• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, July 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಕನ್ನಡತಿ ಮಗ ಜೂನಿಯರ್ ಎನ್‌ಟಿಆರ್‌ ಬರ್ತ್ ಡೇಗೆ ಕನ್ನಡಿಗರಿಂದ ಬಿಗ್ ಗಿಫ್ಟ್..!

ಊಹೆಗೆ ನಿಲುಕದಷ್ಟು ಭಯಂಕರ NTR ಡ್ರ್ಯಾಗನ್ ವರ್ಲ್ಡ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 20, 2026 - 4:04 pm
in Flash News, ಸಿನಿಮಾ
0 0
0
Untitled design 2026 05 20T160252.012

ಸುನಾಮಿ ಬರೋಕೂ ಮುನ್ನ ಕಡಲು ಬಹಳ ಪ್ರಶಾಂತವಾಗಿರುತ್ತಂತೆ. ಅದೇ ರೀತಿ ಇಷ್ಟು ದಿನ ಬಹಳ ಸೈಲೆಂಟ್ ಆಗಿದ್ದ ಮಾನ್‌ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್, ಇದೀಗ ಮೋಸ್ಟ್ ವಯಲೆಂಟ್ ಡ್ರ್ಯಾಗನ್ ಟೀಸರ್‌‌ನಿಂದ ಎಂಟ್ರಿ ಕೊಟ್ಟಿದ್ದಾರೆ. ಕನ್ನಡತಿಯ ಮಗ ಜೂನಿಯರ್ ಎನ್‌ಟಿಆರ್‌ಗೆ ಕನ್ನಡಿಗರಿಂದ ನಿರೀಕ್ಷೆಗೂ ಮೀರಿದ ಗಿಫ್ಟ್ ಸಿಕ್ಕಿದೆ. ಭಯಂಕರ ಹಾಗೂ ಭೀಭತ್ಸವಾಗಿರೋ ಡ್ರ್ಯಾಗನ್ ಪ್ರಪಂಚ ಹೇಗಿದೆ..? ಅಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋದ್ರ ಡಿಟೇಲ್ಸ್‌ ಇಲ್ಲಿದೆ ನೋಡಿ…

  • ಕನ್ನಡತಿ ಮಗನ ಬರ್ತ್ ಡೇಗೆ ಕನ್ನಡಿಗರಿಂದ ಬಿಗ್ ಗಿಫ್ಟ್..!
  • ಊಹೆಗೆ ನಿಲುಕದಷ್ಟು ಭಯಂಕರ NTR ಡ್ರ್ಯಾಗನ್ ವರ್ಲ್ಡ್
  • ದೇವರು ವಿರಮಿಸುತ್ತಿದ್ದಾಗ ಹುಟ್ಟಿದ ಡೆವಿಲ್ ಈ ಲೂಗರ್
  • ಕತ್ತಲಿಂದ ಬೆಳಕಿನೆಡೆಗೆ ನೀಲ್.. ಬದಲಾಯ್ತು ಫಾರ್ಮುಲಾ

ಇದು ಬಹುನಿರೀಕ್ಷಿತ ಡ್ರ್ಯಾಗನ್ ಸಿನಿಮಾದ ಟೀಸರ್ ಝಲಕ್. 43ನೇ ವಸಂತಕ್ಕೆ ಕಾಲಿಟ್ಟಿರೋ ಜೂನಿಯರ್ ಎನ್‌ಟಿಆರ್ ಬರ್ತ್ ಡೇಗೆ ಚಿತ್ರತಂಡ ನೀಡಿರೋ ಭರ್ಜರಿ ಗಿಫ್ಟ್ ಕೂಡ ಹೌದು. ಅಂದಹಾಗೆ ಕನ್ನಡತಿಯ ಮಗನಿಗೆ ನಮ್ಮ ಕನ್ನಡಿಗರಿಂದ ತಯಾರಾಗ್ತಿರೋ ಹೈ ವೋಲ್ಟೇಜ್ ಆ್ಯಕ್ಷನ್ ಎಂಟರ್‌ಟೈನರ್. ಯಾಕಂದ್ರೆ ಈ ಚಿತ್ರದ ಡೈರೆಕ್ಟರ್ ನಮ್ಮ ಮಾನ್‌ಸ್ಟರ್ ಪ್ರಶಾಂತ್ ನೀಲ್. ಕಾಂತಾರ ಕ್ವೀನ್ ರುಕ್ಮಿಣಿ ವಸಂತ್ ಇದಕ್ಕೆ ನಾಯಕನಟಿ. ಅಲ್ಲದೆ, ಸಿನಿಮಾಟೋಗ್ರಾಫರ್ ಕನ್ನಡಿಗ ಭುವನ್ ಕುಮಾರ್. ಸಂಗೀತ ಸಂಯೋಜಕ ರವಿ ಬಸ್ರೂರು. ಅಷ್ಟೇ ಅಲ್ಲ ಸ್ಟಂಟ್ ಮಾಸ್ಟರ್ ಕೂಡ ನಮ್ಮ ಕನ್ನಡಿಗ ಚೇತನ್ ಡಿಸೋಜಾ.

