ಹೆಮ್ಮೆಯ ಕನ್ನಡಿಗ ರಿಷಬ್ ಶೆಟ್ಟಿ ಇಂದು ಜೈ ಹನುಮಾನ್ ಸೆಟ್‌ಗೆ ಕಾಲಿಟ್ಟಿದ್ದಾರೆ. ಆದ್ರೆ ಅದಕ್ಕೂ ಮುನ್ನ ಪತ್ನಿ ಸಮೇತ ಮುಂಬೈಗೆ ತೆರಳಿ, ಇಂಡಿಯನ್ ನ್ಯಾಷನಲ್ ಸಿನಿಮಾ ಅಕಾಡೆಮಿ INCA ಅವಾರ್ಡ್ಸ್‌ನ ಮುಡಿಗೇರಿಸಿಕೊಂಡಿದ್ದಾರೆ. ಎಲ್ಲೇ ಹೋದ್ರೂ ಕನ್ನಡದ ಕೀರ್ತಿ ಪತಾಕೆ ಹಾರಿಸ್ತಾರೆ ಶೆಟ್ರು. ಆದ್ರೆ ಡಿವೈನ್ ಸ್ಟಾರ್ ಪತ್ಮನಿ ಮಾತ್ರ ಕರಣ್ ಜೋಹಾರ್ ಕಾಲಿಗೆ ಬೀಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಪ್ರಗತಿ ನಡೆಯ ಉದ್ದೇಶವೇನು..? ಅಸಲಿಗೆ ಅಲ್ಲಿ ಆಗಿದ್ದೇನು ಅಂತೀರಾ..?
ಕಲಾವಿದರಿಗೆ, ತಂತ್ರಜ್ಞರ ಕಲೆಗೆ ಪ್ರಶಸ್ತಿಗಳು ಒಂಥರಾ ಬೂಸ್ಟರ್ ಡೋಸ್ ಇದ್ದಂತೆ. ಉತ್ತೇಜನ ಕೊಟ್ಟಷ್ಟೂ ಮೈಲೇಜ್ ಜಾಸ್ತಿ. ಒಳ್ಳೆಯ ಹಾಗೂ ಕಂಟೆಂಟ್ ಬೇಸ್ಡ್ ಸಿನಿಮಾಗಳು ಹೊರಬರೋಕೆ ಸಾಧ್ಯ. ಆ ನಿಟ್ಟಿನಲ್ಲಿ ಕಾಂತಾರ ಚಾಪ್ಟರ್-1 ಮತ್ತೆ ನಾಲ್ಕು ಪ್ರತಿಷ್ಠಿತ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದೆ. ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ದಂಪತಿ ಸಮೇತ ಮುಂಬೈಗೆ ತೆರಳಿ ಅವಾರ್ಡ್ ಪಡೆದುಕೊಂಡಿದ್ದಾರೆ. ಕಾಂತಾರ ಕ್ವೀನ್ ರುಕ್ಮಿಣಿ ವಸಂತ್ ಕೂಡ ಅದಕ್ಕೆ ಸಾಕ್ಷಿ ಆಗಿರೋದು ಇಂಟರೆಸ್ಟಿಂಗ್.

ಓ ಮೈ ಗಾಡ್.. ಕರಣ್ ಕಾಲಿಗೆ ಬಿದ್ದರೇಕೆ ರಿಷಬ್ ಪತ್ನಿ..?
ಮುಂಬೈನಲ್ಲಿ ರಿಷಬ್ ರಂಗು.. ಕನ್ನಡಾಭಿಮಾನದ ಗುಂಗು

