ಕರ್ನಾಟಕದ ಪ್ರತಿಷ್ಠಿತ ನಂದಿನಿ ಹಾಲಿನ ದರ ಶೀಘ್ರವೇ ಹೆಚ್ಚಳವಾಗಲಿದೆ. 2025-26 ಬಜೆಟ್ ಅಧಿವೇಶನ ಮುಗಿದ ಬೆನ್ನಲ್ಲೇ ಹಾಲಿನ ದರ ಹೆಚ್ಚಳ ಮಾಡುವುದು ಬಹುತೇಕ ನಿಶ್ಚಿತವಾಗಿದೆ. ರಾಜ್ಯದ ಜನತೆಗೆ ಶಾಕ್ ಆಗಿದೆ. ಹಾಲಿನ ಒಕ್ಕೂಟಗಳು ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿವೆ. ಪ್ರತಿ ಲೀಟರ್ಗೆ ಹಾಲಿನ ಮೇಲೆ 5 ರೂ ರೂಪಾಯಿ ಹೆಚ್ಚಳ ಮಾಡುವಂತೆ ಈಗಾಗಲೇ ಮನವಿ ಮಾಡಿವೆ. ಆದರೆ ಸರ್ಕಾರ ಹಾಲಿನ ದರ ಏರಿಕೆಗೆ ಸಮ್ಮತಿ ನೀಡಿರಲ್ಲಿಲ್ಲ. ಆದರೆ ಸದ್ಯ ಹಾಲು ಒಕ್ಕೂಟ ಹಾಗೂ ರೈತರಿಂದ ಹಾಲು ದರ ಹೆಚ್ಚಳಕ್ಕೆ ಒತ್ತಾಯ ಮಾಡಿರುವುದರಿಂದ ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡಿದೆ .
ಪಶು ಆಹಾರ, ಮೇವು ಮತ್ತು ಕೂಲಿ ವೆಚ್ಚಗಳು ಹೆಚ್ಚಾಗಿರುವುದರಿಂದ ಹಾಲು ಒಕ್ಕೂಟಗಳು ಪ್ರತಿ ಲೀಟರ್ಗೆ 5 ರೂಪಾಯಿ ಹೆಚ್ಚಳ ಮಾಡುವಂತೆ ಎಲ್ಲಾ ಹಾಲು ಒಕ್ಕೂಟಗಳಿಂದ ಕೆಎಂಎಫ್ ಅಧ್ಯಕ್ಷರು ಮತ್ತು ಪಶು ಸಂಗೋಪನೆ ಸಚಿವ ವೆಂಕಟೇಶ್ ಅವರಿಗೆ ಒತ್ತಾಯಿಸಲಾಗಿದೆ. 2025-26ರ ಬಜೆಟ್ ಅಧಿವೇಶನದ ನಂತರ ಈ ನಿರ್ಧಾರವನ್ನು ಘೋಷಿಸಲಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ದರ ಹೆಚ್ಚಳದ ಪ್ರಸ್ತಾವನೆವಾಗಿದ್ದು, ಸರ್ಕಾರದ ಅನುಮತಿ ಬಾಕಿ ಇತ್ತು. ಸಹಕಾರ ಸಚಿವ ಕೆ.ಎನ್. ರಾಜಣ್ಣ, ಪಶು ಸಂಗೋಪನೆ ಸಚಿವ ವೆಂಕಟೇಶ್, ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹಾಗೂ ಹಿರಿಯ ಅಧಿಕಾರಿಗಳು, ಹಾಲು ಒಕ್ಕೂಟದ ಅಧ್ಯಕ್ಷರೊಂದಿಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಯಲಿದೆ, ಹಾಲಿನ ದರ ಹೆಚ್ಚಳ ಕುರಿತಾಗಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ರಾಜ್ಯದ ಜನತೆಗೆ ಹಾಲಿನ ದರ ಏರಿಕೆ ಶಾಕ್ ಅಧಿವೇಶನದ ಬಳಿಕ ದರ ಹೆಚ್ಚಳ ತಗಲುವುದು ಫಿಕ್ಸ್ ಆಗಿದ್ದು, ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎರಡನೇ ಬಾರಿಗೆ ಹಾಲಿನ ದರ ಹೆಚ್ಚಳ ಮಾಡಲಾಗುತ್ತಿದೆ.
ಕಳೆದ ವರ್ಷವಷ್ಟೇ ಪ್ರತಿ ಲೀಟರ್ಗೆ 50 ಎಂಎಲ್ ಹೆಚ್ಚುವರಿಯಾಗಿ ನೀಡಿ, ಬೆಲೆಯಲ್ಲಿ 2 ರೂಪಾಯಿಯನ್ನು ಕೆಎಂಎಫ್ ಏರಿಕೆ ಮಾಡಿತ್ತು. ಆದರೆ ಈ ಬಾರಿ ಪ್ರತಿ ಲೀಟರ್ಗೆ 2 ರಿಂದ 3 ರೂ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ ನೀಡಲಾಗುತ್ತಿದ್ದ, 50 ಎಂಎಲ್ ಕಡಿತಗೊಳಿಸಿ ಪ್ರತಿ ಲೀಟರ್ಗೆ 3 ರೂಪಾಯಿ ಹೆಚ್ಚಳ ಮಾಡುವ ಸಾಧ್ಯತೆ ಇದೆ.ಸರ್ಕಾರವು ರೈತರ ಬೇಡಿಕೆಗಳು ಮತ್ತು ಸಾರ್ವಜನಿಕರ ಹಿತಾಸಕ್ತಿಗಳ ನಡುವೆ ಸಮತೂಗಿಸುವುದು ಹೇಗೆ ಎಂಬುದು ಎಲ್ಲರ ಕುತೂಹಲದ ವಿಷಯವಾಗಿದೆ.