ಮೇಷ (Aries): ಒಮ್ಮೆ ಎಡವಿದರೆ ಮತ್ತೆ ಎಡವುವ ಭಯ ಇರಬೇಡಿ. ಆಧ್ಯಾತ್ಮಿಕ ಚಿಂತನೆ ಮನಸ್ಸಿಗೆ ಶಾಂತಿ ತರುತ್ತದೆ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ನೀಡಿ. ಪರಿಶ್ರಮಕ್ಕೆ ತಕ್ಕ ಹಣ ಬರದೆ ತೊಂದರೆ ಇದೆ. ಮಂದಗತಿಯ ಕೆಲಸಗಳಿಗೆ ವೇಗ ಕೊಡಿ. ಸ್ವಂತ ವಾಹನದ ತೊಂದರೆ ಎದುರಾಗಬಹುದು. ಹೊಸ ಹೂಡಿಕೆಗೆ ಮನಸ್ಸು ಮಾಡಬಹುದು, ಆದರೆ ಅತಿಯಾದ ಆಸೆ ತೊಂದರೆ ತರಬಹುದು.
ವೃಷಭ (Taurus): ತೋರಿಕೆಗೆ ಮಹತ್ವ ನೀಡಬೇಡಿ. ಆತ್ಮಸ್ಥೈರ್ಯ ಮತ್ತು ಮಾನಸಿಕ ಬಲ ಇದೆ. ನಿಮ್ಮ ಮಾತು ಸುತ್ತಿ ಬಳಸಿ ನಿಮ್ಮ ಬುಡಕ್ಕೇ ಬರಲಿದೆ. ಕುಟುಂಬದಲ್ಲಿ ನಿಮ್ಮ ಬಗ್ಗೆ ಭಯ ಇರಬಹುದು. ಅನಾರೋಗ್ಯದಿಂದ ಉದ್ಯೋಗ ಕೈತಪ್ಪಬಹುದು. ಅವಿವಾಹಿತರು ಯೋಗ್ಯ ಸಂಗಾತಿ ಪಡೆಯಬಹುದು.
ಮಿಥುನ (Gemini): ನಿಮ್ಮ ಸಾಧನೆಗಳು ಅನ್ಯರ ಮೂಲಕ ಪ್ರಸಾರವಾಗಲಿದೆ. ದೇಹ ಮತ್ತು ಮನಸ್ಸಿನ ಭಾರ ಕಡಿಮೆ ಮಾಡಿ. ಏಕಕಾಲಿಕ ಹಲವಾರು ಖರ್ಚುಗಳಿಂದ ತಲೆಬಿಸಿ ಆಗಬಹುದು. ದಾಂಪತ್ಯದಲ್ಲಿ ಸಲುಗೆ ಹೆಚ್ಚು. ತಂದೆಯಿಂದ ಧನಾಗಮನದ ನಿರೀಕ್ಷೆ ಇದೆ. ನಿಮ್ಮ ಸಾಮರ್ಥ್ಯ ಸುಧಾರಿಸಲು ಅವಕಾಶ ಸಿಗಲಿದೆ.
ಕರ್ಕಾಟಕ (Cancer): ಸ್ಥಾನಕ್ಕೆ ಗೌರವ ಸಿಗಲಿದೆ, ಅದನ್ನು ಉಳಿಸಿಕೊಳ್ಳುವುದು ನಿಮ್ಮ ಹೊಣೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇದೆ. ಸ್ಥಿರಾಸ್ತಿ ಖರೀದಿಗೆ ಉತ್ತಮ ಸಮಯ. ವ್ಯವಹಾರದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತ ಇರಲಿ. ಅನಗತ್ಯ ವಾದ ವಿವಾದಗಳಿಂದ ದೂರ ಇರಿ.
ಸಿಂಹ (Leo): ಆರಂಭದ ಸುಖ-ದುಃಖವನ್ನು ಗಂಭೀರವಾಗಿ ಪರಿಗಣಿಸಬೇಡಿ. ಉದ್ಯೋಗ ನಿಷ್ಠೆ ಮೇಲಧಿಕಾರಿಗಳಿಗೆ ಇಷ್ಟವಾಗುತ್ತದೆ. ಮಡದಿ, ಮಕ್ಕಳಿಂದ ಟೀಕೆ ಕೇಳಬೇಕಾಗಬಹುದು. ದಾಂಪತ್ಯದಲ್ಲಿ ಸಾಮರಸ್ಯ ಅಗತ್ಯ. ಹಣದ ಬಗ್ಗೆ ವಾಗ್ವಾದ ಅತಿರೇಕ ಆಗಬಹುದು.
ಕನ್ಯಾ (Virgo): ವೃತ್ತಿ ಸಂಬಂಧಿತ ಕಾರ್ಯಕ್ಕೆ ಪ್ರಯಾಣ ಇದೆ. ಮನೆಯಲ್ಲಿ ಕಾರ್ಯಭಾರ ಅಧಿಕ. ನಿಮ್ಮ ವಿರೋಧಿಗಳನ್ನು ಸ್ತಬ್ಧಗೊಳಿಸುವ ಸಾಮರ್ಥ್ಯ ಇದೆ. ತಾಳ್ಮೆ ಗುರಿ ತಲುಪಲು ಸಹಕಾರಿ. ಮಕ್ಕಳ ವೃತ್ತಿಯಲ್ಲಿ ಏಳ್ಗೆ ಕಂಡು ಸುಖಿಸುವಿರಿ. ಹಣಕಾಸಿನಲ್ಲಿ ಗಮನಾರ್ಹ ಬೆಳವಣಿಗೆ ಇದೆ.
