Daily Numerology February 05: ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಬ್ಬರ ಜನ್ಮಸಂಖ್ಯೆ ಅವರ ದಿನಚರಿ, ನಿರ್ಧಾರಗಳು ಮತ್ತು ಅದೃಷ್ಟದ ಮೇಲೆ ಪ್ರಭಾವ ಬೀರುತ್ತದೆ. ಫೆಬ್ರವರಿ 5ರ ಗುರುವಾರ ಜನ್ಮಸಂಖ್ಯೆ 1 ರಿಂದ 9ರವರಿಗೆ ಯಾವ ರೀತಿಯ ಫಲಾನುಭವಗಳು ಎದುರಾಗಬಹುದು? ಈ ದಿನ ಹಣಕಾಸು, ಉದ್ಯೋಗ, ಕುಟುಂಬ, ಆರೋಗ್ಯ ಮತ್ತು ಸಂಬಂಧಗಳ ದೃಷ್ಟಿಯಿಂದ ಹೇಗಿರಲಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ.
ಜನ್ಮಸಂಖ್ಯೆ 1 (1, 10, 19, 28ರಂದು ಜನಿಸಿದವರು)
ಈ ದಿನ ನಿಮ್ಮ ಆರಂಭ ನಿಧಾನವಾಗಿದ್ದರೂ ಮಧ್ಯಾಹ್ನದ ನಂತರ ಚುರುಕು ಹೆಚ್ಚಾಗಲಿದೆ. ಕೆಲಸದ ಒತ್ತಡ ಕಡಿಮೆಯಾಗುತ್ತಿದ್ದು, ಹೊಸ ಯೋಜನೆಗಳತ್ತ ಗಮನ ಹರಿಸಲು ಸಮಯ ಸಿಗಲಿದೆ. ಹಳೆಯ ಬಾಕಿ ಹಣ ಅಥವಾ ಬಿಲ್‌ಗಳ ವಸೂಲಾತಿಗೆ ಸಂಬಂಧಿಸಿದ ಚಿಂತನೆ ಹೆಚ್ಚಾಗಬಹುದು. ನಿರ್ಧಾರಗಳನ್ನು ಆತುರವಿಲ್ಲದೆ ತೆಗೆದುಕೊಳ್ಳುವುದು ಒಳಿತು.
ಜನ್ಮಸಂಖ್ಯೆ 2 (2, 11, 20, 29ರಂದು ಜನಿಸಿದವರು)
ಇತರರಿಗೆ ಕೊಡಬೇಕಾದ ಹಣ ಬಾಕಿ ಇದ್ದರೆ ಇಂದು ಪಾವತಿಸುವುದು ಉತ್ತಮ. ಕುಟುಂಬದಲ್ಲಿ ಮಕ್ಕಳ ವಿಚಾರವಾಗಿ ಸಂತಸದ ಸುದ್ದಿ ಸಿಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಸಣ್ಣ ಭಿನ್ನಾಭಿಪ್ರಾಯಗಳು ಉಂಟಾದರೂ ಸಂಜೆ ವೇಳೆಗೆ ಎಲ್ಲವೂ ಸರಿಯಾಗಲಿದೆ. ಹಳೆಯ ಸ್ನೇಹಿತರಿಂದ ಸಂಪರ್ಕ ಬರಬಹುದು. ಗ್ಯಾಜೆಟ್ ಖರೀದಿಯಲ್ಲಿ ಆತುರ ಬೇಡ.
ಜನ್ಮಸಂಖ್ಯೆ 3 (3, 12, 21, 30ರಂದು ಜನಿಸಿದವರು)
ನೀವು ಯೋಜಿಸಿದ ಕೆಲವು ಕೆಲಸಗಳು ವಿಳಂಬವಾಗುವ ಸೂಚನೆ ಇದೆ. ಇದಕ್ಕಾಗಿ ಮನಸ್ಸಿಗೆ ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ಹಣಕಾಸಿನ ವಿಷಯದಲ್ಲಿ ಎಲ್ಲರ ಸಲಹೆ ಅನುಸರಿಸುವುದು ಕಡ್ಡಾಯವಲ್ಲ. ನಿಮ್ಮ ಅನುಭವ ಮತ್ತು ವಿವೇಕಕ್ಕೆ ಹೆಚ್ಚಿನ ಮಹತ್ವ ನೀಡಿ.
