ಅಹಮದಾಬಾದ್:ಕ್ರಿಕೆಟ್ ಜಗತ್ತಿನಲ್ಲಿ ಟಿ20 ಮಾದರಿಯ ಜನಪ್ರಿಯತೆ ಹೆಚ್ಚಾದಂತೆ, ಈ ಟೂರ್ನಿಯ ಬಹುಮಾನದ ಮೊತ್ತವೂ ಗಗನಕ್ಕೇರಿದೆ. 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ಮಣಿಸಿ ಚಾಂಪಿಯನ್ ಆದ ಭಾರತ ತಂಡವು ಈ ಬಾರಿ ಬರೋಬ್ಬರಿ ₹27.48 ಕೋಟಿ ಬಹುಮಾನದ ಮೊತ್ತವನ್ನು ತನ್ನದಾಗಿಸಿಕೊಂಡಿದೆ. 2007ರಲ್ಲಿ ಭಾರತ ಮೊದಲ ಬಾರಿ ವಿಶ್ವಕಪ್ ಗೆದ್ದಾಗ ಸಿಕ್ಕಿದ್ದ ಮೊತ್ತಕ್ಕೆ ಹೋಲಿಸಿದರೆ, ಇದು ಸುಮಾರು 13 ಪಟ್ಟು ಅಧಿಕವಾಗಿದೆ!
2024ಕ್ಕಿಂತ ಈ ಬಾರಿ ಮೊತ್ತ ಎಷ್ಟು ಹೆಚ್ಚು?
ಕಳೆದ ಬಾರಿ ಅಂದರೆ 2024ರಲ್ಲಿ ಭಾರತ ತಂಡವು ವಿಶ್ವಕಪ್ ಗೆದ್ದಾಗ ಐಸಿಸಿಯಿಂದ ₹20.42 ಕೋಟಿ ಬಹುಮಾನ ಪಡೆದಿತ್ತು. ಆದರೆ ಈ ಬಾರಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿದ್ದು, ಸೂರ್ಯ ಸೈನ್ಯಕ್ಕೆ ₹27.48 ಕೋಟಿ ಲಭಿಸಿದೆ. ರನ್ನರ್ ಅಪ್ ಆದ ನ್ಯೂಜಿಲೆಂಡ್ ತಂಡವು ₹14.65 ಕೋಟಿ ಪಡೆದರೆ, ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೆ ತಲಾ ₹7.24 ಕೋಟಿ ಸಿಗಲಿದೆ. ಗುಂಪು ಹಂತದಲ್ಲಿ ಭಾಗವಹಿಸಿದ ತಂಡಗಳಿಗೂ ತಲಾ ₹2.29 ಕೋಟಿ ಬಹುಮಾನ ದೊರೆಯಲಿದೆ.
2007 ರಿಂದ 2026: ಬಹುಮಾನದ ಮೊತ್ತದ ಏರಿಕೆಯ ಹಾದಿ
2007ರಲ್ಲಿ ಎಂ.ಎಸ್. ಧೋನಿ ನಾಯಕತ್ವದಲ್ಲಿ ಭಾರತ ಚೊಚ್ಚಲ ವಿಶ್ವಕಪ್ ಗೆದ್ದಾಗ ಐಸಿಸಿ ನೀಡಿದ್ದ ಬಹುಮಾನ ಕೇವಲ ₹2.02 ಕೋಟಿ. ಅಲ್ಲಿಂದ ಈವರೆಗೆ ಪ್ರತಿ ಆವೃತ್ತಿಯಲ್ಲೂ ಮೊತ್ತವು ಏರಿಕೆಯಾಗುತ್ತಲೇ ಸಾಗಿದೆ.
ಈವರೆಗಿನ ಚಾಂಪಿಯನ್ ತಂಡಗಳ ಬಹುಮಾನದ ಮೊತ್ತದ ಪಟ್ಟಿ:
| ವರ್ಷ | ಚಾಂಪಿಯನ್ ತಂಡ | ಬಹುಮಾನದ ಮೊತ್ತ (ಅಂದಾಜು) |
| 2007 | ಭಾರತ | ₹2.02 ಕೋಟಿ |
| 2009 | ಪಾಕಿಸ್ತಾನ | ₹3.63 ಕೋಟಿ |
| 2010 | ಇಂಗ್ಲೆಂಡ್ | ₹4.57 ಕೋಟಿ |
| 2012 | ವೆಸ್ಟ್ ಇಂಡೀಸ್ | ₹5.34 ಕೋಟಿ |
| 2014 | ಶ್ರೀಲಂಕಾ | ₹6.71 ಕೋಟಿ |
| 2016 | ವೆಸ್ಟ್ ಇಂಡೀಸ್ | ₹10.75 ಕೋಟಿ |
| 2021 | ಆಸ್ಟ್ರೇಲಿಯಾ | ₹12.00 ಕೋಟಿ |
| 2022 | ಇಂಗ್ಲೆಂಡ್ | ₹13.20 ಕೋಟಿ |
| 2024 | ಭಾರತ | ₹20.42 ಕೋಟಿ |
| 2026 | ಭಾರತ | ₹27.48 ಕೋಟಿ |