ತುಲಾ (Libra): ಉಪವಾಸದಿಂದ ಆರೋಗ್ಯ ಹಾಳಾಗಬಹುದು. ಸ್ತ್ರೀಯರ ಜೊತೆ ವ್ಯವಹಾರದಿಂದ ದೂರ ಇರಲು ಪ್ರಯತ್ನಿಸಿ. ವಿರೋಧಿಗಳು ಅಡ್ಡಿ ಮಾಡಬಹುದು, ಧೃತಿಗೆಡಬೇಡಿ. ಉದ್ಯೋಗ ಬದಲಾವಣೆಯ ವಿಚಾರದಲ್ಲಿ ದ್ವಂದ್ವ ಇದೆ. ಆರ್ಥಿಕ ಲಾಭ ಸುಖ ತರಬಹುದು.
ವೃಶ್ಚಿಕ (Scorpio): ಸ್ವಯಂ ನಿವೃತ್ತಿ ಬಗ್ಗೆ ಯೋಚನೆ ಬರಬಹುದು. ಅಧಿಕಾರ ಮತ್ತು ವರ್ಚಸ್ಸು ಹೆಚ್ಚಿಸಿಕೊಳ್ಳುವ ಅವಕಾಶ ಇದೆ. ಸ್ವಂತ ಉದ್ಯೋಗ ಆರಂಭಿಸಲು ಚಿಂತಿಸಬಹುದು. ವಂಚನೆಯ ಕರೆಗಳಿಂದ ಎಚ್ಚರಿಕೆ. ಒತ್ತಡದ ಕೆಲಸದಿಂದ ವಿರಾಮ ಬಯಸಬಹುದು.
ಧನು (Sagittarius): ಇಂದು ಯಾರಿಂದಲೂ ಸಹಾಯ ನಿರೀಕ್ಷಿಸಬೇಡಿ. ದುಃಖ ಅಸ್ಥಾನದಲ್ಲಿ ಪ್ರಕಟವಾಗಬಹುದು. ಮನಸ್ಸಿಗೆ ಮಂಕು ಕವಿದಂತೆ ಇರಬಹುದು. ಬಂಧುಗಳು ನಿಮ್ಮನ್ನು ಪ್ರಶಂಸಿಸಿ ಕಾರ್ಯ ಸಾಧಿಸಿಕೊಳ್ಳಬಹುದು. ಸಂಗಾತಿಯ ಜೊತೆ ಹೊಂದಾಣಿಕೆ ಅಗತ್ಯ. ಮಹತ್ವದ ನಿರ್ಧಾರಗಳಿಗೆ ಸೂಕ್ಷ್ಮತೆ ಬೇಕು.
ಮಕರ (Capricorn): ವಂಚನೆಯ ಜಾಲದಲ್ಲಿ ಸಿಕ್ಕಿಬೀಳಬಹುದು, ಜಾಗರೂಕರಾಗಿರಿ. ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರದರ್ಶನ ಇದೆ. ನಿಮ್ಮ ಒಳ್ಳೆಯತನವನ್ನು ಇತರರು ಲಾಭಕ್ಕೆ ಉಪಯೋಗಿಸಿಕೊಳ್ಳಬಹುದು. ಕೋಪಿಷ್ಠರ ಜೊತೆ ವ್ಯವಹಾರ ಕಷ್ಟ.
ಕುಂಭ (Aquarius): ಎಲ್ಲರ ಸಂಪರ್ಕದಿಂದ ದೂರ ಇರಲು ಪ್ರಯತ್ನಿಸಬಹುದು. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುತ್ತದೆ. ನಿಮ್ಮ ಏಳಿಗೆ ಕಂಡು ಅಸೂಯೆ ಪಡುವವರು ಹೆಚ್ಚಾಗಬಹುದು. ವಿದೇಶ ಪ್ರಯಾಣದ ಗುಂಗು ಇದೆ. ಕುಟುಂಬದ ಪ್ರೋತ್ಸಾಹ ಸಿಗುತ್ತದೆ.
ಮೀನ (Pisces): ಯಾರ ಮೇಲೋ ಸಿಟ್ಟು ತೋರಿಸುವುದು ಔಚಿತ್ಯವಲ್ಲ. ಎಲ್ಲಿಯೂ ಹಿಡಿತ ತಪ್ಪದಂತೆ ನೋಡಿಕೊಳ್ಳಿ. ವ್ಯವಹಾರ ಅಂದುಕೊಂಡಷ್ಟು ಸಾಧಿಸಲಾಗದೆ ಬೇಸರ ಆಗಬಹುದು. ತಪ್ಪು ಮಾಹಿತಿ ನೀಡಿ ನಿಮ್ಮ ದಾರಿ ತಪ್ಪಿಸಬಹುದು. ಲಾಭಕ್ಕೆ ಹೋಗಿ ಇರುವ ಸಂಪತ್ತು ನಷ್ಟ ಆಗಬಹುದು.





