೆ ಟ್ರಂಪ್‌‌ಕಾರ್ಡ್ ಆಗಿ ಪರಣಮಿಸಿದ್ದು, ರಿಲೀಸ್‌ಗೆ ಜಸ್ಟ್ 42 ಡೇಸ್ ಅಷ್ಟೇ ಬಾಕಿ ಉಳಿದಿದೆ.

RelatedPosts

ಕತ್ರೀನಾ ಕೈಫ್ ಬಾಡಿ ಶೇಮಿಂಗ್‌ ಮಾಡಿದವರಿಗೆ ರಮ್ಯಾ ಕ್ಲಾಸ್!

ಅಭಿಮಾನಿಯ ಕಾಲಿನ ಮೇಲೆ ಕಾರು ಹರಿಸಿದ ಡ್ರೈವರ್‌: ಚಾಲಕನ ಮೇಲೆ ಗರಂ ಆದ ಸಲ್ಮಾನ್ ಖಾನ್‌

ಕಲರ್ಸ್ ಹೆಲ್ತ್ ಕೇರ್ ಇಂಡಿಯಾದ ನೂತನ ಶಾಖೆ ಆರಂಭ: ಡಾರ್ಲಿಂಗ್ ಕೃಷ್ಣ ದಂಪತಿಯಿಂದ ಉದ್ಘಾಟನೆ

ಕನ್ನಡ-ತುಳುನಲ್ಲಿ ಅರ್ಜುನ್ ದೇವ್ ಟಾಸ್ ಗೇಮ್

ADVERTISEMENT
ADVERTISEMENT

ಕರ್ನಾಟಕದಲ್ಲಿ ಯೋಗರಾಜ್ ಭಟ್ ಟಾಕ್ಸಿಕ್‌ ಪ್ರಮೋಷನ್ಸ್‌ ಕಿಕ್‌ಸ್ಟಾರ್ಟ್ ಮಾಡಿದ್ದು, 10 ಕೋಟಿ ವೀವ್ಸ್‌ನಿಂದ ಯೂಟ್ಯೂಬ್‌‌ನಲ್ಲಿ ಸುನಾಮಿ, ಸುಂಟರಗಾಳಿ ಎಬ್ಬಿಸಿರೋ ತಬಾಹಿ ಟ್ರೆಂಡಿಂಗ್ ನಂ.1 ನಲ್ಲಿದೆ. ಡ್ರಾಮಾ ಚಿತ್ರದಲ್ಲಿ ಯಶ್‌ಗೆ ಆ್ಯಕ್ಷನ್ ಕಟ್ ಹೇಳಿದ್ದ ಭಟ್ರು, ಅದಾದ ಬಳಿಕ ಅವರೊಟ್ಟಿಗೆ ಕೆಲಸ ಮಾಡಿದ ನಿದರ್ಶನವೇ ಇಲ್ಲ. ಅವರಿಬ್ಬರ ನಡುವಿನ ಬಾಂಧವ್ಯ ಅಷ್ಟು ಅದ್ಭುತವಾಗಿತ್ತು. ಅಲ್ಲದೆ, ಯಶ್‌ರ ಸಾಕಷ್ಟು ಚಿತ್ರಗಳಿಗೆ ಸಾಹಿತ್ಯ ರಚಿಸಿದ್ದಾರೆ ಯೋಗರಾಜ್ ಭಟ್.

ಸದ್ಯ ನಮ್ಮ ಗ್ಯಾರಂಟಿ ನ್ಯೂಸ್‌ನ ಗ್ಯಾರಂಟಿ ಪಿಚ್ಚರ್ ಟೀಂ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿರೋ ಭಟ್ರು, ಮುಂಬೈನಲ್ಲಿ ಮಿನಿ ಕರ್ನಾಟಕ ಕಟ್ಟಿರೋ ರಾಕಿಂಗ್ ಸ್ಟಾರ್ ಕನ್ನಡಾಭಿಮಾನ, ದೂರಾಲೋಚನೆಯನ್ನ ಅದ್ಭುತವಾಗಿ ಬಣ್ಣಿಸಿದ್ದಾರೆ. ಅಲ್ಲದೆ, ಎರಡ್ಮೂರು ಪಾತ್ರಗಳಿಗೆ ಜೀವ ತುಂಬಿರೋ ರಾಕಿಂಗ್ ಸ್ಟಾರ್, ಟಾಕ್ಸಿಕ್ ಪಾತ್ರಕ್ಕಾಗಿ ಬರೋಬ್ಬರಿ 12ರಿಂದ 14ಕೆಜಿ ತೂಕ ಇಳಿಸಿಕೊಂಡು ಬಾಡಿ ಟ್ರಾನ್ಸ್‌ಫಾರ್ಮೇಷನ್ ಮಾಡಿಕೊಂಡಿರೋದ್ರ ಬಗ್ಗೆ ಬಹಿರಂಗಪಡಿಸಿದ್ದಾರೆ. ಅಣ್ಣಾವ್ರು 50 ವರ್ಷಗಳ ನಂತರವೂ ಯೋಗದಿಂದ ದೇಹ ಸೌಂದರ್ಯ ಕಾಪಾಡಿಕೊಂಡಿದ್ದನ್ನ ಭಟ್ರು ನೆನೆದರು.

