ಹಾಡುಗಳಿಂದಲೇ ಹವಾ ಕ್ರಿಯೇಟ್ ಮಾಡಿರೋ ಪಿಕ್ಚರ್ ಸಿನಿಮಾ ಮತ್ತೆ ಸೌಂಡ್ ಮಾಡ್ತಿದೆ. ನಿರ್ಮಾಪಕಿ ಶಿಲ್ಪಾ ಗಣೇಶ್ ಅವರ ಅದ್ದೂರಿ ಮೇಕಿಂಗ್, ಕಾಶ್ಮೀರದಲ್ಲಿ ಶೂಟಿಂಗ್ ಆದ ಕರಾವಳಿಯ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕನ್ನಡ-ತುಳು ಸ್ಟಾರ್ ನಟರುಗಳ ಮಹಾ ಸಂಗಮದಿಂದ ಈ ಕೌಟುಂಬಿಕ ಮನರಂಜನಾ ಚಿತ್ರ ಬಿಗ್‌ಸ್ಕ್ರೀನ್‌ಗೆ ಬರ್ತಿದ್ದು, ಪತ್ನಿ ಕನಸಿಗೆ ಪತಿ ಗೋಲ್ಡನ್ ಸ್ಟಾರ್ ಸಾಥ್ ಕೊಟ್ಟಿರೋದು ವಿಶೇಷ.
- ಕಾಶ್ಮೀರದಲ್ಲಿ ಚಿತ್ರೀಕರಣಗೊಂಡ ಮೊದಲ ತುಳು ಚಿತ್ರ
- ಹೆಂಡ್ತಿ ಧೈರ್ಯಕ್ಕೆ ಫಿದಾ ಆದ ಗೋಲ್ಡನ್ ಸ್ಟಾರ್ ಗಣಿ
- ಸಿಂಪಲ್ ಸುನಿ, ಅನೂಪ್ ಭಂಡಾರಿ ಲಿರಿಕ್ಸ್ ಕಮಾಲ್
- ಜುಲೈ 24ಕ್ಕೆ ಗೋಲ್ಡನ್ ಫ್ಯಾಮಿಲಿ ತೋರಿಸುತ್ತೆ ಪಿಕ್ಚರ್
ಸ್ಯಾಂಡಲ್‌ವುಡ್‌ನ ಗೋಲ್ಡನ್ ಕಪಲ್ ಅಂದ್ರೆನೆ ಅಲ್ಲಿ ಲವ್, ಸೆಂಟಿಮೆಂಟ್, ಮಾಸ್ ಕ್ರೇಜ್ ಗ್ಯಾರಂಟಿ. ಇದೀಗ ಗೋಲ್ಡನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಸಖತ್ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಮೂಡಿಬಂದಿರೋ ಪಿಚ್ಚರ್ ಸಿನಿಮಾ ಜುಲೈ 24 ಕ್ಕೆ ಥಿಯೇಟರ್ ಧೂಳೆಬ್ಬಿಸಲು ರೆಡಿಯಾಗಿದೆ. ಆದರೆ ಈ ಬಾರಿ ಅಸಲಿ ಹೈಲೈಟ್ ಯಾರು ಗೊತ್ತಾ? ಚಿತ್ರದ ನಿರ್ಮಾಪಕಿ ಶಿಲ್ಪಾ ಗಣೇಶ್. ಕರಾವಳಿಯ ಗೆಳೆಯರ ಚಾಲೆಂಜ್ ಸ್ವೀಕರಿಸಿ ಕನ್ನಡ ಹಾಗೂ ತುಳು ಎರಡೂ ಭಾಷೆಗಳಲ್ಲಿ ಈ ಚಿತ್ರವನ್ನು ಅದ್ದೂರಿಯಾಗಿ ತಂದಿದ್ದಾರೆ ನಿರ್ಮಾಪಕಿ ಶಿಲ್ಪಾ ಗಣೇಶ್. ಕಡಿಮೆ ಬಜೆಟ್‌ನಲ್ಲಿ ಆರಂಭವಾದರೂ ಎಲ್ಲಿಯೂ ರಾಜಿ ಮಾಡಿಕೊಳ್ಳದೆ, ಇತಿಹಾಸದಲ್ಲೇ ಮೊದಲ ಬಾರಿಗೆ ತುಳು ಚಿತ್ರದ ಹಾಡೊಂದನ್ನು ಹಿಮದ ನಗರಿ ಕಾಶ್ಮೀರದಲ್ಲಿ ಚಿತ್ರೀಕರಿಸಿ ಇದನ್ನು ಬಿಗ್ ಬಜೆಟ್ ಸಿನಿಮಾವಾಗಿಸಿದ್ದಾರೆ. ಅಷ್ಟೇ ಅಲ್ಲದೆ, ಚಿತ್ರದ ‘ಗೋಕುಲದ ರಾಧೆ’ ಹಾಡಿಗೆ ಖುದ್ದು ಶಿಲ್ಪಾ ಅವರೇ ಧ್ವನಿಯಾಗುವ ಮೂಲಕ ಸಿಂಗರ್ ಆಗಿ ಹೊಸ ಅವತಾರ ಎತ್ತಿದ್ದಾರೆ.
