ಒನ್ಸ್ ಎ ಸ್ಟಾರ್.. ಆಲ್ವೇಸ್ ಎ ಸ್ಟಾರ್. ರಚಿತಾ ರಾಮ್‌ಗೆ ಅಷ್ಟಿಲ್ಲದೆ ಲೇಡಿ ಸೂಪರ್ ಸ್ಟಾರ್ ಬಿರುದು ಸಿಕ್ಕಿಲ್ಲ. ಇತ್ತೀಚೆಗೆ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಕೂಲಿಯಲ್ಲಿ ಮಿಂಚು ಹರಿಸಿದ್ದ ರಚ್ಚು, ಇದೀಗ ಮೆಗಾಸ್ಟಾರ್ ಚಿರಂಜೀವಿ 158ನೇ ಚಿತ್ರದಲ್ಲಿ ಕಮಾಲ್ ಮಾಡ್ತಿದ್ದಾರೆ. ಕನ್ನಡ ಸೇರಿದಂತೆ ಪರಭಾಷೆಗಳಲ್ಲೂ ರಾಕಿಂಗ್ ಮಾಡ್ತಿರೋ ರಚಿತಾ ಕುರಿತ ಖಚಿತ ಸುದ್ದಿ ಇಲ್ಲಿದೆ ನೋಡಿ.
- ರಜನಿ ಆಯ್ತು.. ಈಗ ಮೆಗಾಸ್ಟಾರ್ ಜೊತೆ ರಚಿತಾ ರಾಕಿಂಗ್
- ಪೊಲ್ಲಾಚಿಯಲ್ಲಿ ಚಿರಂಜೀವಿ ಜೊತೆ ರಚ್ಚು 3 ದಿನ ಶೂಟಿಂಗ್
- ಅಂದು ಅಳಿಯನ ಜೊತೆ.. ಇಂದು ಮಾವನ ಜೊತೆ ಕನ್ನಡತಿ
- KVN ಪ್ರೊಡಕ್ಷನ್ಸ್‌ನಲ್ಲಿ ಮೆಗಾ-158ಗೆ ಬಾಬಿ ಆ್ಯಕ್ಷನ್ ಕಟ್..!
ರಚಿತಾ ರಾಮ್.. ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ಅಂತಲೇ ಫೇಮಸ್ ಆಗಿರೋ ರಚ್ಚು, ನಾಯಕನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ದಿನದಿಂದ ಹಿಂದಿರುಗಿ ನೋಡಿದ ನಿದರ್ಶನವೇ ಇಲ್ಲ. ಚಿತ್ರರಂಗದಲ್ಲಿ ಯಶಸ್ವೀ 14 ವರ್ಷದ ಜರ್ನಿ ಮುಗಿಸಿ, 15ನೇ ವಸಂತಕ್ಕೆ ಕಾಲಿಟ್ಟಿರೋ ಈ ಚೆಲುವೆ, ಒಂಥರಾ ನಿರ್ಮಾಪಕರ ಪಾಲಿನ ಲಕ್ಕಿ ಚಾರ್ಮ್. ಕನ್ನಡದ ಜೊತೆ ಪರಭಾಷೆಗಳಲ್ಲೂ ಮಿಂಚುತ್ತಿರೋ ರಚಿತಾ, ಇತ್ತೀಚೆಗೆ ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ಕೂಲಿಯಲ್ಲಿ ಕಮಾಲ್ ಮಾಡಿದ್ರು.
ನೆಗೆಟೀವ್ ಶೇಡ್‌ನಲ್ಲಿ ಕೂಡ ಪರ್ಫಾಮ್ ಮಾಡಿ, ಭೇಷ್ ಅನಿಸಿಕೊಂಡಿದ್ದ ರಚ್ಚು, ಇದೀಗ ಟಾಲಿವುಡ್‌ನಲ್ಲಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅದೇ ಮೆಗಾ-158. ಹೌದು.. ಚಿರಂಜೀವಿ 158ನೇ ಸಿನಿಮಾದಲ್ಲಿ ನಮ್ಮ ಲೇಡಿ ಸೂಪರ್ ಸ್ಟಾರ್ ರಚಿತಾ ಬಣ್ಣ ಹಚ್ಚಿದ್ದಾರೆ. ಬಾಬಿ ಆ್ಯಕ್ಷನ್ ಕಟ್ ಹೇಳ್ತಿರೋ ಈ ಸಿನಿಮಾಗೆ ನಮ್ಮ ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹಾಕಿದ್ದು, ಈಗಾಗ್ಲೇ ತಮಿಳುನಾಡಿನ ಕೊಯಂಬತ್ತೂರಿನ ಬಳಿ ಇರೋ ಪೊಲ್ಲಾಚಿಯಲ್ಲಿ 3 ದಿನದ ಶೂಟಿಂಗ್ ಮುಗಿಸಿ ಬಂದಿದ್ದಾರೆ ರಚಿತಾ ರಾಮ್.
ಮಳೆಯಿಂದಾಗಿ ಶೂಟಿಂಗ್ ಪೋಸ್ಟ್‌ಪೋನ್ ಆಗಿದ್ದು, ರಚ್ಚು ಜೊತೆ ನಮ್ಮ ಕನ್ನಡತಿ ಪ್ರಿಯಾಮಣಿ ಸಹ ನಟಿಸ್ತಿರೋದು ವಿಶೇಷ. ಅಂದಹಾಗೆ ಚಿರು ಜೊತೆ ರಚಿತಾಗೆ ಲವ್ ಟ್ರ್ಯಾಕ್ ಇಲ್ಲವಂತೆ. ಹಾಗಾದ್ರೆ ಇಲ್ಲಿ ಇನ್ನೆಂತಹ ಎಕ್ಸ್‌ಪೆರಿಮೆಂಟರ್ ರೋಲ್ ಮಾಡ್ತಾರೆ ಅನ್ನೋದು ಮಾತ್ರ ಸಸ್ಪೆನ್ಸ್. ಈ ಹಿಂದೆ ಮೆಗಾಸ್ಟಾರ್ ಚಿರಂಜೀವಿ ಅವ್ರ ಅಳಿಯ ನಟನೆಯ ಸೂಪರ್ ಮಚ್ಚಿ ಚಿತ್ರದಲ್ಲಿ ನಾಯಕನಟಿಯಾಗಿ ಬಣ್ಣ ಹಚ್ಚಿದ್ದ ರಚಿತಾ, ಇದೀಗ ಏಕ್ದಮ್ ಚಿರು ಜೊತೆಗೇ ಸ್ಕ್ರೀನ್ ಶೇರ್ ಮಾಡ್ತಿರೋದು ಗ್ರೇಟ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