ತಬಾಹಿ ಸಾಂಗ್‌‌ನಲ್ಲಿ ಯಶ್ ಜೊತೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರೋ ಬೋಲ್ಡ್ ಬ್ಯೂಟಿ ಕಿಯಾರಾ ಅಡ್ವಾಣಿ ಎಕ್ಸ್‌‌ಪ್ರೆಷನ್ಸ್ ಬಗ್ಗೆ ಸಾಕಷ್ಟು ಮಂದಿ ಸಾಕಷ್ಟು ರೀತಿ ಮಾತಾಡಿಕೊಳ್ತಿದ್ದಾರೆ. ಆಕೆಯ ಆ ಎಕ್ಸ್‌ಪ್ರೆಷನ್ಸ್‌‌ ಕುರಿತು ಭಟ್ರಿಗೂ ಕುತೂಹಲವಿದೆಯಂತೆ. ಅದನ್ನ ಅವ್ರ ಬಾಯಿಂದಲೇ ಒಮ್ಮೆ ಕೇಳಿಬಿಡಿ.

  • ಕವಿ ಹೃದಯಿ ಯಶ್.. ‘ಗಜಮಾ’ ರೀತಿ ‘ತಬಾಹಿ’ ಬಳಕೆ
  • ತಬಾಹಿ ಒಳಾರ್ಥ ಬಿಚ್ಚಿಟ್ಟ ಲಿರಿಕ್ ರೈಟರ್ ಯೋಗರಾಜ್
  • ಸೀರಿಯಲ್ ಡೇಸ್‌‌ನಲ್ಲೇ ಸಾಹಿತ್ಯ ಬರೆಯುತ್ತಿದ್ರು ಯಶ್
  • ಬೇಂದ್ರೆ ಕವನ ಹೇಳಿದ್ರೆ ಸಾಕು.. ಡಿಕೋಡ್ ಮಾಡ್ತಾರೆ ರಾಕಿ

ಜಿದ್ದಾ ಜಿದ್ದಿನಿಂದ ಬರೆದ ಗೀತೆ ತಬಾಹಿ. ಅದ್ರಲ್ಲಿ ಮಾಜಾ ತಗೊಂಡಿದ್ದು ಮಾತ್ರ ಯಶ್ ಹಾಗೂ ಭಟ್ರಂತೆ. ತಬಾಹಿ ಅಂದ್ರೆ ವಿನಾಶ. ಆದ್ರೆ ನಾನು ನೀನು ಸೇರಿದ್ರೆ ಆ ವಿನಾಶ ಅನ್ನೋದನ್ನ ಹೀರೋ ಹೀರೋಯಿನ್‌ಗೆ ಹೇಳೋದಾಗಿದೆ ಇದು. ಆ ಇನ್‌‌ಸೈಡ್ ಒಳಾರ್ಥವನ್ನ ಸ್ವತಂ ಪದಗಳನ್ನ ಪೋಣಿಸಿರೋ ಭಟ್ರೇ ಬಿಚ್ಚಿಟ್ಟಿದ್ದಾರೆ.

