ಚಂಡೀಗಢ: ಎಂಐಟಿಎಸ್ ಗ್ರೂಪ್‌ನ ಮುಖ್ಯಸ್ಥ ಮತ್ತು ಸಂಸ್ಥಾಪಕ ಎಂಕೆ ಭಟಿಯಾ, ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ 51 ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಭಟಿಯಾ ಅವರು ತಮ್ಮ ಸಂಸ್ಥೆಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ತೋರಿದ ಉದ್ಯೋಗಿಗಳಿಗೆ ಐಷಾರಾಮಿ ಎಸ್‌ಯುವಿ ಕಾರುಗಳನ್ನು ಬಹುಮಾನವಾಗಿ ನೀಡಿದರು. ಕಾರುಗಳ ಕೀಗಳನ್ನು ಉದ್ಯೋಗಿಗಳಿಗೆ ಹಸ್ತಾಂತರಿಸುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋವನ್ನು ನೋಡಿದ ನೆಟ್ಟಿಗರು ನಿಮ್ಮ ಸಂಸ್ಥೆಯಲ್ಲಿ ನಮಗೂ ಕೆಲಸ ಇದ್ಯಾ? ಎಂದು ಪ್ರಶ್ನಿಸುತ್ತಿದ್ದಾರೆ.
51 cars (including SUVs, Scorpios) gifted to staff of a Pharma company in Chandigarh on the occasion of Diwali!
Why didn’t we get such employers?😭 pic.twitter.com/RgKI9fvj8K
— Keh Ke Peheno (@coolfunnytshirt) October 20, 2025
ಎಂಕೆ ಭಟಿಯಾ ಅವರ ಈ ಉದಾರತೆಯ ಹಿಂದೆ ಒಂದು ಸ್ಪೂರ್ತಿದಾಯಕ ಕಥೆ ಇದೆ. ಅವರು ತಮ್ಮ ಜೀವನದ ಆರಂಭದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದರು. 2002 ರಲ್ಲಿ ಅವರ ಫಾರ್ಮಾ ಸಂಸ್ಥೆ ದಿವಾಳಿಯ ಹಂತಕ್ಕೆ ಬಂದಿತ್ತು. ಆದರೆ ಕಠಿಣ ಪರಿಶ್ರಮ ಮತ್ತು ದೃಢ ನಿರ್ಣಯದಿಂದ 2015 ರಲ್ಲಿ ಎಂಐಟಿಎಸ್ ಲಾಭದಾಯಕ ಹಂತವನ್ನು ತಲುಪಿತು. ಇಂದು ಭಟಿಯಾ ಅವರು 12 ಕಂಪನಿಗಳ ಮಾಲೀಕರಾಗಿದ್ದಾರೆ.
ಎಂಕೆ ಭಟಿಯಾ ಅವರ ಈ ಕೆಲಸವನ್ನು ಕೆಲವರು ಹೊಗಳಿದರೆ, ಮತ್ತೆ ಕೆಲವರು ಇಎಂಐ ಉದ್ಯೋಗಿಗಳ ಕಟ್ಟಬೇಕೇನೋ? ಎಂದು ಟೀಕೆ ಮಾಹಿದ್ದಾರೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಔಷಧಿಗಳನ್ನು ಉತ್ಪಾದಿಸುವ ಮೂಲಕ ನೀವು ಲಾಭ ಗಳಿಸುತ್ತಿರುವವರೆಗೆ, ಆ ಲಾಭವನ್ನು ನಿಮ್ಮ ಉದ್ಯೋಗಿಗಳಿಗೆ ಕಾರುಗಳು ನೀಡಲು ಬಳಸುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಕೆಲವರು ಈ ಕಾರ್ಯಕ್ಕೆ ಪ್ರಶಂಸಿಸಿದ್ದಾರೆ.





