ನವದೆಹಲಿ: ಶತಮಾನಗಳಿಂದ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನ ಪಡೆದಿರುವ ಹನುಮಾನ ಚಾಲೀಸಾ ಪಠಣವು ಕೇವಲ ಆಧ್ಯಾತ್ಮಿಕ ಲಾಭಗಳನ್ನೇ ಅಲ್ಲ, ಇದೀಗ ವಿಜ್ಞಾನವೂ ಇದರ ಆರೋಗ್ಯದ ಲಾಭಗಳನ್ನು ದೃಢಪಡಿಸಿದೆ. ಹಿಂದಿನ ದಿನಗಳಲ್ಲಿ ಇದನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಪಠಿಸಲಾಗುತ್ತಿತ್ತು. ಆದರೆ ಇತ್ತೀಚಿನ ಸಂಶೋಧನೆಗಳು ಇದರ ಪಾಠದ ಮನೋವೈಜ್ಞಾನಿಕ ಮತ್ತು ದೈಹಿಕ ಪರಿಣಾಮಗಳನ್ನು ವಿವರಿಸುತ್ತಿವೆ.
ಆಧ್ಯಾತ್ಮಿಕ ಶಾಂತಿಯಿಂದ ವೈಜ್ಞಾನಿಕ ಶಾಂತಿವರೆಗೆ
ಹನುಮಾನ ಚಾಲೀಸಾ ಪಠಣವು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ ಎಂದು ಹಲವು ಅಧ್ಯಯನಗಳು ಸೂಚಿಸಿವೆ. ಇದರಲ್ಲಿ 40 ಶ್ಲೋಕಗಳಿದ್ದು, ಅವುಗಳಲ್ಲಿ ಹೆಚ್ಚಿನವು ಅನುಷ್ಟುಪ್ ಛಂದಸ್ಸಿನಲ್ಲಿ ರಚಿಸಲ್ಪಟ್ಟಿವೆ. ಈ ಶ್ಲೋಕಗಳ ಲಯಬದ್ಧ ಧ್ವನಿ ಮೆದುಳಿನ ಅಲೆಗಳನ್ನು ಶಾಂತಗೊಳಿಸುವ ಪ್ರಭಾವವನ್ನು ಉಂಟುಮಾಡುತ್ತದೆ. ಬಿಟ್ಟಾ ಅಲೆಗಳಿಂದ ಆಲ್ಫಾ ಅಲೆಗಳಿಗೆ ಬದಲಾಗುವ ಈ ಪ್ರಕ್ರಿಯೆ, ವ್ಯಕ್ತಿಯ ಮನಸ್ಸಿಗೆ ಮತ್ತು ಮೆದುಳಿಗೆ ಆಳವಾದ ಶಾಂತಿಯನ್ನು ನೀಡುತ್ತದೆ.
ಧ್ವನಿ ಕಂಪನದಿಂದ ಹಾರ್ಮೋನ್‌ಗಳ ಸಮತೋಲನ
ಹನುಮಾನ ಚಾಲೀಸಾದ ಕೆಲವು ಶ್ಲೋಕಗಳು, ವಿಶೇಷವಾಗಿ “ರಾಮದೂತ ಅತುಲಿತ ಬಲಧಾಮಾ…” ಎಂಬಂತಹ ಪಂಕ್ತಿಗಳು, ನಿತ್ಯ ಪಠಿಸಲ್ಪಟ್ಟಾಗ ದೇಹದಲ್ಲಿ ಧ್ವನಿಯ ಕಂಪನಗಳು ಉಂಟಾಗುತ್ತವೆ. ಈ ಕಂಪನಗಳು ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಮಟ್ಟವನ್ನು ಕಡಿಮೆ ಮಾಡುತ್ತವೆ. ಸೆರೋಟೋನಿನ್ ಹಾಗೂ ಡೋಪಮೈನ್ ಹಾರ್ಮೋನ್‌ಗಳನ್ನು ಹೆಚ್ಚಿಸುತ್ತವೆ. ಇದರ ಪರಿಣಾಮವಾಗಿ ದೇಹದ ಪ್ಯಾರಾಸಿಂಪಥೆಟಿಕ್ ನರ ವ್ಯವಸ್ಥೆ ಸಕ್ರಿಯಗೊಳ್ಳುತ್ತದೆ. ಇದು ದೇಹದಲ್ಲಿ ಶಾಂತಿಯ ಸ್ಥಿತಿಯನ್ನು ಕಾಪಾಡಲು ಸಹಾಯ ಮಾಡುತ್ತದೆ.
