ಛತ್ತೀಸ್‌ಘಡದ ರಾಯ್‌ಪುರದಲ್ಲಿ ಒಂದು ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆ ಶಿಕ್ಷಕರು, ಪೋಷಕರು ಮತ್ತು ಸಮಾಜವನ್ನು ಆಘಾತಕ್ಕೊಳಗಾಗಿಸಿದೆ. 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕಿಯನ್ನು ಸೋಡಿಯಂ ಬಾಂಬ್ ಮೂಲಕ ಕೊಲ್ಲಲು ಪ್ಲಾನ್ ಮಾಡಿದ್ದರು ಎಂಬ ತೀವ್ರ ಆರೋಪಗಳು ಬೆಳಕಿಗೆ ಬಂದಿವೆ. ಈ ಘಟನೆಯ ಸಮಯದಲ್ಲಿ, ಶಾಲೆಯ ಶೌಚಾಲಯದಲ್ಲಿ ಬಾಂಬ್ ಸ್ಫೋಟಿಸುವಾಗ ಒಬ್ಬ ವಿದ್ಯಾರ್ಥಿನಿಗೆ ಗಾಯಗೊಂಡಿದ್ದು, ಐವರು ಮಕ್ಕಳನ್ನು ಪೊಲೀಸರು ಬಂಧನ ಮಾಡಿದ್ದಾರೆ.
ವಿವರಗಳ ಪ್ರಕಾರ, ಶಿಕ್ಷಕಿ ಸುಶೀಲಾ ಬಚಾವ್ ಅವರು ತಮ್ಮ ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಗಮನದಿಂದ ಓದುವಂತೆ ಸಲಹೆ ನೀಡುತ್ತಿದ್ದರು. ಇದಕ್ಕೆ ಪ್ರತೀಕಾರವಾಗಿ, ಮಕ್ಕಳು ಸಾಮಾಜಿಕ ಮಾಧ್ಯಮ ಮತ್ತು ಇಂಟರ್ನೆಟ್ ಸಹಾಯದಿಂದ ಸೋಡಿಯಂ ಬಳಸಿ ಬಾಂಬ್ ತಯಾರಿಸುವ ವಿಧಾನ ಕಲಿತಿದ್ದರು. ಅವರಲ್ಲಿ ಒಬ್ಬ ವಿದ್ಯಾರ್ಥಿ ಚಿಕ್ಕಮ್ಮನ ಆನ್ಲೈನ್ ಖಾತೆಯನ್ನು ಬಳಸಿ ಸೋಡಿಯಂ ಖರೀದಿಸಿದ್ದು, ಶೌಚಾಲಯದಲ್ಲಿ ಬಾಂಬ್ ಹೊಂದಿಸುವಾಗ ಅದು ಅಕಾಲಿಕ ಸ್ಫೋಟವಾಯಿತು.
ಪೊಲೀಸ್ ತನಿಖೆಯ ಪ್ರಕಾರ, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು “ಪದೇ ಪದೇ ಹೇಳುವ ಶಿಕ್ಷಕಿಯನ್ನು ಕೊಂದುಬಿಡೋಣ” ಎಂದು ಯೋಜನೆ ರೂಪಿಸಿದ್ದರು.ಈ ಘಟನೆಯು ಮಕ್ಕಳ ಮನಸ್ಥಿತಿ, ಇಂಟರ್ನೆಟ್ ಅಪಾಯಗಳು ಮತ್ತು ಶಿಕ್ಷಣ ಸಂಸ್ಥೆಗಳ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳು ಎತ್ತಿದೆ.
ಶಾಲಾ ನಿರ್ವಾಹಕರು ಮತ್ತು ಪೋಷಕರು ಈಗ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಆನ್ಲೈನ್ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಾದ ನಿಗಾ ಇಡಲು ನಿರ್ಧರಿಸಿದ್ದಾರೆ. ರಾಜ್ಯ ಸರ್ಕಾರವು ಶಾಲೆಗಳಲ್ಲಿ ಸೈಬರ್ ಸುರಕ್ಷಾ ತರಬೇತಿ ಕಡ್ಡಾಯಗೊಳಿಸುವ ಪ್ರಸ್ತಾವನೆಯನ್ನೂ ಮಂಡಿಸಿದೆ.