ಇಂದಿನ ಐಪಿಎಲ್ ಪಂದ್ಯದಲ್ಲಿ ಭರ್ಜರಿ ಮನರಂಜನೆ ನೀಡೋಕೆ ನಾಲ್ಕು ತಂಡಗಳು ಸನ್ನದ್ಧಗೊಂಡಿವೆ. ಗುಜರಾತ್ ತಂಡವನ್ನು ಮಣಿಸಲು ಲಕ್ನೋ ಸಿದ್ದತೆ ನಡೆಸಿದೆ. ಪಂಜಾಬ್ ಕಿಂಗ್ಸ್ ಮೇಲೆ ಸವಾರಿ ಮಾಡೋಕೆ ಹೈದ್ರಾಬಾದ್ ಸಕಲಸಿದ್ದತೆ ಮಾಡಿಕೊಂಡಿದೆ.
ಹೌದು ಗುಜರಾತ್ ತಂಡ ಟೂರ್ನಿಯ ಆರಂಭದಲ್ಲೇ ಸೋಲುಂಡಿತ್ತು. ನಂತರ ಸತತ ಗೆಲುವುಗಳೊಂದಿಗೆ ಮುನ್ನುಗ್ಗುತ್ತಿರುವ ಗುಜರಾತ್ ತಂಡ ಲಕ್ನೋ ದಂಡಯಾತ್ರೆಗೆ ತೆರಳಿರುವ ಗುಜರಾತ್ ಟೈಟನ್ಸ್ಗೆ ಇವತ್ತು ಅಗ್ನಿಪರೀಕ್ಷೆಯ ದಿನ. ಸುದರ್ಶನ್, ಗಿಲ್, ಜೋಸ್ ಬಟ್ಲರ್ ಹೊರತು ಪಡಿಸಿದ್ರೆ ಉಳಿದ್ಯಾವ ಬ್ಯಾಟರ್ ನಿರೀಕ್ಷಿತ ಪ್ರದರ್ಶನವನ್ನ ನೀಡ್ತಿಲ್ಲ. ಹೀಗಾಗಿ ಇವತ್ತು ಮಿಡಲ್ ಆರ್ಡರ್ನ ಬಲ ಪ್ರದರ್ಶಿಸಬೇಕಾಗುತ್ತದೆ. ಇಲ್ಲದಿದ್ದರೆ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಬೀಳುವುದಂತೂ ಗ್ಯಾರಂಟಿ.
ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ ಕಮಾಲ್ ಮಾಡಿದ್ದಾರೆ. ಸಾಯಿ ಕಿಶೋರ್ ಮ್ಯಾಜಿಕ್ ಸಖತ್ ವರ್ಕೌಟ್ ಆಗ್ತಿದೆ. ಸ್ಪಿನ್ ಮೆಜಿಶಿಯನ್ ರಶೀದ್ ಖಾನ್ ಆಟ ಇಂಪ್ಯಾಕ್ಟ್ ಆಗ್ತಿಲ್ಲ. ಇದು ಗುಜರಾತ್ ಚಿಂತೆಗೆ ಕಾರಣವಾಗಿದೆ. ಸ್ಪಿನ್ಗೆ ಹೇಳಿ ಮಾಡಿಸಿರುವ ಇವತ್ತಿನ ಟ್ರ್ಯಾಕ್ನಲ್ಲಿ ರಶೀದ್ ಮಿಂಚುತ್ತಾರ ಕಾದು ನೋಡಬೇಕಿದೆ.
ಲಕ್ನೋ ಬಲಿಷ್ಠವಾದ ತಂಡವಾಗಿದೆ. ಬ್ಯಾಟಿಂಗ್ ವಿಭಾಗ ಸಂಪೂರ್ಣ ಮಿಚೆಲ್ ಮಾರ್ಶ್, ನಿಕೋಲಸ್ ಪೂರನ್, ಎಡಿನ್ ಮಾರ್ಕಮ್ ಮೇಲೆಯೇ ನಿಂತಿದೆ. ನಾಯಕ ಪಂತ್ ಕಮ್ಬ್ಯಾ ಕ್ ಅತ್ಯಗತ್ಯವಾಗಿದೆ. ಬೌಲಿಂಗ್ನಲ್ಲಿ ಸ್ಪಿನ್ನರ್ ದಿಗ್ವೇಶ್ ರಾಠಿಯನ್ನೇ ನಂಬಿಕೊಂಡಿರುವ ಲಕ್ನೋಗೆ ಲಾರ್ಡ್ ಶಾರ್ದೂಲ್ ರಕ್ಷಕರಾಗಿದ್ದಾರೆ. ಈ ಹಿಂದಿನ ಪಂದ್ಯದಲ್ಲಿ ಲಕ್ನಲ್ಲಿ ಗೆದ್ದ ಲಕ್ನೋಗೆ ಇವತ್ತು ಕಠಿಣ ಸವಾಲು ಎದುರಾಗಲಿದೆ.
ಮೊದಲ ಪಂದ್ಯದಲ್ಲಿ ಸಾಲಿಡ್ ಆಟವಾಡಿದ್ದ ಸನ್ ರೈಸರ್ಸ್ ಕಳೆದ 4 ಪಂದ್ಯಗಳಿಂದ ಸೋಲಿನ ಸುಳಿಯಲ್ಲಿ ನರಳಾಡ್ತಿದೆ. ಟಾರ್ಗೆಟ್ 300 ಎಂಬ ಮಿಷನ್ನಲ್ಲಿ ಸತತ ವೈಫಲ್ಯ ಅನುಭವಿಸ್ತಿರುವ ಸನ್ ರೈಸರ್ಸ್ಗೆ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತಿಶ್ ಕುಮಾರ್ ರೆಡ್ಡಿಯ ಫ್ಲಾಫ್ ಶೋ ಕಗ್ಗಂಟ್ಟಾಗಿ ಮಾರ್ಪಟ್ಟಿದೆ. ಇವತ್ತು ಸನ್ ರೈಸ್ ಆಗಬೇಕಾದ್ರೆ ಒಗ್ಗಟ್ಟಿನ ಆಟ ಬಹುಮುಖ್ಯ.
ಸನ್ ರೈಸರ್ಸ್ ತಂಡ ಎದುರಿಸ್ತಿರುವ ಪಂಜಾಬ್ಗೂ ಗೆಲುವೇನೂ ಸುಲಭವಾಗಿಲ್ಲ. ಕಳೆದ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಹೊರತು ಉಳಿದೆಲ್ಲ ಬ್ಯಾಟರ್ಗಳು ಹೀನಾಯ ವೈಫಲ್ಯ ಕಂಡಿದ್ದರು. ಶ್ರೇಯಸ್ ಅಯ್ಯರ್, ಮ್ಯಾಕ್ಸ್ವೆಲ್, ಮಾರ್ಕಸ್ ಸ್ನೋಯ್ನಿಸ್ ಇಂದು ಕಮ್ಬ್ಯಾಕ್ ಮಾಡಬೇಕಿದೆ. ಅರ್ಷದೀಪ್ ಸಿಂಗ್ ಹಾಗೂ ಲೂಕಿ ಫರ್ಗೂಸನ್ ಪೇಸ್ DUO ಸಖತ್ ವರ್ಕ್ ಆಗ್ತಿದೆ. ಇವರಿಬ್ಬರ ಮಾರಕ ದಾಳಿಯ ಜೊತೆಗೆ ಯಜುವೇಂದ್ರ ಚಹಲ್ ಮ್ಯಾಜಿಕ್ ಮಾಡಿದ್ರೆ ಪಂಜಾಬ್ ಪಂಚ್ ಕೊಡೋದು ಪಕ್ಕಾ.