ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪುಟ್ಟ ಮಗುವಿನ ಒಡಗೀತನದ ವೀಡಿಯೋ ಭಾರೀ ಸಂಚಲನ ಸೃಷ್ಟಿಸಿದೆ. Hassen Dahhan ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಆಗಿರುವ ಈ ವೀಡಿಯೋದಲ್ಲಿ, ಮಾಲ್‌ನ ಫನ್ ಜೋನ್‌ನಲ್ಲಿ ಮಕ್ಕಳು ಚೆಂಡು ಎಸೆಯುವ ಯಂತ್ರದೊಂದಿಗೆ ಆಟವಾಡುತ್ತಿದ್ದಾರೆ. ಕೆಲವು ಮಕ್ಕಳು ಚೆಂಡು ಎಸೆಯುವುದರಲ್ಲಿ ಮಗ್ನರಾಗಿದ್ದರೆ, ಒಬ್ಬ ಬಾಲಕ ಆಸೆಯಿಂದ ಅವರನ್ನು ನೋಡುತ್ತಾ ನಿಂತಿದ್ದಾನೆ.
ಈ ವೇಳೆ, ಕೇವಲ 2-3 ವರ್ಷದ ಪುಟ್ಟ ಮಗುವೊಂದು ಆ ಬಾಲಕನ ಆಸೆಯನ್ನು ಗಮನಿಸಿ, ಚೆಂಡೊಂದನ್ನು ತೆಗೆದು ಆತನಿಗೆ ಎಸೆಯಲು ನೀಡಿದೆ. ಬಾಲಕ ಖುಷಿಯಿಂದ ಚೆಂಡು ಎಸೆದಾಗ, ಈ ಪುಟ್ಟ ಮಗು ಚಪ್ಪಾಳೆ ತಟ್ಟಿ ಆತನನ್ನು ಪ್ರೋತ್ಸಾಹಿಸಿದೆ. ಈ ಮಾನವೀಯ ವರ್ತನೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರನ್ನು ಭಾವುಕರನ್ನಾಗಿಸಿದೆ.
ಜನರು ಈ ಮಗುವಿನ ಪೋಷಕರನ್ನು ಶ್ಲಾಘಿಸಿದ್ದಾರೆ. “ಈ ಮಗುವಿನ ಪೋಷಕರು ರಾಜನನ್ನು ಬೆಳೆಸಿದ್ದಾರೆ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. “ಈ ಪುಟ್ಟ ಮಗುವಿಗೆ ನನ್ನ ಗೌರವ” ಎಂದು ಮತ್ತೊಬ್ಬರು ಹೇಳಿದ್ದಾರೆ. ಈ ವೀಡಿಯೋ ಮಕ್ಕಳ ಮುಗ್ಧತೆ ಮತ್ತು ಒಡಗೀತನವನ್ನು ತೋರಿಸುವುದರ ಜೊತೆಗೆ, ಒಳ್ಳೆಯ ಸಂಸ್ಕಾರವನ್ನು ಕಲಿಸುವ ಪೋಷಕರ ಪಾತ್ರವನ್ನು ಎತ್ತಿಹಿಡಿದಿದೆ.
ಪುಟ್ಟ ಮಕ್ಕಳ ಮನಸ್ಸು ಹಸಿಮಣ್ಣಿನಂತೆ. ಪೋಷಕರು ಒಳ್ಳೆ ರೀತಿಯ ಮೌಲ್ಯಗಳನ್ನು ಬಿತ್ತಿದರೆ, ಅದೇ ರೀತಿಯ ಗುಣಗಳು ಮಕ್ಕಳಲ್ಲಿ ಬೆಳೆಯುತ್ತವೆ.
https://www.instagram.com/reel/DFwiluuRHW9/?utm_source=ig_web_copy_link