ಸಂಖ್ಯಾಶಾಸ್ತ್ರ ಪ್ರಕಾರ ಪ್ರತಿ ವ್ಯಕ್ತಿಯ ಜನ್ಮಸಂಖ್ಯೆ ಅವರ ದಿನದ ಎನರ್ಜಿ, ಮನಸ್ಥಿತಿ, ಅವಕಾಶಗಳು ಮತ್ತು ಸವಾಲುಗಳ ಬಗ್ಗೆ ಅನೇಕ ಸೂಚನೆಗಳನ್ನು ನೀಡುತ್ತದೆ. ನಿಮ್ಮ ಜನ್ಮತಿಥಿಯ ಅಂಕಗಳನ್ನು ಒಟ್ಟು ಮಾಡಿದಾಗ ಬರುವ ಸಂಖ್ಯೆ ನಿಮ್ಮ ಜನ್ಮಸಂಖ್ಯೆ. ಉದಾಹರಣೆಗೆ 10 = 1+0 = 1. ಈ ಆಧಾರದ ಮೇಲೆ ನವೆಂಬರ್ 23ರ ದಿನಭವಿಷ್ಯ ಹೀಗಿದೆ.
ಜನ್ಮಸಂಖ್ಯೆ 1 (1, 10, 19, 28)
ಇಂದು ನೀವು ಸ್ವಲ್ಪ ಉತ್ಸಾಹದ ಕೊರತೆಯನ್ನು ಅನುಭವಿಸಬಹುದು. ಕೆಲಸದಲ್ಲಿ ಯಥೇಚ್ಚ ಚಟುವಟಿಕೆ ಸಾಧ್ಯವಾಗದೇ ಮನಸ್ಸು ಅಲೆಮಾರಿಯಾಗುವ ಸಾಧ್ಯತೆ ಇದೆ. ಮಾಧ್ಯಮ ಕ್ಷೇತ್ರದವರು ಹೊಸ ಜವಾಬ್ದಾರಿಗಳನ್ನು ಸ್ವೀಕರಿಸುವ ಸೂಚನೆಗಳಿವೆ. ಸ್ನೇಹಿತರ ಅಥವಾ ಸಂಬಂಧಿಗಳ ಕಾರ್ಯಕ್ರಮಗಳಿಗೆ ಹೋಗಲು ಒತ್ತಾಯ ಬರಬಹುದು. ಹೋಗುವ ಮೊದಲು ಮನಃಶಾಂತಿ ಹಾಗೂ ನಿಮ್ಮ ಸ್ಥಿತಿಯನ್ನು ಪರಿಗಣಿಸಿ. ನಿಮ್ಮ ಮನಃಸ್ಥಿತಿಯನ್ನು ಇತರರು ತಪ್ಪಾಗಿ ಅರ್ಥೈಸುವ ಸಾಧ್ಯತೆ ಇರುವುದರಿಂದ ಜಾಗರೂಕರಾಗಿರಿ. ಇಂದು ಬಿಳಿ ಬಣ್ಣ ಧರಿಸುವುದು ಶುಭ.
ಜನ್ಮಸಂಖ್ಯೆ 2 (2, 11, 20, 29)
ದೈವಸ್ಥಳಗಳ ಭೇಟಿ, ತೀರ್ಥಯಾತ್ರೆಗಳ ಯೋಗ ಸಾಧ್ಯ. ನೀವು ಪ್ಲ್ಯಾನ್ ಮಾಡದಿದ್ದರೂ, ಮತ್ತೊಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ಆ ಅವಕಾಶ ಬರಬಹುದು. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಚಿಕಿತ್ಸೆ ಬಗ್ಗೆ ಸೂಕ್ತ ಮಾಹಿತಿ ಸಿಗಲಿದೆ. ಮಾಂಸಾಹಾರ ಸೇವಕರು ಇಂದು ಭಾರವಾದ, ಜಿಡ್ಡಾದ ಆಹಾರವನ್ನು ತಪ್ಪಿಸುವುದು ಉತ್ತಮ. ಯಾಕೆಂದರೆ ಹೊಟ್ಟೆನೋವು ಅಥವಾ ದಹನ ಸಮಸ್ಯೆಗಳು ಎದುರಾಗಬಹುದು.