ಹೃದಯಾಘಾತ ಹಾಗೂ ಮಾನಸಿಕ ಕಾಯಿಲೆಗಳಿಂದ ರಕ್ಷಣೆ
ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ICMR) ಮತ್ತು ಏಮ್ಸ್ (AIIMS) ನಡೆಸಿದ ಸಂಶೋಧನೆಯ ಪ್ರಕಾರ, ಹನುಮಾನ ಚಾಲೀಸಾ ಪಠಣವು ಹೃದಯ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ದಿನಕ್ಕೆ ಕೇವಲ 10 ನಿಮಿಷಗಳು ಈ ಪಠಣ ಮಾಡಿದಾಗ, ಹೃದಯ ಬಡಿತ ಸ್ವಾಭಾವಿಕವಾಗುತ್ತದೆ, ರಕ್ತದೊತ್ತಡ ನಿಯಂತ್ರಣದಲ್ಲಿ ಇರುತ್ತದೆ ಮತ್ತು ಉತ್ತಮ ನಿದ್ರೆಗೆ ಸಹಾಯವಾಗುತ್ತದೆ. ಇದರ ಜೊತೆಗೆ, PTSD (ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್), ಆತಂಕ ಹಾಗೂ ADHD (ಅಟೆನ್ಷನ್ ಡೆಫಿಸಿಟ್ ಹೈಪರ್‌ಆಕ್ಟಿವಿಟಿ ಡಿಸಾರ್ಡರ್) ಸಮಸ್ಯೆಗಳನ್ನು ಕಡಿಮೆ ಮಾಡುವ ಶಕ್ತಿಯೂ ಇದರಲ್ಲಿ ಇದೆ ಎಂಬುದು ಸ್ಪಷ್ಟವಾಗಿದೆ.
ವಿದ್ಯಾರ್ಥಿಗಳ ಮೇಲಿನ ಪ್ರಯೋಗದ ಪರಿಣಾಮ
‘ಜರ್ನಲ್ ಆಫ್ ಇವಲ್ಯೂಷನ್ ಆಫ್ ಮೆಡಿಕಲ್ ಅಂಡ್ ಡೆಂಟಲ್ ಸೈನ್ಸಸ್’ನಲ್ಲಿ ಪ್ರಕಟವಾದ ಮೀರಾ ಗೋಯಲ್ ಅವರ ಅಧ್ಯಯನದಲ್ಲಿ, 18 ರಿಂದ 22 ವರ್ಷದ ವಯಸ್ಸಿನ 20 ಎಂಬಿಬಿಎಸ್ ವಿದ್ಯಾರ್ಥಿಗಳ ಮೇಲೆ ನಡೆಸಲಾದ ಪ್ರಯೋಗದಲ್ಲಿ, 10 ನಿಮಿಷಗಳ ಕಾಲ ಹನುಮಾನ ಚಾಲೀಸಾ ಕೇಳಿಸಿದ ನಂತರ ಅವರ ರಕ್ತದೊತ್ತಡದಲ್ಲಿ ಗಣನೀಯವಾಗಿ ನಿಯಂತ್ರಣದಲ್ಲಿರಲು ಸಹಾಯವಾಗಿದೆ. ಇದು ನಿಜಕ್ಕೂ ಧ್ವನಿಯ ಪರಿಣಾಮದ ವೈಜ್ಞಾನಿಕ ದೃಢೀಕರಣವನ್ನೇ ಸೂಚಿಸುತ್ತದೆ.
ನಿತ್ಯ ಪಠಣದ ಪ್ರಯೋಜನಗಳು
ಹನುಮಾನ ಚಾಲೀಸಾ ಪಠಣವು ಕೇವಲ ಧಾರ್ಮಿಕ ಆಚರಣೆ ಎಂದುಕೊಳ್ಳದೇ, ಇದನ್ನು ದೈನಂದಿನ ಜೀವನದಲ್ಲಿ ಒಳಗೊಂಡು ಉತ್ತಮ ಆರೋಗ್ಯಕ್ಕಾಗಿ ಉಪಯೋಗಿಸಿಕೊಳ್ಳಬಹುದು. ಇದು ನಿತ್ಯ ಪಠಣ ಮಾಡುವವರಿಗೆ ಮನಸ್ಸಿನ ನೆಮ್ಮದಿ, ದೈಹಿಕ ಆರೋಗ್ಯ, ಮತ್ತು ಧೈರ್ಯವನ್ನು ಒದಗಿಸುತ್ತದೆ. ಜೊತೆಗೆ, ಬುದ್ಧಿಮತ್ತೆ, ಏಕಾಗ್ರತೆ ಮತ್ತು ಧ್ಯಾನ ಶಕ್ತಿ ಹೆಚ್ಚಿಸಲು ಸಹಾಯಮಾಡುವ ಶಕ್ತಿಯೂ ಇದರಲ್ಲಿ ಅಡಗಿದೆ. ಹನುಮಾನ ಚಾಲೀಸಾ ಪಠಣವು ಶ್ರದ್ಧೆ ಮತ್ತು ವಿಜ್ಞಾನ ಎರಡಕ್ಕೂ ಸೇತುಬಂಧನವಾಗಿ ಪರಿಣಮಿಸಿದೆ.