ಕನ್ನಡದ ಹೆಮ್ಮೆಯ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಇಂದು ಜನುಮ ದಿನದ ಸಂಭ್ರಮ. 43ನೇ ವಸಂತಕ್ಕೆ ಕಾಲಿಟ್ಟಿರೋ ಶೆಟ್ರು ತಮ್ಮ ಪತ್ನಿ, ಮಕ್ಕಳು ಹಾಗೂ ಮಾಧ್ಯಮ ಮಿತ್ರರ ಜೊತೆ ಕೇಕ್ ಕಟ್ ಮಾಡಿ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡರು. ಈ ಸಂದರ್ಭದಲ್ಲಿ ತಮ್ಮ ಹೊಸ ಅಧ್ಯಾಯ ಯಾವುದು..? ಯಾವಾಗಿಂದ ಅನ್ನೋದ್ರ ಜೊತೆಗೆ ಚಿತ್ರರಂಗದ ಆಗುಹೋಗುಗಳು, ತಮ್ಮ ಮುಂದಿನ ಎರಡು ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌ಗಳ ಬಗ್ಗೆ ಮಾತನಾಡಿದ್ದಾರೆ.
ಶೆಟ್ರು ಹೇಳಿದ ‘ಹೊಸ ಅಧ್ಯಾಯ’ ಯಾವುದು? ಯಾವಾಗ..?!
43ನೇ ವಸಂತಕ್ಕೆ ರಿಷಬ್.. ಪತ್ನಿ & ಮಕ್ಕಳ ಜೊತೆ ಸಂಭ್ರಮ..!
ಗ್ಯಾರಂಟಿ ನ್ಯೂಸ್‌ನಲ್ಲಿ ಬರ್ತ್‌ಡೇ ಬಾಯ್ Exclusive ಟಾಕ್
ಜೈ ಹನುಮಾನ್, ಛತ್ರಪತಿ ಚಿತ್ರಗಳ ವಿವಾದ.. ಶೆಟ್ರು ಕೊಟ್ರು ಸ್ಪಷ್ಟನೆ
ಕಾಂತಾರ ಚಿತ್ರಗಳಿಂದ ಕನ್ನಡದ ಕೀರ್ತಿ ಪತಾಕೆಯನ್ನ ಜಗದಗಲಕ್ಕೆ ಪಸರಿಸಿದ ಹೆಮ್ಮೆಯ ಕನ್ನಡಿಗ ರಿಷಬ್ ಶೆಟ್ರಿಗೆ ಇಂದು ಜನುಮ ದಿನದ ಸಂಭ್ರಮ. ಹೌದು.. 42 ವರ್ಷಗಳನ್ನ ಪೂರೈಸಿ, 43ನೇ ವಸಂತಕ್ಕೆ ಕಾಲಿಟ್ಟ ರಿಷಬ್, ತಮ್ಮ ಮನದನ್ನೆ ಪ್ರಗತಿ ರಿಷಬ್ ಶೆಟ್ಟಿ ಹಾಗೂ ಮೂವರು ಮಕ್ಕಳು ಸೇರಿದಂತೆ ಆಪ್ತ ಮಾಧ್ಯಮ ಮಿತ್ರರ ಜೊತೆ ಕೇಕ್ ಕಟ್ ಮಾಡಿ, ಜನುಮ ದಿನವನ್ನ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ ಡಿವೈನ್ ಸ್ಟಾರ್, ಸದ್ಯ ಜೈ ಹನುಮಾನ್ ಚಿತ್ರದ ನನ್ನ ಪೋರ್ಷನ್ಸ್ ಶುರು ಆಗಬೇಕಿದೆ. ಮೊದಲು ಪ್ರಶಾಂತ್ ವರ್ಮಾ ನಿರ್ದೇಶನದ ಜೈ ಹನುಮಾನ್ ಚಿತ್ರವೇ ಮಾಡಲಿದ್ದು, ಅದಾದ ಬಳಿಕ ಛತ್ರಪತಿ ಶಿವಾಜಿ ಮಹಾರಾಜ್ ಮಾಡುತ್ತೇನೆ. ಒಂದು ಆದ್ಮೇಲೆ ಮತ್ತೊಂದಕ್ಕೆ ಕೈ ಹಾಕುವೆ ಎಂದರು.
