ಇಂದು ಶಾಲಿವಾಹನ ಶಕೆ 1947 (ವಿಶ್ವಾವಸು ಸಂವತ್ಸರ), ಮಾರ್ಗಶೀರ್ಷ ಶುಕ್ಲ ಅಷ್ಟಮಿ, ಅನೂರಾಧಾ ನಕ್ಷತ್ರ, ಧ್ರುವ ಯೋಗ, ಬವ ಕರಣ. ಸೂರ್ಯೋದಯ ಬೆಳಗ್ಗೆ 6.25 ಸೂರ್ಯಾಸ್ತ ಸಾಯಂಕಾಲ 5:46 ರಾಹುಕಾಲ ಬೆಳಗ್ಗೆ 10:42 ರಿಂದ 12:08, ಯಮಗಂಡ ಮಧ್ಯಾಹ್ನ 2:59 ರಿಂದ 4:24 ಶುಭ ಕಾರ್ಯಗಳಿಗೆ ಈ ಕಾಲವನ್ನು ತಪ್ಪಿಸಿ.
ಮೇಷ ರಾಶಿ
ಪ್ರೀತಿಯಲ್ಲಿ ಭಾವನಾತ್ಮಕ ಬೆಂಬಲ ಇದ್ದರೂ ಸಂಪೂರ್ಣ ಸಂತೋಷವಿಲ್ಲ. ಸ್ವಂತ ಆಲೋಚನೆಗಳಿಗೆ ಆದ್ಯತೆ ಕೊಡಿ. ಸ್ನೇಹಿತನ ನಂಬಿಕೆಯಲ್ಲಿ ಹಣ ಕೊಟ್ಟು ನಷ್ಟವಾಗಬಹುದು. ಕೆಲಸದಲ್ಲಿ ಬದಲಾವಣೆ ಬೇಕೆನಿಸುವುದು, ಆದರೆ ಅಧಿಕಾರಿಗಳ ಪ್ರಶಂಸೆ ಸಿಗಲಿದೆ. ಹಣಕಾಸು ಸ್ಥಿತಿ ಉತ್ತಮ, ಆದರೆ ಮಾನಸಿಕ ಒತ್ತಡ ಜಾಸ್ತಿ.
ವೃಷಭ ರಾಶಿ
ಹಣಕಾಸಿನಲ್ಲಿ ಹೊಸ ಅವಕಾಶಗಳು ಕಾಣುತ್ತವೆ ಆದರೆ ಅಪಾಯವೂ ಇದೆ. ಕೆಲಸದಲ್ಲಿ ಹೊಸ ಆಲೋಚನೆಗಳು ಮೆಚ್ಚುಗೆ ಗಳಿಸುತ್ತವೆ. ಸಮಯ ವ್ಯರ್ಥ ಮಾಡದಂತೆ ನೋಡಿಕೊಳ್ಳಿ. ನಿದ್ರೆ ಕೊರತೆಯಿಂದ ಆರೋಗ್ಯ ಕುಂದಬಹುದು. ಪ್ರೀತಿಯಲ್ಲಿ ಬದಲಾವಣೆಗೆ ಕಾಯಬೇಕು.
ಮಿಥುನ ರಾಶಿ
ವ್ಯಾಪಾರದಲ್ಲಿ ಸ್ಥಿರತೆ ಇದೆ, ಆದರೆ ಸ್ಪರ್ಧೆಯಲ್ಲಿ ಗೆಲ್ಲಲೇಬೇಕು. ಅನಪೇಕ್ಷಿತ ಭೇಟಿಗಳು, ದೂರ ಪ್ರಯಾಣಕ್ಕೆ ತಯಾರಿ ಬೇಕು. ಉದ್ಯೋಗಿಗಳಿಗೆ ಮೇಲಧಿಕಾರಿಗಳ ಒತ್ತಡ. ಆರೋಗ್ಯ ಸಮ, ಪ್ರೀತಿಯಲ್ಲಿ ಶಾಂತಿ.
ಕರ್ಕಾಟಕ ರಾಶಿ
ಆರ್ಥಿಕ ಲಾಭ, ಹೊರಗಿನ ಸಂಪರ್ಕಗಳಿಂದ ಪ್ರಗತಿ. ಮಹಿಳೆಯರಿಗೆ ಆದಾಯದಲ್ಲಿ ಮುನ್ನಡೆ. ಕಾಲು ನೋವು ಕಾಡಬಹುದು. ವಿದ್ಯಾರ್ಥಿಗಳ ಗಮನ ಚಂಚಲ. ಪ್ರೀತಿಯಲ್ಲಿ ಗೊಂದಲ ನಿವಾರಣೆಯಾಗಿ ಸಂಬಂಧ ಮೃದುವಾಗುತ್ತದೆ.