ಜನ್ಮಸಂಖ್ಯೆ 4 (4, 13, 22, 31ರಂದು ಜನಿಸಿದವರು)
ಯಾರನ್ನಾದರೂ ಮೆಚ್ಚಿಸಲು ಅಥವಾ ಸಮಾಧಾನಪಡಿಸಲು ಅನಗತ್ಯ ಖರ್ಚು ಮಾಡುವುದನ್ನು ತಪ್ಪಿಸಿ. ಕುಟುಂಬದ ಹಿರಿಯರೊಂದಿಗೆ ಸಮಯ ಕಳೆಯುವುದರಿಂದ ಮನಸ್ಸಿಗೆ ಶಾಂತಿ ಸಿಗಲಿದೆ. ಸ್ನೇಹಿತರು ನೀಡುವ ಸಲಹೆಗಳು ಪ್ರಯೋಜನಕಾರಿಯಾಗಬಹುದು. ಕತ್ತು ಹಾಗೂ ಭುಜ ಭಾಗದಲ್ಲಿ ಸ್ವಲ್ಪ ನೋವು ಕಾಣಿಸಿಕೊಳ್ಳಬಹುದು.
ಜನ್ಮಸಂಖ್ಯೆ 5 (5, 14, 23ರಂದು ಜನಿಸಿದವರು)
ದಿನವು ಉತ್ಸಾಹದಿಂದ ಆರಂಭವಾಗಲಿದೆ. ನೀವು ಬಹಳ ದಿನಗಳಿಂದ ಮುಂದೂಡಿದ ಕೆಲವು ಕೆಲಸಗಳನ್ನು ಪೂರ್ಣಗೊಳಿಸಲು ಇದು ಸೂಕ್ತ ಸಮಯ. ಆದರೆ ಪ್ರಮುಖ ನಿರ್ಧಾರಕ್ಕಾಗಿ ಒತ್ತಡ ಬಂದರೆ ಸ್ವಲ್ಪ ಸಮಯ ಕೇಳುವುದು ಒಳಿತು. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಸಣ್ಣ ಭಿನ್ನಾಭಿಪ್ರಾಯಗಳ ಸಾಧ್ಯತೆ ಇದೆ.
ಜನ್ಮಸಂಖ್ಯೆ 6 (6, 15, 24ರಂದು ಜನಿಸಿದವರು)
ನವ ವಿವಾಹಿತರಿಗೆ ಸಂಗಾತಿಯೊಂದಿಗೆ ದೂರ ಪ್ರಯಾಣ ಮಾಡುವ ಯೋಗ ಇದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಫಲ ಸಿಗುವ ಸೂಚನೆ ಇದೆ. ಆರೋಗ್ಯದಲ್ಲಿ ತಲೆಸುತ್ತು ಅಥವಾ ಕಣ್ಣಿನ ಭಾರವಾದ ಅನುಭವ ಆಗಬಹುದು. ವಿಶ್ರಾಂತಿ ಅಗತ್ಯ.
ಜನ್ಮಸಂಖ್ಯೆ 7 (7, 16, 25ರಂದು ಜನಿಸಿದವರು)
ವೃತ್ತಿಜೀವನದಲ್ಲಿ ಅಚ್ಚರಿಯ ತಿರುವು ಎದುರಾಗಬಹುದು. ಮನೆಗೆ ಸಂಬಂಧಿಸಿದ ಬಾಕಿ ಕೆಲಸಗಳನ್ನು ಮುಗಿಸಲು ಇದು ಉತ್ತಮ ದಿನ. ಸಮಾರಂಭಗಳಿಗೆ ಆಹ್ವಾನ ಬರಬಹುದು. ಹಣಕಾಸಿನ ನಿರ್ಧಾರಗಳಲ್ಲಿ ಜಾಗ್ರತೆ ಅವಶ್ಯ.
ಜನ್ಮಸಂಖ್ಯೆ 8 (8, 17, 26ರಂದು ಜನಿಸಿದವರು)
ಹೊಸ ಸಾಲ ತೆಗೆದುಕೊಳ್ಳುವ ನಿರ್ಧಾರವನ್ನು ಸಾಧ್ಯವಾದಷ್ಟು ಮುಂದೂಡಿ. ವಾಹನ ಅಥವಾ ಗೃಹೋಪಯೋಗಿ ವಸ್ತುಗಳಿಗೆ ಅನಿರೀಕ್ಷಿತ ಖರ್ಚು ಸಂಭವಿಸಬಹುದು. ಪ್ರೀತಿಯಲ್ಲಿ ಇರುವವರು ಭವಿಷ್ಯದ ಬಗ್ಗೆ ಗಂಭೀರ ಚರ್ಚೆ ನಡೆಸುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 9 (9, 18, 27ರಂದು ಜನಿಸಿದವರು)
ಬಹಳ ದಿನಗಳಿಂದ ಬಾಕಿ ಉಳಿದ ಹಣ ಅಥವಾ ಮಾಹಿತಿ ನಿಮ್ಮ ಕೈ ಸೇರಲಿದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಆಲೋಚನೆಗೆ ಗೌರವ ಸಿಗಲಿದೆ. ಮನೆ ಬದಲಾವಣೆ ಅಥವಾ ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಒಳ್ಳೆಯ ಬೆಳವಣಿಗೆ ಕಂಡುಬರುವ ಸೂಚನೆ ಇದೆ.





