ಜನ್ಮಸಂಖ್ಯೆ ಎಂದರೆ ನೀವು ಜನಿಸಿದ ದಿನಾಂಕದ ಅಂಕಿಗಳ ಮೊತ್ತವನ್ನು ಒಂದೇ ಅಂಕೆ ಬರುವವರೆಗೆ ಕೂಡಿಸಿ ಬರುವ ಸಂಖ್ಯೆ. ಉದಾಹರಣೆಗೆ, ಯಾರಾದರೂ 15ನೇ ತಾರೀಕು ಹುಟ್ಟಿದರೆ, 1+5=6. ಅವರ ಜನ್ಮಸಂಖ್ಯೆ 6. ಈ ಜನ್ಮಸಂಖ್ಯೆಯ ಆಧಾರದ ಮೇಲೆ ಅಕ್ಟೋಬರ್ 29, ಬುಧವಾರದ ದಿನದ ಭವಿಷ್ಯ ಇಲ್ಲಿದೆ.
ಜನ್ಮಸಂಖ್ಯೆ 1 (1, 10, 19, 28 ರಂದು ಜನಿಸಿದವರು) ಈ ದಿನ ನಿಮಗೆ ಕಾರಣವಿಲ್ಲದೆ ಸಂತೋಷದ ಭಾವನೆ ಕಾಡಲಿದೆ. ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿರುವವರಿಗೆ ಗೌರವ, ಸನ್ಮಾನ ದೊರೆಯಲಿದೆ. ಹಿಂದೆ ಶ್ರಮಪಟ್ಟು ಗಳಿಸಿದ ಸ್ಥಾನ-ಮಾನಕ್ಕೆ ಇತರರಿಂದ ಮೆಚ್ಚುಗೆ ಲಭಿಸಲಿದೆ. ಉದ್ಯೋಗಕ್ಕಾಗಿ ದೀರ್ಘಕಾಲ ಪ್ರಯತ್ನಿಸುತ್ತಿರುವವರು ಸ್ವಂತ ವ್ಯವಹಾರ ಆರಂಭಿಸುವ ಆಲೋಚನೆಗೆ ಬರಬಹುದು. ಕೃಷಿಕರಿಗೆ ಹೆಚ್ಚುವರಿ ಭೂಮಿ ಖರೀದಿಸಿ ಹೊಸ ಬೆಳೆ ಬೆಳೆಯುವ ಯೋಜನೆ ಮೂಡಲಿದೆ.
ಜನ್ಮಸಂಖ್ಯೆ 2 (2, 11, 20, 29 ರಂದು ಜನಿಸಿದವರು) ನಿಮ್ಮ ಸಾಮರ್ಥ್ಯದ ಬಗ್ಗೆ ಸಂದೇಹ ಮೂಡಬಹುದು. ಮರೆತುಹೋದ ಕೆಲಸದಿಂದ ಮುಜುಗರಕ್ಕೆ ಒಳಗಾಗುವ ಸಾಧ್ಯತೆ ಇದೆ. ವೈದ್ಯಕೀಯ ಕ್ಷೇತ್ರದವರು ಸ್ವಂತ ಕ್ಲಿನಿಕ್ ಆರಂಭಿಸುವ ನಿರ್ಧಾರಕ್ಕೆ ಬರಬಹುದು. ಗ್ರಂಥಾಲಯದಲ್ಲಿ ಕೆಲಸ ಮಾಡುವವರಿಗೆ ಹೊಸ ಜವಾಬ್ದಾರಿಗಳು ಬರಲಿವೆ. ಬಾಡಿಗೆ ಮನೆಯವರು ವಾಸಸ್ಥಾನ ಬದಲಾಯಿಸುವ ಯೋಚನೆ ಮಾಡಲಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಹೊಸ ಯೋಜನೆಗಳು ರೂಪುಗೊಳ್ಳಲಿವೆ. ದಿನದ ಕೊನೆಗೆ ಸಮಾಧಾನದಾಯಕ ಬೆಳವಣಿಗೆಗಳು ನಡೆಯಲಿವೆ.
