ಡಾಲಿ ಧನಂಜಯ..ನಟನೆಯಲ್ಲಿ ರಾಕ್ಷಸನಬೂ ಹೌದು..ಕಲಾವಿದರ ಕೈ ಹಿಡಿಯೋ ನಟ ರಕ್ಷಕನೂ ಹೌದು. ತಮ್ಮ ಸಿನಿಮಾಗಳ ಜೊತೆ ಜೊತೆಗೆ ಹೊಸಬರ ಕನಸುಗಳನ್ನ ನನಸು ಮಾಡೋ ಈ ಹೃದಯವಂತ ತಮ್ಮದೇ ಹೋಮ್ ಬ್ಯಾನರ್ನಡಿ ಸಾಕಷ್ಟು ಸಿನಿಮಾ, ಸೀರೀಸ್ಗಳನ್ನ ಪ್ರೊಡ್ಯೂಸ್ ಮಾಡ್ತಿರ್ತಾರೆ. ಸದ್ಯ ಇಂದಿನಿಂದ ಶುಭಾರಂಭ ಆಗ್ತಿರೋ ಜೆರಾಕ್ಸ್ ಸೀರೀಸ್ನ ಕಹಾನಿ ನಿಮಗಾಗಿ.
ಇದು ಡಾಲಿ ಪಿಕ್ಚರ್ಸ್ ಬ್ಯಾನರ್ನಡಿ ಮೂಡಿಬಂದಿರೋ ಜೆರಾಕ್ಸ್ ವೆಬ್ ಸರಣಿಯ ಟ್ರೈಲರ್ ಝಲಕ್. ಡಾ ರಾಜ್ಕುಮಾರ್ ಜಯಂತ್ಯೋತ್ಸವ ಹಿನ್ನೆಲೆ ಇಂದಿನಿಂದ ಝೀ5ನಲ್ಲಿ ಸ್ಟ್ರೀಮಿಂಗ್ ಆಗ್ತಿದೆ. ಹೀಗಾಗಿ ಇತ್ತೀಚೆಗೆ ಬೆಂಗಳೂರಿನ SRV ಥಿಯೇಟರ್ನಲ್ಲಿ ವೆಬ್ ಸರಣಿಯ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಹಮ್ಮಿಕೊಂಡಿತ್ತು ಟೀಂ. ನಿರ್ಮಾಪಕ ಡಾಲಿ ಧನಂಜಯ ಮಾತನಾಡಿ, ಜೆರಾಕ್ಸ್ ಸೀರೀಸ್ನ ಭಾಗವಾಗಿರುವುದು ನನಗೆ ಖುಷಿ ಕೊಟ್ಟಿದೆ. ಈ ಸೀರೀಸ್ ನಲ್ಲಿ ಒಳ್ಳೊಳ್ಳೆ ಕಲಾವಿದರ ದಂಡು ಕೆಲಸ ಮಾಡಿದೆ. ಹೊಸ ಪ್ರತಿಭೆಗಳಿಂದ ಹಿಡಿದು ಅನುಭವಿ ಪ್ರತಿಭೆಗಳ ತನಕ ಎಲ್ಲರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ಬರವಣಿಗೆ ಹಾಗೂ ಎಕ್ಸಿಕ್ಯೂಷನ್ ಚೆನ್ನಾಗಿದೆ ಎಂದರು.

ನಟರಕ್ಷಕನ ‘ಜೆರಾಕ್ಸ್’ ಮಷಿನ್ನಲ್ಲಿ ಏನೆಲ್ಲಾ ಇದೆ ಗೊತ್ತಾ?
ಗೆಳೆಯ ನಾಗಭೂಷಣ್ಗಾಗಿ ಡಾಲಿಯಿಂದ ವೆಬ್ ಸೀರೀಸ್

ವೆಬ್ ಸೀರೀಸ್ನ ಮುಖ್ಯಸ್ಥ ಆರ್.ಜೆ. ಪ್ರದೀಪ್ ಮಾತನಾಡಿ, ಕರ್ನಾಟಕದ ಬೇರೆ ಭಾಗಗಳನ್ನು ಹೇಗೆ ಪ್ರತಿನಿಧಿಸುತ್ತೇವೆ ಎನ್ನುವುದು ಝೀ5 ಕನ್ನಡದ ಉದ್ದೇಶವಾಗಿತ್ತು. ಅಯ್ಯನ ಮನೆ ಮೂಲಕ ನಮ್ಮ ವೆಬ್ ಸೀರೀಸ್ ಜರ್ನಿ ಶುರುವಾಯ್ತು. ಬಳಿಕ ಮಾರಿಗಲ್ಲು, ಶೋಧ ನಂತರ ರಾಕ್ಷಸ ವೆಬ್ ಸೀರೀಸ್ ಮಾಡಿದೆವು. ಎಲ್ಲವೂ ಥ್ರಿಲ್ಲರ್ ವೆಬ್ ಸೀರೀಸ್ ಆಯ್ತು. ಅದನ್ನು ಬ್ರೇಕ್ ಮಾಡಬೇಕು ಎಂದುಕೊಂಡಾಗ ಸಿಕ್ಕಿದ್ದು ಶ್ರೀನಿಧಿಯವರು. ಅವ್ರು ಬಂದು ಕಥೆ ಹೇಳಿದರು. ಅದ್ರಲ್ಲಿ ಜೆರಾಕ್ಸ್ ಮಿಷನ್ ಮನುಷ್ಯನನ್ನು ಡುಪ್ಲಿಕೇಟ್ ಮಾಡಿದಾಗ ಏನಾಗುತ್ತದೆ ಎಂಬ ಲೈನ್ ಬಹಳ ಇಷ್ಟವಾಯ್ತು. ನಮ್ ಟೀಂ, ಅವ್ರ ಟೀಂ ಕಥೆ ಮಾಡಿಕೊಂಡೆವು. ಬಳಿಕ ಧನಂಜಯ್ ಅವ್ರನ್ನು ಅಪ್ರೋಚ್ ಮಾಡಿದೆವು. ಅವ್ರು ಕಥೆ ಕೇಳಿ ಸಖತ್ ಆಗಿದೆ, ಮಾಡೋಣ ಅಂದ್ರು ಅಂತ ಪ್ರಾಸಸ್ ತಿಳಿಸಿದ್ರು.

ಬ್ಲಿಂಕ್ ಡೈರೆಕ್ಟರ್ ಜೊತೆ ನಾಗಭೂಷಣ್-ಪಾಯಲ್ ಚೆಂಗಪ್ಪ
ವೆಬ್ ಸೀರೀಸ್ ಹೆಡ್ ಆರ್ಜೆ ಪ್ರದೀಪ್ಗೆ ಡಬಲ್ ಧಮಾಕ

ಡಾಲಿ ಗೆಳೆಯ ನಾಗಭೂಷಣ್ ಹಾಗೂ ಪಾಯಲ್ ಚೆಂಗಪ್ಪ ಲೀಡ್ನಲ್ಲಿ ಕಾಣಿಸಿಕೊಂಡಿದ್ದು, ಮಂಜು ಪಾವಗಡ, ಓಂ ಪ್ರಕಾಶ್ ರಾವ್, ಶ್ರೀವತ್ಸ, ಯಶ್ವಂತ್ ಶೆಟ್ಟಿ, ವಿಜಯ್ ಪ್ರಸಾದ್, ತುಕಾಲಿ ಸಂತು, ಜಗ್ಗಪ್ಪ, ಸಿದ್ದು ಮಂಡ್ಯ, ಸುಧಾಕರ್ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಬ್ಲಿಂಕ್ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ಈ ಜೆರಾಕ್ಸ್ ಸೀರೀಸ್ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಪ್ಪಿ ತಪ್ಪಿ ಜೆರಾಕ್ಸ್ ಕಾಪಿಗಳಿಗೆ ಜೀವ ಬಂದ್ಬಿಟ್ರೆ ಏನಾಗುತ್ತೆ ಅನ್ನೋ ಎಳೆಯನ್ನ ಇಟ್ಕೊಂಡು ತಯಾರಾಗಿರೋ ಔಟ್ ಅಂಡ್ ಔಟ್ ಹಾಸ್ಯಭರಿತ ವೆಬ್ ಸೀರೀಸ್ ಈ ಜೆರಾಕ್ಸ್. ಡಾರ್ಕ್ ಕಾಮಿಡಿ, ಥ್ರಿಲ್ಲರ್, ಫ್ಯಾಂಟಸಿ ಅಂಶಗಳನ್ನ ಇದು ಒಳಗೊಂಡಿದೆ.





