ಕ್ರಿಕೆಟ್ ಮೈದಾನದಲ್ಲಿ ವೇಗದ ಬೌಲಿಂಗ್ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಕಂಗಾಲಾಗುವಂತೆ ಮಾಡ್ತಿದ್ದ RCB ತಂಡದ ವೇಗದ ಬೌಲರ್ ವೈಶಾಕ್, ಇದೀಗ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಪ್ಯಾಲೇಸ್‌ನಲ್ಲಿ ನಡೆದ ವೈಶಾಕ್ ವೆಡ್ಡಿಂಗ್‌ಗೆ ಬಾದ್‌ಷಾ ಕಿಚ್ಚ ಸುದೀಪ್ ಸೇರಿದಂತೆ ಇಂಡಿಯನ್ ಕ್ರಿಕೆಟರ್ಸ್ ಕೂಡ ಸಾಕ್ಷಿ ಆದ್ರು. ಹಾಗಾದ್ರೆ ಯಾರೆಲ್ಲಾ ಬಂದಿದ್ರು..? ಹೇಗಿತ್ತು ಮದುವೆ ಸಂಭ್ರಮ ಅಂತೀರಾ..? ನೀವೇ ಒಮ್ಮೆ ಕಣ್ತುಂಬಿಕೊಳ್ಳಿ.
ಕ್ರಿಕೆಟ್ ಮೈದಾನದಲ್ಲಿ ವೇಗದ ಬೌಲಿಂಗ್ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಕಂಗಾಲಾಗಿಸುವ ವೈಶಾಕ್ ವಿಜಯ್ ಕುಮಾರ್, ಈಗ ಜೀವನದ ಹೊಸ, ಇನಿಂಗ್ಸ್ ಆರಂಭಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ಯುವ ವೇಗದ ಬೌಲರ್, ತಮ್ಮ ದೀರ್ಘಕಾಲದ ಸ್ನೇಹಿತೆ ಸಾಗರಿಕ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಐತಿಹಾಸಿಕ ಬೆಂಗಳೂರು ಪ್ಯಾಲೇಸ್ ನಲ್ಲಿ ಅದ್ಧೂರಿಯಾಗಿ ನಡೆದ ಈ ಮದುವೆ ಸಮಾರಂಭ, ಕ್ರೀಡಾ ಮತ್ತು ಸಿನಿ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ಜರುಗಿತು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ RCB ಬೌಲರ್ ವೈಶಾಕ್..!
ಬೆಂಗಳೂರು ಪ್ಯಾಲೇಸ್‌ನಲ್ಲಿ ಸಾಗರಿಕಾ ಜೊತೆ ಸಪ್ತಪದಿ

ಕರ್ನಾಟಕ ಕ್ರಿಕೆಟ್ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ ವೈಶಾಕ್ ವಿಜಯಕುಮಾರ್, ಬಳಿಕ ರಾಯಲ್ ಚಾಲೆಂಜ್ರ್ಸ್ ಬೆಂಗಳೂರು ತಂಡದ ಪರ ಐಪಿಎಲ್‌ನಲ್ಲಿ ಆಡುತ್ತಾ ಗಮನ ಸೆಳೆದರು. ಇದೇ ಸಮಯದಲ್ಲಿ ಪರಿಚಯವಾಗಿದ್ದು ಸಾಗರಿಕ. ಸ್ನೇಹದಿಂದ ಆರಂಭವಾದ ಅವರ ಪರಿಚಯ ನಿಧಾನವಾಗಿ ಪ್ರೀತಿಗೆ ತಿರುಗಿ, ಹಲವು ವರ್ಷಗಳ ಸಂಬಂಧ ಈಗ ಮದುವೆಯ ಬಂಧನದಲ್ಲಿ ಒಂದಾಗಿದೆ. ಕ್ರಿಕೆಟ್ ಪ್ರಯಾಣದ ಎಲ್ಲ ಏರುಪೇರುಗಳಲ್ಲಿ ಸಾಗರಿಕಾ ವೈಶಾಕ್‌ಗೆ ದೊಡ್ಡ ಬೆಂಬಲವಾಗಿ ನಿಂತಿದ್ದರು.ಕ್ರಿಕೆಟ್ ಮೈದಾನದಲ್ಲಿ ಸಾಧನೆಗಳಿಂದ ಸುದ್ದಿಯಾಗುತ್ತಿದ್ದ ವೈಶಾಕ್ ಇದೀಗ ತಮ್ಮ ವೈಯಕ್ತಿಕ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ.