ಜನ್ಮಸಂಖ್ಯೆ 3 (3, 12, 21, 30 ರಂದು ಜನಿಸಿದವರು) ನಿಮಗೆ ಸಹಾಯ ಬೇಡ ಎಂದಿದ್ದವರು ಈಗ ಸಹಾಯ ಕೇಳಿಕೊಂಡು ಬರಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಆಲೋಚನೆ ಮೂಡಲಿದೆ. ಇತರರಿಗೆ ಕಾಣದ ವಿಷಯಗಳು ನಿಮ್ಮ ಗಮನಕ್ಕೆ ಬರಲಿವೆ. ಇದರ ಲಾಭವನ್ನು ಶೀಘ್ರವಾಗಿ ಪಡೆಯಿರಿ. ವ್ಯರ್ಥವೆಂದು ಭಾವಿಸಿದ್ದ ಹೂಡಿಕೆಯಿಂದ ಲಾಭ ಅಥವಾ ಅಸಲು ಮೊತ್ತಕ್ಕಿಂತ ಸ್ವಲ್ಪ ಹೆಚ್ಚಿನ ಆದಾಯ ಕಾಣಲಿದೆ.
ಜನ್ಮಸಂಖ್ಯೆ 4 (4, 13, 22, 31 ರಂದು ಜನಿಸಿದವರು) ಹಲವು ಕೆಲಸಗಳನ್ನು ಒಟ್ಟಿಗೆ ನಿರ್ವಹಿಸಬೇಕಾದ ಒತ್ತಡದ ಸನ್ನಿವೇಶ ಎದುರಾಗಲಿದೆ. ಮಕ್ಕಳ ಆರೋಗ್ಯ ಸಮಸ್ಯೆಯಿಂದ ಏಕಾಗ್ರತೆ ಕಡಿಮೆಯಾಗಬಹುದು. ಶ್ರಮದಿಂದ ತಯಾರಿಸಿದ ಯೋಜನೆಗಳ ಬಗ್ಗೆ ಇತರರ ಉಡಾಫಿನ ಮಾತು ಸಿಟ್ಟು ತರಲಿದೆ. ಮಸಾಲೆಯುಕ್ತ ಆಹಾರದಿಂದ ದೂರವಿರಿ, ಇಲ್ಲದಿದ್ದರೆ ಹೊಟ್ಟೆ ಸಮಸ್ಯೆ ಕಾಡಬಹುದು. ದುಬಾರಿ ಉಪಕರಣಗಳಲ್ಲಿ ದೋಷ ಕಾಣಿಸಿಕೊಂಡು ಬೇಸರ ತರಬಹುದು.
ಜನ್ಮಸಂಖ್ಯೆ 5 (5, 14, 23 ರಂದು ಜನಿಸಿದವರು) ಪುರಾತನ ವಸ್ತುಗಳ ವ್ಯಾಪಾರದಲ್ಲಿ ತೊಡಗಿರುವವರಿಗೆ ಆದಾಯ ಹೆಚ್ಚಲಿದೆ. ಕ್ಯಾಟರಿಂಗ್ ಕ್ಷೇತ್ರದವರಿಗೆ ದಿಢೀರ್ ಸವಾಲುಗಳು ಎದುರಾಗಬಹುದು. ವಾಹನ ಖರೀದಿಗಾಗಿ ಅಡ್ವಾನ್ಸ್ ಕೊಡುವ ತೀರ್ಮಾನಕ್ಕೆ ಬರಬಹುದು. ಮನೆಯಲ್ಲಿ ನೀರಿನ ಸಮಸ್ಯೆಗೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಗಮನಹರಿಸಲಿದ್ದೀರಿ.