ಸಿಂಹ ರಾಶಿ
ಹೂಡಿಕೆ ಲಾಭದಾಯಕ. ಆಂತರಿಕ ಬಿಸಿ, ಆದರೆ ಸಕಾಲಿಕ ಸಹಾಯ ಸಿಗುತ್ತದೆ. ವ್ಯಕ್ತಿತ್ವ ಮೆರೆಯುವ ದಿನ. ಮಕ್ಕಳಿಗೆ ಪ್ರೀತಿ ತೋರಿಸಿ. ಪ್ರೀತಿಯಲ್ಲಿ ಆತ್ಮೀಯತೆ ಗಾಢವಾಗುತ್ತದೆ.
ಕನ್ಯಾ ರಾಶಿ
ಹಣ ಲಾಭ, ಯೋಜನೆಗಳು ಯಶಸ್ವಿಯಾಗುತ್ತವೆ. ವಿದೇಶ ಪ್ರಯಾಣ ಸಾಧ್ಯ. ಸೌಂದರ್ಯ ಪ್ರಜ್ಞೆ ಹೆಚ್ಚು. ಮನೆಯಲ್ಲಿ ವಿವಾಹ ಮಾತುಕತೆಯಿಂದ ಖುಷಿ. ಪ್ರೀತಿಯಲ್ಲಿ ಹೊಸ ಮೃದುತ್ವ.
ತುಲಾ ರಾಶಿ
ಹೂಡಿಕೆಯಲ್ಲಿ ಎಚ್ಚರಿಕೆ ಬೇಕು. ಶ್ವಾಸಕೋಶದ ತೊಂದರೆ ಇರಬಹುದು. ಧೈರ್ಯ ಕಡಿಮೆ. ದಾಂಪತ್ಯ ಕಲಹವನ್ನು ತಡೆಯಿರಿ. ವಾಹನ ಖರೀದಿ ಮುಂದೂಡಿಕೆ.
ವೃಶ್ಚಿಕ ರಾಶಿ
ಆರೋಗ್ಯ ಉತ್ತಮ, ಪ್ರೀತಿಯಲ್ಲಿ ಸಂತೋಷ. ಹಣದ ಹರಿವು ಸುಧಾರಿಸುತ್ತದೆ. ಹಿರಿಯರ ಮೆಚ್ಚುಗೆ, ಅತಿಥಿಗಳ ಆಗಮನ. ಕಳೆದ ಸಂಬಂಧ ಮತ್ತೆ ಸರಿಪಡಿಸಿಕೊಳ್ಳುವ ಅವಕಾಶ.
ಧನು ರಾಶಿ
ಪ್ರೀತಿಯಲ್ಲಿ ಭಾವನಾತ್ಮಕ ಒತ್ತಡ. ಹಣ ಹರಿವು ನಿಧಾನ. ಕೆಲಸದಲ್ಲಿ ಏಕಾಗ್ರತೆ ಕಡಿಮೆ. ಸಂಗಾತಿಯ ಮೇಲೆ ಸಿಟ್ಟು ಬರಬಹುದು. ವಿಶ್ರಾಂತಿ ಅಗತ್ಯ.
ಮಕರ ರಾಶಿ
ಖರ್ಚು ಹೆಚ್ಚಾದರೂ ಕೆಲಸದಲ್ಲಿ ಸ್ಪಷ್ಟತೆ ಮತ್ತು ಪ್ರಗತಿ. ಅಪವಾದಗಳು ಕಾಡಬಹುದು. ಆಹಾರ ವ್ಯಾಪಾರಿಗಳಿಗೆ ಲಾಭ. ಪ್ರೀತಿಯಲ್ಲಿ ಗೊಂದಲ ನಿವಾರಣೆ.
ಕುಂಭ ರಾಶಿ
ಕೆಲಸದಲ್ಲಿ ಮೆಚ್ಚುಗೆ. ಪ್ರೀತಿಯಲ್ಲಿ ಮೃದುತ್ವ. ವ್ಯಾಪಾರದಲ್ಲಿ ಅನಿರೀಕ್ಷಿತ ಬದಲಾವಣೆ. ದೂರ ಪ್ರಯಾಣ ಯೋಜನೆ. ಆರೋಗ್ಯ ಉತ್ತಮ.
ಮೀನ ರಾಶಿ
ಹಣದಲ್ಲಿ ಸ್ವಲ್ಪ ಅಸ್ಥಿರತೆ. ಆಲಸ್ಯದಿಂದ ಕೆಲಸ ವಿಳಂಬ. ಪ್ರೀತಿಯಲ್ಲಿ ಹೊಸ ಆರಂಭ ಸಾಧ್ಯ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ. ಗೃಹ ನಿರ್ಮಾಣದಲ್ಲಿ ತೊಂದರೆ.