RelatedPosts

ಇನ್ಸ್ಟಾಗ್ರಾಂ ಲವ್..ಮದ್ವೆ ನಂತ್ರ ಮಗು ಜೊತೆ ಬೀದಿಗೆ ಬಿದ್ದ ಮಹಿಳೆ: ನ್ಯಾಯಕ್ಕಾಗಿ ಹೋರಾಟ

ಶಿಕ್ಷಕರ ಕಿರುಕುಳ ಆರೋಪ: ಆತ್ಮಹ*ತ್ಯೆಗೆ ಯತ್ನಿಸಿದ 7ನೇ ತರಗತಿ ವಿದ್ಯಾರ್ಥಿ

ಇಂದು ಪೆಟ್ರೋಲ್-ಡೀಸೆಲ್ ದರ ಇಳಿಕೆ ಆಗಿದೆಯಾ? ಪ್ರಮುಖ ನಗರಗಳ ತೈಲ ಬೆಲೆ ವಿವರ ಇಲ್ಲಿದೆ

ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಅಬ್ಬರ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ADVERTISEMENT
ADVERTISEMENT

ಡ್ರ್ಯಾಗನ್ ಟೀಸರ್ ಸಿಕ್ಕಾಪಟ್ಟೆ ಭಯಾನಕ ಹಾಗೂ ಭೀಭತ್ಸವಾಗಿದೆ. ನೀಲ್ ಎಂದಿನಂತೆ ಈ ಬಾರಿಯೂ ಕ್ರೌರ್ಯದ ಸುತ್ತಲೂ ಕೋಟೆ ಕಟ್ಟುವ ಕಾರ್ಯ ಮಾಡಿದ್ದಾರೆ. ದೇವರು ವಿಶ್ರಾಂತಿ ಮಾಡ್ತಿದ್ದಾಗ ಒಬ್ಬ ಡೆವಿಲ್ ಹುಟ್ಟಿಕೊಳ್ತಾನೆ. ಅವನು ಒಂಥರಾ ಲೂಗರ್. ಅಂದ್ರೆ ಜರ್ಮನಿಯ 9mm ಸೆಮಿ ಆಟೋಮ್ಯಾಟಿಕ್ ಪಿಸ್ತೂಲ್. ಅಂಥದ್ದೊಂದು ಕ್ಯಾರೆಕ್ಟರ್‌‌‌ಗೆ ಜೀವ ತುಂಬಿದ್ದಾರೆ ಜೂನಿಯರ್ ಎನ್‌ಟಿಆರ್. ಅಂದಹಾಗೆ ಈ ಬರ್ತ್ ಡೇ ಟೀಸರ್‌‌ನಿಂದ ಡ್ರ್ಯಾಗನ್ ವರ್ಲ್ಡ್ ಅನಾವರಣಗೊಂಡಿದೆ. ಜೊತೆಗೆ ಅದರೊಳಗೆ ಯಾರೆಲ್ಲಾ ಇದ್ದಾರೆ ಅನ್ನೋದು ಕೂಡ ರಿವೀಲ್ ಆಗಿದೆ.

