ಸುನಿತಾ ಅವರಷ್ಟೇ ಅಲ್ಲ, ಅವರೊಂದಿಗೆ ಬುಚ್ ವಿಲ್ಮೋರ್ ಅವರನ್ನೂ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗಿತ್ತು. 59 ವರ್ಷದ ಸುನಿತಾ ವಿಲಿಯಮ್ಸ್ ಅವರನ್ನು ಸ್ಟಾರ್ ಲಿಂಕ್ ಬಾಹ್ಯಾಕಾಶ ಗಗನನೌಕೆ, ಐಎಸ್ ಎಸ್ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದ್ದು ಒಂದು ತಾಂತ್ರಿಕ ತೊಂದರೆ ನಿವಾರಿಸುವುದಕ್ಕೆ. ಕಳುಹಿಸಿದ್ದ ಕೆಲಸವೇನೋ ಸಕ್ಸಸ್ ಆಯ್ತು. ಆದರೆ, ಅವರು ಹಿಂದಿರುಗಿ ಬರಬೇಕಾಗಿದ್ದ ನೌಕೆಯಲ್ಲಿ ಒಂದು ತಾಂತ್ರಿಕ ತೊಂದರೆ ಕಾಣಿಸಿಕೊಳ್ತು. ವಾಪಸ್ ಕರೆತರಬೇಕಿದ್ದ ಸ್ಟಾರ್ ಲೈನರ್‌ನ ಥ್ರಸ್ಟರ್‌ನಲ್ಲಿ ಪ್ರಾಬ್ಲಂ ಕಾಣಿಸಿಕೊಳ್ತು.
ಈ ಪ್ರಾಬ್ಲಂ ಏನಂದ್ರೆ, ರಾಕೆಟ್‌ನ ಇಂಧನ ಸಪ್ಲೈ ಆಗಬೇಕಿದ್ದ ಜಾಗದಲ್ಲಿ ಹೀಲಿಯಂ ಸೋರಿಕೆಯಾಗಿದ್ದು. ಸಿಂಪಲ್ಲಾಗ್ ಅರ್ಥ ಆಗ್ಬೇಕಂದ್ರೆ, ನಮ್ಮ ವೆಹಿಕಲ್ಲುಗಳ ಇಂಜಿನ್ ವ್ಯವಸ್ಥೆ ಅರ್ಥ ಮಾಡ್ಕೋಬೇಕು. ಏನಂದ್ರೆ, ನಮ್ಮ ವೆಹಿಕಲ್ಲುಗಳಲ್ಲಲಿ ಆಯಿಲ್ ಸೋರಿಕೆಯಾದ್ರೆ, ಹೇಗೆ ಕಾರು, ಬಸ್ಸು, ಲಾರಿಗಳು ಕೆಟ್ಟು ಹೋಗಿ ನಿಂತುಕೊಳ್ತವೆ. ಕೆಲವೊಂದ್ ಸಲ ಬೆಂಕಿ ಕೂಡಾ ಹೊತ್ತೊಳ್ಳುತ್ತೆ. ಸುನಿತಾ ವಿಲಿಯಮ್ಸ್ ಬರಬೇಕಿದ್ದ ಸ್ಟಾರ್ ಲೈನರ್‌ನಲ್ಲಿ ಆಗಿದ್ದ ಸಮಸ್ಯೆಯೂ ಅದೇ. ಹಾಗೇ ಏನಾದ್ರೂ ಬಂದ್ ಬಿಟ್ಟಿದ್ರೆ, ಸುಮಾರು ವರ್ಷಗಳ ಹಿಂದೆ ಕಲ್ಪನಾ ಚಾವ್ಲಾ ಆಕಾಶದಲ್ಲೇ ಬೂದಿಯಾದ್ರಲ್ಲ, ಅಂತಾದ್ದೊಂದು ದುರಂತಕ್ಕೆ ಸುನಿತಾ ವಿಲಯಮ್ಸ್ ಮತ್ತು ಬುಚ್ ವಿಲ್ಮೋರ್ ಕೂಡಾ ಸುಟ್ಟು ಹೋಗ್ತಾ ಇದ್ರು. ಅಪಾಯದ ಸೂಚನೆ ಸಿಕ್ಕಿದ್ದೇ ತಡ, ನಾಸಾ ಸುನಿತಾ ಮತ್ತು ಬುಚ್ ವಿಲ್ಮೋರ್ ಅವರನ್ನ ಅಲ್ಲಿಯೇ ಇರೋ ವ್ಯವಸ್ಥೆ ಮಾಡ್ತು.
VIDEO | Visuals from the International Space Station.