ಇನ್ನೂ ಶಿವಾಜಿ ಮಹಾರಾಜರ ಕುರಿತ ಸಿನಿಮಾನ ರಿಷಬ್ ಮಾಡೋದ್ರ ಬಗ್ಗೆ ಪರ ವಿರೋಧದ ಅಲೆಗಳು ಶುರುವಾಗಿವೆ. ಅಷ್ಟೇ ಅಲ್ಲ ಜೈ ಹನುಮಾನ್ ಚಿತ್ರದ ಹನುಮನ ಪಾತ್ರಕ್ಕೂ ತಗಾದೆ ಶುರುವಾಗಿದೆ. ಈ ಬಗ್ಗೆಯ ಟೀಕೆ ಟಿಪ್ಪಣಿಗಳ ಕುರಿತು ರಿಷಬ್ ಇದೇ ಮೊದಲ ಬಾರಿ ಮುಕ್ತವಾಗಿ ಮಾತನಾಡಿದ್ರು. ಕೇಳುವುದು ಅವರ ಧರ್ಮ. ಸ್ಪಷ್ಟನೆ ಕೊಡೋಕೆ ಟ್ರೈ ಮಾಡ್ತೀವಿ. ಎಲ್ಲಕ್ಕೂ ಕೊಡಲೇಬೇಕು ಅಂತೇನಿಲ್ಲ ಎಂದರು.
ದೊಡ್ಡ ಬಜೆಟ್ ಸಿನಿಮಾಗಳಷ್ಟೇ ಅಲ್ಲ.. ಸಣ್ಣ ಬಜೆಟ್ ಚಿತ್ರಗಳನ್ನ ಮಾಡಿದಾಗ ಅವುಗಳ ಬ್ಯುಸಿನೆಸ್‌ಗೆ ಹೇಗೆ ಹೊಡೆತ ಬೀಳುತ್ತೆ..? ಓಟಿಟಿಗಳು ಹೇಗೆ ತಮ್ಮನ್ನ ಕಾಣುತ್ವೆ ಅನ್ನೋದ್ರ ಬಗ್ಗೆ ಪ್ರಗತಿ ರಿಷಬ್ ಶೆಟ್ಟಿ ಮಾತನಾಡಿದ್ರು. ರಿಷಬ್ ಕಾಂತಾರ ಮಾಡಿದ್ರೆ ಓಟಿಟಿಗೆ ಬೇಕು ಅದೇ ರಿಷಬ್ ಸಣ್ಣ ಬಜೆಟ್ ಚಿತ್ರ ಮಾಡಿದ್ರೆ ಅದು ಅವ್ರಿಗೆ ಬೇಕಾಗಲ್ಲ ಅಂತ ಓಪನ್ ಆಗಿಯೇ ಬೇಸರ ಹೊರ ಹಾಕಿದ್ರು ಶೆಟ್ರ ಬೆನ್ನ ಹಿಂದಿರೋ ಅಸಲಿ ಶಕ್ತಿ ಪ್ರಗತಿ. ಕರಾವಳಿಯ ಸಾಂಸ್ಕೃತಿಕ ರಾಯಭಾರಿ ಆಗಲಿರೋ ರಿಷಬ್ ಶೆಟ್ಟಿ, ಆ ಬಗೆಗಿನ ಸಿಎಂ ಜೊತೆಗಿನ ಮಾತುಕತೆ ಬಗ್ಗೆ ಕೂಡ ಹಿಂಟ್ ಬಿಟ್ಟುಕೊಟ್ಟರು.
ತಮ್ಮ ರೈಟರ್ಸ್ ಟೀಂ ಬಗ್ಗೆ ಮಾತನಾಡಿದ ರಿಷಬ್, ನಮ್ಮ ಆಸ್ಥಾನ ಕವಿಗಳನ್ನ ಬಿಟ್ಟು ಹೋಗಲ್ಲ ಎಂದರು. ಅಲ್ಲದೆ, ಎಷ್ಟೇ ಬ್ಯುಸಿ ಇದ್ದರೂ ಸಹ ಕಥೆಗಳನ್ನ ಬರೆಯುತ್ತಲೇ ಇರೋದಾಗಿ ಹೇಳಿದ್ರು. ತಮ್ಮ ಬಳಿ ಸುಮಾರು 37ಕ್ಕೂ ಅಧಿಕ ಕಥೆಗಳಿದ್ದ ಬಗ್ಗೆ ಬಹಿರಂಗಪಡಿಸಿದ್ರು.
