ದಾಂಪತ್ಯ ಜೀವನಕ್ಕೆ ಕಾಲಿಡಲು ಬಯಸುವ ಜೋಡಿಗಳಿಗೆ ಮತ್ತು ಅವರ ಕುಟುಂಬದವರಿಗೆ 2026ನೇ ವರ್ಷವು ತುಸು ಸವಾಲಿನದಾಗಿರಲಿದೆ. ಹೌದು, ಪಂಚಾಂಗ ಕರ್ತರ ಲೆಕ್ಕಾಚಾರದ ಪ್ರಕಾರ, ಈ ವರ್ಷ ಶುಭ ವಿವಾಹ ಕಾರ್ಯಗಳಿಗಾಗಿ ಕೇವಲ 53 ದಿನಗಳು ಮಾತ್ರ ಲಭ್ಯವಿವೆ. ಅಧಿಕ ಮಾಸ ಮತ್ತು ಚಾತುರ್ಮಾಸದ ಪ್ರಭಾವದಿಂದಾಗಿ ಮುಹೂರ್ತಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಮದುವೆ ನಿಶ್ಚಯಿಸುವವರಿಗೆ ಈಗಲೇ ಆತಂಕ ಶುರುವಾಗಿದೆ.
ಫೆಬ್ರವರಿ 19ರಿಂದ ಶುಭ ಕಾಲ ಆರಂಭ
ಕಳೆದ ಮೂರು ತಿಂಗಳಿಂದ ಇದ್ದ ‘ಶುಕ್ರ ಮೌಢ್ಯ’ (ಮೂಢ) ಕಾರಣದಿಂದಾಗಿ ಯಾವುದೇ ಶುಭ ಕಾರ್ಯಗಳು ನಡೆಯುತ್ತಿರಲಿಲ್ಲ. ಫೆಬ್ರವರಿ 17ರವರೆಗೆ ಈ ಸ್ಥಿತಿ ಮುಂದುವರಿಯಲಿದ್ದು, ಫೆಬ್ರವರಿ 19ರಿಂದ ಮಾಘ ಮಾಸದ ಶುಭ ಮುಹೂರ್ತಗಳು ಪ್ರಾರಂಭವಾಗಲಿವೆ. ಹೀಗಾಗಿ, ಯಾವುದೇ ಮದುವೆ ಸಮಾರಂಭಗಳು ನಡೆಯುತ್ತಿರಲಿಲ್ಲ ಆದರೆ ಈಗ ಶುಭ ಮಹೂರ್ತ ಆರಂಭವಾಗಿದೆ.
2026 ರ ವಿವಾಹ ಮುಹೂರ್ತಗಳ ಪೂರ್ಣ ಪಟ್ಟಿ
| ಪ್ರಮುಖ ಶುಭ ಮುಹೂರ್ತದ ದಿನಾಂಕಗಳು |
| 19, 20, 21, 24, 25, 26 |
| 1, 3, 4, 7, 8, 9, 11, 12, 20, 21, 25, 29 |
| 1, 2, 3, 4, 5, 6, 7, 8, 10, 11, 12, 15, 20, 21, 25, 26, 27, 28, 29 |
| 1, 3, 5, 6, 7, 8, 9, 10, 12, 13 |
| 19, 20, 21, 24, 25, 26, 27, 28 |
| 1, 6, 7, 11 |
ಮುಹೂರ್ತಗಳ ಕೊರತೆಗೆ ಪ್ರಮುಖ ಕಾರಣಗಳು:
1. ಅಧಿಕ ಮಾಸದ ಎಫೆಕ್ಟ್: ಮೇ 17ರಿಂದ ಜೂನ್ 15ರವರೆಗೆ ‘ಅಧಿಕ ಜೇಷ್ಠ ಮಾಸ’ ಬರಲಿದೆ. ಶಾಸ್ತ್ರಗಳ ಪ್ರಕಾರ ಅಧಿಕ ಮಾಸದಲ್ಲಿ ವಿವಾಹದಂತಹ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಈ ಒಂದು ತಿಂಗಳ ಕಾಲ ಸಂಪೂರ್ಣ ವಿರಾಮ ಇರಲಿದೆ.
2. ಚಾತುರ್ಮಾಸದ ಸುದೀರ್ಘ ವಿರಾಮ: ಜುಲೈ ಎರಡನೇ ವಾರದಿಂದ ಪ್ರಾರಂಭವಾಗಿ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳವರೆಗೆ ಚಾತುರ್ಮಾಸ ಇರಲಿದೆ. ಈ ಸಮಯದಲ್ಲಿ ದೇವತೆಗಳು ಶಯನ ಸ್ಥಿತಿಯಲ್ಲಿರುತ್ತಾರೆ ಎಂಬ ನಂಬಿಕೆ ಇರುವುದರಿಂದ ಶುಭ ಕಾರ್ಯಗಳನ್ನು ನಡೆಸಲಾಗುವುದಿಲ್ಲ. ಪುನಃ ನವೆಂಬರ್ 21ರ ನಂತರವೇ ಮುಹೂರ್ತಗಳು ಆರಂಭವಾಗಲಿವೆ.
ಫೆಬ್ರವರಿ 21ಕ್ಕೆ ಭಾರಿ ಡಿಮ್ಯಾಂಡ್!
ಫೆಬ್ರವರಿ 21ರಂದು ಪಂಚಮಿ ತಿಥಿ ಬಂದಿದ್ದು, ಇದು ಶನಿವಾರ (ವಾರಾಂತ್ಯ) ಆಗಿರುವುದರಿಂದ ಅಂದು ಅತಿ ಹೆಚ್ಚು ವಿವಾಹಗಳು ನಡೆಯುವ ಸಾಧ್ಯತೆಯಿದೆ. ಈಗಾಗಲೇ ಈ ದಿನಾಂಕಕ್ಕೆ ಕಲ್ಯಾಣ ಮಂಟಪಗಳು ಭರ್ತಿಯಾಗುತ್ತಿವೆ.
ಮುಹೂರ್ತದ ದಿನಗಳು ಕಡಿಮೆ ಇರುವುದರಿಂದ ಕಲ್ಯಾಣ ಮಂಟಪಗಳು, ಪುರೋಹಿತರು, ಫೋಟೋಗ್ರಾಫರ್ಸ್ ಮತ್ತು ಕ್ಯಾಟರಿಂಗ್ ಸೇವೆಗಳಿಗೆ ಈಗಲೇ ಭಾರಿ ಬೇಡಿಕೆ ಬಂದಿದೆ. ನೀವು ಕೂಡ 2026ರಲ್ಲಿ ಮದುವೆ ಮಾಡಲು ಯೋಜಿಸುತ್ತಿದ್ದರೆ, ಕೊನೆಯ ಕ್ಷಣದ ಗಡಿಬಿಡಿ ತಪ್ಪಿಸಲು ತಕ್ಷಣವೇ ಪಂಡಿತರನ್ನು ಸಂಪರ್ಕಿಸಿ ಮುಹೂರ್ತ ನಿಗದಿಪಡಿಸಿಕೊಳ್ಳುವುದು ಒಳಿತು.