ಜನ್ಮಸಂಖ್ಯೆ 3 (3, 12, 21, 30)
ಇಂದು ಬರಿಗಾಲಿನಲ್ಲಿ ನಡೆದು ಹೋಗುವಾಗ ಹೆಚ್ಚಾಗಿ ಎಚ್ಚರಿಕೆ ವಹಿಸಬೇಕು. ಗಾಜು, ಮುಳ್ಳು ಚೂರುಗಳಿಂದ ಗಾಯವಾಗುವ ಸೂಚನೆ. ಅಗತ್ಯವಿಲ್ಲ ಎನ್ನಲಾಗಿದ್ದ ಹಣಕಾಸು ಕಾರ್ಯಕ್ಕೂ ಸಾಲ ಪಡೆಯುವ ವಿಚಾರ ಚರ್ಚೆಗೆ ಬರಬಹುದು. ಫೋಟೋಗ್ರಾಫರ್‌ಗಳಿಗೆ ಹೊಸ ಟೆಕ್ನಾಲಜಿ ಅಳವಡಿಸಲು ಸಹಾಯ ಸಿಗುತ್ತದೆ. “ಬಹಳ ಬೇಗ ಹಣ ಮಾಡಬಹುದು” ಎಂಬ ಆಕರ್ಷಕ ಮಾತುಗಳಿಂದ ದೂರವಿರಿ. ಹೊಸ ಪರಿಚಯಸ್ಥರಿಗೆ ಸ್ನೇಹಿತರನ್ನು ರೆಫರ್ ಮಾಡಬೇಡಿ.
ಜನ್ಮಸಂಖ್ಯೆ 4 (4, 13, 22, 31)
ಡೇರಿ ಉತ್ಪನ್ನಗಳ ವ್ಯಾಪಾರದಲ್ಲಿರುವವರಿಗೆ ಲಾಭ ಹೆಚ್ಚಾಗಲಿದೆ. ದೇವರಮನೆಗೆ ಸಂಬಂಧಿಸಿದ ಖರೀದಿ ವಿಚಾರವಾಗಿ ಹೆಚ್ಚು ಸಮಯ ಹೂಡಬಹುದು. ಮನೆಯ ವಾಸ್ತು ಬದಲಾವಣೆ ಯೋಚಿಸುತ್ತಿದ್ದರೆ ತಜ್ಞರ ಭೇಟಿಗೆ ಅವಕಾಶ ಸಿಗುತ್ತದೆ. ಕೃಷಿ ವಿಜ್ಞಾನಿಗಳಿಗೆ ಪ್ರೆಸ್ಟೀಜಸ್ ಸಂಸ್ಥೆಯಿಂದ ದೊಡ್ಡ ಯೋಜನೆಗಳನ್ನು ಮುನ್ನಡೆಸುವ ಅವಕಾಶ.
ಜನ್ಮಸಂಖ್ಯೆ 5 (5, 14, 23)
ನಿಮ್ಮ ನಿಷ್ಠೆ ಮತ್ತು ವಿಶ್ವಾಸಾರ್ಹತೆಯನ್ನು ತೋರಿಸಬೇಕಾದ ಸಂದರ್ಭ ಎದುರಾಗಬಹುದು. ಸಂಗಾತಿಯ ಆರ್ಥಿಕ ವಿಚಾರಗಳಿಗೆ ನಿಮ್ಮ ಬೆಂಬಲ ಅತ್ಯಗತ್ಯವಾಗುತ್ತದೆ. ಟ್ಯೂಷನ್ ಶಿಕ್ಷಕರು ಅಥವಾ ಉಪನ್ಯಾಸಕರಿಗೆ ಹಣದ ಹರಿವಿನಲ್ಲಿ ಕುಸಿತ ಕಂಡು ಆತಂಕ ಆಗಬಹುದು. ಇತ್ತೀಚೆಗೆ ಬೆಂಬಲ ನೀಡುತ್ತಿದ್ದವರು ತಮ್ಮಿಂದ ಮುಂದೆ ಸಹಾಯ ಸಾಧ್ಯವಿಲ್ಲ ಎಂದು ಹೇಳಬಹುದು. ಮದುವೆ ವಿಚಾರದಲ್ಲಿ ಅಡೆತಡೆ. ಮುಜುಗರದ ಸ್ಥಿತಿಗಳೂ ಎದುರಾಗಬಹುದು.