NASA and SpaceX’s Crew-10 mission will dock with the ISS later today to bring back the astronauts Sunita Williams and Barry Wilmore. According to NASA, the docking process will begin at 11.30 pm EDT (9 am IST on March 16) and… pic.twitter.com/1RDEnRHeCO
— Press Trust of India (@PTI_News) March 16, 2025
ಸುನಿತಾ ಅವರಿಗೀಗ 59 ವರ್ಷ. ಬಾಹ್ಯಾಕಾಶದಲ್ಲಿ ಇರೋವ್ರು ನಮ್ಮ ನಿಮ್ಮ ಹಾಗೆ ಇರೋದಕ್ಕೆ ಆಗಲ್ಲ. ಅಲ್ಲಿ ಗುರುತ್ವಾಕರ್ಷಣೆ ಶಕ್ತಿಯೇ ಇರಲ್ಲ. ಅವರು ಊಟ, ತಿಂಡಿ ಮಾಡೋದು ಕೂಡಾ ಮ್ಯಾಗ್ನೆಟಿಕ್ ಟ್ರೇಗಳಲ್ಲಿ. ಹನಿ ನೀರನ್ನೂ ವೇಸ್ಟ್ ಮಾಡೋ ಹಾಗಿಲ್ಲ. ಚೆಲ್ಲೋ ಹಾಗಿಲ್ಲ. ಅಕಸ್ಮಾತ್ ಚೆಲ್ಲಿದರೆ ಅದು ಗಾಳಿಯಲ್ಲೇ ತೇಲಾಡ್ತಾ ಇರುತ್ತೆ. ನೀರನ್ನೂ ಕೂಡಾ ಅವರ ಮೂತ್ರ ಹಾಗೂ ಬೆವರನ್ನೇ ಶುದ್ಧೀಕರಣ ಮಾಡಿ ಬಳಸಿಕೊಳ್ಳಬೇಕು.
ಹಾಗಿರೋ ಸುನಿತಾ ಅವರಿಗೆ ಒಂದು ದಿನಕ್ಕೆ 1.7 ಕೆಜಿ ಆಹಾರ ಬೇಕು. ಏಕದಳ ಧಾನ್ಯ, ಹಾಲಿನ ಪುಡಿ, ಪಿಜ್ಜಾ, ಶ್ರಿಂಪ್ ಕಾಕ್ಟೇಲ್, ಹುರಿದ ಕೋಳಿ ಮಾಂಸ, ಟುನಾ ಮೀನು ಇತ್ಯಾದಿಗಳಿರೋ ಆಹಾರ ಸಪ್ಲೈ ಆಗುತ್ತೆ. ಅದನ್ನ ಭೂಮಿಯಲ್ಲೇ ರೆಡಿ ಮಾಡಿ ಕಳಿಸ್ತಾರೆ. ಅದನ್ನ ಅಲ್ಲಿರೋವ್ರು ಬಿಸಿ ಮಾಡ್ಕೊಂಡು ತಿನ್ನಬೇಕು. ಆ ಬಿಸಿನೂ ಅಷ್ಟೇ, ಒಂದೇ ಒಂದು ಡಿಗ್ರಿ ಕೂಡಾ ವ್ಯತ್ಯಾಸ ಆಗ್ಬಾರ್ದು.
VIDEO | Visuals from the International Space Station.
NASA and SpaceX’s Crew-10 mission will dock with the ISS later today to bring back the astronauts Sunita Williams and Barry Wilmore. According to NASA, the docking process will begin at 11.30 pm EDT (9 am IST on March 16) and… pic.twitter.com/1RDEnRHeCO
— Press Trust of India (@PTI_News) March 16, 2025
ಇನ್ನು ಕಳೆದ ವರ್ಷ ಜೂನ್ 6ನೇ ತಾರೀಕು ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದ ಸುನಿತಾ, 8 ದಿನಗಳನ್ನಲ್ಲ, 9 ತಿಂಗಳು ಅಲ್ಲೇ ಇದ್ದು ವಾಪಸ್ ಬರ್ತಾರೆ. ಮಾರ್ಚ್ 19ಕ್ಕೆ ವಾಪಸ್ ಬರೋ ಚಾನ್ಸ್ ಇದೆ.