ಸಿನಿಮಾದಲ್ಲಿ ಸಾಕಷ್ಟು ಪಾತ್ರಗಳು ಬಯಲಾಗಿವೆ. ಅವರೆಲ್ಲಾ ವಿಲನ್‌ಗಳೇ ಅನ್ನೋದು ಇಂಟರೆಸ್ಟಿಂಗ್. ಅದನ್ನ ಇಂಟ್ರಡ್ಯೂಸ್ ಮಾಡೋದು ಕೂಡ ನಮ್ಮ ಕನ್ನಡತಿ ರುಕ್ಮಿಣಿ ವಸಂತ್ ಅನ್ನೋದು ಮತ್ತೊಂದು ವಿಶೇಷ.

  • ಅಂದು ಚಿನ್ನ.. ಇಂದು ಓಪಿಯಮ್.. ಗ್ಯಾಂಗ್‌ಸ್ಟರ್ ವಾರ್
  • ಪೋಸ್ಟ್ ಇಂಡಿಪೆಂಡೆನ್ಸ್.. ಆಫ್ಘಾನ್ ಟ್ರೇಡಿಂಗ್ ಕಂಪನಿ ಕಥೆ

ಬ್ರಿಟಿಷರು ಇಂಡಿಯಾಗೆ ಹತ್ತಿ, ಸ್ಟೀಲ್ ಹಾಗೂ ಸಾಂಬಾರು ಪದಾರ್ಥಗಳಿಗಾಗಿ ಬರ್ತಾರೆ. ಆದ್ರೆ 250 ವರ್ಷಗಳ ಕಾಲ ಅವರು ಇಲ್ಲೇ ಇದ್ದುಬಿಡೋಕೆ ಕಾರಣ ಒಂದೇ ಒಂದು ಗಿಡ ಅಂದ್ರೆ ನೀವು ನಂಬಲೇಬೇಕು. ಅದು ಗಸಗಸೆ ಅಫೀಮು. ಅದನ್ನ ಹೆರಾಯಿನ್‌‌ನ ತಯಾರಿಕೆಗೆ ಬಳಸಲಾಗುತ್ತೆ. ಪ್ರಪಂಚದಲ್ಲೇ ಅದನ್ನ ಅತ್ಯಧಿಕವಾಗಿ ಬೆಳೆಯುವ ಪ್ರಾಂತ್ಯಗಳು ಎರಡೇ ಎರಡು. ಒಂದು ಆಘ್ಘಾನಿಸ್ತಾನ. ಮತ್ತೊಂದು ಗೋಲ್ಡನ್ ಟ್ರಯಾಂಗಲ್. ಬ್ರಿಟಿಷರು ಸುಮಾರು 95% ಅಷ್ಟು ಓಪಿಯಮ್ ವ್ಯಾಪರವನ್ನ ಅವರ ಅಧೀನದಲ್ಲೇ ಉಳಿಸಿಕೊಂಡು ಕಂಟ್ರೋಲ್ ಮಾಡ್ತಿರ್ತಾರೆ.

ಆದ್ರೆ 1947ನಲ್ಲಿ ಭಾರತಕ್ಕೆ ಸ್ವಾತಂತ್ರ ಸಿಕ್ಕಾಗ ಬ್ರಿಟಿಷರು ಇಂಡಿಯಾನ ಬಿಟ್ಟು ತೊಗಲುತ್ತಾರೆ. ಅವರು ಇಲ್ಲಿಂದ ಕಾಲ್ಕಿತ್ತಾಗ ಆ ಅತಿಹೆಚ್ಚು ಲಾಭದಾಯಕ ಉದ್ಯಮ ಕೂಡ ಬಿಟ್ಟುಕೊಟ್ಟು ಹೋಗ್ತಾರೆ. ಆ ವ್ಯಾಪಾರ ಇಬ್ಬಾಗವಾಗಿ ಆಫ್ಘಾನ್ ಟ್ರೇಡಿಂಗ್ ಕಂಪನಿ ಹಾಗೂ ಗೋಲ್ಡನ್ ಟ್ರೇಡಿಂಗ್ ಕಂಪನಿ ಕೈ ಸೇರುತ್ತೆ. ಆಗಲೇ ಓಪಿಯಮ್ ವಾರ್ ಶುರುವಾಗುತ್ತೆ. ಆಗಲೇ ಸಾಕಷ್ಟು ಮಂದಿ ವಿಲನ್ಸ್ ಕೂಡ ಹುಟ್ಟಿಕೊಳ್ತಾರೆ.