ಬ್ಯುಸಿ ಶೆಡ್ಯೂಲ್ ನಡುವೆ ಹೊಸಬರ ಸಿನಿಮಾಗಳ ಟೀಸರ್, ಟ್ರೈಲರ್ ಬಗ್ಗೆ ಪೋಸ್ಟ್ ಹಾಕೋದ್ರ ಬಗ್ಗೆಯೂ ಚರ್ಚಿಸಲಾಯಿತು. ನಾವು ಹೊಸಬರಾಗಿ ಬಂದಾಗ ಸುದೀಪ್ ಸರ್ ಅಂತಹ ಸ್ಟಾರ್ಸ್ ಸಾಥ್ ನೀಡಿದ್ರು. ಅದೊಂಥರಾ ಗೀವ್ ಅಂಡ್ ಟೇಕ್ ಪಾಲಿಸಿ ಎಂದರು.
ನಾನು ಕನ್ನಡಿಗ.. ಎಲ್ಲಾ ಕನ್ನಡ ಸಿನಿಮಾಗಳೇ. ಜೈ ಹನುಮಾನ್, ಛತ್ರಪತಿ ಕನ್ನಡ ಸಿನಿಮಾಗಳೇ. ಚಿತ್ರಕ್ಕೆ ಭಾಷೆಯ ಹಂಗಿಲ್ಲ. ಅದೊಂದು ಕಲೆ ಅಷ್ಟೇ. ಎಲ್ಲೇ ಹೋದ್ರೂ ಏನೇ ಮಾಡ್ತಿದ್ರೂ, ಯಾರಾದ್ರೂ ಕಾಲು ತುಳಿದ್ರೆ ಮೊದಲು ಅಮ್ಮಾ ಅಂತೀವಿ. ತಾತ್ನಾಡು ಆ ತರಹ ಎಂದರು.
ಇಂಡಸ್ಟ್ರಿಗೆ ರಿಷಬ್ ಕಾಂತಾರ ಕೊಟ್ರು.. ಕಾಂತಾರ ಏನು ಕೊಡ್ತು?
ಜನರ ರಿಯಲ್ ಫೇಸಸ್ ತೋರಿಸಿಕೊಡ್ತು ಎಂದರೇಕೆ ರಿಷಬ್?
ಚಿತ್ರರಂಗ ಮತ್ತು ಚಿತ್ರಪ್ರೇಮಿಗಳಿಗೆ ಕಾಂತಾರ ಚಿತ್ರಗಳನ್ನ ನೀಡಿದ ಶೆಟ್ರಿಗೆ ಕಾಂತಾರ ಏನು ಕೊಡ್ತು ಅನ್ನೋ ಪ್ರಶ್ನೆಗೆ ಬಹಳ ಸ್ವಾರಸ್ಯಕರವಾಗಿ ಉತ್ತರಿಸಿದ್ರು ಶೆಟ್ರು. ಹೌದು.. ನನಗೆ ಕಾಂತಾರ ಲೈಫ್ ಕೊಡ್ತು. ಜನರ ರಿಯಲ್ ಫೇಸಸ್ ತೋರಿಸಿಕೊಡ್ತು ಎಂದ ರಿಷಬ್, ಸಾಕಷ್ಟು ಕಲಿಯೋದನ್ನ ತೋರಿಸಿಕೊಡ್ತು, ಸಿನಿಮಾ ಕಲಿಸಿತು, ಮನುಷ್ಯನನ್ನಾಗಿಸಿದೆ ಅಂತ ನಗು ಬೀರಿದ್ರು. ಅಲ್ಲದೆ, ಸಕ್ಸಸ್ ಒಂದಕ್ಕೆ ಮುಗಿಯಲ್ಲ. ಅದೊಂಥರಾ ನೆವರ್ ಎಂಡಿಂಗ್ ಪ್ರಾಸಸ್ ಎಂದರು ಕಾಂತಾರ ಸ್ಟಾರ್.
ಚಿತ್ರರಂಗದ ಆಗು ಹೋಗುಗಳ ಬಗ್ಗೆ ಓಪನ್ ಆಗಿ ಮಾತನಾಡಿದ ರಿಷಬ್ ಶೆಟ್ಟಿ, ಕೋಳಿ ಮೊದಲಾ ಮೊಟ್ಟೆ ಮೊದಲಾ ಅನ್ನುವಂತಾಗಿಬಿಟ್ಟಿದೆ ಎಂದರು. ಕ್ವಾಲಿಟಿ ಸಿನಿಮಾಗಳ ಬಗ್ಗೆ ಮಾತನಾಡಿದ್ರು.
