2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ, ಪಾಕ್ ಎದುರು ಶರಣಾಗಿತ್ತು. ಅದಾದ ಮೇಲೆ ನಡೆಯುತ್ತಿರುವ ಈ ಚಾಂಪಿಯನ್ಸ್ ಟ್ರೋಫಿಯಲ್ಲಿ 2ನೇ ಪಂದ್ಯ ಪಾಕ್ ವಿರುದ್ಧವೇ ಇದೆ. ಆ ಸೋಲಿನ ಸೇಡು ತೀರಿಸಿಕೊಳ್ಳುತ್ತಾ ಭಾರತ..? ಇಂದಿನ ಹೈವೋಲ್ಟೇಜ್ ಮ್ಯಾಚ್‌ಗಾಗಿ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ.
2017ರ ಚಾಂಪಿಯನ್ಸ್ ಟ್ರೋಫಿ. ಏಕದಿನ ವಿಶ್ವಕಪ್ ನ ಯಾವ ಪಂದ್ಯದಲ್ಲೂ ಪಾಕಿಸ್ತಾನದ ವಿರುದ್ಧ ಭಾರತ ಸೋತೇ ಇರಲಿಲ್ಲ. ಆದರೆ ಭಾರತೀಯ ಕ್ರಿಕೆಟ್ ಪ್ರೇಮಿಗಳು ಕನಸಿನಲ್ಲೂ ಕಲ್ಪನೆ ಮಾಡಿಕೊಳ್ಳದೇ ಇದ್ದ ಪಾಕಿಸ್ತಾನದ ವಿರುದ್ಧದ ಸೋಲು, 2017ರಲ್ಲಿ ಎದುರಾಗಿತ್ತು.
2017ರ ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕ್ಯಾಪ್ಟನ್. ವಿಶೇಷವೇನು ಗೊತ್ತೇ.. ಅದೇ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ, ಪಾಕಿಸ್ತಾನದ ವಿರುದ್ಧ ಭಾರತ ಜಯಭೇರಿ ಬಾರಿಸಿತ್ತು. ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ 91, ವಿರಾಟ್ ಕೊಹ್ಲಿ 81, ಶಿಖರ್ ಧವನ್ 68, ಯುವರಾಜ್ ಸಿಂಗ್ 53, ಹಾರ್ದಿಕ್ ಪಾಂಡ್ಯ 20 ರನ್ ಸಿಡಿಸಿದ್ದರು. 319 ರನ್ ಗಳಿಸಿದ್ದ ಭಾರತ, ಪಾಕಿಸ್ತಾನಕ್ಕೆ 320 ರನ್ ಟಾರ್ಗೆಟ್ ಕೊಟ್ಟಿತ್ತು.
ದೊಡ್ಡ ಗುರಿ ಬೆನ್ನತ್ತಿದ್ದ ಪಾಕಿಸ್ತಾನಕ್ಕೆ 50 ರನ್ ಹೊಡೆದ ಅಜಂ ಅಲಿ ಒಬ್ಬರನ್ನ ಬಿಟ್ರೆ, ಉಳಿದ ಯಾರೊಬ್ಬರೂ ಸಪೋರ್ಟ್ ಕೊಡಲಿಲ್ಲ. ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್ ದಾಳಿಗೆ ಸಿಕ್ಕು ಜಸ್ಟ್ 164 ರನ್ನುಗಳಿಗೆ ಔಟ್ ಆಗಿತ್ತು. ಭಾರತ, 124 ರನ್‌ಗಳಿಂದ ಗೆದ್ದಿತ್ತು. ಆದರೆ ಫೈನಲ್‌ಗೆ ಎದುರಾಗಿದ್ದು ಒನ್ಸ್ ಎಗೇಯ್ನ್ ಪಾಕಿಸ್ತಾನ.
ವಿಚಿತ್ರ ಅಂದ್ರೆ ಫೈನಲ್ ನಲ್ಲಿ ಆಟ ಉಲ್ಟಾ ಆಗಿತ್ತು. ಅಂದ್ರೆ ಆವತ್ತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 338 ರನ್ ಗಳಿಸಿದ್ರೆ, ಆ ರನ್ ಚೇಸ್ ಮಾಡಿದ್ದ ಭಾರತ 158 ರನ್ನುಗಳಿಗೆ ಗಂಟು ಮೂಟೆ ಕಟ್ಟಿತ್ತು. ಜಸ್ ಪ್ರೀತ್ ಬೂಮ್ರಾ ಬೌಲಿಂಗ್‌ನಲ್ಲಿ ನೋಬಾಲಿಗೆ ಔಟ್ ಆಗಿದ್ದ ಫಖರ್ ಜಮಾನ್, ನಂತರ ಸೆಂಚುರಿ ಹೊಡೆದಿದ್ರು. ಬಾಬರ್ ಅಜಂ, ಹಜೀಮ್ ಅಲಿ, ಮಹಮ್ಮದ್ ಹಫೀಝ್ ಅರ್ಧಶತಕ ಗಳಿಸಿದ್ರು. ಯಾವೊಬ್ಬ ಬೌಲರ್ ಕೂಡಾ ಕ್ಲಿಕ್ ಆಗಿರಲಿಲ್ಲ.
ಆದರೆ 338 ರನ್ನುಗಳ ಗುರಿ ಬೆನ್ನತ್ತಿದ್ದ ಭಾರತ 158 ರನ್‌ಗಳಿಗೆ ಗಂಟುಮೂಟೆ ಕಟ್ಟಿತ್ತು. ಹಾರ್ದಿಕ್ ಪಾಂಡ್ಯ 76 ರನ್ ಹೊಡೆದು ರನ್ ಔಟ್ ಆಗಿದ್ರು ರೋಹಿತ್ ಶರ್ಮಾ 0, ಶಿಖರ್ ಧವನ್ 21, ವಿರಾಟ್ ಕೊಹ್ಲಿ 5, ಯುವರಾಜ್ ಸಿಂಗ್ 22, ಧೋನಿ 4, ಕೇದಾರ್ ಜಾಧವ್ 9, ರವೀಂದ್ರ ಜಡೇಜ 15 ರನ್ನುಗಳಿಗೆ ಸುಸ್ತು ಹೊಡೆದಿದ್ದರು.
ಫೈನಲ್ ಆಗಿ ಭಾರತ ಜಸ್ಟ್ 158 ರನ್‌ಗಳಿಗೆ ಆಲೌಟ್ ಆಗಿ, 180 ರನ್‌ಗಳಿಂದ ಸೋತಿತ್ತು. ಆ ಅವಮಾನದ ನಂತರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮತ್ತೊಮ್ಮೆ ಭಾರತ – ಪಾಕ್ ಮ್ಯಾಚ್ ನಡೀತಿದೆ. ಈ ಗ್ಯಾಪಿನಲ್ಲಿ ನಡೆದ 20-20 ವಿಶ್ವಕಪ್ ನಲ್ಲಿ ಒಂದ್ಸಲ ಭಾರತವನ್ನು ಸೋಲಿಸಿರುವ ಭಾರತ, ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ ಸೋಲಿನ ಸರಪಳಿ ಕಳಚಿಕೊಂಡಿಲ್ಲ. ಪಾಕಿಸ್ತಾನದ ವಿರುದ್ಧ ಮ್ಯಾಚ್ ಅಂದ್ರೆ, ಅದನ್ನ ಕ್ರಿಕೆಟ್ ಫ್ಯಾನ್ಸ್ ಫೈನಲ್ ತರಾ ಟ್ರೀಟ್ ಮಾಡ್ತಾರೆ. ಹೀಗಾಗಿ.. ಆ ಸೋಲಿನ ಸೇಡು ತೀರಿಸುವುದು ಈಗ ಭಾರತೀಯ ಕ್ರಿಕೆಟ್ ಟೀಂ ಜವಾಬ್ದಾರಿ.
ಲಾಸ್ಟ್ ಟೈಂ ಇಂಡಿಯಾ ಟೀಮಿನಲ್ಲಿದ್ದ ರೋಹಿತ್, ಕೊಹ್ಲಿ, ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಈಗಲೂ ಟೀಮಿನಲ್ಲಿದ್ದಾರೆ. ಆಗ ಒಂದು ರೀತಿಯಲ್ಲಿ ಸೋಲಿಗೆ ಕಾರಣವಾಗಿದ್ದ ಬೂಮ್ರಾ ಈ ಬಾರಿ ಆಡ್ತಿಲ್ಲ. ಪಾಕಿಸ್ತಾನದ ವಿರುದ್ಧದ ಐಸಿಸಿ ಮ್ಯಾಚ್‌ಗಳಲ್ಲಿ ಭರ್ಜರಿ ಆಟವಾಡಿರುವ ಖ್ಯಾತಿ ರೋಹಿತ್, ಕೊಹ್ಲಿ ಇಬ್ಬರಿಗೂ ಇದೆ. ಇವರಿಬ್ಬರ ಜೊತೆ ಗಿಲ್, ರಾಹುಲ್, ಹಾರ್ದಿಕ್, ಅಯ್ಯರ್ ಬ್ಯಾಟಿಂಗ್‌ನಲ್ಲಿ ಸಿಡಿದರೆ, ಶಮಿ, ರಾಣಾ, ಜಡೇಜಾ, ಅಕ್ಷರ್, ಕುಲದೀಪ್ ಮ್ಯಾಜಿಕ್ ಮಾಡಿದರೆ.. ತಂಡ ಗೆಲ್ಲೋದು ಪಕ್ಕಾ. ಸೋಲಿಲನ ಸೇಡು ತೀರಿಸೋದು ಪಕ್ಕಾ. ಇದು ಚಾಂಪಿಯನ್ಸ್ ಟ್ರೋಫಿಯ ಲೆಕ್ಕ.