ಜನ್ಮದಿನದ ಆಧಾರದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಉಂಟಾಗುವ ಶಕ್ತಿ, ಅವಕಾಶ ಮತ್ತು ಸವಾಲುಗಳು ವಿಭಿನ್ನವಾಗಿರುತ್ತವೆ. ನಿಮ್ಮ ಜನ್ಮಸಂಖ್ಯೆ (Birth Number) ತಿಳಿಯಲು ನಿಮ್ಮ ಜನ್ಮ ದಿನಾಂಕದ ಅಂಕೆಗಳನ್ನು ಪರಿಗಣಿಸಬೇಕು. ಈಗ ನವೆಂಬರ್ 2ರ ಭಾನುವಾರದ ದಿನಭವಿಷ್ಯವನ್ನು ಸಂಖ್ಯಾಶಾಸ್ತ್ರದ ಪ್ರಕಾರ ತಿಳಿದುಕೊಳ್ಳಿ.
ಜನ್ಮಸಂಖ್ಯೆ 1 (1, 10, 19, 28) ಬಲವಂತದ ಕೆಲಸಗಳನ್ನು ತಪ್ಪಿಸಿ. ಇತರರ ಆಸಕ್ತಿ, ಸಮಯವನ್ನು ಪರಿಗಣಿಸಿ. ಕಾರು ಚಾಲಕರಿಗೆ ಆದಾಯ ಹೆಚ್ಚಳದ ಅವಕಾಶ. ಮಾಂಸಾಹಾರಿಗಳು ತಾಜಾ ಆಹಾರಕ್ಕೆ ಗಮನ ನೀಡಿ ಅಥವಾ ದೂರವಿರಿ. ಎಲೆಕ್ಟ್ರಾನಿಕ್ ಉಪಕರಣಗಳ ರಿಪೇರಿಗೆ ಹೆಚ್ಚು ಖರ್ಚು ಸಾಧ್ಯ. ವಾಹನ ಖರೀದಿಗೆ ಹಣದ ವ್ಯವಸ್ಥೆ ಸುಲಭ.
ಜನ್ಮಸಂಖ್ಯೆ 2 (2, 11, 20, 29) ಸ್ನೇಹಿತರೊಂದಿಗೆ ಹೋಟೆಲ್ ಭೋಜನ. ಹಿಂದಿನ ಅಭಿಪ್ರಾಯಗಳನ್ನು ಬದಲಾಯಿಸುವ ಆಲೋಚನೆ. ಫ್ರೀಲ್ಯಾನ್ಸರ್‌ಗಳಿಗೆ ಹೊಸ ಆಫರ್. ಸಾಲ ನೀಡುವ ಒತ್ತಡ. ಮಾಧ್ಯಮ ಕೆಲಸದಲ್ಲಿ ಒತ್ತಡ ಹೆಚ್ಚು. ಮಕ್ಕಳ ಶಿಕ್ಷಣಕ್ಕೆ ಉಳಿತಾಯ ತೆಗೆಯುವ ನಿರ್ಧಾರ. ಬ್ಯೂಟಿ ಪಾರ್ಲರ್ ಸ್ಥಳಾಂತರದ ಯೋಜನೆ.
ಜನ್ಮಸಂಖ್ಯೆ 3 (3, 12, 21, 30) ದೇವಾಲಯ ಅಥವಾ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ. ಬಾಲ್ಯದಿಂದ ಪರಿಚಯದ ವ್ಯಕ್ತಿಯೊಬ್ಬರಿಂದ ಉಪಯುಕ್ತ ಮಾಹಿತಿ ದೊರೆಯಲಿದೆ. ಕೃಷಿ ಕ್ಷೇತ್ರದಲ್ಲಿ ಇರುವವರಿಗೆ ಆದಾಯದ ಅವಕಾಶಗಳು ಹೆಚ್ಚಾಗುವ ಯೋಗವಿದೆ. ಸಣ್ಣ ಒಡವೆಗಳು ಕಳೆದುಹೋಗದಂತೆ ಎಚ್ಚರಿಕೆ ಅಗತ್ಯ. ಹೊಸ ಬಟ್ಟೆ ಖರೀದಿಗೆ ಹಣ ವ್ಯಯವಾಗಬಹುದು.
ಜನ್ಮಸಂಖ್ಯೆ 4 (4, 13, 22, 31) ಸಂಭ್ರಮದಲ್ಲಿ ತುರ್ತು ಕೆಲಸ. ದಿನದ ಕೊನೆಯಲ್ಲಿ ಖರ್ಚು ಹೆಚ್ಚಾದರೂ ತೃಪ್ತಿ ಸಿಗುತ್ತದೆ. ಇತರರ ಮೇಲೆ ನೇರವಾಗಿ ಅಭಿಪ್ರಾಯ ಹೇಳುವ ಸಂದರ್ಭ ಬಂದು ಅಚ್ಚರಿ ಉಂಟುಮಾಡಬಹುದು. ಔಷಧ ಪಥ್ಯದಲ್ಲಿ ಬದಲಾವಣೆ ಮಾಡದಿರಿ, ಅಲರ್ಜಿ ಸಾಧ್ಯತೆ. ರಹಸ್ಯ ವಿಚಾರಗಳನ್ನು ಯಾರ ಎದುರು ಚರ್ಚಿಸಬೇಡಿ.