ಇಂಡಿಯನ್ ನ್ಯಾಷನಲ್ ಸಿನಿಮಾ ಅಕಾಡೆಮಿ ಸಂಸ್ಥೆ ನೀಡುವ INCA 2025ನೇ ಸಾಲಿನ ಪ್ರಶಸ್ತಿಗಳನ್ನ ನಿನ್ನೆ ಹಾಗೂ ಇಂದು ಮುಂಬೈನಲ್ಲಿ ಅದ್ದೂರಿ ಕಾರ್ಯಕ್ರಮದ ಮೂಲಕ ಪ್ರದಾನ ಮಾಡಲಾಯಿತು. ಟಾಲಿವುಡ್ ಸ್ಟಾರ್ ರಾಣಾ ದಗ್ಗುಬಾಟಿ ಹಾಗೂ ಬಾಲಿವುಡ್‌ನ ಕರಣ್ ಜೋಹಾರ್ ಈ ಕಾರ್ಯಕ್ರಮನವನ್ನು ನಿರೂಪಣೆ ಮಾಡಿದ್ರು. ಕನ್ನಡ ಚಿತ್ರರಂಗದ ಸೇರಿದಂತೆ ಭಾರತೀಯ ಚಿತ್ರರಂಗದ ಸುಮಾರು 12ಕ್ಕೂ ಅಧಿಕ ಚಿತ್ರರಂಗಗಳ ಪ್ರಶಸ್ತಿ ವಿಜೇತರು ಇಲ್ಲಿ ಭಾಗವಹಿಸಿದ್ದರು.

ಕಾಂತಾರ ಚಾಪ್ಟರ್-1ಗೆ ಒಂದಲ್ಲ ಎರಡಲ್ಲ ಬರೋಬ್ಬರಿ 4 ಪ್ರಶಸ್ತಿಗಳು ಲಭಿಸಿವೆ. ಬೆಸ್ಟ್ ಆ್ಯಕ್ಟರ್ ಹಾಗೂ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಸ್ವೀಕರಿಸಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ನಾನೇ ನಟಿಸಿ, ಡೈರೆಕ್ಷನ್ ಮಾಡಿದ್ದರಿಂದ ಕೂಲ್ & ಕಾಮ್ ಆಗಿ ಇತ್ತು. ಅಷ್ಟಾಗಿ ಪ್ರೆಷರ್ ಇರಲಿಲ್ಲ ಎಂದಿದ್ದಾರೆ. ಕೆಳಗೆ ಕೂತಿದ್ದ ಕಾಂತಾರ ಶೆಟ್ರ ರಿಯಲ್ ಕ್ವೀನ್ ಪ್ರಗತಿಯವರನ್ನ ಸ್ಟೇಜ್ ಮೇಲೆ ಕರೆಸಿಕೊಂಡು, ಕೊಂಡಾಡಿದ್ದಾರೆ ರಿಷಬ್. ಅಂದಹಾಗೆ ಪ್ರಗತಿ ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಕಾಸ್ಟ್ಯೂಮ್ ಡಿಸೈನರ್ ಕೂಡ ಹೌದು.

ಕಾಂತಾರ-1 ಚಿತ್ರಕ್ಕೆ ಬರೋಬ್ಬರಿ 4 INCA ಪ್ರಶಸ್ತಿಗಳ ಗರಿ
ಇಂದಿನಿಂದ ಜೈ ಹನುಮಾನ್ ಶೂಟಿಂಗ್ ಅಡ್ಡಾಗೆ ಶೆಟ್ರು..!
ಅದೇ ವೇದಿಕೆಯಲ್ಲಿ ಹಿಂದಿ, ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಮಾತನಾಡಿದ ರಿಷಬ್, ನಮ್ಮೂರು ಈಗ ಫಿಲ್ಮ್ ವಿಲೇಜ್ ಆಗಿದೆ. ಕಾಂತಾರ ಬಳಿಕ ಆಲ್ಮೋಸ್ಟ್ ನಾಲ್ಕು ಸಿನಿಮಾಗಳು ಶೂಟಿಂಗ್ ನಡೀತಿವೆ. ನಮ್ಮೂರು ಈಗ ಎಲ್ಲರಿಗೂ ಗೊತ್ತಾಗಿದೆ ಅಂದ್ರು ಡಿವೈನ್ ಸ್ಟಾರ್.

