ಟೀ ಕುಡಿಯೋ ನೆಪದಲ್ಲಿ ಪಾಕಿಸ್ತಾನವನ್ನ ಟ್ರೋಲ್‌ ಮಾಡಿದ ವರುಣ್ ಚಕ್ರವರ್ತಿ

Untitled design 2026 03 09T173221.394

ವರುಣ್‌ ಚಕ್ರವರ್ತಿ

ಅಹಮದಾಬಾದ್: ಮೈದಾನದಲ್ಲಿ ತನ್ನ ಗೂಗ್ಲಿಗಳ ಮೂಲಕ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಟೀಮ್ ಇಂಡಿಯಾದ ಸ್ಪಿನ್ನರ್ ವರುಣ್ ಚಕ್ರವರ್ತಿ, ಈಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಚಾಣಾಕ್ಷತನ ಮೆರೆದಿದ್ದಾರೆ. 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಭರ್ಜರಿ ಗೆಲುವಿನ ನಂತರ, ವರುಣ್ ಅಪ್ಲೋಡ್ ಮಾಡಿರುವ ಒಂದು ಫೋಟೋ ಈಗ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಕೈಯಲ್ಲಿ ಚಹಾ ಕಪ್ ಹಿಡಿದು ಪಾಕಿಸ್ತಾನವನ್ನು ಕಾಲೆಳೆದಿರುವ ಅವರ ಪೋಸ್ಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಟೀ ಟ್ರೋಲ್ ಹಿಂದಿನ ಕಥೆ

ವರುಣ್ ಚಕ್ರವರ್ತಿ ಈ ರೀತಿಯ ಟೀ ಟ್ರೋಲ್‌ಗೆ 2019ರ ಇತಿಹಾಸವಿದೆ. ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಪಾಕಿಸ್ತಾನದ ವಶಕ್ಕೆ ಸಿಲುಕಿದ್ದಾಗ, ಅವರು ಚಹಾ ಕುಡಿಯುತ್ತಿರುವ ವಿಡಿಯೋವನ್ನು ಪಾಕ್ ಬಿಡುಗಡೆ ಮಾಡಿತ್ತು. ಅಲ್ಲಿ ಅವರು ಕೇಳಿದ ಪ್ರಶ್ನೆಗೆ “The tea is fantastic, thank you” (ಚಹಾ ಅದ್ಭುತವಾಗಿದೆ, ಧನ್ಯವಾದಗಳು) ಎಂದು ಹೇಳಿದ್ದರು. ಪಾಕಿಸ್ತಾನ ಇದನ್ನು ಭಾರತವನ್ನು ಕೆಣಕಲು ಬಳಸಿದರೆ, ಭಾರತೀಯರು ಅದನ್ನು ಅಭಿನಂದನ್ ಅವರ ಅಪ್ರತಿಮ ಧೈರ್ಯದ ಸಂಕೇತವಾಗಿ ಬಳಸಲಾರಂಭಿಸಿದರು.

ಪಾಕಿಸ್ತಾನವನ್ನು ಟ್ರೋಲ್ ಮಾಡಲು ಮತ್ತೊಂದು ಕಾರಣವೆಂದರೆ ಅಲ್ಲಿನ ಆರ್ಥಿಕ ಸ್ಥಿತಿ. ಪಾಕಿಸ್ತಾನವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಅಲ್ಲಿನ ಸಚಿವರೊಬ್ಬರು ಜನರಿಗೆ ಚಹಾ ಕುಡಿಯುವುದನ್ನು ಕಡಿಮೆ ಮಾಡಿ ಎಂದು ಮನವಿ ಮಾಡಿದ್ದರು. ಇದನ್ನು ಕೂಡ ಭಾರತೀಯರು ಲೇವಡಿ ಮಾಡಿದ್ದರು. ಈಗ ವಿಶ್ವಕಪ್ ಟ್ರೋಫಿಯೊಂದಿಗೆ ಚಹಾ ಕುಡಿಯುವ ಫೋಟೋ ಹಾಕಿರುವುದು ನಮ್ಮ ಬಳಿ ಟ್ರೋಫಿಯೂ ಇದೆ, ಚಹಾ ಕುಡಿಯುವ ತಾಕತ್ತೂ ಇದೆ ಎಂಬ ಪರೋಕ್ಷ ಸಂದೇಶ ನೀಡಿದಂತಿದೆ.

Exit mobile version