ಜನ್ಮಸಂಖ್ಯೆ 5 (5, 14, 23) ಹಳೆಯ ಸ್ನೇಹಿತರು ಅಥವಾ ನೆರೆಹೊರೆಯವರೊಂದಿಗೆ ಆಕಸ್ಮಿಕವಾಗಿ ಭೇಟಿಯಾಗುವ ಯೋಗ. ಹೊಸ ಮಾಹಿತಿ, ಹೊಸ ಯೋಜನೆಗಳು ಕೈಗೆ ಬರುತ್ತವೆ. ಕೆಲವು ಕೆಲಸಗಳನ್ನು ಮುಂದುವರಿಸಲು ತೀರ್ಮಾನ ಕೈಗೊಳ್ಳುವಿರಿ. ಲೇವಾದೇವಿ ವ್ಯವಹಾರಗಳನ್ನು ಮುಗಿಸಿ ಹೊಸ ಆದಾಯದ ಮಾರ್ಗ ಹುಡುಕುವಿರಿ. ಫ್ಯಾಷನ್ ವಸ್ತುಗಳು, ಪರ್ಫ್ಯೂಮ್ ಖರೀದಿಗೆ ಕ್ರೆಡಿಟ್ ಕಾರ್ಡ್ ಬಳಕೆಯಿಂದ ಖರ್ಚು ಹೆಚ್ಚಾಗಬಹುದು.
ಜನ್ಮಸಂಖ್ಯೆ 6 (6, 15, 24) ಅರೆಬರೆ ಮನಸ್ಸಿನಿಂದ ಕೆಲಸ ಆರಂಭಿಸಬೇಡಿ. ಸ್ವತಂತ್ರ ಜೀವನ ಬಯಸುವವರು ಅದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ ಸ್ಪಷ್ಟವಾಗುತ್ತದೆ. ಹಳೆಯ ವಸ್ತುಗಳನ್ನು ಮಾರಾಟ ಮಾಡಲು ಖರೀದಿದಾರರು ಸಿಗುವ ಸಾಧ್ಯತೆ. ಪೂಜೆ ಅಥವಾ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ.
ಜನ್ಮಸಂಖ್ಯೆ 7 (7, 16, 25) ನಿಮ್ಮ ಬಗ್ಗೆ ಇತರರ ವಿರೋಧಾತ್ಮಕ ನಿಲುವು ಕಾಡಬಹುದು. ಆಪ್ತರು ಎಚ್ಚರಿಕೆ ನೀಡಬಹುದು – ಅದನ್ನು ಗಂಭೀರವಾಗಿ ಪರಿಗಣಿಸಿ. ಅಜೀರ್ಣ ಅಥವಾ ಹೊಟ್ಟೆ ಸಮಸ್ಯೆ ಹೆಚ್ಚಾಗಬಹುದು, ಖಾರ-ಮಸಾಲೆ ತಪ್ಪಿರಿ. ಪರಿಚಿತ ಸಂಸ್ಥೆಯಲ್ಲಿನ ಬದಲಾವಣೆ ನಿಮಗೆ ಅಚ್ಚರಿ ತರುತ್ತದೆ. ಹಣಕಾಸು ಉಳಿತಾಯದ ದೃಷ್ಟಿಯಲ್ಲಿ ಹೊಸ ಆಲೋಚನೆ ಮೂಡುತ್ತದೆ.
ಜನ್ಮಸಂಖ್ಯೆ 8 (8, 17, 26) ಪ್ರಯಾಣದಲ್ಲಿದ್ದರೆ ಮನೆಯಿಂದ ದೂರವಾಗಿರುವ ಭಾವನೆ ಕಾಡಬಹುದು. ಆಹಾರ, ಸ್ವಚ್ಛತೆ ವಿಷಯದಲ್ಲಿ ಕಿರಿಕಿರಿ. ಬಾಕಿ ಉಳಿದ ಹಣ ವಸೂಲಿಯ ಯೋಗವಿದೆ. ಸ್ನೇಹಿತರು ಅಥವಾ ಸಂಬಂಧಿಕರು ಸಹಾಯ ಮಾಡಬಹುದು. ಕಷ್ಟವೆನಿಸಿದ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ನೇರ ನಡವಳಿಕೆಯಿಂದ ಕೆಲವು ಅವಕಾಶ ಕಳೆದುಕೊಳ್ಳುವ ಸಾಧ್ಯತೆ.
ಜನ್ಮಸಂಖ್ಯೆ 9 (9, 18, 27) ಸಂಬಂಧಿಕರ ಸಹಾಯ. ಹಿಂದಿನ ಸಹಾಯಕರು ಮುಂದಾಗುವರು. ಕುಟುಂಬದಲ್ಲಿ ಸಂತಸದ ವಾತಾವರಣ. ಹಾಸ್ಯದ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಸ್ನೇಹಿತರಿಂದ ಬಂದ ಸಲಹೆ ಆಳವಾದ ಅರ್ಥ ಹೊಂದಿರಬಹುದು. ತಾಯಿ ಅಥವಾ ತಾಯಿ ಸಮಾನ ವ್ಯಕ್ತಿಗೆ ವಸ್ತ್ರ ಅಥವಾ ಒಡವೆ ಕೊಳ್ಳುವ ಯೋಗವಿದೆ.