ಇನ್ನು ಸುನಿತಾ ಅವರು ಬಾಹ್ಯಾಕಾಶ ನಿಲ್ದಾಣದಲ್ಲಿ ಸುದೀರ್ಘವಾಗಿ ಇದ್ದ ಕಾರಣ, ಅವರ ದೇಹ ನಾರ್ಮಲ್ ಆಗಿರೋದಿಲ್ಲ. ಮೂಳೆಗಳಿರ್ತವಲ್ಲ, ಅವು ದಿನಕ್ಕೆ 1%ನಷ್ಟು ಶಕ್ತಿ ಕಳೆದುಕೊಳ್ತಾ, ಸವೆಯುತ್ತಾ ಹೋಗ್ತವೆ. ಮುಖ ಸ್ವಲ್ಪ ಊದಿಕೊಂಡ ಹಾಗೆ ಕಾಣ್ತಿರುತ್ತಲ್ಲ, ಅದಕ್ಕೂ ಬಾಹ್ಯಾಕಾಶದ ವಾತಾವರಣನೇ ಕಾರಣ. ದೇಹದಲ್ಲಿರೋ ದ್ರವದ ಅಂಶವೆಲ್ಲ ಮುಖದಲ್ಲೇ ಶೇಖರಣೆಯಾಗ್ತಾ ಇರುತ್ತೆ.
VIDEO | Visuals from the International Space Station.
NASA and SpaceX’s Crew-10 mission will dock with the ISS later today to bring back the astronauts Sunita Williams and Barry Wilmore. According to NASA, the docking process will begin at 11.30 pm EDT (9 am IST on March 16) and… pic.twitter.com/1RDEnRHeCO
— Press Trust of India (@PTI_News) March 16, 2025
ಈಗ ಅವರು ವಾಪಸ್ ಬರ್ತಾರಲ್ಲ, ಅವರು ನೇರವಾಗಿ ಮನೆಗೆ ಹೋಗೋ ಹಾಗಿಲ್ಲ. ಡೈರೆಕ್ಟ್ ಆಸ್ಪತ್ರೆಗೇ ಹೋಗ್ಬೇಕು. 9 ತಿಂಗಳು ಬಾಹ್ಯಾಕಾಶದಲ್ಲಿದ್ದು ಬಂದೋವ್ರಿಗೆ ಒಂದು ಪೆನ್ಸಿಲ್ ಎತ್ತಿಡೋಕೂ ಶಕ್ತಿ ಇರಲ್ಲ. ಅಷ್ಟು ವೀಕ್ ಆಗಿರ್ತಾರೆ. ಅಷ್ಟು ವೀಕ್ ಆಗಿ ಬಂದವರು ನೇರವಾಗಿ ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳೋಕೆ ಆಗಲ್ಲ. ಸ್ವಲ್ಪ ಸ್ವಲ್ಪವಾಗಿ ಚಿಕಿತ್ಸೆ ನೀಡಿ, ಅವರನ್ನ ರಿಕವರಿ ಮಾಡಲಾಗುತ್ತೆ. ದೇಹ ಸರಿ ಹೋಗೋಕೆ ಎಷ್ಟು ಟೈಂ ಬೇಕು ಅನ್ನೋದನ್ನ ಅವರನ್ನ ಆಸ್ಪ್ರತ್ರೆಗೆ ಸೇರಿಸಿದ ನಂತರವೇ ಗೊತ್ತಾಗೋದು.
ಯಾಕೆ ಅಂದ್ರೆ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಸುನಿತಾ ವಿಲಿಯಮ್ಸ್ ಅವರಿಗೆ ದಿನಕ್ಕೆ 16 ಸೂರ್ಯೋದಯ, 16 ಸೂರ್ಯಾಸ್ತ ಆಗ್ತಾ ಇತ್ತು. ವಾಪಸ್ ಬಂದ ಸುನಿತಾ, 12 ಗಂಟೆಗಳಿಗೆ ಒಂದು ಸೂರ್ಯೋದಯ, 12 ಗಂಟೆಗಳಿಗೆ ಒಂದು ಸೂರ್ಯಾಸ್ತ ಇರೋ ವಾತಾವರಣಕ್ಕೆ ಅಡ್ಜಸ್ಟ್ ಆಗೋದು ಸುಲಭ ಅಲ್ಲ. ಅವರಿಗೀಗ 59 ವರ್ಷ. ಇಲ್ಲಿ ಮೊದಲು ಇದ್ದ ಹಾಗೆ ಊಟ, ತಿಂಡಿ ಮಾಡೋಕೂ ಕೂಡಾ ಟೈಂ ಬೇಕು. ಏನಾದ್ರೂ ಆಗ್ಲಿ, ಸುನಿತಾ ವಿಲಿಯಮ್ಸ್ ವಾಪಸ್ ಬರಲಿ. ಬೇಗ ಆರೋಗ್ಯವಂತರಾಗಿ ಚೇತರಿಸಿಕೊಳ್ಳಲಿ ಅನ್ನೋದು ನಮ್ಮೆಲ್ಲರ ಹಾರೈಕೆ.