ವೈಶಾಖ್ ವೆಡ್ಡಿಂಗ್‌ನಲ್ಲಿ ಪ್ರಸಿದ್ಧ್ ಕೃಷ್ಣ, ದೇವದತ್ ಪಡಿಕ್ಕಲ್
ನವ ಜೋಡಿಗೆ ಸುದೀಪ್ ಶುಭ ಹಾರೈಕೆ..ಕಿಚ್ಚನ ಸ್ಟೈಲ್ ಕಿಕ್

ಸಾಂಪ್ರದಾಯಿಕ ದಕ್ಷಿಣ ಭಾರತೀಯ ಶೈಲಿಯಲ್ಲಿ ನಡೆದ ಮದುವೆಯಲ್ಲಿ ವಧು ಸಾಗರಿಕಾ ಕಂಚಿಪುರಂ ಪಟ್ಟು ಸೀರೆ ಧರಿಸಿ ಮಿನುಗಿದರು. ವರ ವೈಶಾಕ್ ಸಂಪ್ರದಾಯಿಕ ಪಂಚೆ, ಶೇಲಾ ಹಾಗೂ ಪೇಟಾ ಧರಿಸಿ ಮಂಟಪಕ್ಕೆ ಆಗಮಿಸಿದರು. ಎರಡು ಕುಟುಂಬಸ್ಥರ ಹಿರಿಯರ ಆಶೀರ್ವಾದ ನಡುವೆ ಮದುವೆ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಿತು. ಹೂವಿನ ಅಲಂಕಾರದಿಂದ ಸಿಂಗಾರಗೊಂಡ ಮಂಟಪದಲ್ಲಿ ಮದುವೆ ಸಮಾರಂಭ ಅತ್ಯಂತ ಅದ್ದೂರಿಯಾಗಿ ನಡೆಯಿತು

ವೈಶಾಕ್ ಆಪ್ತ ಸ್ನೇಹಿತರಾಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಂಪ್ರದಾಯಿಕ ಕುರ್ಥಾ ಧರಿಸಿ ಮದುವೆಗೆ ಆಗಮಿಸಿದ್ರು. ನವ ಜೋಡಿ ವೈಶಾಕ್ ವಿಜಯ್ ಕುಮಾರ್ ಹಾಗೂ ಸಾಗರಿಕಾಗೆ ಶುಭಾ ಕೋರಿದರು. ಜೊತೆಗೆ ಕ್ರಿಕೆಟ್ ಸ್ನೇಹಿತರಾದ ದೇವದತ್ತ್ ಪಡೀಕ್ಕಲ್ ಮತ್ತು ಪ್ರಸಿದ್ಧ ಕೃಷ್ಣ ಸೇರಿದಂತೆ ಅನೇಕ ಆಪ್ತರು ಭಾಗವಹಿಸಿ ನವದಂಪತಿಗಳ ಸಂತೋಷಕ್ಕೆ ಸಾಕ್ಷಿಯಾದರು.

ಕ್ರಿಕೆಟ್ ಮೈದಾನದಲ್ಲಿ ವಿಕೆಟ್‌ಗಳ ಮೂಲಕ ಸಂಭ್ರಮ ತಂದಿದ್ದ ವೈಶಾಕ್, ಈಗ ತಮ್ಮ ಜೀವನದ ಹೊಸ ಪಯಣವನ್ನು ಸಾಗರಿಕಾ ಜೊತೆ ಆರಂಭಿಸಿದ್ದಾರೆ. ಕುಟುಂಬ, ಸ್ನೇಹಿತರು ಹಾಗೂ ಅಭಿಮಾನಿಗಳ ಆಶೀರ್ವಾದ ನಡುವೆ ಈ ಜೋಡಿ ದಾಂಪತ್ಯ ಜೀವನದ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