ಕವಿ ಹೃದಯಿ ಆಗಿರೋ ಯಶ್, ಸೀರಿಯಲ್ ದಿನಗಳಲ್ಲೇ ಕವಿತೆಗಳನ್ನ ಬರೆಯುತ್ತಿದ್ರು. ಅವುಗಳನ್ನ ನಾನು ಓದ್ದಿದೀನಿ ಕೂಡ ಅಂದ್ರು ಭಟ್ರು. ಬೇಂದ್ರೆ ಅವ್ರ ಕವನ ಹೇಳಿದ್ರೆ, ಅದನ್ನ ಡೀ ಕೋಡ್ ಮಾಡೋ ತಾಕತ್ತು ಯಶ್ ಅವ್ರಿಗೆ ಇದೆ ಅಂತಾರೆ. ಇನ್ನೂ ತಬಾಹಿ ಪದವನ್ನ ಉತ್ತರ ಕರ್ನಾಟಕದಲ್ಲಿ ಗಜಮಾ ಪದ ಬಳಕೆ ರೀತಿ ಡಿಫರೆಂಟ್ ಆಗಿ ಇರಲಿದೆ ಅಂತ ಬಳಸಿದ್ವಿ ಎಂದರು. ಕಿಯಾರಾ-ಯಶ್‌ರದ್ದು ಮುದ್ದಾದ ಮುಖಗಳು. ಯಶ್ ಕೋಲು ಮುಖಕ್ಕೆ ಆ ಗಡ್ಡ, ಮೀಸೆಯಲ್ಲಿ ಅವ್ರನ್ನ ಪ್ರೆಸೆಂಟ್ ಮಾಡಿರೋ ರೀತಿ ವಿಭಿನ್ನವಾಗಿದೆ ಎಂದರು.

  • ಹತ್ತಿ ಬಂದ ಏಣಿ ಒದೆಯಲ್ಲ.. ಟಾಕ್ಸಿಕ್‌‌ನಲ್ಲಿ ಡ್ರಾಮಾ ಹುಡ್ಗರು
  • 5 ನಾಯಕಿಯರು.. ಹೆಣ್ಮಕ್ಳೇ ಸ್ಟ್ರಾಂಗ್.. ಮೈಲಿಗಲ್ಲು ಮೂವಿ..!!

ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ, ಬಂದ ದಾರಿಯನ್ನ ಮರೆಯಬಾರದು. ಅದೇ ರೀತಿ ಹತ್ತಿ ಬಂದ ಏಣಿಯನ್ನ ಎಂದೂ ಒದ್ದಿಲ್ಲ ಯಶ್. ಯಾಕಂದ್ರೆ ಡ್ರಾಮಾ ಚಿತ್ರದಲ್ಲಿ ಕೆಲಸ ಮಾಡಿದ್ದ ಶೇಕಡಾ 10ರಷ್ಟು ಮಂದಿ ಹುಡುಗರು ಇದೀಗ ಟಾಕ್ಸಿಕ್ ಚಿತ್ರದಲ್ಲೂ ಕೆಲಸ ಮಾಡಿದ್ದಾರಂತೆ. ಅವರಿಗೆ ಅವಕಾಶ ನೀಡಿರೋ ಯಶ್‌‌ ಮನಸ್ಸು ಎಷ್ಟು ದೊಡ್ಡದು ಅಂತ ನೀವೇ ಒಮ್ಮೆ ಊಹಿಸಿಕೊಳ್ಳಿ.

ಇನ್ನೂ ಚಿತ್ರದಲ್ಲಿ ಸುಮಾರು ಐದು ಮಂದಿ ನಾಯಕಿಯರಿದ್ದು, ಹೆಣ್ಮಕ್ಳೇ ಸ್ಟ್ರಾಂಗು ಗುರು ಅಂತಾರೆ ಭಟ್ರು. ಇದೊಂದು ಶಾಶ್ವತ ಮೈಲಿಗಲ್ಲು ಸೃಷ್ಟಿಸೋ ಸಿನಿಮಾ ಆಗುವ ಭರವಸೆ ನೀಡಿರೋ ವಿಕಟಕವಿ, ಫಿಲಾಸಫರ್ ರೂಮಿ, ಆತನ ಸರಿ-ತಪ್ಪುಗಳ ಆಚೆ ಇರೋ ಪ್ರಪಂಚದ ಬಗ್ಗೆಯೂ ಮಾತನಾಡಿದ್ದಾರೆ.