ಜನ್ಮಸಂಖ್ಯೆ 6 (6, 15, 24 ರಂದು ಜನಿಸಿದವರು) ಕೆಲಸಗಳು ಸರಾಗವಾಗಿ ನಡೆಯಲಿವೆ. ಇತರರ ಆತಂಕಕಾರಕ ಯೋಜನೆಗಳ ಉದ್ದೇಶ ಗೊತ್ತಾಗಲಿದೆ. ಸಣ್ಣದಾಗಿ ಆರಂಭಿಸಲು ಯೋಚಿಸಿದ ವ್ಯಾಪಾರ ದೊಡ್ಡ ಮಟ್ಟದಲ್ಲಿ ಶುರುವಾಗಲಿದೆ. ಸಂಬಂಧಿಕರ ಜೊತೆಗಿನ ಮನಸ್ತಾಪಗಳು ಪರಿಹಾರವಾಗಲಿವೆ. ಗುರುಗಳಿಂದ ಅಮೂಲ್ಯ ಸಲಹೆ ದೊರೆತು ಆರ್ಥಿಕ ಲಾಭವಾಗಲಿದೆ.
ಜನ್ಮಸಂಖ್ಯೆ 7 (7, 16, 25 ರಂದು ಜನಿಸಿದವರು) ತಮಾಷೆಯ ಮಾತಿನಿಂದ ಸಂಬಂಧಗಳಲ್ಲಿ ಸಮಸ್ಯೆ ಉಂಟಾಗಬಹುದು. ಆರೋಗ್ಯ ಸಮಸ್ಯೆಗಳಿಂದ ಬಳಲುವವರಿಗೆ ಎಚ್ಚರಿಕೆ ಬೇಕು. ಗ್ಯಾಸ್ ಸಂಬಂಧಿತ ಕೆಲಸದವರಿಗೆ ಒತ್ತಡ ಹೆಚ್ಚಲಿದೆ. ಹೊಸ ಪರಿಚಯದಿಂದ ಅವಕಾಶಗಳು ದೊರೆಯಲಿವೆ. ಪ್ರೀತಿಪಾತ್ರರಿಗೆ ಉಡುಗೊರೆ ನೀಡುವ ಆಲೋಚನೆ ಮೂಡಲಿದೆ.
ಜನ್ಮಸಂಖ್ಯೆ 8 (8, 17, 26 ರಂದು ಜನಿಸಿದವರು) ಮಾತನಾಡದಿರಲು ಯೋಚಿಸಿದ ವಿಷಯಗಳ ಬಗ್ಗೆಯೇ ಹೆಚ್ಚು ಮಾತನಾಡಲಿದ್ದೀರಿ. ಹಣದ ವಿಷಯದಲ್ಲಿ ಆತ್ಮವಿಶ್ವಾಸ ಕಡಿಮೆಯಾಗಬಹುದು. ಸೈನ್ಯದಲ್ಲಿರುವವರಿಗೆ ವರ್ಗಾವಣೆ ಅಥವಾ ಹೆಚ್ಚಿನ ಜವಾಬ್ದಾರಿಗಳು ಬರಲಿವೆ. ಮದುವೆಯ ಸಂಬಂಧವನ್ನು ಒಪ್ಪಿಕೊಳ್ಳುವ ತೀರ್ಮಾನಕ್ಕೆ ಬರಬಹುದು.
ಜನ್ಮಸಂಖ್ಯೆ 9 (9, 18, 27 ರಂದು ಜನಿಸಿದವರು) ಮನೆ ದುರಸ್ತಿಗಾಗಿ ಯೋಜನೆ ರೂಪಿಸಲಿದ್ದೀರಿ. ಖರೀದಿಸಿದ ಸೈಟ್‌ಗೆ ಸಂಬಂಧಿಸಿದ ಖಾತೆ-ತೆರಿಗೆ ಪಾವತಿಗೆ ಸಹಾಯ ತೆಗೆದುಕೊಳ್ಳಲಿದ್ದೀರಿ. ವಿದೇಶದಲ್ಲಿ ವ್ಯಾಸಂಗಕ್ಕೆ ತೆರಳುವವರಿಗೆ ಮಾರ್ಗದರ್ಶನ ದೊರೆಯಲಿದೆ. ಸಾಕುಪ್ರಾಣಿಗಳ ಚಿಕಿತ್ಸೆಗೆ ಖರ್ಚು ಹೆಚ್ಚಾಗಬಹುದು.
 
			
 
					




 
                             
                             
                             
                             
                            