ಭಾರತದಲ್ಲಿ ಸೋಷಿಯಲ್ ಮೀಡಿಯಾ ವೇದಿಕೆ X (ಹಳೆಯ ಟ್ವಿಟರ್) ಕುರಿತು ಭಾರತದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಎಲಾನ್ ಮಸ್ಕ್ ಮಾಲೀಕತ್ವದ ಈ ಪ್ಲಾಟ್‌ಫಾರ್ಮ್‌ನಲ್ಲಿ 18+ ವೀಡಿಯೊಗಳು ಮತ್ತು ಅಶ್ಲೀಲ ಕಂಟೆಂಟ್‌ಗೆ ತಕ್ಷಣದಿಂದಲೇ ನಿರ್ಬಂಧ ಹೇರಲಾಗಿದೆ. ಮಾರ್ಚ್ 3, 2026 ರಿಂದ ಈ ನಿಯಮ ಜಾರಿಗೆ ಬಂದಿದ್ದು, ಭಾರತೀಯ ಬಳಕೆದಾರರಿಗೆ ಅಶ್ಲೀಲ ಪೋಸ್ಟ್‌ಗಳು ಮತ್ತು ವಿಡಿಯೋಗಳು ಕಾಣಿಸುತ್ತಿಲ್ಲ..
ಸರ್ಕಾರದ ನಿಯಮಗಳ ಪ್ರಭಾವ
ಈ ನಿರ್ಧಾರವು ಎಲಾನ್ ಮಸ್ಕ್ ಅವರ ವೈಯಕ್ತಿಕ ನಿರ್ಧಾರಕ್ಕಿಂತ ಹೆಚ್ಚಾಗಿ ಭಾರತ ಸರ್ಕಾರದ ಕಟ್ಟುನಿಟ್ಟಿನ ಐಟಿ ನಿಯಮಗಳ ಪರಿಣಾಮವಾಗಿದೆ. ಜನವರಿ 2026ರ ಆರಂಭದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎಕ್ಸ್‌ಗೆ ನೋಟಿಸ್ ನೀಡಿತ್ತು. ಗ್ರಾಕ್ AI ಚಾಟ್‌ಬಾಟ್ ಮೂಲಕ ಅಶ್ಲೀಲ ಕಂಟೆಂಟ್ ಸೃಷ್ಟಿಯಾಗುತ್ತಿರುವ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿತ್ತು.
ಈ ಎಚ್ಚರಿಕೆಯ ಪರಿಣಾಮವಾಗಿ, ಎಕ್ಸ್ 3,500 ಕ್ಕೂ ಹೆಚ್ಚು ಅಶ್ಲೀಲ ಪೋಸ್ಟ್‌ಗಳನ್ನು ಬ್ಲಾಕ್ ಮಾಡಿದೆ ಮತ್ತು 600 ಕ್ಕೂ ಹೆಚ್ಚು ಅಕೌಂಟ್‌ಗಳನ್ನು ಅಳಿಸಿದೆ. “ಇನ್ನು ಮುಂದೆ ಎಕ್ಸ್ ಅಶ್ಲೀಲ ಚಿತ್ರಗಳಿಗೆ ಅವಕಾಶ ನೀಡುವುದಿಲ್ಲ” ಎಂದು ಕಂಪನಿ ಸ್ಪಷ್ಟಪಡಿಸಿದೆ..
3 ಗಂಟೆಗಳ ಗಡುವು
ಫೆಬ್ರವರಿ 20, 2026 ರಿಂದ ಹೊಸ ಐಟಿ ನಿಯಮಗಳು ಜಾರಿಗೆ ಬಂದಿದ್ದು, ಸಾಮಾಜಿಕ ಮಾಧ್ಯಮ ಕಂಪನಿಗಳು ಅಶ್ಲೀಲ ಕಂಟೆಂಟ್ ತೆಗೆದುಹಾಕಲು ಕೇವಲ 3 ಗಂಟೆಗಳ ಗಡುವು ನೀಡಲಾಗಿದೆ. ಈ ಹಿಂದೆ 36 ಗಂಟೆಗಳ ಅವಧಿ ಇತ್ತು. ಈ ಬಿಗಿ ನಿಯಮಗಳಿಂದಾಗಿ ಎಕ್ಸ್ ತನ್ನ ನೀತಿಯಲ್ಲಿ ಬದಲಾವಣೆ ತರುವುದು ಅನಿವಾರ್ಯವಾಗಿತ್ತು.
ನೆಟಿಜನ್‌ಗಳ ಮಿಶ್ರ ಪ್ರತಿಕ್ರಿಯೆ
ಎಕ್ಸ್‌ನಲ್ಲಿ ಈ ಬೆಳವಣಿಗೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವು ಬಳಕೆದಾರರು ಈ ಕ್ರಮವನ್ನು ಸ್ವಾಗತಿಸಿದ್ದಾರೆ. “@LetsXOtt” ಎಂಬ ಖಾತೆ “ಎಲಾನ್ ಮಸ್ಕ್ ಭಾರತದಲ್ಲಿ 18+ ವೀಡಿಯೊಗಳನ್ನು ನಿಷೇಧಿಸಿದ್ದಾರೆ. ಗೌರವಗಳು @elonmusk” ಎಂದು ಪೋಸ್ಟ್ ಮಾಡಿದ್ದು, ಸಾವಿರಾರು ಲೈಕ್ಸ್ ಗಳಿಸಿದೆ. ಸಾಮಾಜಿಕ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಂಡ ಕ್ರಮ ಎಂದು ಕೆಲವರು ಬಣ್ಣಿಸಿದ್ದಾರೆ.
ಇನ್ನೊಂದೆಡೆ, ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಬುಕ್‌ಮಾರ್ಕ್‌ಗಳಲ್ಲಿ ಉಳಿಸಿಕೊಂಡಿದ್ದ ಕಂಟೆಂಟ್ ಕಾಣಿಸದಿರುವುದರಿಂದ ನಿರಾಶೆ ವ್ಯಕ್ತಪಡಿಸಿರುವವರು ಇದ್ದಾರೆ. “ನನ್ನ ಬುಕ್‌ಮಾರ್ಕ್‌ಗಳಲ್ಲಿದ್ದ ಯಾವುದೂ ಕಾಣಿಸುತ್ತಿಲ್ಲ” ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು “ಇದು ನಿಜವಾಗಿಯೂ ಮಸ್ಕ್ ತೆಗೆದುಕೊಂಡ ನಿರ್ಧಾರವೇ?” ಎಂದು ಪ್ರಶ್ನಿಸಿದ್ದಾರೆ.
ವಿಪಿಎನ್ ಮೂಲಕ ಬೈಪಾಸ್ ಪ್ರಯತ್ನ
ಕೆಲವು ಬಳಕೆದಾರರು ವಿಪಿಎನ್ (VPN) ಸಹಾಯದಿಂದ ಈ ನಿರ್ಬಂಧಗಳನ್ನು ಮೀರಿ ಕಂಟೆಂಟ್ ನೋಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಈ ನಿರ್ಧಾರದಿಂದಾಗಿ ಪ್ಲಾಟ್‌ಫಾರ್ಮ್ ಬಳಕೆದಾರರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ





