ಮಾರ್ಚ್ 2, 2025, ಗ್ರಹಗಳ ಸಂಯೋಗ ಮತ್ತು ಚಂದ್ರನ ಸ್ಥಾನಗಳು ಪ್ರತಿಯೊಬ್ಬರ ಜೀವನದ ಮೇಲೆ ವಿಶಿಷ್ಟ ಪರಿಣಾಮ ಬೀರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದಿನ ದಿನವು ಕೆಲವು ರಾಶಿಗಳಿಗೆ ಸಾಂಪತ್ತಿಕ ಸಾಧನೆಗಳನ್ನು ತರಬಹುದಾದರೆ, ಇತರರಿಗೆ ಸವಾಲುಗಳನ್ನು ನೀಡಬಹುದು. ನಿಮ್ಮ ರಾಶಿಯ ಆಧಾರದ ಮೇಲೆ ಇಂದಿನ ಭವಿಷ್ಯವಾಣಿ ಇಲ್ಲಿದೆ.
ಮೇಷ ರಾಶಿ:
ಸಂವಹನ ಕೌಶಲ್ಯವು ನಿಮಗೆ ಯಶಸ್ಸನ್ನು ತರುತ್ತದೆ. ಫಲವನ್ನು ಕೊಡುವವನು ಕೊಟ್ಟೇಕೊಡುತ್ತಾನೆ. ತಾಯಿ ಮಾತಿನಿಂದ ನಿಮಗೆ ಹೊಸ ಸ್ಪೂರ್ತಿಯು ಸಿಗಬಹುದು. ಸಹೋದರರ ಜೊತೆ ಆಪ್ತ ಸಮಾಲೋಚನೆ ಮಾಡುವಿರಿ. ನಿಮಗೆ ಕೊಟ್ಟ ಜವಾಬ್ದಾರಿಯು ಹಸ್ತಾಂತರ ಆಗಬಹುದು. ಇದಕ್ಕೆ ಬೇಸರವು ಸಹಜವಾಗಿರುವುದು. ಪ್ರಭಾವಿವ್ಯಕ್ತಿಗಳ ಸಹವಾಸವು ನಿಮ್ಮ ಮನಸ್ಸನ್ನು ಹಗುರಾಗಿಸುವುದು. ಸಹೋದ್ಯೋಗಿಗಳ ಸಹಾಯದಿಂದ ವ್ಯವಹಾರದಲ್ಲಿ ನಿರ್ಣಯಗಳು ಲಾಭದಾಯಕವಾಗುತ್ತದೆ.
ವೃಷಭ ರಾಶಿ:
ಶಕ್ತಿ ಮತ್ತು ಸಂಘಟನೆ ನಿಮ್ಮ ದಿನವನ್ನು ಸುಗಮವಾಗಿಸುತ್ತದೆ. ನಿಮ್ಮ ಮಾತಿಗೆ ಮೆಚ್ಚುಗೆ ಸಿಕ್ಕರೂ ಕೆಲಸ ಮಾತ್ರ ಆಗದು. ಯಾರನ್ನೋ ಶಪಿಸುತ್ತ ಇರುವುದು ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ಬೇಸರವನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ. ಸಮಾರಂಭಗಳಿಗೆ ಭೇಟಿಕೊಡುವುದು, ಅಲ್ಲಿ ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಳ್ಳುವಿರಿ. ಇಂದು ಯಾರ ಬಗ್ಗೆಯೂ ಸರಿ ಹಾಗೂ ತಪ್ಪುಗಳ ತುಲನೆಯು ಕಷ್ಟವಾಗುವುದು. ಪ್ರೇಮ ಸಂಬಂಧಗಳಲ್ಲಿ ಸಾಮರಸ್ಯ ಹೆಚ್ಚುತ್ತದೆ. ಹೊಸ ಯೋಜನೆಗಳಿಗೆ ಸಿದ್ಧರಾಗಿ!
