ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತವರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ತವರಿನಾಚೆ ಉತ್ತಮ ಪ್ರದರ್ಶನ ತೋರಿದರೂ, ತವರಿನಲ್ಲಿ ಸತತ ಸೋಲು ಕಂಡಿರುವ ಆರ್‌ಸಿಬಿ, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ಕೆರಳಿದ ನೆಟ್ಟಿಗರು, ಚಿನ್ನಸ್ವಾಮಿ ಸ್ಟೇಡಿಯಂ ಕೆಳಗೆ ಪುರಾತನ ದೇವಾಲಯ ಇದೆ ಎಂದು ಆಗ್ರಹಿಸಿ, ಅಗೆಯಲು ಒತ್ತಾಯಿಸಿದ್ದಾರೆ.
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿಯಾಗಿ ಸಾಗುತ್ತಿದ್ದು, ಎಲ್ಲಾ ತಂಡಗಳು ಪ್ಲೇಆಫ್‌ಗೆ ತಲುಪಲು ತೀವ್ರ ಸ್ಪರ್ಧೆ ನಡೆಸುತ್ತಿವೆ. ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು 7 ಪಂದ್ಯಗಳನ್ನಾಡಿದ್ದು, 4 ಗೆಲುವು ಮತ್ತು 3 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ತವರಿನಾಚೆ ನಡೆದ 4 ಪಂದ್ಯಗಳಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿದರೆ, ತವರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 3 ಪಂದ್ಯಗಳಲ್ಲಿ ಹ್ಯಾಟ್ರಿಕ್ ಸೋಲು ಕಂಡಿದೆ.
A Fan hangs the “Nimbu Mirchi” outside Chinnaswamy Stadium.
– I Hope this brings some luck to RCB at Chinnaswamy. pic.twitter.com/yMWjIERCSW
— Nikhil (@TheCric8Boy) April 17, 2025
ಆರ್‌ಸಿಬಿಯ ಈ ಆವೃತ್ತಿಯ ಪಯಣವು ಶುಭಾರಂಭದೊಂದಿಗೆ ಆರಂಭವಾಯಿತು. ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು. ಚೆನ್ನೈನ ಚೆಪಾಕ್ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 50 ರನ್‌ಗಳ ಗೆಲುವು ಸಾಧಿಸಿತು. ಆದರೆ, ತವರಿನಲ್ಲಿ ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ಸತತ ಸೋಲು ಕಂಡಿತು. ಇದಕ್ಕೆ ವಿರುದ್ಧವಾಗಿ, ಮುಂಬೈನ ವಾಂಖೆಡೆ ಮೈದಾನದಲ್ಲಿ 12 ರನ್‌ಗಳ ರೋಚಕ ಗೆಲುವು ಮತ್ತು ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 9 ವಿಕೆಟ್‌ಗಳ ಗೆಲುವು ದಾಖಲಿಸಿತು.
Dear ASI (@ASIGoI),
Please investigate Chinnaswamy Stadium, Bengaluru. It feels like a cursed ancient temple is buried beneath. Kindly excavate and, destroy the stadium.
RCB fans’ mental health is at stake.
🙏#RCB #IPL2025— *Error* (@nikXvk) April 19, 2025
ತವರಿನಲ್ಲಿ ಆರ್‌ಸಿಬಿಯ ಹೀನಾಯ ಪ್ರದರ್ಶನವು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ನೆಟ್ಟಿಗರು “ಆರ್‌ಸಿಬಿಗೆ ದೃಷ್ಟಿ ಬಿದ್ದಿದೆ” ಎಂದು ಹಾಸ್ಯದಿಂದ ಸ್ಟೇಡಿಯಂ ಗೇಟ್‌ಗೆ ನಿಂಬೆ-ಮೆಣಸಿನ ಕಾಯಿ ಹಾರ ಕಟ್ಟಿದ್ದಾರೆ. ಇನ್ನು ಕೆಲವರು ಮೀಮ್ಸ್ ಮೂಲಕ ಚಿನ್ನಸ್ವಾಮಿ ಸ್ಟೇಡಿಯಂನ ಕಾಲೆಳೆದಿದ್ದಾರೆ. ಆದರೆ, ಒಬ್ಬ ನೆಟ್ಟಿಗನ ಆಗ್ರಹವು ಎಲ್ಲರ ಗಮನ ಸೆಳೆದಿದೆ. ಚಿನ್ನಸ್ವಾಮಿ ಸ್ಟೇಡಿಯಂ ಕೆಳಗೆ ಪುರಾತನ ದೇವಾಲಯ ಇದೆ ಎಂದು ಊಹಿಸಿ, ಭಾರತದ ಪುರಾತತ್ವ ಇಲಾಖೆಯಿಂದ ಉತ್ಖನನ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಈ ರೀತಿಯ ಚರ್ಚೆಯಿಂದ ಆರ್‌ಸಿಬಿಯ ತವರಿನ ಸೋಲಿನ ಸರಣಿಯನ್ನು ನೆಟ್ಟಿಗರು ಸೃಜನಾತ್ಮಕವಾಗಿ ವ್ಯಕ್ತಪಡಿಸಿದ್ದಾರೆ.
— Out Of Context Cricket (@GemsOfCricket) April 19, 2025
ಇದೀಗ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಏಪ್ರಿಲ್ 20, 2025 ರಂದು ಚಂಡೀಘಡದ ಮುಲ್ಲಾನ್‌ಪುರ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮತ್ತೊಮ್ಮೆ ಎದುರಿಸಲು ಸಜ್ಜಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ, ತವರಿನಲ್ಲಿ ಕಂಡ ಸೋಲಿಗೆ ಸೇಡು ತೀರಿಸಿಕೊಳ್ಳಲು ಆರ್‌ಸಿಬಿ ತಂಡವು ಎದುರು ನೋಡುತ್ತಿದೆ. ಜೊತೆಗೆ, ತವರಿನಾಚೆ ತಮ್ಮ ಗೆಲುವಿನ ಓಟವನ್ನು ಮುಂದುವರೆಸಲು ತಂಡವು ಕನಸು ಕಾಣುತ್ತಿದೆ.