ಆಘ್ಘಾನ್ ಟ್ರೇಡಿಂಗ್ ಕಂಪನಿಯ ವಿಲನ್‌ಗಳನ್ನ ಕಥಾ ನಾಯಕಿ ರುಕ್ಮಿಣಿ ವಸಂತ್ ಇಂಟ್ರಡ್ಯೂಸ್ ಮಾಡಿಸ್ತಾರೆ. 1967ರಲ್ಲಿ ಆ ಆಫ್ಘಾನ್ ಟ್ರೇಡಿಂಗ್ ಕಂಪನಿಗೆ ಬಾಸ್ ಆಗಿ ದಾದಾ ಸರ್ಕಾರ್ ಬರ್ತಾರೆ. ಆ ನಂತ್ರ ಆತನ ಮಗ ಸುಜಯ್ ಸರ್ಕಾರ್. ಜೊತೆಗೆ ಬಾಬಿ ಸರ್ಕಾರ್, ಅಕೌಂಟೆಂಟ್ ರಾವ್, ರಷ್ಯಾ ಡಿಸ್ಟ್ರಿಬ್ಯೂಟರ್ ವಿಕ್ಟರ್, ಲಾರ್ಡ್ ಆಫ್ ಸೊಮಾಲಿಯಾ ಜನರಲ್ ಡುರಾನ್, ಆಫ್ರಿಕಾ-ಯೂರೋಪ್ ಡಿಸ್ಟ್ರಿಬ್ಯೂಟರ್ ಆಗಿ ಬಿಲೆ ಕ್ಸೆರ್ಸಿ, ಅಲ್ಲದೆ ಒಬ್ಬ ಟ್ರೈನರ್, ಅವನಡಿ ಒಂದಷ್ಟು ಟ್ರೈನರ್ಸ್.. ಹೀಗೆ ಡ್ರ್ಯಾಗನ್ ಪ್ರಪಂಚದಲ್ಲಿ ಸಾಷಕ್ಟು ಪಾತ್ರಗಳು ತಲೆ ಎತ್ತುತ್ತವೆ.

  • ಆಫ್ಘಾನ್ ಟ್ರೇಡಿಂಗ್ ಕಂಪನಿ ಹಂತಕ ಲೂಗರ್ ತಾರಕ್
  • ನಾರ್ಕೋಟಿಕ್ಸ್ ಬ್ಯೂರೋ ಚೀಫ್ ಆಗಿ ಅನಿಲ್ ಕಪೂರ್

7ನೇ ದಿನ ದೇವರು ವಿರಮಿಸುತ್ತಿದ್ದಾಗ ಡೆವಿಲ್ ಒಂದು ಹುಟ್ಟಿಕೊಳ್ಳುತ್ತೆ. ಅವನೇ ಆಫ್ಘಾನ್ ಟ್ರೇಡಿಂಗ್ ಕಂಪನಿಯ ಬಹುದೊಡ್ಡ ಹಂತಕ ಲೂಗರ್. ದೇವರು ಆತನಿಗೊಂದು ದೊಡ್ಡ ವರ ನೀಡಿದ್ದಾನೆ. ಟ್ರಿಗರ್ ಒತ್ತಿದ ಕೂಡಲೇ ಮರೆಯಲ್ಲ. ಆತ ನಿದ್ದೆ ಮಾಡ್ತಿದ್ದಾಗ ಆತನ ಕನಸಲ್ಲಿ ಆತ ಕೊಂದವರ ಮುಖಗಳು ಬರಲ್ಲವಂತೆ. ಉಳಿದ ಶತ್ರುಗಳ ಮುಖಗಳೇ ಕಾಣುತ್ತವೆ. ಅಪ್ಪಿ ತಪ್ಪಿ ಕೂಡ ಆ ಲೂಗರ್ ಕನಸಲ್ಲಿ ಬರಬೇಡಿ.