ಜನ ಓಟಿಟಿ ಬಂದಿರೋ ಗುಂಗಲ್ಲೇ ಇದ್ದಾರೆ. ಓಟಿಟಿ ಬಂದು ಹೋಗಿ ಆಯ್ತು. ಓಟಿಟಿನೇ ಹಳೆಯದಾಗಿದೆ. ಆ ಎಕ್ಸೈಟ್‌ಮೆಂಟ್ ಹೋಗಿದೆ. ಥಿಯೇಟರ್‌ಗೆ ಏನು ಮಾಡಬೇಕು ಅಂತ ನೋಡಬೇಕು. ಅದೇ ಎಂಟರ್ಟೈನ್ಮೆಂಟ್‌ಗೆ ಅಪ್ಪ ಅಂದ್ರು ಕಾಂತಾರದ ಪಾಧರ್ ರಿಷಬ್.
ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನ ಹಿಟ್ ಕಾಂಬೋ ಎಲ್ಲಾ ಕೂಡಿ ಮಾಡಿದ ರೀಲ್ ಬಗ್ಗೆ ಮಾತನಾಡಿದ ರಿಷಬ್, ನಾನು ಅಲ್ಲಿ ಡೈರೆಕ್ಷನ್ ಮಾಡಲ್ಲ. ನಾನು ನಿರ್ದೇಶನ ಮಾಡೋದಾದ್ರೆ ಅದು ಕನ್ನಡ ಸಿನಿಮಾ ಮಾತ್ರ ಎಂದರು. ಅದು ಪ್ಯಾನ್ ಇಂಡಿಯಾ ಆಗಬಹುದು ಎಂದರು.
ನವಿನ್ ಪೋಲಿ ಶೆಟ್ಟಿ ಜೊತೆಗಿನ ರೀಲ್ ಜೊತೆ ಮಾತನಾಡಿ, ಸ್ಪಷ್ಟನೆ ನೀಡಿದ್ರು. ಅಲ್ಲದೆ ಹೊಸ ಅಧ್ಯಾಯದ ಬಗ್ಗೆಯೂ ಕ್ಲ್ಯಾರಿಟಿ ಕೊಟ್ಟರು. ಅಂದ್ರೆ ಕಾಂತಾರ ಚಾಪ್ಟರ್-2 ಬಗ್ಗೆ ಈಗಾಗ್ಲೇ ಕಥೆ ಬರೆಯುತ್ತಿರೋದಾಗಿ ಪರೋಕ್ಷವಾಗಿ ಹಿಂಟ್ ಬಿಟ್ಟುಕೊಟ್ಟರು.
ದೈವದ ಬಗ್ಗೆಯೂ ಮಾಹಿತಿ ಹಂಚಿಕೊಂಡ ರಿಷಬ್, ನಾನು ಹುಟ್ಟಿ ಬೆಳೆದದ್ದೇ ಅದರಲ್ಲಿ ಎಂದರು. ಕರಾವಳಿ ದೈವದ ಶಾಪ ಅನ್ನೋದೆಲ್ಲಾ ಟೂ ಮಚ್. ನಾ ಅದರ ಬಗ್ಗೆ ಮಾತಾಡಲ್ಲ. ನನ್ನ ಹಳೇ ಡೈಲಾಗ್ಸ್ ನೋ ಕಮೆಂಟ್ಸ್ ಅದಕ್ಕೆ ಉತ್ತರ.
ಜನರ ನಿರೀಕ್ಷೆ ಜಾಸ್ತಿ ಆಗಿರಬಹುದು. ಆದ್ರೆ ಮೊದಲಿನ ರೀತಿಯೇ ಕೆಲಸ ಮಾಡ್ತೇನೆ. ಹೊಸ ಸಿನಿಮಾಗೆ ಝೀರೋ ಇಂದ ಎಫರ್ಟ್ ಹಾಕಬೇಕು ಅಂತ ತಮ್ಮ ಅದೇ ಉತ್ಸಾಹ, ಹುಮ್ಮಸ್ಸಿನ ಬಗ್ಗೆ ಮಾನಾಡುತ್ತಾ ಮುಗುಳುನಗೆ ಬೀರುತ್ತಾ ಎಲ್ಲರ ಯೋಗಕ್ಷೇಮ ವಿಚಾರಿಸಿದ್ರು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ. ನಿಮ್ಮ ಕನಸುಗಳೆಲ್ಲಾ ನನಸಾಗಲಿ ಶೆಟ್ರೇ. ಜನುಮ ದಿನದ ಶುಭಾಶಯಗಳು.