ಸಾಮಾನ್ಯವಾಗಿ ತಮ್ಮದೇ ಸಿನಿಮಾಗಳ ಪ್ರೆಸ್‌ಮೀಟ್‌ನಲ್ಲಿ ಅಬ್ಬರಿಸುತ್ತಿದ್ದ ಗೋಲ್ಡನ್ ಸ್ಟಾರ್ ಗಣೇಶ್, ಈ ಬಾರಿ ಹೆಂಡತಿಯ ಸಿನಿಮಾವನ್ನು ಪ್ರತಿನಿಧಿಸಲು ಗತ್ತಿನಿಂದ ಸುದ್ಧಿಗೋಷ್ಠಿಗೆ ಎಂಟ್ರಿ ಕೊಟ್ಟಿದ್ದರು. ಪತ್ನಿ ಶಿಲ್ಪಾ ಗಣೇಶ್ ಅವರ ಈ ಗಟ್ಸ್ ಮತ್ತು ನಿರ್ದೇಶಕ ಸಂದೀಪ್ ಬೆದ್ರ ಅವರ ಸಾರಥ್ಯವನ್ನು ನೋಡಿ ಗಣೇಶ್ ಮನಸಾರೆ ಮೆಚ್ಚಿಕೊಂಡಿದ್ದಾರೆ. “ನನಗೆ ಫ್ಯಾಮಿಲಿ ಆಡಿಯನ್ಸ್ ಅಂದ್ರೆ ಪ್ರಾಣ, ಈ ಸಿನಿಮಾದಲ್ಲೂ ನನ್ನ ಪ್ರೇಕ್ಷಕರಿಗೆ ಇಷ್ಟವಾಗುವ ಎಲ್ಲಾ ಕೌಟುಂಬಿಕ ಎಮೋಷನ್ಸ್, ಸೆಂಟಿಮೆಂಟ್ ಹಾಗೂ ಕಾಮಿಡಿಯ ಮಹಾಪೂರವೇ ಇದೆ” ಎಂದು ಹೆಮ್ಮೆಯಿಂದ ಬ್ಯಾಟ್ ಬೀಸಿದ್ದಾರೆ ಗೋಲ್ಡನ್ ಸ್ಟಾರ್.
ಈ ಚಿತ್ರದಲ್ಲಿ ಪ್ರೀತಿ-ಪ್ರೇಮದ ಜೊತೆಗೆ ಫುಲ್ ಆನ್ ಎಂಟರ್‌ಟೈನ್‌ಮೆಂಟ್ ಇದೆ. ಕರಾವಳಿಯ ಕಾಮಿಡಿ ಕಿಂಗ್ಸ್ ಆದ ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್ ಮತ್ತು ನವೀನ್ ಪಡೀಲ್ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡರೆ, ಯುವ ಜೋಡಿ ನಿತ್ಯಪ್ರಕಾಶ್ ಬಂಟ್ವಾಳ್ ಹಾಗೂ ಅಮೃತ ಸುದು ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಸ್ಯಾಮುಯೆಲ್ ಅಭಿ ಸಂಗೀತ, ಸಿಂಪಲ್ ಸುನಿ ಮತ್ತು ಅನೂಪ್ ಭಂಡಾರಿ ಅವರ ಸಾಹಿತ್ಯ ಹಾಗೂ ಸಂತೋಷ್ ರೈ ಪಾತಾಜೆ ಅವರ ಕ್ಯಾಮೆರಾ ಕೈಚಳಕವಿರುವ ಈ ಕೌಟುಂಬಿಕ ಚಿತ್ರವನ್ನು ಜುಲೈ 24 ರಂದು ಮಿಸ್ ಮಾಡ್ದೆ ಫ್ಯಾಮಿಲಿ ಸಮೇತ ಟಿಕೆಟ್ ಬುಕ್ ಮಾಡಿಬಿಡಿ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





