ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ 4ನೇ ಮಹಿಳಾ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಮಲೀಲಾ ಮೈದಾನದಲ್ಲಿ ನಡೆದ ವೈಭವೋಪೇತ ಸಮಾರಂಭದಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಷೇನಾ ಅವರು ರೇಖಾ ಗುಪ್ತಾಗೆ ಪ್ರಮಾಣವಚನ ಬೋಧಿಸಿದರು.
ಬಿಜೆಪಿಯ ನವೀನ ನಾಯಕತ್ವದಡಿ ದೆಹಲಿ ಆಡಳಿತ ನಡೆಸಲು ರೇಖಾ ಗುಪ್ತಾ ಮುಂದಾಗಿದ್ದು, ಈಶ್ವರನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇದು 27 ವರ್ಷಗಳ ಬಳಿಕ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮಹತ್ವದ ಕ್ಷಣವಾಗಿದೆ.
ನೂತನ ಸಚಿವರ ಪ್ರಮಾಣವಚನ
ರೇಖಾ ಗುಪ್ತಾ ಜತೆಗೆ ಪರ್ವೇಶ್ ವರ್ಮಾ, ಮಣೀಂದರ್ ಸಿಂಗ್ ಸಿರ್ಸಾ, ಕಪಿಲ್ ಮಿಶ್ರಾ, ಆಶೀಶ್ ಸೂದ್, ರವೀಂದ್ರಕುಮಾರ್ ಇಂದ್ರಜ್, ಪಂಕಜ್ ಕುಮಾರ್ ಸಿಂಗ್ ಮುಂತಾದವರು ಮಂತ್ರಿಮಂಡಲದ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
#WATCH | BJP’s first-time MLA Rekha Gupta takes oath as the Chief Minister of Delhi. Lt Governor VK Saxena administers her oath of office.
With this, Delhi gets its fourth woman CM, after BJP’s Sushma Swaraj, Congress’ Sheila Dikshit, and AAP’s Atishi. pic.twitter.com/bU69pyvD7Y
— ANI (@ANI) February 20, 2025
ಪ್ರಮುಖ ನಾಯಕರ ಹಾಜರಾತಿ
ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ನಿತಿನ್ ಗಡ್ಕರಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಎನ್‌ಡಿಎ ಮುಖಂಡರು ಹಾಜರಾಗಿ ಹೊಸ ಸರ್ಕಾರಕ್ಕೆ ಶುಭಾಶಯ ಕೋರುವರು.
ಬಿಜೆಪಿಯ ಭರ್ಜರಿ ಗೆಲುವು
ದೆಹಲಿಯ 2025ರ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 48 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ, ಈ ಬಾರಿ ಅಧಿಕಾರವನ್ನು ಭದ್ರಪಡಿಸಿಕೊಂಡಿದೆ. ಪಕ್ಷದ ಆಂತರಿಕ ತಂತ್ರದಡಿ, ಎಬಿವಿಪಿ ಹಿನ್ನೆಲೆಯಲ್ಲಿರುವ ರೇಖಾ ಗುಪ್ತಾರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.