ಕಾಂತಾರ ಗೆಲುವಿಗೆ ಕನ್ನಡಿಗರು ಕಾರಣ ಎಂದ ರಿಷಬ್, ಕನ್ನಡಿಗರಿಗೆ ಕನ್ನಡದಲ್ಲೇ ಧನ್ಯವಾದ ತಿಳಿಸಿದ್ರು ಶೆಟ್ರು. ಇನ್ನೂ ಹೋಸ್ಟ್ ಮಾಡ್ತಿದ್ದ ರಾಣಾ ಜೊತೆ ಮಾತಾಡ್ತಾ ಜೈ ಹನುಮಾನ್ ಸೆಟ್‌ನಲ್ಲಿ ಸಿಗೋಣ ಎಂದರು.
ಇನ್ನೂ ಅತ್ಯುತ್ತಮ ನಟಿ ಪ್ರಶಸ್ತಿಯನ್ನ ಕಾಂತಾರ ಚಾಪ್ಟರ್-1 ನಟನೆಗಾಗಿ ತನ್ನ ಪಾಲಾಗಿಸಿಕೊಂಡ ರುಕ್ಮಿಣಿ ವಸಂತ್ ಕೂಡ INCA ಅವಾರ್ಡ್ ಫಂಕ್ಷನ್‌ನಲ್ಲಿ ಮಿಂಚಿದ್ರು. ನನ್ನ ಕರಿಯರ್‌ಗೆ ಕಾಂತಾರ ತುಂಬಾ ಸ್ಪೆಷಲ್. ಅದರಿಂದ ನನ್ನ ಇಡೀ ಜೀವನ ಬದಲಾಗಿದೆ. ರಿಷಬ್ ಹಾಗೂ ಪ್ರಗತಿ ಇಲ್ಲೇ ಇದ್ದಾರೆ. ಅವರಿಗೆ ಥ್ಯಾಂಕ್ಸ್ ಅಂತ ಕೃತಜ್ಞಕಾ ಭಾವ ಅರ್ಪಿಸಿದ್ರು ಕಾಂತಾರ ಕ್ವೀನ್ ರುಕ್ಮಿಣಿ.

ಇಂಟರೆಸ್ಟಿಂಗ್ ಅಂದ್ರೆ ಈ INCA ಅವಾರ್ಡ್ ವೇದಿಕೆಯಲ್ಲಿ ನಿರೂಪಣೆ ಮಾಡ್ತಿದ್ದ ಕರಣ್ ಜೋಹಾರ್ ಕಾಲಿಗೆ ನಮಸ್ಕರಿಸೋ ಮೂಲಕ ನಗೆಪಾಟಲಿಗೆ ಈಡಾಗಿದ್ದಾರೆ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ರಿಷಬ್ ಶೆಟ್ಟಿ. ಹೌದು.. ಶೆಟ್ರು ಪ್ರಶಸ್ತಿ ಸ್ವೀಕರಿಸಿ, ಮಾತು ಮುಗಿಸಿದ ಬಳಿಕ ರಾಣಾಗೆ ಹಗ್ ಮಾಡ್ತಿರಬೇಕಾದ್ರೆ, ಇತ್ತ ಪ್ರಗತಿ ಅಲ್ಲೇ ಇದ್ದ ಕರಣ್ ಜೋಹಾರ್ ಕಾಲಿಗೆ ನಮಸ್ಕರಿಸೋ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಕೆಟ್ ಹಿಡಿಯುತ್ತಿದ್ದಾರೆ ಅಂತೆಲ್ಲಾ ನೆಟಿಜನ್ಸ್ ಮಾತನಾಡಿಕೊಳ್ಳೋಕೆ, ಟ್ರೋಲ್ ಆಗೋಕೆ ಕಾರಣವಾಗಿದೆ.

ರಿಷಬ್ ಸ್ವಂತ ಟ್ಯಾಲೆಂಟ್‌ನಿಂದ ಮೇಲೆ ಬಂದವರು. ತನ್ನದೇ ಆದ ಸಾಮ್ರಾಜ್ಯ ಕಟ್ಟಿದವರು. ಆದ್ರೆ ಕರಣ್ ಜೋಹಾರ್‌ಗೆ ಬಕೆಟ್ ಹಿಡಿಯೋ ಅವಶ್ಯಕತೆ ಅವರಿಗೇನಿತ್ತು ಅನ್ನೋದು ಯಕ್ಷ ಪ್ರಶ್ನೆ. ಒಟ್ಟಾರೆ ಈ ಇನ್ಸಿಡೆಂಟ್ ಬಳಿಕ ಗಂಡನ ಮಾನ ಕಳೆಯೋಕೆ ಇವರೊಬ್ಬರೇ ಸಾಕು ಅನಿಸದೆ ಇರದು.





