ಅಹಮದಾಬಾದ್: ಮೈದಾನದಲ್ಲಿ ತನ್ನ ಗೂಗ್ಲಿಗಳ ಮೂಲಕ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಟೀಮ್ ಇಂಡಿಯಾದ ಸ್ಪಿನ್ನರ್ ವರುಣ್ ಚಕ್ರವರ್ತಿ, ಈಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಚಾಣಾಕ್ಷತನ ಮೆರೆದಿದ್ದಾರೆ. 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಭರ್ಜರಿ ಗೆಲುವಿನ ನಂತರ, ವರುಣ್ ಅಪ್ಲೋಡ್ ಮಾಡಿರುವ ಒಂದು ಫೋಟೋ ಈಗ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಕೈಯಲ್ಲಿ ಚಹಾ ಕಪ್ ಹಿಡಿದು ಪಾಕಿಸ್ತಾನವನ್ನು ಕಾಲೆಳೆದಿರುವ ಅವರ ಪೋಸ್ಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
Varun Chakravarthy owning Pakistan yet again in his Instagram post 😂
Those idiots messed with the wrong man in 2021. pic.twitter.com/eGJ2CQdq20— Abhishek (@vicharabhio) March 9, 2026
ವರುಣ್ ಚಕ್ರವರ್ತಿ ಅವರು ಹಂಚಿಕೊಂಡಿರುವ ಫೋಟೋದಲ್ಲಿ, ಒಂದು ಕೈಯಲ್ಲಿ ಪ್ರತಿಷ್ಠಿತ ಟಿ20 ವಿಶ್ವಕಪ್ ಟ್ರೋಫಿ ಇದ್ದರೆ, ಮತ್ತೊಂದು ಕೈಯಲ್ಲಿ ಟೀ ಕಪ್ ಇದೆ. ಈ ಫೋಟೋದ ಮೂಲಕ ಅವರು ಪಾಕಿಸ್ತಾನಕ್ಕೆ ಹಳೆಯ ನೆನಪೊಂದನ್ನು ಮರುಕಳಿಸುವಂತೆ ಮಾಡಿದ್ದಾರೆ. ವರುಣ್ ಈ ರೀತಿ ಪಾಕಿಸ್ತಾನವನ್ನು ಕಿಚಾಯಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ ಗೆದ್ದಾಗಲೂ ಅವರು ಇಂತಹುದೇ ಸಾಹಸ ಮಾಡಿದ್ದರು. ಅಂದು ಪಾಕಿಸ್ತಾನದ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಭಾರತ ತಂಡಕ್ಕೆ ಪ್ರಶಸ್ತಿ ನೀಡುವಲ್ಲಿ ತೋರಿದ ವಿಳಂಬ ನೀತಿಯನ್ನು ಖಂಡಿಸಿ, ವರುಣ್ ಹಾಸಿಗೆಯಲ್ಲಿ ಮಲಗಿ ಟೀ ಕುಡಿಯುತ್ತಿರುವ ಫೋಟೋ ಹಾಕಿ ಟ್ರೋಲ್ ಮಾಡಿದ್ದರು.

ಟೀ ಟ್ರೋಲ್ ಹಿಂದಿನ ಕಥೆ
ವರುಣ್ ಚಕ್ರವರ್ತಿ ಈ ರೀತಿಯ ಟೀ ಟ್ರೋಲ್‌ಗೆ 2019ರ ಇತಿಹಾಸವಿದೆ. ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಪಾಕಿಸ್ತಾನದ ವಶಕ್ಕೆ ಸಿಲುಕಿದ್ದಾಗ, ಅವರು ಚಹಾ ಕುಡಿಯುತ್ತಿರುವ ವಿಡಿಯೋವನ್ನು ಪಾಕ್ ಬಿಡುಗಡೆ ಮಾಡಿತ್ತು. ಅಲ್ಲಿ ಅವರು ಕೇಳಿದ ಪ್ರಶ್ನೆಗೆ “The tea is fantastic, thank you” (ಚಹಾ ಅದ್ಭುತವಾಗಿದೆ, ಧನ್ಯವಾದಗಳು) ಎಂದು ಹೇಳಿದ್ದರು. ಪಾಕಿಸ್ತಾನ ಇದನ್ನು ಭಾರತವನ್ನು ಕೆಣಕಲು ಬಳಸಿದರೆ, ಭಾರತೀಯರು ಅದನ್ನು ಅಭಿನಂದನ್ ಅವರ ಅಪ್ರತಿಮ ಧೈರ್ಯದ ಸಂಕೇತವಾಗಿ ಬಳಸಲಾರಂಭಿಸಿದರು.
No Pakistani harm in this pic of Varun Chakravarthy😂 pic.twitter.com/XuBRUfULnE
— कट्टर INDIA समर्थक 🦁🇮🇳 ™ (@KKRWeRule) March 9, 2026
ಇಂದಿಗೂ ಕ್ರಿಕೆಟ್ ಮೈದಾನದಲ್ಲಿ ಅಥವಾ ರಾಜತಾಂತ್ರಿಕವಾಗಿ ಪಾಕಿಸ್ತಾನಕ್ಕೆ ಸೋಲಾದಾಗಲೆಲ್ಲಾ ಭಾರತೀಯ ನೆಟ್ಟಿಗರು ಈ ‘ಫೆಂಟಾಸ್ಟಿಕ್ ಟೀ’ ಡೈಲಾಗ್ ಬಳಸಿ ಪಾಕಿಸ್ತಾನವನ್ನು ಟ್ರೋಲ್ ಮಾಡುತ್ತಾರೆ. ವರುಣ್ ಚಕ್ರವರ್ತಿ ಈಗ ಅದೇ ಅಸ್ತ್ರವನ್ನು ಬಳಸಿ ಪಾಕ್ ಅಭಿಮಾನಿಗಳ ಹೊಟ್ಟೆ ಉರಿಸಿದ್ದಾರೆ.
ಪಾಕಿಸ್ತಾನವನ್ನು ಟ್ರೋಲ್ ಮಾಡಲು ಮತ್ತೊಂದು ಕಾರಣವೆಂದರೆ ಅಲ್ಲಿನ ಆರ್ಥಿಕ ಸ್ಥಿತಿ. ಪಾಕಿಸ್ತಾನವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಅಲ್ಲಿನ ಸಚಿವರೊಬ್ಬರು ಜನರಿಗೆ ಚಹಾ ಕುಡಿಯುವುದನ್ನು ಕಡಿಮೆ ಮಾಡಿ ಎಂದು ಮನವಿ ಮಾಡಿದ್ದರು. ಇದನ್ನು ಕೂಡ ಭಾರತೀಯರು ಲೇವಡಿ ಮಾಡಿದ್ದರು. ಈಗ ವಿಶ್ವಕಪ್ ಟ್ರೋಫಿಯೊಂದಿಗೆ ಚಹಾ ಕುಡಿಯುವ ಫೋಟೋ ಹಾಕಿರುವುದು ನಮ್ಮ ಬಳಿ ಟ್ರೋಫಿಯೂ ಇದೆ, ಚಹಾ ಕುಡಿಯುವ ತಾಕತ್ತೂ ಇದೆ ಎಂಬ ಪರೋಕ್ಷ ಸಂದೇಶ ನೀಡಿದಂತಿದೆ.





