ಹಿಂದಿನ ದಿನಗಳಲ್ಲಿ ನಾವು ಯಾವುದೇ ವಸ್ತುಗಳನ್ನು ಕೊಂಡುಕೊಳ್ಳಲು ಅಂಗಡಿಗೆ ಹೋಗುತ್ತಿದ್ವಿ. ಆದರೆ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಕೆಯಿಂದ ಕೂತಲ್ಲೆ ನಮಗೆ ಬೇಕಾದನ್ನು ಪಡೆದುಕೊಳ್ಳಬಹುದು. ಆದರೆ ಇದೀಗ ಆಂಡ್ರಾಯ್ಡ್ ಮತ್ತು ಐಫೋನ್‌ನಿಂದ ಒಂದು ತರಕಾರಿ ಅಥವಾ ವಸ್ತುವಿನ ಬೆಲೆ ನಿರ್ಧಾರವಾಗುತ್ತದೆ. ಈ ಬಗ್ಗೆ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗ್ತಿದೆ.
ಬೆಂಗಳೂರಿನ ಮಹಿಳೆಯೊಬ್ಬರು ಆಂಡ್ರಾಯ್ಡ್ ಮತ್ತು ಐಫೋನ್ ಒಂದೇ ವಸ್ತುವಿಗೆ ವಿಭಿನ್ನ ಬೆಲೆಯಲ್ಲಿ ನಿರ್ಧರಿಸಿದೆ. Zepto ಉತ್ಪನ್ನಗಳು ಇದಕ್ಕೆ ಸಾಕ್ಷಿ. ಇದೀಗ ಈ ಮಹಿಳೆ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಅರ್ಧ ಕಿಲೋ ದ್ರಾಕ್ಷಿಗೆ ಆಂಡ್ರಾಯ್ಡ್ನಲ್ಲಿ 65 ರೂ. ಅದೇ ದ್ರಾಕ್ಷಿಗೆ ಐಫೋನ್‌ನಲ್ಲಿ 146 ರೂ. ಕ್ಯಾಪ್ಸಿಕಂ, ಹೂಕೋಸು ಮತ್ತು ಈರುಳ್ಳಿ ಬೆಲೆಗಳು ಈ ವ್ಯತ್ಯಾಸವನ್ನು ಸೂಚಿಸುತ್ತದೆ. Zepto ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಒಂದೇ ಉತ್ಪನ್ನಕ್ಕೆ ವಿಭಿನ್ನ ಬೆಲೆಗಳನ್ನು ವಿಧಿಸುತ್ತಿದೆ ಎಂದು ಆರೋಪಿಸಲಾಗಿದೆ. ವಿನಿತಾ ಸಿಂಗ್ ಎಂಬುವವರು ಈ ಬಗ್ಗೆ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ.
ಕ್ಯಾಪ್ಸಿಕಂಗೆ ಆಂಡ್ರಾಯ್ಡ್ ಫೋನ್ 500-600 ಗ್ರಾಂಗೆ 21 ರೂ ಎಂದು ತೋರಿಸಿದೆ, ಆದರೆ ಐಫೋನ್ ಅದೇ ಉತ್ಪನ್ನಕ್ಕೆ 107 ರೂ ತೋರಿಸುತ್ತದೆ. ಎರಡೂ ಸ್ಕ್ರೀನ್‌ಶಾಟ್‌ಗಳನ್ನು ಒಂದೇ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ. Zepto ಯಾಕೆ ವ್ಯತ್ಯಾಸವನ್ನು ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜನರು ಚರ್ಚೆ ಮಾಡಿದ್ದಾರೆ. ಈ ಪೋಸ್ಟ್ಗೆ ಕಮೆಂಟ್ ಕೂಡ ಮಾಡಿದ್ದಾರೆ. ಐಫೋನ್ ಖರೀದಿಸಲು ಅವರಿಗೂ ಹಣ ಬೇಕು. ಅದಕ್ಕೇ ಎಂದು ಹೇಳಿದ್ದಾರೆ. ನಾವೆಲ್ಲರೂ ದಿನಸಿ, ಬುಕ್ ಕ್ಯಾಬ್‌ಗಳು ಇತ್ಯಾದಿಗಳನ್ನು ಖರೀದಿಸಲು ಆಂಡ್ರಾಯ್ಡ್ ಸಾಧನಗಳನ್ನು ಖರೀದಿಸಬೇಕು ಎಂದು ಅನ್ನಿಸುತ್ತಿದೆ ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ. ನಾವೆಲ್ಲ ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ. ನಾವೆಲ್ಲರೂ ಈ ಅಪ್ಲಿಕೇಶನ್‌ಗಳ ಮೇಲೆ ಹೆಚ್ಚು ಅವಲಂಬಿತರಾಗಿರುವುದರಿಂದ ಈ ಸಮಸ್ಯೆ ಆಗುತ್ತಿದೆ. ನೀವು ಅದನ್ನು ಐಫೋನ್‌ನೊಂದಿಗೆ ಆರ್ಡರ್ ಮಾಡಿದಾಗ ಅವರು ಕ್ಯಾಪ್ಸಿಕಂ ಅನ್ನು 1 ನಿಮಿಷ ಮುಂಚಿತವಾಗಿ ವಿತರಿಸುತ್ತಿದ್ದಾರೆ. ಅದಕ್ಕಾಗಿಯೇ ಇದು ದುಬಾರಿಯಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.