ಜನ್ಮಸಂಖ್ಯೆ 6 (6, 15, 24)
ನೆರೆಯವರ ಜೊತೆ ಅನಗತ್ಯ ಕಲಹಗಳನ್ನು ತಪ್ಪಿಸಿಕೊಳ್ಳಿ. ಪಾರ್ಕಿಂಗ್ ಅಥವಾ ಸಣ್ಣ ಮಾತುಗಳಿಂದ ದೊಡ್ಡ ಗಲಾಟೆಯಾಗದಂತೆ ಜಾಗರೂಕರಾಗಿರಿ. ಹಣ ಬಾಕಿ ಇದ್ದರೆ ಇಂದು ಅದನ್ನು ವಾಪಸ್ ಪಡೆಯಲು ಪ್ರಯತ್ನಿಸುವುದು ಉತ್ತಮ. ಕೆಲಸ ಕೈಕೊಂಡು ಮಾಡುವವರು ಮೊದಲೇ ಚಾರ್ಜ್‌ಗಳನ್ನು ಸ್ಪಷ್ಟವಾಗಿ ಹೇಳುವುದು ಅಗತ್ಯ. ಲೇಬರ್ ಅಥವಾ ಅಸಿಸ್ಟೆಂಟ್ ಲಭ್ಯವಿರುವುದನ್ನು ದೃಢಪಡಿಸಿ. ಇಲ್ಲದಿದ್ದರೆ ಗಡುವು ತಪ್ಪಿ ಮುಜುಗರಕ್ಕೆ ಸಿಲುಕಬಹುದು.
ಜನ್ಮಸಂಖ್ಯೆ 7 (7, 16, 25)
ಮುಂದಿನ ದಿನಗಳಲ್ಲಿ ನಿಮಗೆ ಏನು ಲಾಭ ಎಂಬುದನ್ನು ಆಲೋಚಿಸಬೇಕಾದ ದಿನ. ಮಕ್ಕಳ ಶಿಕ್ಷಣಕ್ಕಾಗಿ ಯೋಜನೆಗಳು ಮುಂದುವರಿಯುತ್ತವೆ. ವೀಸಾ ಸಂಬಂಧಿಸಿದ ಅಡೆತಡೆಗಳಿಗೆ ವಿದೇಶದ ಸ್ನೇಹಿತರ ಸಹಾಯ ಸಿಗಬಹುದು. ಕೃಷಿಕರಿಗೆ ಧಾನ್ಯಗಳ ಮಾರಾಟದಲ್ಲಿ ಲಾಭದ ಸೂಚನೆ ಇದೆ. ಸಮಾಜ ಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ದೊಡ್ಡ ಅನುದಾನ ಸಾಧ್ಯ. ಮುಖ್ಯ ಕೆಲಸಗಳನ್ನು ಮುಂದೂಡುವುದು ಬೇಡ.
ಜನ್ಮಸಂಖ್ಯೆ 8 (8, 17, 26)
ಸರ್ಕಾರಿ ನೌಕರಿಯಾಗಲು ಬಯಸುವವರಿಗೆ ಬೇಕಾದ ತರಬೇತಿ ಬಗ್ಗೆ ಮಾಹಿತಿ ದೊರೆಯಲಿದೆ. ಮ್ಯಾಟ್ರಿಮೋನಿ ಮೂಲಕ ಉತ್ತಮ ಸಂಬಂಧಗಳು ಬಾರದಿಲ್ಲ. ವೈದ್ಯಕೀಯ ವೆಚ್ಚ ಹೆಚ್ಚಾಗಬಹುದಾದ ಕಾರಣ ಹಿಂದಿನ ಶಸ್ತ್ರಚಿಕಿತ್ಸೆಯ ಫಾಲೋ-ಅಪ್ ಮಿಸ್ ಮಾಡಬೇಡಿ. ಬೆಳ್ಳಿ ಪಾತ್ರೆಗಳು, ಚಿನ್ನದ ನಾಣ್ಯಗಳು ಮುಂತಾದ ಹೂಡಿಕೆಗಳ ಖರೀದಿ ಯೋಗ.
ಜನ್ಮಸಂಖ್ಯೆ 9 (9, 18, 27)
ಇಂದು ಕೆಲಸದ ಒತ್ತಡ ಹೆಚ್ಚಾಗಬಹುದು. ಊಟಕ್ಕೂ ಸಮಯ ಸಿಗದ ಪರಿಸ್ಥಿತಿಯೂ ಸಾಧ್ಯ. ನಿಮ್ಮ ಶ್ರಮದಿಂದ ದೊಡ್ಡ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ಕಾರ್ಯಸಾಧನೆ ಸುಲಭ. ತಾಯಿ-ತಂದೆಗಾಗಿ ಹೆಲ್ತ್ ಇನ್ಷೂರೆನ್ಸ್ ಬಗ್ಗೆ ವಿಚಾರಣೆ ನಡೆಯಲಿದೆ. ಕುಟುಂಬದ ಜೊತೆಗೆ ರೆಸ್ಟೋರೆಂಟ್ ಗೆ ಹೋಗಿ ಸಮಯ ಕಳೆಯುವ ಸಾಧ್ಯತೆ.