ಆಫ್ಘಾನಿಸ್ತಾನದ ಲಾಜಿಸ್ಟಿಕ್ಸ್ ಹೆಡ್ ಜಲೀಲ್ ರೆಹಮಾನ್ ಮಾತಾಡುತ್ತಾ ವಿಲನ್‌ಗಳ ಹಾವಳಿ ಜಾಸ್ತಿ ಆದಾಗ, ಅವರನ್ನ ಮಟ್ಟ ಹಾಕೋಕೆ ಒಬ್ಬ ಹೀರೋ ಬೇಕಾಗುತ್ತೆ ಅಂತಾರೆ. ಆತ ಬೇರಾರೂ ಅಲ್ಲ, ಇಂಡಿಯಾದ ನಾರ್ಕೋಟಿಕ್ಸ್ ಬ್ಯೂರೋ ಚೀಫ್ ರಘುವೀರ್ ರಾಥೋಡ್. ಅದನ್ನ ಅನಿಲ್ ಕಪೂರ್ ನಿಭಾಯಿಸಿದ್ದು, ಸಖತ್ ವೈಬ್ರೆಂಟ್ ಆಗಿ ಕಾಣಸಿಗುತ್ತಾರೆ.

ಅಂದಹಾಗೆ ಗೋಲ್ಡನ್ ಟ್ರೇಡಿಂಗ್ ಕಂಪನಿ ಕೋಲ್ಕತ್ತಾದಿಂದ ಆಪರೇಟ್ ಆದ್ರೆ, ಆಫ್ಘಾನ್ ಟ್ರೇಡಿಂಗ್ ಕಂಪನಿ ಆಫ್ಘಾನಿಸ್ತಾನ ಹಾಗೂ ಮುಂಬೈ ಎರಡು ಕಡೆಯಿಂದ ಆಪರೇಟ್ ಆಗುತ್ತೆ. ಒಟ್ಟಾರೆ ಗ್ಲೋಬಲ್ ಆಡಿಯೆನ್ಸ್‌‌ನ ಟಾರ್ಗೆಟ್ ಮಾಡಿಕೊಂಡು, ಬಹುಭಾಷಾ ಕಲಾವಿದರನ್ನ ಇಟ್ಕೊಂಡು ನೀಲ್ ಈ ಬಾರಿ ಡ್ರ್ಯಾಗನ್ ಪ್ರಪಂಚ ಕಟ್ಟಿದ್ದಾರೆ. ಕೆಜಿಎಫ್‌‌ನಲ್ಲಿ ಗೋಲ್ಡ್.. ಈ ಬಾರಿ ಓಪಿಯಮ್. ಅಲ್ಲೂ ಗ್ಯಾಂಗ್‌ಸ್ಟರ್ ವಾರ್. ಇಲ್ಲೂ ಗ್ಯಾಂಗ್‌ಸ್ಟರ್‌‌ ವಾರ್. ಆದ್ರೆ ಅವ್ರ ಫಾರ್ಮುಲಾ ಕೊಂಚ ಬದಲಾಗಿದ್ದು, ಈ ಹಿಂದಿನ ಎಲ್ಲಾ ಸಿನಿಮಾಗಳಿಗೆ ಹೋಲಿಸಿದ್ರೆ ಸ್ಕ್ರೀನ್‌ ಮೇಲೆ ಹರಿಯುವ ಬೆಳಕಿನ ಪ್ರಮಾಣವನ್ನ ಕೊಂಚ ಹೆಚ್ಚಿಸಿದ್ದಾರೆ. ಕತ್ತಲಿಂದ ಬೆಳಕಿನೆಡೆಗೆ ನೀಲ್ ಪ್ರಯಾಣ ಶುರು ಮಾಡಿರೋದ್ರ ಹಿಂಟ್ ಸಿಕ್ಕಿದೆ.

  • 2027ರ ಜೂನ್ 11ಕ್ಕೆ ಡ್ರ್ಯಾಗನ್ ಮೊದಲ ಭಾಗ ತೆರೆಗೆ
  • ಐದು ಮಂದಿ ಕನ್ನಡಿಗರಿರೋ NTR ಡ್ರ್ಯಾಗನ್ ಪ್ರಾಜೆಕ್ಟ್
  • ಚೇತನ್ ಡಿಸೋಜಾ ಸ್ಟಂಟ್ಸ್‌‌ಗೆ ಯಂಗ್ ಟೈಗರ್ ಫಿದಾ