ಒಟ್ಟಾರೆ ಒಂದ್ಕಡೆ ಯಶ್ ಸಿನಿಮಾಕಾನ್‌ ವೇದಿಕೆಯಲ್ಲಿ ಅಮೆರಿಕದಿಂದ ಪ್ರಮೋಷನ್ಸ್ ಮಾಡ್ತಿದ್ರೆ, ಇಲ್ಲಿ ಭಟ್ರು ಕರುನಾಡಿನಿಂದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿರೋದು ವಿಶೇಷ. ಈ ಚಿತ್ರದಲ್ಲಿ ಭಟ್ರು ಇನ್ನೂ ಎರಡು ಸಾಂಗ್ಸ್ ಬರೆದಿದ್ದು, ಅವು ವೇದಾಂತ, ನೋವಿನಿಂದ ಕೂಡಿರೋ ಗೀತೆಗಳಾಗಿರಲಿವೆಯಂತೆ. ಇನ್‌ಫ್ಯಾಕ್ಟ್ ಅವು ಯಶ್ ಫೇವರಿಟ್ ಸಾಂಗ್ಸ್ ಕೂಡ ಹೌದಂತೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಹ್ಮೋ (45)

ಹುಬ್ಬಳ್ಳಿಗೆ ಅಮಿತ್ ಶಾ ಆಗಮನ: ಇಂದು ಕೆಎಲ್‌ಇ ನೂತನ ವೈದ್ಯಕೀಯ ಕಾಲೇಜು, ಆಸ್ಪತ್ರೆ ಉದ್ಘಾಟನೆ

by ದಿಶಾ ಕೆ. ಎಸ್.
September 19, 2026 - 8:08 am
0

ಹ್ಮೋ (43)

ಮಂಗಳೂರಿನಲ್ಲಿ ಐತಿಹಾಸಿಕ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಸಂಪುಟ ಅಸ್ತು

by ದಿಶಾ ಕೆ. ಎಸ್.
September 19, 2026 - 7:31 am
0

ಹ್ಮೋ (42)

ರಾಜ್ಯದಲ್ಲಿ ಮಳೆಯ ಮುನ್ಸೂಚನೆ; ನಿಮ್ಮ ಜಿಲ್ಲೆಯಲ್ಲಿ ಇಂದು ಹವಾಮಾನ ಹೇಗಿರಲಿದೆ?

by ದಿಶಾ ಕೆ. ಎಸ್.
September 19, 2026 - 7:20 am
0

ಹ್ಮೋ (41)

ಇಂದಿನ ದಿನ ಭವಿಷ್ಯ: 12 ರಾಶಿಗಳಲ್ಲಿ ನಿಮ್ಮ ರಾಶಿಗೆ ಏನು ಫಲ? ಸಂಪೂರ್ಣ ಮಾಹಿತಿ ಇಲ್ಲಿದೆ

by ದಿಶಾ ಕೆ. ಎಸ್.
September 19, 2026 - 6:38 am
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 09 18T221135.496
    ಕತ್ರೀನಾ ಕೈಫ್ ಬಾಡಿ ಶೇಮಿಂಗ್‌ ಮಾಡಿದವರಿಗೆ ರಮ್ಯಾ ಕ್ಲಾಸ್!
    September 18, 2026 | 0
  • Your paragraph text 2026 09 18T215557.458
    ಅಭಿಮಾನಿಯ ಕಾಲಿನ ಮೇಲೆ ಕಾರು ಹರಿಸಿದ ಡ್ರೈವರ್‌: ಚಾಲಕನ ಮೇಲೆ ಗರಂ ಆದ ಸಲ್ಮಾನ್ ಖಾನ್‌
    September 18, 2026 | 0
  • Your paragraph text 2026 09 18T202423.824
    ಕಲರ್ಸ್ ಹೆಲ್ತ್ ಕೇರ್ ಇಂಡಿಯಾದ ನೂತನ ಶಾಖೆ ಆರಂಭ: ಡಾರ್ಲಿಂಗ್ ಕೃಷ್ಣ ದಂಪತಿಯಿಂದ ಉದ್ಘಾಟನೆ
    September 18, 2026 | 0
  • Your paragraph text 2026 09 18T195115.523
    ಕನ್ನಡ-ತುಳುನಲ್ಲಿ ಅರ್ಜುನ್ ದೇವ್ ಟಾಸ್ ಗೇಮ್
    September 18, 2026 | 0
  • Your paragraph text 2026 09 18T193219.659
    ದರ್ಶನ್‌ಗೆ ರಿಲೀಫ್: ಸಾಕ್ಷ್ಯ ವಿಚಾರಣೆ ವೇಳೆ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ
    September 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version