ಹೈದರಾಬಾದ್: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಜನಸೇನ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಯಾಟಿಕಾ ನೋವಿನಿಂದ ಬಳಲುತ್ತಿರುವ ನಟ-ರಾಜಕಾರಣಿಗೆ ರೆಗ್ಯುಲರ್ ಚೆಕಪ್ ಮತ್ತು ಸ್ಕ್ಯಾನಿಂಗ್ ಪರೀಕ್ಷೆಗಳನ್ನು ನಡೆಸಲಾಗಿದೆ. ಆಸ್ಪತ್ರೆಯ ವೈದ್ಯರು ಹೆಚ್ಚಿನ ಪರೀಕ್ಷೆಗಳನ್ನು ಮಾರ್ಚ್ ಮೊದಲ ವಾರದಲ್ಲಿ ಮಾಡಲು ಸಲಹೆ ನೀಡಿದ್ದಾರೆ.
అపోలో ఆసుపత్రిలో వైద్య పరీక్షలు చేయించుకున్న శ్రీ @PawanKalyan గారు
రాష్ట్ర ఉప ముఖ్యమంత్రి శ్రీ పవన్ కల్యాణ్ గారు ఈ రోజు హైదరాబాద్ అపోలో ఆసుపత్రిలో పరీక్షలు చేయించుకున్నారు. స్కానింగ్, తత్సంబంధిత పరీక్షలు నిర్వహించారు. రిపోర్ట్స్ పరిశీలించిన వైద్యులు పలు సూచనలు చేశారు. మరికొన్ని… pic.twitter.com/TjeWc4T0WZ— JanaSena Party (@JanaSenaParty) February 22, 2025
ದೇವಾಲಯ ಭೇಟಿ ಮತ್ತು ಆರೋಗ್ಯ ನಂಬಿಕೆ
ಕಳೆದ ಕೆಲವು ದಿನಗಳಲ್ಲಿ ಪವನ್ ಕಲ್ಯಾಣ್ ಕೇರಳ ಮತ್ತು ತಮಿಳುನಾಡಿನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಿದ್ದರು. ಸಿಯಾಟಿಕಾ ಸಮಸ್ಯೆಗೆ ದೈವಿಕ ಪ್ರಾರ್ಥನೆ ಮಾಡಿದ್ದರ ಬಗ್ಗೆ ಮಾಹಿತಿ ಬಂದಿದೆ. ಇತ್ತೀಚೆಗೆ ಪ್ರಯಾಗ್ ರಾಜ್‌ನಲ್ಲಿ ಪವಿತ್ರ ಸ್ನಾನ ಮಾಡಿದ್ದರು.
ಅಭಿಮಾನಿಗಳ ಆತಂಕ ಮತ್ತು ಪಕ್ಷದ ವಿವರಣೆ
ಆಸ್ಪತ್ರೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಅಭಿಮಾನಿಗಳು ಗಾಬರಿಯಾಗಿದ್ದಾರೆ. ಆದರೆ, ಜನಸೇನ ಪಕ್ಷದ ಅಧಿಕಾರಿಗಳು “ಪವನ್ ಕಲ್ಯಾಣ್‌ಗೆ ಗಂಭೀರ ಸಮಸ್ಯೆ ಇಲ್ಲ. ರೂಟಿನ್ ಚೆಕಪ್ ಮಾತ್ರ. ಅವರು ಶೀಘ್ರವೇ ಸಕ್ರಿಯರಾಗುತ್ತಾರೆ” ಎಂದು ಸ್ಪಷ್ಟಪಡಿಸಿದ್ದಾರೆ.