ಯೆಸ್.. ಡ್ರ್ಯಾಗನ್ ಸಿನಿಮಾಗೆ ನಮ್ಮ ಕನ್ನಡಿಗ ಚೇತನ್ ಡಿಸೋಜಾ ಸಾಹಸ ದೃಶ್ಯಗಳನ್ನ ಕಂಪೋಸ್ ಮಾಡಿದ್ದಾರೆ. ಪೀಟರ್ ಹೇನ್‌‌‌‌ ನಿರ್ದೇಶನದಲ್ಲಿ ಒಂದೇ ಒಂದು ಫೈಟ್ ಬಿಟ್ರೆ, ಉಳಿದಂತೆ ಡ್ರ್ಯಾಗನ್ ಚಿತ್ರದ ಎಲ್ಲಾ ಸ್ಟಂಟ್ಸ್‌‌ಗೆ ಚೇತನ್ ಅವರೇ ಸಾರಥ್ಯ ವಹಿಸಿರೋದು ವಿಶೇಷ. ಜೋರ್ಡಾನ್‌‌ನಲ್ಲಿ ಹೈ ವೋಲ್ಟೇಕ್ ಆ್ಯಕ್ಷನ್ ಬ್ಲಾಕ್ಸ್ ಚಿತ್ರಿಸಿದ್ದು, ಕ್ಲೈಮ್ಯಾಕ್ಸ್‌ ಈಗಾಗ್ಲೇ ಚಿತ್ರೀಕರಣ ಮುಗಿದಿದೆಯಂತೆ. ಸದ್ಯದಲ್ಲೇ ಇಂಟರ್‌‌ವಲ್ ಬ್ಲಾಕ್ ಫೈಟ್ ಶೂಟಿಂಗ್ ಶುಭಾರಂಭ ಆಗಲಿದ್ದು, ಹೀರೋ ಇಂಟ್ರೋ ಫೈಟ್, ಬ್ಲಾಸ್ಟ್‌‌ಗಳು ಸೇರಿದಂತೆ ಎಲ್ಲಾ ಆ್ಯಕ್ಷನ್ ದೃಶ್ಯಗಳು ಮುಗಿದಿವೆಯಂತೆ. ಅವುಗಳ ಹಿಂದಿನ ಮಾಸ್ಟರ್‌ಮೈಂಡ್ ರಜನಿಕಾಂತ್ ಜೈಲರ್‌‌-2ಗೂ ಸಾಹಸ ನಿರ್ದೇಶನ ಮಾಡಿರೋ ಚೇತನ್ ಅನ್ನೋದು ಇಂಪ್ರೆಸ್ಸೀವ್.

ಎರಡು ಭಾಗಗಳಲ್ಲಿ ಡ್ರ್ಯಾಗನ್ ಸಿನಿಮಾ ಬರ್ತಿದ್ದು, ಮೊದಲ ಭಾಗ 2027ರ ಜೂನ್ 11ಕ್ಕೆ ಅನ್ನೋದು ಟೀಸರ್ ಕೊನೆಯಲ್ಲಿ ಬಹಿರಂಗವಾಗಿದೆ. ಅಂದಹಾಗೆ ನೀಲ್ ಎರಡನೇ ಭಾಗ ಕೂಡ ಒಂದೇ ಬಾರಿ ಚಿತ್ರೀಕರಿಸಿ, ಧುರಂಧರ್ ಮಾದರಿಯಲ್ಲಿ ಬ್ಯಾಕ್ ಟು ಬ್ಯಾಕ್ ರಿಲೀಸ್‌ಗೆ ಯೋಜನೆ ರೂಪಿಸಿರೋದು ವಿಶೇಷ. ಒಟ್ಟಾರೆ ನಮ್ಮ ಕನ್ನಡತಿ ಅಂದ್ರೆ ಕುಂದಾಪುರದ ಹೆಣ್ಣು ಮಗಳ ಮಗನಾಗಿರೋ ಜೂನಿಯರ್ ಎನ್‌ಟಿಆರ್‌‌‌‌‌ ಜೊತೆ ಈ ಚಿತ್ರದಲ್ಲಿ ಬಹುತೇಕ ನಮ್ಮ ಕನ್ನಡಿಗರೇ ಕೆಲಸ ಮಾಡ್ತಿರೋದು ಖುಷಿಯ ವಿಚಾರ. ಅದೇ ಕಾರಣಕ್ಕೆ ಕನ್ನಡದ ಟೀಸರ್‌ಗೆ ಸ್ವತಃ ತಾರಕ್ ಅವರೇ ತಮ್ಮ ಪಾತ್ರಕ್ಕೆ ಕನ್ನಡದಲ್ಲಿ ವಾಯ್ಸ್ ಡಬ್ ಮಾಡಿ, ಕನ್ನಡಿಗರ ದಿಲ್ ದೋಚಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಷ್ಯ (11)

