ಪಶ್ಚಿಮ ಬಂಗಾಳದ ಖರಗ್‌ಪುರದ ಮಾರುಕಟ್ಟೆಯಲ್ಲಿ ಕಾಂಗ್ರೆಸ್ (ಟಿಎಂಸಿ) ಮಹಿಳಾ ನಾಯಕಿ ಬೇಬಿ ಕೊಲಿ ಅವರು ಕಮ್ಯುನಿಸ್ಟ್ ಪಕ್ಷದ (ಸಿಪಿಐಎಂ) ಹಿರಿಯ ನಾಯಕ ಅನಿಲ್ ದಾಸ್ ಅವರ ಮೇಲೆ ಸಾರ್ವಜನಿಕವಾಗಿ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟಿಎಂಸಿ ನಾಯಕಿಯ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತವಾಗಿದೆ.
ಸೋಮವಾರ ಬೆಳಗ್ಗೆ ಖರಗ್‌ಪುರದ ಖಾರಿಡಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಸ್ಥಳೀಯ ನಿವಾಸಿಯೊಬ್ಬರಿಗೆ ಸೇರಿದ ಗೋಡೆಯನ್ನು ಅಕ್ರಮವಾಗಿ ಕೆಡವಿದ್ದಕ್ಕೆ ಅನಿಲ್ ದಾಸ್ ಪ್ರತಿಭಟಿಸಿದಾಗ, ಬೇಬಿ ಕೊಲಿ ಮತ್ತು ಆಕೆಯ ಸಹಚರರು ದಾಸ್ ಅವರ ಮೇಲೆ ದಾಳಿ ನಡೆಸಿದ್ದಾರೆ. ವೀಡಿಯೋದಲ್ಲಿ ಬೇಬಿ ಕೊಲಿ ಅವರು ಅನಿಲ್ ದಾಸ್ ಅವರನ್ನು ರಸ್ತೆಯ ಮಧ್ಯದಲ್ಲಿ ಥಳಿಸಿ, ನೆಲಕ್ಕೆ ತಳ್ಳಿ, ಅವರ ಬಟ್ಟೆಗಳನ್ನು ಹರಿದು, ನೀಲಿ ಶಾಯಿಯನ್ನು ಸುರಿಯುವ ಕೃತ್ಯವನ್ನು ಕಾಣಬಹುದು.
🚨 SHOCKING VIRAL VIDEO from Kharagpur, West Bengal!
TMC leader Baby Koley caught on camera allegedly assaulting senior CPM leader Anil Das – beaten, clothes torn, ink splashed – all in broad daylight as bystanders look on in silence. pic.twitter.com/krYAMBV42i
— Megh Updates 🚨™ (@MeghUpdates) June 30, 2025
ಹಲ್ಲೆಯ ಸಂದರ್ಭದಲ್ಲಿ ಅನಿಲ್ ದಾಸ್ ಹತ್ತಿರದ ಬಣ್ಣದ ಅಂಗಡಿಯೊಳಗೆ ಆಶ್ರಯ ಪಡೆಯಲು ಯತ್ನಿಸಿದರೂ, ಆಕ್ರಮಣಕಾರರು ಅವರನ್ನು ಹಿಂಬಾಲಿಸಿ, ಬಣ್ಣದ ಡಬ್ಬಿಯನ್ನು ಎಸೆದು ಗಾಯಗೊಳಿಸಿದ್ದಾರೆ. ಈ ಘಟನೆಯಿಂದ ಗಾಯಗೊಂಡ ದಾಸ್, ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಬೇಬಿ ಕೊಲಿ ಮತ್ತು ಆಕೆಯ ಸಹಚರರ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಈಗ ಈ ಪ್ರಕರಣದ ತನಿಖೆಯನ್ನು ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.