ಮಿಥುನ ರಾಶಿ:
ಆರೋಗ್ಯ ಸಮಸ್ಯೆಗಳು ತಲೆದೋರಬಹುದು. ಮನೆಯ ಕೆಲಸಕ್ಕೆ ಯಾರೂ ಬರದಿರುವುದು ನಿಮಗೆ ಅಸಮಾಧನಾವಾಗುವುದು. ಕಛೇರಿಯಲ್ಲಿ ನಿಮಗೆ ತಪ್ಪಿತಸ್ಥ ಭಾವವು ಬರಬಹುದು. ಸರ್ಕಾರಿ ಕೆಲಸಕ್ಕಾಗಿ ಹಣವನ್ನು ಕೊಡುವಿರಿ. ಯಾರಿಗೂ ಎತ್ತರದ ದನಿಯನ್ನು ಮಾಡುವುದು ಬೇಡ. ಹೊಸ ಉದ್ಯಮವನ್ನು ಮಾಡಲು ಆಪ್ತರ ಅಥವಾ ಅನುಭವಿಗಳ ಸಲಹೆ ಬೇಕಾದೀತು. ಹಣಕಾಸು ವಿಷಯದಲ್ಲಿ ಜಾಗರೂಕರಾಗಿರಿ.
ಕರ್ಕಾಟಕ ರಾಶಿ:
ಹಳೆಯ ಹೂಡಿಕೆಗಳಿಂದ ಲಾಭ. ಕಛೇರಿ ಹಾಗೂ ಕುಟುಂಬ ಎರಡೂ ನಿಮಗೆ ಒತ್ತಡವನ್ನು ತಂದೀತು. ನೂತನ ವಸ್ತುಗಳನ್ನು ಕಡಿಮೆ ಬೆಲೆಗೆ ಪಡೆದುಕೊಳ್ಳುವಿರಿ. ಪ್ರೀತಿಯ ಕಾರಣಕ್ಕೆ ಮನಸ್ಸಿನ ಚಾಂಚಲ್ಯವನ್ನು ನಿಯಂತ್ರಿಸುವುದು ಕಷ್ಟವಾದೀತು. ನಿಮ್ಮ ಮಾತು ಇನ್ನೊಬ್ಬರಿಗೆ ನೋವನ್ನು ಕೊಡುಬಹುದು ಎಂಬ ತಿಳಿವಳಿಕೆ ಇರಲಿ. ನಿಮ್ಮ ಕಲೆಗೆ ಸರಿಯಾದ ಪ್ರೋತ್ಸಾಹವು ಸಿಗಲಿದೆ. ಕೆಲಸದ ನಿರ್ಣಯಗಳು ತ್ವರಿತ ಫಲಿತಾಂಶ ನೀಡಬಹುದು.
ಸಿಂಹ ರಾಶಿ:
ಕುಟುಂಬದೊಂದಿಗೆ ಸಮಯ ಕಳೆಯಲು ಸೂಕ್ತ ದಿನ. ದೊಡ್ಡ ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಇಂದು ನಿರೀಕ್ಷಿಸುಬುದು ಬೇಡ. ಉದ್ಯೋಗವನ್ನು ನಿರೀಕ್ಷಿತ ಹಂತಕ್ಕೆ ಕೊಂಡೊಯ್ಯಲು ಅಧಿಕ ಶ್ರಮಿಸುವಿರಿ. ಹಠದ ಸ್ವಭಾವದಿಂದ ಸುಲಭವಾಗಿ ಸಿಗುವುದನ್ನು ಕಳೆದುಕೊಳ್ಳಬೇಕಾದೀತು. ಅಪರಿಚಿತರ ಜೊತೆ ಸಲುಗೆ ಬೆಳೆಯಬಹುದು. ಅಪರಿಚಿತರ ಜೊತೆ ಅವಶ್ಯಕತೆಯಷ್ಟೇ ವ್ಯವಹರಿಸಿ. ಹೂಡಿಕೆಗಳಿಂದ ಲಾಭದಾಯಕ ಫಲಿತಾಂಶ.
ಕನ್ಯಾ ರಾಶಿ:
ಕಷ್ಟಗಳ ನಂತರ ಸುಖದ ದಿನ. ಆಡಳಿತಕ್ಕೆ ಸಂಬಂಧಿಸಿದ ಕಾರ್ಯವು ಸುಗಮವಾಗಿರುವುದು. ವ್ಯಾಪಾರ ಚಟುವಟಿಕೆಗಳು ನಿಮ್ಮ ಮನೋವೇಗಕ್ಕೆ ಸಿಗದು. ಕಲಾವಿದರು ಅವಕಾಶವನ್ನು ಹುಡುಕಿಕೊಂಡು ಹೋಗಬೇಕಾಗಬಹುದು. ಸಾಲದ ವಿಚಾರವಾಗಿ ಕುಟುಂಬದ ಜೊತೆ ಬಿಸಿ ಚರ್ಚೆಯಾಗಬಹುದು. ಆಸ್ತಿಯ ಹಂಚಿಕೆಯಲ್ಲಿ ನಿಮಗೆ ಸಮಾಧಾನ ಇರದು. ನಿಮ್ಮ ಪರಿಶ್ರಮಕ್ಕೆ ಬಹುಮಾನ ಸಿಗಲಿದೆ.
ತುಲಾ ರಾಶಿ:
ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಎಚ್ಚರಿಕೆ. ಸಂಬಂಧಗಳ ಸತ್ತ್ವವನ್ನು ನೀವು ಅರಿಯುವಿರಿ. ನಿಮ್ಮ ನೈಪುಣ್ಯತೆಯನ್ನು ಯಾರೂ ಊಹಿಸಲಾರರು. ನಿಮ್ಮನ್ನು ಎದುರಗೆ ಹೊಗಳಿ, ನಿಮ್ಮಿಂದ ಆಗಬೇಕಾದುದನ್ನು ಮಾಡಿಸಿಕೊಂಡಾರು. ಇಂದು ನೀವು ಕೋಪವನ್ನು ಮಾಡಿಕೊಳ್ಳಲು ಕಾರಣವೇ ಬೇಕಾಗದು. ಕುಟುಂಬ ಜೊತೆ ದೇವರ ದರ್ಶನವನ್ನು ಮಾಡುವಿರಿ. ಹೊಸ ಹೂಡಿಕೆಗಳನ್ನು ತಪ್ಪಿಸಿ.
ವೃಶ್ಚಿಕ ರಾಶಿ:
ಆಸ್ತಿ ವ್ಯವಹಾರದ ನಿರ್ಧಾರಗಳು ನಿಮ್ಮ ಪರವಾಗಿರಬಹುದು. ಆದಾಯದ ವಿಚಾರದಲ್ಲಿ ಮನೆಯಿಂದ ಮೆಚ್ಚುಗೆ ಸಿಗಲಿದೆ. ನಿಮ್ಮ ವ್ಯಾಪ್ತಿಯನ್ನು ಮೀರಿದ ಕೆಲಸವನ್ನು ನೀವು ಮಾಡಬೇಕಾದೀತು. ಆಸಕ್ತಿಯು ಇಲ್ಲದಿದ್ದರೂ ಒತ್ತಾಯಕ್ಕೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗುವಿರಿ. ಆಪತ್ತಿನಲ್ಲಿ ಇರುವ ನಿಮಗೆ ಸ್ನೇಹಿತರ ಸಣ್ಣ ಸಹಾಯವೂ ನಿಮಗೆ ಧೈರ್ಯ ತಂದುಕೊಡುವುದು. ಕಾರ್ಯದಕ್ಷತೆ ಮತ್ತು ನಿರ್ಣಯಗಳಿಂದ ವ್ಯವಹಾರದಲ್ಲಿ ಪ್ರಗತಿ.
ಧನು ರಾಶಿ:
ನಾನಾ ಸಮಸ್ಯೆಗಳು ನಿಮ್ಮೆದುರು ಬಂದರೂ ಮರೆಯುವುದೊಂದೇ ನಿಮಗೆ ಸದ್ಯಕ್ಕಿರುವ ದಾರಿಯಾಗಿದೆ. ಯುವಕರು ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯು ಅವಕಾಶಗಳಿದ್ದರೂ ಅದನ್ನು ಬಳಸಿಕೊಳ್ಳಲು ಮಾರ್ಗದರ್ಶನದ ಅವಶ್ಯಕತೆ ಇದೆ. ಜೀವನದಲ್ಲಿ ಸಣ್ಣಪುಟ್ಟ ಸವಾಲುಗಳನ್ನು ಎದುರಿಸಬೇಕಾಗಬಹುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಆರೋಗ್ಯ ಸುಧಾರಣೆ ಮತ್ತು ಹಣಕಾಸು ಸ್ಥಿರತೆ.
ಮಕರ ರಾಶಿ:
ಮಹಿಳೆಯರು ಸ್ವ ಉದ್ಯೋಗದ ಕಡೆ ಗಮನಹರಿಸುವರು. ನೂತನ ವಸ್ತುಗಳ ಮೇಲೆ ನಿಮಗೆ ಪ್ರೀತಿ ಹೆಚ್ಚಿರುವುದು. ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಬಂಧವು ಬಲವಾಗಿರುತ್ತದೆ. ಹಳೆಯ ಆಸ್ತಿಯನ್ನು ಮಾರಾಟ ಮಾಡುವುದರಿಂದ ಅಥವಾ ಬಾಡಿಗೆಗೆ ನೀಡುವುದರಿಂದ ಆರ್ಥಿಕ ಲಾಭವಿದೆ. ಗುರು ಗ್ರಹದ ಆಶೀರ್ವಾದದಿಂದ ಆತ್ಮವಿಶ್ವಾಸ ಹೆಚ್ಚುತ್ತದೆ.
ಕುಂಭ ರಾಶಿ:
ನಿಮ್ಮ ಆಪ್ತ ಸ್ನೇಹಿತರ ಅನಿರೀಕ್ಷಿತ ಭೇಟಿಯಾಗುವುದು. ಕುಟುಂಬ ಸದಸ್ಯರೊಂದಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ವೃತ್ತಿ ಜೀವನದಲ್ಲಿ ಪ್ರಮುಖ ಸಾಧನೆಗಳನ್ನು ಸಾಧಿಸಲಾಗುವುದು. ಜೀವನದಲ್ಲಿ ಧನಾತ್ಮಕ ಶಕ್ತಿಯ ಒಳಹರಿವು ಇರುತ್ತದೆ. ಹಳೆಯ ಹೂಡಿಕೆಯು ಉತ್ತಮ ಲಾಭವನ್ನು ನೀಡುತ್ತದೆ. ಮಾನಸಿಕ ಒತ್ತಡ ಮತ್ತು ಸೃಜನಶೀಲತೆಯ ಕೊರತೆ.
ಮೀನ ರಾಶಿ:
ನಿಮಗೆ ಮಾತನಾಡುವ ಕಲೆಯು ಕರಗತವಾಗಲಿದೆ. ನಿಮ್ಮನ್ನು ಇಂದು ಮಾತಿನಿಂದ ಸೋಲಿಸುವುದು ಕಷ್ಟವಾದೀತು. ಕೆಲವರು ಆಸ್ತಿಯಲ್ಲಿ ಹೂಡಿಕೆ ಮಾಡಬಹುದು. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ಕೆಲಸದಲ್ಲಿ ಉತ್ಪಾದಕತೆ ಮತ್ತು ಸಂಪರ್ಕಗಳ ವಿಸ್ತರಣೆ.
ಇಂದಿನ ದಿನವು ಕೆಲವರಿಗೆ ಸವಾಲುಗಳನ್ನು ನೀಡಿದರೂ, ಗ್ರಹಗಳ ಸ್ಥಿತಿ ಸರಿಯಾದ ಸಮಯದಲ್ಲಿ ಸರಿದೂಗಿಸಲು ಸಹಾಯ ಮಾಡುತ್ತದೆ. ನಿಮ್ಮ ರಾಶಿಯ ಪ್ರಕಾರ ಯೋಜನೆಗಳನ್ನು ರೂಪಿಸಿ, ಧನಾತ್ಮಕ ಫಲಿತಾಂಶಗಳನ್ನು ಪಡೆಯಿರಿ!