ಇನ್ಸ್ಟಾಗ್ರಾಂ ಲವ್..ಮದ್ವೆ ನಂತ್ರ ಮಗು ಜೊತೆ ಬೀದಿಗೆ ಬಿದ್ದ ಮಹಿಳೆ: ನ್ಯಾಯಕ್ಕಾಗಿ ಹೋರಾಟ

by ಶಾಲಿನಿ ಕೆ. ಡಿ
July 15, 2026 - 11:44 am
0

Untitled design 2026 07 15T111352.717

ಫುಟ್‌ಪಾತ್‌ನಲ್ಲಿ ಅಂಗಡಿ ಇಟ್ಟರೆ ಭಾರಿ ದಂಡ: ಸಚಿವ ಕೃಷ್ಣ ಬೈರೇಗೌಡ

by ಶಾಲಿನಿ ಕೆ. ಡಿ
July 15, 2026 - 11:20 am
0

ಷ್ಯ (9)

ಶಿಕ್ಷಕರ ಕಿರುಕುಳ ಆರೋಪ: ಆತ್ಮಹ*ತ್ಯೆಗೆ ಯತ್ನಿಸಿದ 7ನೇ ತರಗತಿ ವಿದ್ಯಾರ್ಥಿ

by ಶಾಲಿನಿ ಕೆ. ಡಿ
July 15, 2026 - 11:08 am
0

ಷ್ಯ (8)

ಇಂದು ಪೆಟ್ರೋಲ್-ಡೀಸೆಲ್ ದರ ಇಳಿಕೆ ಆಗಿದೆಯಾ? ಪ್ರಮುಖ ನಗರಗಳ ತೈಲ ಬೆಲೆ ವಿವರ ಇಲ್ಲಿದೆ

by ಶಾಲಿನಿ ಕೆ. ಡಿ
July 15, 2026 - 10:44 am
0

ಸಂಬಂಧಿಸಿದ ಪೋಸ್ಟ್‌ಗಳು

  • ಷ್ಯ (11)
    ಇನ್ಸ್ಟಾಗ್ರಾಂ ಲವ್..ಮದ್ವೆ ನಂತ್ರ ಮಗು ಜೊತೆ ಬೀದಿಗೆ ಬಿದ್ದ ಮಹಿಳೆ: ನ್ಯಾಯಕ್ಕಾಗಿ ಹೋರಾಟ
    July 15, 2026 | 0
  • ಷ್ಯ (9)
    ಶಿಕ್ಷಕರ ಕಿರುಕುಳ ಆರೋಪ: ಆತ್ಮಹ*ತ್ಯೆಗೆ ಯತ್ನಿಸಿದ 7ನೇ ತರಗತಿ ವಿದ್ಯಾರ್ಥಿ
    July 15, 2026 | 0
  • ಷ್ಯ (8)
    ಇಂದು ಪೆಟ್ರೋಲ್-ಡೀಸೆಲ್ ದರ ಇಳಿಕೆ ಆಗಿದೆಯಾ? ಪ್ರಮುಖ ನಗರಗಳ ತೈಲ ಬೆಲೆ ವಿವರ ಇಲ್ಲಿದೆ
    July 15, 2026 | 0
  • ಷ್ಯ (7)
    ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಅಬ್ಬರ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು
    July 15, 2026 | 0
  • ಷ್ಯ (6)
    ನಡುರಸ್ತೆಯಲ್ಲಿ ಮಾನವನ ಬುರುಡೆ ಇಟ್ಟು ವಾಮಾಚಾರ: ಬೆಚ್ಚಿಬಿದ್ದ ಗ್ರಾಮಸ್ಥರು
    July 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version